ಕೆಲವು ಮಕ್ಕಳು ವರ್ತನೆ ಸಂಬಂಧಿ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅವುಗಳನ್ನು ಆರಂಭದಲ್ಲೇ ಗುರುತಿಸಿ, ಸರಿಪಡಿಸಲು ಯತ್ನಿಸುವುದು ಪಾಲಕರ ಜವಾಬ್ದಾರಿ. ಏಕೆಂದರೆ, ಇಂಥವು ಮುಂದೆ ಭಾರೀ ದೊಡ್ಡ ಸಮಸ್ಯೆಯನ್ನು ಸೃಷ್ಟಿಬಲ್ಲವು.
ಮಕ್ಕಳು ಕೆಲವೊಮ್ಮೆ ಕೆಟ್ಟ ವರ್ತನೆ ಮಾಡುತ್ತಾರೆ. ಆದರೆ, ಯಾವತ್ತೂ ಹಾಗೆಯೇ ಮಾಡುತ್ತಿರುವುದಕ್ಕೂ, ಯಾವಾಗಲಾದರೂ ಒಮ್ಮೆ ಮಾಡುವುದಕ್ಕೂ ವ್ಯತ್ಯಾಸವಿದೆ. ಒಂದು ಮಾತಿದೆ, “ಬೆಳೆಯುವ ಕುಡಿ ಮೊಳಕೆಯಲ್ಲಿʼ ಎಂದು. ಇದು ಸತ್ಯವಾದದ್ದು. ನಿಮ್ಮ ಮಗ ಅಥವಾ ಮಗಳು ಸದಾಕಾಲ ಕೆಲವು ದುರ್ವರ್ತನೆ ತೋರುತ್ತಿದ್ದರೆ ಅಸಡ್ಡೆ ಮಾಡುವುದು ಸರಿಯಲ್ಲ. ಏಕೆಂದರೆ, ಇದು ಅವರ ಭವಿಷ್ಯದ ಪ್ರಶ್ನೆ. ಕೆಲವು ವರ್ತನೆಗಳು ದಾರಿ ತಪ್ಪಿದ ಮಕ್ಕಳ ಲಕ್ಷಣಗಳನ್ನು ತೋರುತ್ತವೆ. ಹೀಗಾಗಿ, ಇವುಗಳ ಬಗ್ಗೆ ಗಮನ ವಹಿಸಬೇಕು. ವರ್ತನೆ ಸಂಬಂಧಿ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಅವುಗಳನ್ನು ನಿಭಾಯಿಸುವುದು ಮುಖ್ಯ. ಕೆಲವೊಮ್ಮೆ ಮಗುವಾಗಿದ್ದಾಗ ಸಹ್ಯವೆನಿಸುವ ಕೆಲವು ವರ್ತನೆಗಳು ಹಾಗೆಯೇ ಮುಂದುವರಿದರೆ ದೊಡ್ಡವರಾಗುವ ಹಂತದಲ್ಲಿ ಸಹ್ಯವಾಗುವುದಿಲ್ಲ. ಅವರು ನಿಭಾಯಿಸುವ ಹಂತದಿಂದ ಮೀರಿ ಹೋದರೆ ಪಾಲಕರಿಗೂ ಬಹುದೊಡ್ಡ ಸವಾಲು ಎದುರಾಗುತ್ತದೆ.
ಕೆಟ್ಟ ಮಕ್ಕಳು ಕೆಟ್ಟ ಪಾಲಕತನದಿಂದ ಸೃಷ್ಟಿಯಾಗುವುದಿಲ್ಲ. ಅದಕ್ಕೆ ಕಾರಣಗಳನ್ನು ಹುಡುಕುವುದು ವ್ಯರ್ಥ. ಉತ್ತಮ ಪಾಲಕರಿಗೂ ದಾರಿ ತಪ್ಪಿದ ಮಕ್ಕಳಿರುವ ಎಷ್ಟೋ ದೃಷ್ಟಾಂತಗಳಿವೆ. ಅಷ್ಟಕ್ಕೂ ಎಷ್ಟೇ ಒಳ್ಳೆಯವರಾದರೂ ಎಲ್ಲ ಪಾಲಕರೂ ಒಂದಿಲ್ಲೊಂದು ತಪ್ಪುಗಳನ್ನು ಮಾಡಿರುತ್ತಾರೆ. ಹೀಗಾಗಿ, ಹಳಹಳಿಸುವ ಮುನ್ನ ಮಕ್ಕಳ ವರ್ತನೆಗಳನ್ನು ಸುಧಾರಿಸಲು ಧನಾತ್ಮಕ ಕ್ರಮಗಳ ಮೂಲಕ ಯತ್ನಿಸಬೇಕು.
