ಹಳಸದಿರಲಿ ಬಂಧ, ಕಡೇವರೆಗೂ ಉಳಿದುಕೊಳ್ಳಲಿ ಸಂಬಂಧ!

By Suvarna NewsFirst Published Feb 8, 2022, 5:25 PM IST
Highlights

ಪ್ರೀತಿಯಲ್ಲಿ ಬಿದ್ದವರು ತಮ್ಮದೇ ಪ್ರಪಂಚದಲ್ಲಿ ತೇಲಾಡುತ್ತಿರುತ್ತಾರೆ, ತಮ್ಮ ಸಂಗಾತಿಯ ಕರೆಗಾಗಿ ಯಾವಾಗಲೂ ಎದುರು ನೋಡುತ್ತಿರುತ್ತಾರೆ, ಅವರನ್ನು ಭೇಟಿ ಮಾಡಲು ಹಾತೊರೆಯುತ್ತಿರುತ್ತಾರೆ ಆದರೆ ಇಷ್ಟು ಸುಂದರವಾಗಿರುವ ಸಂಬಂಧ ಕೆಲವು ಸಣ್ಣ ಕಾರಣಗಳಿಂದಾಗಿ ಬೇರೆಯಾಗುವಂತೆ ಮಾಡಿಬಿಡುತ್ತದೆ. ಆದರೆ ನಿಮ್ಮ ಗೆಳೆಯ ನಿಮ್ಮೊಂದಿಗೆ ಸದಾ ಉಳಿಸಿಕೊಳ್ಳಲು ಹೀಗೆ ಮಾಡಿ.

ಇತ್ತೀಚಿನ ದಿನಗಳಲ್ಲಿ ಲವ್ (Love) ಮಾಡುವುದು ಹಾಗೂ ಬ್ರೇಕಪ್ (Breakup) ಮಾಡಿಕೊಳ್ಳುವುದು ಬಹಳ ಸಾಮಾನ್ಯ ವಿಷಯ. ಫೇಸ್ಬುಕ್ (Facebook) ನಿಂದ ಪ್ರಾರಂಭವಾದ ಪರಿಚಯ ವಾಟ್ಸಪ್ ನಲ್ಲಿ ಲವ್‌ಗೆ ತಿರುಗುತ್ತದೆ ಹಾಗೂ ಅದಕ್ಕಿಂತಲೂ ಹೆಚ್ಚು ವೇಗವಾಗಿ ಬ್ರೇಕಪ್‌ಗೆ ಬಂದು ನಿಂತು ಬಿಡುತ್ತದೆ. ಕೆಲವು ಸಂದರ್ಭಗಳಲ್ಲಿ ಹುಡುಗ-ಹುಡುಗಿ ಇಬ್ಬರಿಗೂ ಕೂಡ ಬ್ರೇಕಪ್ ಮಾಡಿಕೊಳ್ಳುವ ಇಚ್ಛೆ ಇರುತ್ತದೆ ಆದರೆ ಇನ್ನೂ ಕೆಲವೊಂದು ಸಂದರ್ಭಗಳಲ್ಲಿ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರು ಪ್ರೀತಿ ಇದ್ದರೂ ಕೂಡ ಕೆಲವು ಸನ್ನಿವೇಶಗಳ ಕಾರಣದಿಂದಾಗಿ ದೂರ ಇರಬೇಕಾಗಿ ಬರುತ್ತದೆ.

ಈ ಕೆಲವು ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮ್ಮ ಸಂಬಂಧ ಗಟ್ಟಿಯಾಗಿಸಿಕೊಳ್ಳಿ..

Latest Videos

- ಭಾವನಾತ್ಮಕ (Emotional) ಸಂಬಂಧ ಬೆಳೆಸಿಕೊಳ್ಳಿ
 ಯಾವುದೇ ವ್ಯಕ್ತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದೀರಾ ಅಂದರೆ ಅದು ಹೆಚ್ಚು ಸಮಯಗಳ ತನಕ ಉಳಿಯುತ್ತದೆ. ದೇಹದ ಆಕರ್ಷಣೆಯಿಂದ ಹುಟ್ಟಿಕೊಳ್ಳುವ ಸಂಬಂಧ ಗಳಿಗಿಂತ ಮನಸ್ಸಿನ ಆಕರ್ಷಣೆಯಿಂದ ಭಾವನಾತ್ಮಕ ಬೆಸುಗೆ ಹೊಂದುವ ಸಂಬಂಧಗಳು ಹೆಚ್ಚು ಗಟ್ಟಿಯಾಗಿ ಉಳಿದುಕೊಳ್ಳುತ್ತದೆ. ಭಾವನಾತ್ಮಕ ಸಂಬಂಧ ಎಂದರೆ ನಿಮಗೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಇರುವ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು, ನಿಮ್ಮ ಇಷ್ಟ-ಕಷ್ಟಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕು ಜೊತೆಗೆ ಅವರ ಬೇಕು-ಬೇಡಗಳ ಕಡೆ ಕೂಡ ಹೆಚ್ಚು ಗಮನ ನೀಡಿ. ಪ್ರೀತಿ ಎಂದರೆ ಬರೀ ಒಂದೆರಡು ದಿನಗಳ ಆಕರ್ಷಣೆಯಲ್ಲ ನೀವು ಜೀವನ ಪೂರ್ತಿ ಒಬ್ಬರ ಜೊತೆ ಕಳೆಯ ಬಯಸುವ ವ್ಯಕ್ತಿಯೊಂದಿಗೆ ನಿಮ್ಮ ಕನಸುಗಳನ್ನು ಕೂಡ ಹಂಚಿಕೊಳ್ಳಬಹುದು. ಒಬ್ಬರ ಬಗ್ಗೆ ಇನ್ನೊಬ್ಬರು ಹೆಚ್ಚು ಭಾವನೆಗಳನ್ನು ಹೊಂದಿದ್ದೀರಾ ಎಂದಾದರೆ ಅಂತಹ ಸಂಬಂಧವನ್ನು ದೂರಮಾಡಲು ಕಷ್ಟಸಾಧ್ಯ.

