ಮಕ್ಕಳೆ ಅಮ್ಮನ ಪ್ರಪಂಚ. ಅದರಲ್ಲೂ ಮಗಳ ಜೊತೆ ಆಕೆ ಬಾಂಡಿಂಗ್ ವಿಶೇಷವಾಗಿರುತ್ತದೆ. ನೋವು, ಸಂತೋಷಕ್ಕೆ ಜೊತೆಯಾಗುವ ಇವರಿಬ್ಬರ ಮಧ್ಯೆ ಅಂತರ ಬಂದ್ರೆ ಜೀವನದಲ್ಲಿ ಸಂತೋಷ ಮಾಸುತ್ತದೆ.
ಅಮ್ಮ – ಮಗಳು ಖುಷಿಯಾಗಿದ್ರೆ ಜಗತ್ತೇ ಸುಂದರ.
ಪ್ರಪಂಚದ ಅತ್ಯಂತ ಸುಂದರ ಸಂಬಂಧಗಳಲ್ಲಿ ತಾಯಿ - ಮಗಳ ಸಂಬಂಧವೂ ಒಂದು. ಹೆಣ್ಣು ಮಕ್ಕಳಿಗೆ ತಾಯಿಯೇ ಸ್ಪೂರ್ತಿ. ಆಕೆಯನ್ನು ಬಂಡೆಯಂತೆ ಭಾವಿಸ್ತಾರೆ ಹೆಣ್ಣು ಮಕ್ಕಳು. ಯಾವುದೇ ಕಷ್ಟ ಬಂದ್ರೂ ತಾಯಿ ಎಂಬ ಬಂಡೆ ಹಿಂದೆ ಹೋಗಿ ನಿಲ್ಲುತ್ತಾರೆ ಮಕ್ಕಳು. ಅಮ್ಮನಾದವಳು ಮಗಳಿಗೆ ಎಲ್ಲವನ್ನೂ ಕಲಿಸ್ತಾಳೆ. ತಾನು ಜೀವನದಲ್ಲಿ ಅನುಭವಿಸಿದ ಕಷ್ಟವನ್ನು ಮಗಳು ಪಡಬಾರದು ಎನ್ನುವ ಕಾರಣಕ್ಕೆ ಆಕೆಯನ್ನು ಎಲ್ಲ ಕಡೆಯಿಂದ ಬೆಂಬಲಿಸುತ್ತಾಳೆ. ಆಕೆ ಸದೃಢವಾಗುವಂತೆ ಮಾಡ್ತಾಳೆ. ಆಕೆಗೆ ಸಣ್ಣಪುಟ್ಟ ವಿಷ್ಯಗಳಿಂದ ಹಿಡಿದು ತನ್ನನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವವರೆಗೆ ಎಲ್ಲವನ್ನೂ ತಿಳಿ ಹೇಳ್ತಾಳೆ.
ಹೆಣ್ಣು ಮಕ್ಕಳಿಗೆ ತಾಯಿಯ ಅಗತ್ಯ ಹೆಚ್ಚಿರುತ್ತದೆ. ತಾಯಿ, ನೆರಳಿನಂತೆ ಮಗಳನ್ನು ಹಿಂಬಾಲಿಸುತ್ತಾಳೆ. ಸದಾ ಸ್ನೇಹಿತರಂತೆ ಇರುವ ತಾಯಿ –ಮಕ್ಕಳು ನಮ್ಮ ಸಮಾಜದಲ್ಲಿ ಅನೇಕರಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ತಾಯಿ ಮತ್ತು ಮಗಳ ನಡುವೆ ಭಿನ್ನಾಭಿಪ್ರಾಯ ಮೂಡುತ್ತದೆ. ತಾಯಿಯ ಮನಸ್ಥಿತಿಯನ್ನು ಅಥವಾ ಮಗಳ ಮನಸ್ಥಿತಿಯನ್ನು ತಾಯಿ ಅರ್ಥ ಮಾಡಿಕೊಳ್ಳದ ಕಾರಣ ಇಬ್ಬರು ದೂರವಿರ್ತಾರೆ. ನಿಮ್ಮ ಮಧ್ಯೆಯೂ ಇದೇ ಸಮಸ್ಯೆಯಾಗಿದ್ದರೆ ಮತ್ತೆ ನೀವು ಹಿಂದಿನಂತೆ ಇರಬೇಕೆಂದು ಬಯಸಿದ್ರೆ ಕೆಲ ಟಿಪ್ಸ್ ಫಾಲೋ ಮಾಡಿ.