ಸಂವೇದನೆ ರಹಿತವಾಗಿರುವುದು (Insensitivity): ಒಂದೊಮ್ಮೆ ನಿಮ್ಮ ಮಗು ಇತರರ ಬಗ್ಗೆ ಸಂವೇದನೆ, ಕರುಣೆ, ಸಹಾನುಭೂತಿ (Empathy) ವ್ಯಕ್ತಪಡಿಸದೇ ಇದ್ದರೆ ಅದು ಸಮಸ್ಯೆಯ (Problem) ಲಕ್ಷಣ. ಕರುಣೆ ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಚಿತ್ರ ಬಿಡಿಸುವಲ್ಲಿ ಆಸಕ್ತಿ ಹೊಂದಿರುತ್ತಾರೆ. ಪ್ರೀತಿಪಾತ್ರರು ಹುಷಾರಿಲ್ಲದೆ ಇರುವಾಗ ಕಾಳಜಿ (Cares) ವಹಿಸುತ್ತಾರೆ. ದುಃಖದಲ್ಲಿರುವಾಗ ಪಾಲಕರನ್ನು ಬಿಗಿಯಾಗಿ ತಬ್ಬಿಕೊಳ್ಳಲು ಬಯಸುತ್ತಾರೆ. ಆದರೆ, ಸಮಸ್ಯೆ ಹೊಂದಿರುವ ಮಕ್ಕಳು ಇಂತಹ ಸಂವೇದನೆ ಹೊಂದಿರುವುದಿಲ್ಲ. ಇಂತಹ ಮಕ್ಕಳಿಗೆ ಇತರರ ಕಷ್ಟಗಳ ಬಗ್ಗೆ ತಿಳಿಸಿ ಹೇಳುವುದು ಹಾಗೂ ಅವರಿಗೆ ಸಹಾಯ (Help) ಮಾಡಬೇಕೆಂದು ತಿಳಿಹೇಳಬೇಕಾಗುತ್ತದೆ.
Parenting Tips: ಮಕ್ಕಳು ಯಾಕೆ ಪದೇ ಪದೇ ಪ್ರಶ್ನೆ ಕೇಳಿ ಇರಿಟೇಟ್ ಮಾಡ್ತಾರೆ?
ಅವರು ಬಯಸಿದ್ದನ್ನೆಲ್ಲ ಪೂರೈಸುವುದು: ಮಕ್ಕಳು (Children) ಏನಾದರೂ ಬಯಸುವುದು, ಪಾಲಕರು (Parents) ಅದನ್ನು ಪೂರೈಸುವುದು ಸಹಜ. ಆದರೆ, ಎಲ್ಲ ಬಾರಿಯೂ ಪಾಲಕರಿಗೆ ಮಕ್ಕಳ ಇಚ್ಛೆ ಪೂರೈಸಲು ಸಾಧ್ಯವಾಗುವುದಿಲ್ಲ ಹಾಗೂ ಎಲ್ಲ ಬಾರಿಯೂ ಮಕ್ಕಳು ಕೇಳಿದ್ದನ್ನೆಲ್ಲ ನೀಡಬಾರದು. ಅವರು ಬಯಸಿದ್ದನ್ನೆಲ್ಲ ನೀಡುವ ಪಾಲಕರು ನೀವಾಗಿದ್ದರೆ ಮಕ್ಕಳು ಖಂಡಿತವಾಗಿ ಹಾದಿ ತಪ್ಪುತ್ತಾರೆ. ಅವರಿಗೆ ತಾವು ಬಯಸಿದ್ದೆಲ್ಲ ದೊರೆಯುತ್ತದೆ ಎನ್ನುವ ಭಾವನೆ (Feel) ಗಟ್ಟಿಯಾಗುತ್ತದೆ. ಏನು ಬಯಸಿದರೆ ದೊರೆಯುತ್ತದೆ ಎನ್ನುವ ಬಗ್ಗೆ ಮಗು ಯೋಚಿಸುವುದನ್ನೇ ಬಿಟ್ಟುಬಿಡುತ್ತದೆ. ನಿರಾಶೆ (Disappointment), ಬೇಸರ ನಿಭಾಯಿಸುವುದನ್ನು ಮಕ್ಕಳು ಕಲಿತುಕೊಳ್ಳುವುದು ಸಹ ಅಗತ್ಯ.
ನೀವು ನೋ (No) ಎನ್ನುತ್ತಿದ್ದರೂ ಅವರು ಕೇಳೋದನ್ನು ಬಿಡೋದಿಲ್ಲ: ಪಾಲಕರಿಂದ “ನೋʼ ಎನ್ನುವ ಉತ್ತರವನ್ನೇ ಕೆಲವು ಮಕ್ಕಳು ನಿರೀಕ್ಷೆ ಮಾಡುವುದಿಲ್ಲ. “ಆಗುವುದಿಲ್ಲʼ ಎನ್ನುವ ಶಬ್ದವನ್ನು ಕೇಳಲು ಸಾಧ್ಯವಾಗದೆ ಹಠ ಮಾಡಲು ಆರಂಭಿಸುತ್ತಾರೆ. ಇದು ಚಿಕ್ಕ ಮಕ್ಕಳಲ್ಲಿ ಸಾಮಾನ್ಯ. ಆದರೆ, ದೊಡ್ಡವರಾಗುತ್ತಲೂ ಹಾಗೆಯೇ ಇದ್ದರೆ ಕಷ್ಟವಾಗುತ್ತದೆ. ತಜ್ಞರ ಪ್ರಕಾರ, ಮಕ್ಕಳ ಈ ಗುಣ ಅವರಲ್ಲಿರುವ “ತಾನು ಗ್ರೇಟ್ʼ ಎನ್ನುವ ಭಾವನೆಯನ್ನು ತೋರುತ್ತದೆ. ತಮ್ಮ ಬಗ್ಗೆ ಮಾತ್ರವೇ ಇವರು ಗಮನ ಕೊಡುತ್ತಾರೆ.