Valentine's day: ಪ್ರೇಮಿ ಇಲ್ಲವೇ? ಗೆಳೆಯರ ಜೊತೆಗೇ ಆಚರಿಸಿ!

- ನಿಮ್ಮನ್ನು ಇಂಪ್ರೆಸ್ (Impress) ಮಾಡುವ ಅವಕಾಶ ನೀಡಿ
ಸಾಮಾನ್ಯವಾಗಿ ಹುಡುಗರಿಗೆ ತಮ್ಮ ಹುಡುಗಿಯನ್ನು ಹೇಗೆಲ್ಲ ಮಾಡಬೇಕು ಎಂಬ ಕನಸುಗಳಿರುತ್ತವೆ, ಅವರ ಭಾವನೆಗಳನ್ನು ನೀವು ಅರ್ಥಮಾಡಿಕೊಂಡು ನಿಮ್ಮ ಮನಸ್ಸು ಗೆಲ್ಲುವ ಅವಕಾಶವನ್ನು ಅವರಿಗೆ ನೀಡಿ ಪ್ರತಿದಿನ ಹೀಗೆ ಹೊಸ ಹೊಸ ರೀತಿಯ ಪ್ರಯೋಗವನ್ನು ನಿಮ್ಮ ಪ್ರೀತಿಯಲ್ಲಿ ಮಾಡುತ್ತಿದ್ದಾಗ ಸಂಬಂಧ ಬೋರ್ ಅನಿಸುವುದಿಲ್ಲ. ಹಾಗೂ ಒಬ್ಬರ ಯೋಚನೆಗಳಿಗೆ ಇನ್ನೊಬ್ಬರು ಗೌರವ (Respect) ನೀಡುತ್ತೀರಾ ಅಂದಾಗ ದಿನದಿಂದ ದಿನಕ್ಕೆ ನಿಮ್ಮ ಬಂಧ ಹೆಚ್ಚುತ್ತಲೇ ಹೋಗುತ್ತದೆ. ಅವರು ನೀಡುವ ಸರ್ಪ್ರೈಸ್ ನಿಂದಾಗಿ ನೀವು ದಿನದಿನಕ್ಕೂ ಹೆಚ್ಚು ಸಂತೋಷ ಪಡಬಹುದು ಅದರ ಜೊತೆಗೆ ನೀವು ಆಗಾಗ ಸರ್ಪ್ರೈಸ್ ನೀಡಿದರೆ ಅವರು ಕೂಡ ಖುಷಿಯಾಗಿರುತ್ತಾರೆ ಇಂತಹ ಸಣ್ಣಪುಟ್ಟ ಬದಲಾವಣೆಗಳನ್ನು ನಿಮ್ಮ ಸಂಬಂಧದಲ್ಲಿ ಕಂಡುಕೊಂಡಾಗ ನಿಮ್ಮಿಬ್ಬರ ನಡುವೆ ಬ್ರೇಕಪ್‌ನ ವಿಷಯ ಬರುವ ಅವಕಾಶವೇ ಇರುವುದಿಲ್ಲ.

