
ಪ್ರೀತಿ (Love)ಯಲ್ಲಿ ಸರಸ,ವಿರಸ ಎರಡೂ ಇರಬೇಕು. ದಾಂಪತ್ಯ ಸುಖ ಹೆಚ್ಚಾಗುವುದು ಶಾರೀರಿಕ ಸಂಬಂಧ (Physical Relationship)ದಲ್ಲಿ ಸುಖ ಸಿಕ್ಕಾಗ ಎಂಬ ಮಾತಿದೆ. ಲೈಂಗಿಕ ಸಂಬಂಧ ಗಟ್ಟಿಯಾಗಿದ್ದರೆ ದಾಂಪತ್ಯ ಮತ್ತಷ್ಟು ಮಧುರವಾಗಿರುತ್ತದೆ. ಸೆಕ್ಸ್ (Sex) ಮಾತ್ರವಲ್ಲ ಮಾತು,ಮುತ್ತು,ಅಪ್ಪುಗೆ ಎಲ್ಲವೂ ದಾಂಪತ್ಯದಲ್ಲಿ ಮಹತ್ವ ಪಡೆಯುತ್ತದೆ.ಪ್ರತಿಯೊಬ್ಬ ವ್ಯಕ್ತಿಯೂ ಬೆಡ್ ರೂಮ್ (Bedroom )ಬಗ್ಗೆ ತಮ್ಮದೇ ಕಲ್ಪನೆ ಹೊಂದಿರುತ್ತಾರೆ. ಸಂಗಾತಿ (Partner) ಜೊತೆ ಸುಂದರ ಕ್ಷಣಗಳನ್ನು ಕಳೆಯಲು ಹಾತೊರೆಯುತ್ತಿರುತ್ತಾರೆ. ಮದುವೆ (Marriage)ಯಾದ ಕೆಲ ದಿನಗಳಿಗೆ ಮಾತ್ರ ಇದು ಸೀಮಿತವಾಗಿರುವುದಿಲ್ಲ. ಶಾರೀರಿಕ ಸಂಬಂಧ ಬೆಳೆಸುವುದು ಆರೋಗ್ಯ (Health)ಕ್ಕೆ ಒಳ್ಳೆಯದು. ವಾರದಲ್ಲಿ ಮೂರು ದಿನವಾದ್ರೂ ಸಂಬಂಧ ಬೆಳೆಸಬೇಕೆಂದು ತಜ್ಞರು ಹೇಳ್ತಾರೆ. ಆದ್ರೆ ಮದುವೆಯಾದ್ಮೇಲೆ ಪತ್ನಿ (Wife) ಹತ್ತಿರ ಬರಲೂ ಬಿಡದೆ ಹೋದ್ರೆ ಪಾಪ ಗಂಡ (Husband)ನ ಸ್ಥಿತಿ ಏನಾಗ್ಬೇಡ. ಬಡಪಾಯಿ ಗಂಡ ತನ್ನ ನೋವನ್ನು ಸಾಮಾಜಿಕ ಜಾಲತಾಣ (social media)ದಲ್ಲಿ ಹಂಚಿಕೊಂಡಿದ್ದಾನೆ. ಆತನ ಕಥೆ (story)ಯನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ.
ಪಾಪದ ಪತಿ : ಆತ ಯುನೈಟೆಡ್ ಕಿಂಗ್‌ಡಮ್ (United Kingdom )ನಿವಾಸಿ. ಅವನ ವಯಸ್ಸು 37 ವರ್ಷ ಮತ್ತು ಆತನ ಹೆಂಡತಿಯ ವಯಸ್ಸು 34 ವರ್ಷ. ಅವರು ಮದುವೆಯಾಗಿ 7 ವರ್ಷಗಳಾಗಿವೆ. ಅವರಿಗೆ 6 ವರ್ಷದ ಮಗಳಿ (Daughter)ದ್ದಾಳೆ. ಈತನ ಪತ್ನಿ ವರ್ಷದಲ್ಲಿ ಮೂರು ದಿನ ಶಾರೀರಿಕ ಸಂಬಂಧ ಬೆಳೆಸಲು ಅವಕಾಶ ನೀಡ್ತಾಳಂತೆ. ನಿಜ, ಇದ್ರಿಂದ ಬೇಸರಗೊಂಡಿರುವ ವ್ಯಕ್ತಿ ತನ್ನ ನೋವ(Pain)ನ್ನು ತೋಡಿಕೊಂಡಿದ್ದಾನೆ.
ವರ್ಷ (Year)ದಲ್ಲಿ ಈ ಮೂರು ದಿನ ಮಾತ್ರ ಅವಕಾಶ : ವ್ಯಕ್ತಿ ಪ್ರಕಾರ, ಜನ್ಮದಿನ (Birthday),ವಾರ್ಷಿಕೋತ್ಸವ ಹಾಗೂ ಇನ್ನೊಂದು ದಿನ ಮಾತ್ರ ಪತ್ನಿ ಜೊತೆ ಸಂಭೋಗ ಬೆಳೆಸಲು ಅವಕಾಶವಿದೆಯಂತೆ. ಈ ಮೂರು ದಿನ ಮುಗಿದ್ರೆ ಮುಗೀತು. ಆತ ಏಕಾಂಗಿ (Alone) ಜೀವನ ನಡೆಸಬೇಕು.