Chanakya Niti: ಪೋಷಕರು ಈ ತಪ್ಪು ಮಾಡಿದ್ರೆ ಮಗುವಿಗೆ ಶತ್ರುಗಳಾಗ್ತಾರೆ!
ಕೆಲಸ ನಿಭಾಯಿಸಲು (Handle Work) ಬರುವುದಿಲ್ಲ: ಹತ್ತು ವರ್ಷ ಕಳೆದರೂ ತಮ್ಮ ಕೆಲಸ ತಾವು ನಿಭಾಯಿಸಲು ಸಾಧ್ಯವಾಗದಿರುವುದು ಮಕ್ಕಳಲ್ಲಿರುವ ಸಮಸ್ಯೆಯನ್ನು ತೋರುತ್ತದೆ. ಮಕ್ಕಳು ಪಾಲಕರ ಸಹಾಯವಿಲ್ಲದೆ ತಮ್ಮ ಕೆಲಸ ಮಾಡಿಕೊಳ್ಳುವುದು, ದೈನಂದಿನ ಜೀವನವನ್ನು ನಿಭಾಯಿಸುವುದು ಮುಖ್ಯ. ಅವರನ್ನು ಆ ರೀತಿಯಲ್ಲಿ ಸಿದ್ಧಪಡಿಸುವುದು ಪಾಲಕರ ಜವಾಬ್ದಾರಿ. ಒಂದೊಮ್ಮೆ ನಿಮ್ಮ ಮಕ್ಕಳಿಗೆ ಕೆಲಸ ಮಾಡಿಕೊಳ್ಳುವ ಅಭ್ಯಾಸವಿಲ್ಲದಿದ್ದರೆ ತಾಳ್ಮೆಯಿಂದ ಒಂದೊಂದಾಗಿ ಎಲ್ಲವನ್ನೂ ಕಲಿಸಿ. ಆಗ ಅವರಲ್ಲಿ ತಪ್ಪುಗಳಿಂದ (Mistakes) ಪಾಠ (Learn) ಕಲಿಯುವ ಗುಣ, ಆತ್ಮವಿಶ್ವಾಸ ಮೂಡುತ್ತದೆ.
ಮನೆಯಲ್ಲಿ ಸಹಾಯ ಮಾಡೋದಿಲ್ಲ: ಮನೆಯ ಕೆಲಸಕಾರ್ಯಗಳಲ್ಲಿ ಯಾವುದೇ ರೀತಿಯ ಸಹಾಯ ಮಾಡದಿರುವುದು ಹಲವು ಮಕ್ಕಳ ಗುಣ. ಆದರೆ, ಇದು ಅವರಲ್ಲಿರುವ ಸಮಸ್ಯೆಯನ್ನೂ ತೋರುತ್ತದೆ. ತಾವೇನು ಮಾಡದಿದ್ದರೂ ಸರಿ, ಬೇಕಾದುದು ಸಿಗುತ್ತದೆ ಎನ್ನುವ ಭಾವನೆ ಅವರಲ್ಲಿರುತ್ತದೆ. ದೊಡ್ಡವರಾಗುವ ಹಂತದಲ್ಲಿ ಮಕ್ಕಳು ಮನೆಯಲ್ಲಿ ಸಹಾಯ ಮಾಡಬೇಕು ಎನ್ನುವ ಅರಿವನ್ನು ಅವರಲ್ಲಿ ಮೂಡಿಸಬೇಕು. ಟೀನೇಜ್ (Teenage) ಹೊತ್ತಿಗೆ ನೀವು ಕೇಳದೆಯೇ ಅವರು ಸಹಾಯ ಮಾಡಬೇಕು. ಒಂದೊಮ್ಮೆ ನೀವು ಕೇಳಿದರೂ ಸಹಾಯ ಮಾಡುವುದಿಲ್ಲ ಎಂದಾದರೆ ಸಮಸ್ಯೆ ಇದೆ ಎಂದರ್ಥ. ಅವರನ್ನು ಯಾವುದಾದರೂ ಕೆಲಸಕ್ಕೆ ಹಚ್ಚಬೇಕು, ಅದನ್ನು ಪೂರೈಸಲು ಹೇಳಬೇಕು.