ಪತ್ನಿಯಾಗಿ ನಟಿಸಲು ಬಂದಿದ್ದವಳ ಮೇಲೇನೆ ಲವ್ವಾಯ್ತು, ಬಿಟ್ಹೋಗ್ಬೇಡ ಎಂದು ಗೋಳಾಡಿದ ಭೂಪ!

Published : Apr 02, 2023, 08:21 PM IST
ಪತ್ನಿಯಾಗಿ ನಟಿಸಲು ಬಂದಿದ್ದವಳ ಮೇಲೇನೆ ಲವ್ವಾಯ್ತು, ಬಿಟ್ಹೋಗ್ಬೇಡ ಎಂದು ಗೋಳಾಡಿದ ಭೂಪ!

ಸಾರಾಂಶ

ಪ್ರೀತಿ ಅನ್ನೋದು ಒಂದು ಸುಂದರ ಭಾವನೆ. ಅದು ಒಬ್ಬ ವ್ಯಕ್ತಿಯ ಮೇಲೆ ಯಾವಾಗ ಬೇಕಾದರೂ ಮೂಡಬಹುದು. ಹಾಗೆಯೇ ಇಲ್ಲೊಬ್ಬ ವ್ಯಕ್ತಿಗೆ ತನ್ನ ಹೆಂಡತಿಯಾಗಿ ನಟಿಸಲು ಬಂದಾಕೆಯ ಮೇಲೆಯೇ ನಿಜವಾಗಿಯೂ ಲವ್ವಾಗಿದೆ. ಮುಂದೆ ಆಗಿದ್ದೇನು?

ಪ್ರೀತಿ ಮಾಯೆ ಹುಷಾರು ಅಂತಾರೆ. ಅದು ನಿಜ ಅನ್ನೋದು ಇಲ್ಲಿ ಸಾಬೀತಾಗಿದೆ.. ಐದು ದಿನ ಹೆಂಡತಿಯಂತೆ ನಟಿಸೋಕೆ ಬಂದಿದ್ದವಳ ಮೇಲೆಯೇ ವ್ಯಕ್ತಿಗೆ ಲವ್ವಾಗಿ ಹೋಗಿದೆ. ಮಾತ್ರವಲ್ಲ ನನ್ನನ್ನು ಬಿಟ್ಟೋಗಬೇಡ, ನೀನಿಲ್ಲದೆ ನಾನು ಬದುಕಲ್ಲ ಎಂದು ಅಲವತ್ತುಕೊಂಡಿದ್ದಾನೆ. ಥೇಟ್ ಸಿನಿಮಾದಂತೆ ಭಾಸವಾಗುವ ಇಂಥಹದ್ದೊಂದು ಘಟನೆ ಮುಂಬೈನಲ್ಲಿ ನಡೆದಿದೆ. ಐದು ದಿನ ಹೆಂಡತಿಯಂತೆ ನಟಿಸಬೇಕು ಎಂದು ವ್ಯಕ್ತಿ ಮಹಿಳೆಯನ್ನು ಕರೆಸಿದ್ದ. ಆದರೆ ಐದು ದಿನ ಕಳೆದ ಮೇಲೆ ಆತನಿಗೆ ನಿಜವಾಗಿಯೂ ಅವಳ ಮೇಲೆ ಲವ್ವಾಗಿದೆ. ಕೊನೆಗೆ ಈ ವಿಚಿತ್ರ ಮದುವೆಯ ನಾಟಕವನ್ನು ಬಿಡಿಸಲು ಸ್ಥಳೀಯ ಪೊಲೀಸರನ್ನು ಕರೆಯಬೇಕಾಯಿತು.

ಮುಕೇಶ್ ಎಂಬಾತನಿಗೆ ಹೆಂಡತಿಯಾಗಿ ಆಕ್ಟ್ ಮಾಡಲು ಬಂದಿದ್ದ ನಟಿ
ವರದಿಯೊಂದರ ಪ್ರಕಾರ, 21 ವರ್ಷದ ಹುಡುಗಿ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದಳು. ಆಕೆಯ ಸ್ನೇಹಿತೆ ಆಯೇಷಾ ಎಂಬಾಕೆ ಯುವತಿಯ ಮನವೊಲಿಸಿ ಮುಕೇಶ್ ಎಂಬಾತನಿಗೆ ಹೆಂಡತಿ (WIfe)ಯಾಗಿ ನಟಿಸಬೇಕೆಂದು ಕೇಳಿಕೊಂಡಳು. ಅದರಂತೆ ಯುವತಿ 5,000 ರೂ.ಗೆ ಮುಕೇಶ್ ಎಂದು ಗುರುತಿಸಲಾದ ವ್ಯಕ್ತಿಯ ಹೆಂಡತಿಯಾಗಿ ನಟಿಸಲು ಒಪ್ಪಿಕೊಂಡಳು. ಆಯೇಷಾ ಆಕೆಯನ್ನು ಮಧ್ಯಪ್ರದೇಶದ ಮುಖೇಶ್ ನ ಗ್ರಾಮಕ್ಕೆ ಕರೆದೊಯ್ದರು.

ಪೊಲೀಸ್ ಠಾಣೆಯಲ್ಲಿ ನವವಧುವಿನ ಹೈಡ್ರಾಮ, ಪ್ರಿಯಕರನ ಜೊತೆಯೂ ಮದ್ವೆ ಮಾಡಿ ಎಂದು ರಂಪಾಟ!