ತಾಯಿ (Mother) ಮತ್ತು ಮಗಳ (Daughter) ಅಂತರ ಹೀಗೆ ಕಡಿಮೆ ಮಾಡಿ :
ಮಾತಿನಲ್ಲಿದೆ ಅಪಾರ ಶಕ್ತಿ : ಮಕ್ಕಳು ಚಿಕ್ಕವರಿರುವಾಗ ತಾಯಿ ಅವರ ಆರೈಕೆಯಲ್ಲಿ ಬ್ಯುಸಿಯಾಗ್ತಾಳೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ತಾಯಿ ಕೆಲಸ ಕಡಿಮೆಯಾಗುತ್ತದೆ. ಒಂದು ಹಂತದಲ್ಲಿ ತಾಯಿ ಒಂಟಿತನವನ್ನು ಅನುಭವಿಸಲು ಶುರು ಮಾಡ್ತಾಳೆ. ಮಗಳಾದವಳಿಗೆ ಇದು ಗೊತ್ತಿರಬೇಕು. ಎಷ್ಟೇ ಕೆಲಸವಿದ್ರೂ ಮಗಳು, ತಾಯಿಯನ್ನು ಆಗಾಗ ಮಾತನಾಡಿಸುತ್ತಿರಬೇಕು. ಆಕೆ ಜೊತೆ ಭಾವನೆಗಳನ್ನು ಹಂಚಿಕೊಳ್ಳಬೇಕು. ಆಕೆ ಆರೋಗ್ಯವನ್ನು ವಿಚಾರಿಸಬೇಕು. ಮಗಳಿಗೆ ತನ್ನ ಮೇಲೆ ಪ್ರೀತಿ (love) ಕಡಿಮೆಯಾಗಿದೆ ಎಂಬ ಭಾವನೆ ತಾಯಿಗೆ ಬರದಂತೆ ನೋಡಿಕೊಳ್ಳಬೇಕು. ಬರೀ ಇಷ್ಟೇ ಅಲ್ಲ, ಎಲ್ಲ ಸಮಸ್ಯೆಗೂ ಮಾತಿನಿಂದ ಪರಿಹಾರವಿದೆ. ಹದಿಹರೆಯಕ್ಕೆ ಬಂದ ಮಕ್ಕಳಿಗೆ ಸರಿ ದಾರಿ ತೋರಿಸುವ ಜವಾಬ್ದಾರಿ ತಾಯಿಗಿರುತ್ತದೆ. ಮಗಳ ಜೊತೆ ಆಕೆ ಪ್ರೀತಿಯಿಂದ ಮಾತನಾಡಿದ್ರೆ ಮಗಳ ಸಮಸ್ಯೆ ನಿಮಗೆ ಅರ್ಥವಾಗುತ್ತದೆ. ಹಾಗಾಗಿ ಎಲ್ಲ ಸಂದರ್ಭದಲ್ಲೂ ಮಾತು ಮುಖ್ಯವಾಗುತ್ತದೆ.
Relationship Tips: ಲೈಂಗಿಕ ಕ್ರಿಯೆ ಮಧ್ಯೆ ಸಾರಿ ಕೇಳ್ಬೇಡಿ, ಎಡವಟ್ಟಾಗೋದು ಗ್ಯಾರಂಟಿ !