- ಯಾವಾಗಲೂ ಜೊತೆಯಲ್ಲಿಯೇ ಇರಬೇಕು ಎಂದು ಹೇಳುವುದನ್ನು ಕಡಿಮೆ ಮಾಡಿ
ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೀರಿ ಅಂದರೆ ಯಾವಾಗಲೂ ಜೊತೆಗೆ ಇರಬೇಕು ಅಂಟಿಕೊಂಡೇ ಇರೋಣ ಎಂದು ಬಯಸುವುದು ಸಾಮಾನ್ಯ ಆದರೆ ಇಬ್ಬರಿಗೂ ತಮ್ಮದೆ ಆದ ಅಂತರದ ಅವಶ್ಯಕತೆ ಇರುತ್ತದೆ. ಸದಾಕಾಲ ನಿಮ್ಮೊಂದಿಗೆ ಮಾತನಾಡುತ್ತೀರಬೇಕು, ನೀವು ಹೊರಗೆ ಸುತ್ತಾಡಲು ಹೋಗುತ್ತಿದ್ದೀರಾ ಎಂದಾದರೆ ಅವರು ನಿಮ್ಮೊಂದಿಗೆ ಬರಬೇಕು, ಯಾವುದೇ ಒಂದು ನಿಮಿಷವೂ ಕೂಡ ನಿಮ್ಮನ್ನು ಬಿಟ್ಟು ದೂರ ಉಳಿಯಬಾರದು, ಪ್ರತಿಯೊಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಇಂತಹ ಯೋಜನೆಗಳನ್ನೆಲ್ಲ ಎಷ್ಟು ದೂರ ಇರುತ್ತೀರೋ ನಿಮ್ಮ ಸಂಬಂಧ ಅಷ್ಟು ಗಟ್ಟಿಯಾಗಿರುತ್ತದೆ. ನಿಮ್ಮ ಅತಿ ಹೆಚ್ಚು ಅನಿಸುವ ಪ್ರೀತಿಯಿಂದ ಅವರು ತೊಂದರೆ ಅನುಭವಿಸುವಂತೆ ಆದರೆ ಅಂತಹ ಸಂಬಂಧವನ್ನು ಕಡಿದುಕೊಳ್ಳಲು ಜನ ಬಯಸುತ್ತಾರೆ. ಪ್ರತಿಯೊಬ್ಬರು ತಮಗಾಗಿ ಸ್ವಲ್ಪ ಸಮಯವಾದರೂ ಪ್ರೈವೆಸಿ ಬೇಕೆಂದು ಬಯಸುತ್ತಾರೆ, ಅಂತಹ ಸಮಯವನ್ನು ಕೂಡ ನಿಮ್ಮೊಂದಿಗೆ ಕಳೆಯಬೇಕು ಎಂದು ಬಯಸುವುದು ತಪ್ಪು.

Valentines Day: ಮನೆಯಲ್ಲೇ ದಿನವನ್ನು ವಿಶೇಷವಾಗಿಸುವುದು ಹೇಗೆ?

- ಅನುಮಾನ (Doubt) ಪಡುವುದು ನಿಲ್ಲಿಸಿ
ಪ್ರತಿಯೊಂದು ವಿಷಯದಲ್ಲಿಯೂ ಅನುಮಾನ ಪಡುವುದನ್ನು ನಿಲ್ಲಿಸಿ, ಎಲ್ಲಾ ವಿಷಯಗಳಿಗೂ ಯಾಕೆ ಏನು ಎಂಬ ಪ್ರಶ್ನೆಯನ್ನು ಕೇಳುವುದರಿಂದ ನಿಮ್ಮ ಸಂಗಾತಿಗೆ ಕಿರಿಕಿರಿ ಎಂದೆನಿಸಬಹುದು ಇದರಿಂದಾಗಿ ಸಂಬಂಧದಿಂದ ದೂರವುಳಿಯಬಹುದು ಎಂಬ ಭಾವನೆ ಬರುವುದು ಸಾಮಾನ್ಯ. ಮೊದಲು ನಿಮ್ಮ ಸಂಗಾತಿಯ ಬಗ್ಗೆ ಸಂಪೂರ್ಣವಾಗಿ ನಂಬಿಕೆಯನ್ನು ಹೇಳಿಸಿ ಅವರು ಯಾರು ಯಾರು ಬೇರೆ ವ್ಯಕ್ತಿಯೊಂದಿಗೆ ಮಾತನಾಡಿದರು ಕೂಡ ಅವರನ್ನು ಅನುಮಾನ ದೃಷ್ಟಿಯಿಂದ ನೋಡುವುದು ಅವರ ಮೇಲೆ ಗೂಢಚಾರಿಕೆ ಮಾಡುವುದು ಮಾತುಗಳನ್ನು ಕದ್ದು ಆಲಿಸುವುದು ಇಂತಹ ವಿಚಾರಗಳು ಯಾವುದೇ ಒಬ್ಬ ವ್ಯಕ್ತಿಯ ಆತ್ಮಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ ಹಾಗೂ ಆತ್ಮಗೌರವದ ವಿಷಯಕ್ಕೆ ಬಂದಾಗ ಪ್ರತಿಯೊಬ್ಬ ವ್ಯಕ್ತಿಯೂ ಹೊಂದಾಣಿಕೆ ಮಾಡಿಕೊಳ್ಳಲು ಇದರ ಮುಂದಿನ ಫಲಿತಾಂಶ ಬ್ರೇಕಪ್ ಆಗಿರುತ್ತದೆ.

click me!