ನೀನೆ ನನ್ನ ಹೆಂಡ್ತಿ, ಬಿಟ್ಹೋಗ್ಬೇಡ ಎಂದು ರಂಪಾಟ ನಡೆಸಿದ ಭೂಪ
ಯೋಜನೆಯ ಪ್ರಕಾರ, ಐದು ದಿನಗಳ ಕಾಲ ತನ್ನ ಕುಟುಂಬದ ಮುಂದೆ ಅವಳು ಹೆಂಡತಿಯಾಗಿ ಹೇಗೆ ನಟಿಸಬೇಕು ಎಂದು ಮುಕೇಶ್ ಅವಳಿಗೆ ಹೇಳಿದಳು, ಅದಕ್ಕೆ ಅವಳು ಒಪ್ಪಿದಳು. ಅದನ್ನು ನಿಜ ಮಾಡಲು, ಇಬ್ಬರೂ ಕುಟುಂಬದ ಸದಸ್ಯರ (Family members) ಸಮ್ಮುಖದಲ್ಲಿ ಸ್ಥಳೀಯ ದೇವಸ್ಥಾನದಲ್ಲಿ (Temple) ವಿವಾಹ (Marriage)ವಾದರು. ಯುವತಿ ಐದು ದಿನ ಮುಕೇಶ್ ಜೊತೆ ಇದ್ದಳು. ಆರನೇ ದಿನ, ಮದುವೆಯ ನಾಟಕವನ್ನು ಮುಗಿಸಲು ಆಕೆ ಮುಕೇಶ್‌ಗೆ ಕೇಳಿದಾಗ, ಅವನು ಅವಳು ಹೋಗಲು ನಿರಾಕರಿಸಿದನು. ನಿನ್ನ ಮೇಲೆ ನನಗೆ ನಿಜವಾಗಿಯೂ ಲವ್ವಾಗಿದೆ, ನೀನು ಶಾಶ್ವತವಾಗಿ ನನ್ನ ಹೆಂಡತಿಯಾಗಬೇಕು ಎಂದು ಹೇಳಿದನು.

ಆಕೆ ತನ್ನನ್ನು ಬಿಡುವಂತೆ ಒತ್ತಾಯಿಸಿದಾಗ, ಇದು ನಿಜವಾದ ಮದುವೆ ಎಂದು ಮುಕೇಶ್ ಹೇಳಿದನು. ನಂತರ ಹುಡುಗಿ ಮುಂಬೈನಲ್ಲಿರುವ ತನ್ನ ಸ್ನೇಹಿತನಿಗೆ ಕರೆ ಮಾಡಿ ಬಳಿಕ ಧಾರಾವಿ ಪೊಲೀಸ್ ಠಾಣೆ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಗ್ರಾಮಕ್ಕೆ ಬಂದ ನಂತರ ಮುಕೇಶ್ ಪರಾರಿಯಾಗಿದ್ದಾನೆ. ನಂತರ ಬಾಲಕಿಯನ್ನು ಮುಂಬೈಗೆ ಕರೆತಂದು ಬಿಡಲಾಯಿತು. ಆದರೆ, ಮುಕೇಶ್‌  ಯಾವುದೇ ರೀತಿ ಲೈಂಗಿಕ ದೌರ್ಜನ್ಯ ನಡೆಸಿಲ್ಲ ಎಂದು ಯುವತಿ ಹೇಳಿದ್ದಾಳೆ. 

Viral Post : ಅಯ್ಯೋ, ಕ್ಯಾಮರಾಮನ್ ಮದ್ವೆಯಾದ್ರೆ ಕಥ ಇಷ್ಟೇ!

ಘಟನೆಯ ಮಾತನಾಡಿದ ಪೊಲೀಸರು, ಲಿಂಗ ಅಸಮಾನತೆಯಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಹೇಳಿದರು. ವಿವಿಧ ಕಾರಣಗಳಿಂದಾಗಿ ಮಧ್ಯಪ್ರದೇಶದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಪುರುಷರು ಮಧ್ಯವರ್ತಿಗಳನ್ನು ನೇಮಿಸಿ 50,000 ರೂ.ಗೆ ಮಹಿಳೆಯರನ್ನು ಶಿಫ್ಟ್ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

ಗಂಡ ಬೇರೆಯವಳ ಜೊತೆ ಮಲಗೋಕೆ ಹೆಂಡ್ತೀನೆ ಟೈಂ ಕೊಡ್ತಾಳೆ!
ಮೋನಿಕಾ ಹಲ್ಟ್ ಎಂಬ ಅಮೇರಿಕನ್ ಮಹಿಳೆ (Women) ಹೀಗೆ ತನ್ನ ಗಂಡ ಯಾರ ಜೊತೆ ಸುತ್ತಾಡಿದ್ರೂ, ಮಲಗಿದ್ರೂ ನನಗೇನು ಸಮಸ್ಯೆಯಾಗಲ್ಲ ಅಂತ ಹೇಳುತ್ತಾಳೆ. ತನ್ನ ಪುರುಷನ ಅಗತ್ಯತೆಗಳು ಏನೇ ಇರಲಿ ಅವನನ್ನು ಸಂತೋಷಪಡಿಸುವುದು ತನ್ನ ಕರ್ತವ್ಯ ಎಂದು ಮಹಿಳೆ ನಂಬುತ್ತಾಳೆ. ನ್ಯೂಯಾರ್ಕ್ ಪೋಸ್ಟ್‌ ಜೊತೆ ಮಾತನಾಡಿದ ಮೋನಿಕಾ, ಪತಿ (Husband) ಜಾನ್ ಅನ್ನು ಸಂತೋಷಪಡಿಸುವುದು ಹೆಂಡತಿಯಾಗಿ (Wife) ತನ್ನ ಪ್ರಾಥಮಿಕ ಗುರಿಯಾಗಿದೆ. ತನ್ನ ಪತಿಗೆ ಇತರ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡುವುದು ಅವರ ಸಂಬಂಧಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?