ಅಗತ್ಯತೆ ಬಗ್ಗೆ ಗಮನ ನೀಡಿ : ವಯಸ್ಸಾಗ್ತಿದ್ದಂತೆ ತಾಯಿ ಎಲ್ಲ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಮಗಳಾದವಳು ತಾಯಿಯಾಗುವ ಅನಿವಾರ್ಯತೆ ಎದುರಾಗುತ್ತದೆ. ನಿಮ್ಮ ಬಾಲ್ಯದಲ್ಲಿ ತನ್ನೆಲ್ಲ ಆಸೆಗಳನ್ನು ತೊರೆದು ಅಮ್ಮ ನಿಮಗಾಗಿ ಕೆಲಸ ಮಾಡಿರ್ತಾಳೆ. ನೀವು ಹೇಳದೆ ನಿಮ್ಮ ಅಗತ್ಯ ಪೂರೈಸಿರುತ್ತಾಳೆ. ಈಗ ನಿಮ್ಮ ಸರದಿ. ಆಕೆ ಅಗತ್ಯಗಳನ್ನು ನೀವು ಪೂರೈಸಬೇಕು. ಆಕೆಗೆ ಇಷ್ಟವಾಗುವ ಜಾಗಕ್ಕೆ ಕರೆದೊಯ್ಯಬೇಕು. ಅಮ್ಮನಿಗೆ ಆಗಾಗ ಸರ್ಪ್ರೈಸ್ ಗಿಫ್ಟ್ ನೀಡಿ ಖುಷಿಗೊಳಿಸಬಹುದು.
ಹಬ್ಬ – ಹರಿದಿನ ಮರೆಯಬೇಡಿ : ಮಗಳಿಗೆ ಮದುವೆಯಾಗಿ ದೂರ ಹೋದಾಗ ಅತಿ ಹೆಚ್ಚು ಖುಷಿ ಹಾಗೂ ನೋವು ಅನುಭವಿಸುವವಳು ತಾಯಿ. ಸದಾ ಮಗಳ ಜೀವನದ ಬಗ್ಗೆ ಆಲೋಚನೆ ಮಾಡುವ ತಾಯಿ ಜೊತೆ ಸಾಧ್ಯವಾದಷ್ಟು ಹಬ್ಬ ಆಚರಿಸುವ ಪ್ರಯತ್ನ ನಡೆಸಿ. ಇದು ಸಾಧ್ಯವಿಲ್ಲವೆಂದ್ರೆ ವಿಡಿಯೋ ಕರೆ ಮಾಡಿ ಮಾತನಾಡಿ.
ವರ್ಷಕೊಮ್ಮೆ ಸುತ್ತಾಡಿ ಬನ್ನಿ : ನಿಮ್ಮ ತಾಯಿಗೆ ನೀವು ಸಮಯ ನೀಡುವ ಅಗತ್ಯವಿದೆ. ವರ್ಷದಲ್ಲಿ ಒಮ್ಮೆಯಾದ್ರೂ ತಾಯಿ ಜೊತೆ ನೀವು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿ. ಇದ್ರಿಂದ ಅಮ್ಮ ರಿಲ್ಯಾಕ್ಸ್ ಆಗ್ತಾರೆ. ನಿಮ್ಮಿಬ್ಬರ ಬಂಧ ಮತ್ತಷ್ಟು ಗಟ್ಟಿಯಾಗಲು ಇದು ನೆರವಾಗುತ್ತದೆ.
ಕೋಪ ಕಂಟ್ರೋಲ್ ಮಾಡಿಕೊಳ್ಳಲು ಆಗೋಲ್ಲ ಅನ್ನೋರು ಕೃಷ್ಣನ ಈ ಕಥೆ ಓದಿ!
ಇಬ್ಬರ ಮಧ್ಯೆ ಕ್ಷಮೆ ಮುಖ್ಯ : ಮಕ್ಕಳು ಮಾಡಿದ ತಪ್ಪನ್ನು ತಾಯಿ ಕ್ಷಮಿಸಬೇಕು. ಹದಿಹರೆಯದಲ್ಲಿ ಅಥವಾ ಯೌವನಕ್ಕೆ ಬರ್ತಿದ್ದಂತೆ ಮಗಳು ಮಾಡುವ ತಪ್ಪನ್ನು ಕ್ಷಮಿಸಿ ತಾಯಿ ಆಕೆಗೆ ಬುದ್ಧಿ ಹೇಳಬೇಕಾದ ಅಗತ್ಯವಿದೆ. ಹಾಗೆಯೇ ಮಗಳು ಕೂಡ ತಾಯಿಯನ್ನು ಕ್ಷಮಿಸುವ ಸ್ವಭಾವ ಹೊಂದಿರಬೇಕು. ಯಾವುದೇ ಸಮಸ್ಯೆಯಾದ್ರೂ ಇಬ್ಬರು ಕುಳಿತು ಮಾತನಾಡಿ ಅದನ್ನು ಬಗೆಹರಿಸಿಕೊಳ್ಳಿ.