VALENTINES DAY: ಪ್ರಪೋಸ್ ಮಾಡುವಾಗ 'ನೋ' ಹೇಳೋಕೆ ಹಿಂಜರಿಕೆಯಾ ? ಈ ಟ್ರಿಕ್ಸ್ ಯೂಸ್ ಮಾಡಿ
ಪತ್ನಿಯ ವರ್ತನೆಗೆ ಕಾರಣ ಗೊತ್ತಿಲ್ಲ : ಪತ್ನಿ ಯಾಕೆ ಹೀಗೆ ವರ್ತಿಸುತ್ತಾಳೆಂಬುದಕ್ಕೆ ಕಾರಣ ಗೊತ್ತಿಲ್ಲವಂತೆ. ಮೊದಲಿನಿಂದಲೂ ತನ್ನನ್ನು ಪತ್ನಿ ದೂರವಿಟ್ಟಿದ್ದಾಳೆ ಎನ್ನುತ್ತಾನೆ ಆತ.
ಇಬ್ಬರ ಮಧ್ಯೆ ಏನೂ ಸರಿಯಿಲ್ಲ : ಶಾರೀರಿಕ ಸಂಬಂಧ ಮಾತ್ರವಲ್ಲ ಮನೆಯಲ್ಲಿ ಪತ್ನಿ ಸರಿಯಾಗಿ ಮಾತೂ ಆಡುವುದಿಲ್ಲವಂತೆ. ಬೇಕು-ಬೇಡಗಳನ್ನು ಬಿಟ್ಟರೆ ಬೇರೆ ಯಾವುದೇ ವಿಷ್ಯವನ್ನು ಚರ್ಚಿಸುವುದಿಲ್ಲವಂತೆ. ಮನೆಗೆ ಬೇಕಾದ ಸಾಮಾನುಗಳನ್ನು ತರುವಾಗ, ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಮಾತ್ರ ಪರಸ್ಪರ ಮಾತನಾಡಿಕೊಳ್ಳುತ್ತಾರಂತೆ. ಶಾರೀರಿಕ ಸಂಬಂಧ ಬೆಳೆಸುವ ಬಯಕೆ ವ್ಯಕ್ತಪಡಿಸಿದರೆ ಪತ್ನಿ ಸಿಟ್ಟಾಗುತ್ತಾಳಂತೆ. ಅವನು ತನ್ನ ಹೆಂಡತಿಯನ್ನು ಅನೇಕ ಬಾರಿ ಮನವೊಲಿಸಲು ಪ್ರಯತ್ನಿಸಿದ್ದಾನಂತೆ. ಆದರೆ ಅವಳು ಪತಿ ಮಾತನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲವಂತೆ.
ಈ ವರ್ಷ ಇನ್ನೇರಡೇ ಅವಕಾಶ : ವ್ಯಕ್ತಿ ಹೇಳುವ ಪ್ರಕಾರ ಈ ವರ್ಷ ಈಗಾಗಲೇ ಒಂದು ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಾರಂತೆ. ಇನ್ನು ತನಗೆ ಎರಡು ಅವಕಾಶ ಮಾತ್ರವಿದೆ ಎನ್ನುತ್ತಾನೆ. ಎರಡು ಅವಕಾಶದ ನಂತ್ರ ನಾನು ಪತ್ನಿ ಬಳಿ ಹೋಗಲು ಸಾಧ್ಯವಿಲ್ಲವೆಂದು ಪತಿ ಹೇಳಿಕೊಂಡಿದ್ದಾನೆ.
Health Alert: ಮೂರ್ಖರ ಜತೆ ಕೆಲ್ಸ ಮಾಡ್ತೀರಾ? ಅಪಾಯ ಗ್ಯಾರಂಟಿ!
ವಿಚ್ಛೇದನಕ್ಕೆ ಮನಸ್ಸಿಲ್ಲ : ಇಷ್ಟೆಲ್ಲ ಕಥೆ ಕೇಳಿದ್ಮೇಲೆ,ಅಯ್ಯೋ ಇವ್ನಾ, ಬಿಟ್ಟು ಹೋಗೋದಲ್ವಾ ಅಂತಾ ನೀವು ಕೇಳಬಹುದು. ಆದ್ರೆ ಆ ವ್ಯಕ್ತಿಯ ಆಲೋಚನೆ ಭಿನ್ನವಾಗಿದೆ. ಇಬ್ಬರು ದೂರವಾದ್ರೆ ಅದು ಮಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆತ ಚಿಂತಿಸುತ್ತಿದ್ದಾನೆ. ಮಗಳು ಒಬ್ಬರ ಬಳಿ ಬೆಳೆಯುವುದು ಆತನಿಗೆ ಇಷ್ಟವಿಲ್ಲವಂತೆ. ಹೆಂಡತಿಯನ್ನು ಪ್ರೀತಿಸುವ ವ್ಯಕ್ತಿ,ಸಂಬಂಧ ಮುರಿದುಕೊಳ್ಳಲು ಮನಸ್ಸು ಮಾಡ್ತಿಲ್ಲ. ಆದ್ರೆ ಪತ್ನಿಯ ಈ ವರ್ಷದ ಮೂರು ದಿನದ ನಿಯಮ ಮಾತ್ರ ಆತನ ಅಸಮಾಧಾನಕ್ಕೆ ಕಾರಣವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.