ಫೋನ್ ಇಷ್ಟವಿಲ್ಲ ಎನ್ನುವವರು ಯಾರೂ ಇಲ್ಲ. ಇಡೀ ದಿನ ಫೋನ್ ಗೆ ಅಂಟಿಕೊಳ್ಳುವ ಜನರ ಸಂಖ್ಯೆ ಹೆಚ್ಚಿದೆ. ಮಕ್ಕಳು ಕೂಡ ದಿನಪೂರ್ತಿ ಫೋನ್ ಹಿಡಿದಿರುತ್ತಾರೆ. ಇದ್ರಿಂದ ಮಕ್ಕಳ ಆರೋಗ್ಯ ಹಾಳಾಗುತ್ತದೆ. ಈ ಚಟದಿಂದ ಮಕ್ಕಳನ್ನು ದೂರ ಮಾಡುವುದು ಪಾಲಕರ ಹೊಣೆ.
ಕೊರೊನಾ (Corona) ವೈರಸ್ ಅನೇಕ ಜನರ ಜೀವನವನ್ನು ಬದಲಿಸಿದೆ. ಅದ್ರಲ್ಲಿ ಮಕ್ಕಳು (Children) ಕೂಡ ಸೇರಿದ್ದಾರೆ. ಕೊರೊನಾ ಹಾಗೂ ಲಾಕ್ ಡೌನ್ (Lockdown) ನಿಂದಾಗಿ ಕಳೆದ ಎರಡು ವರ್ಷಗಳಿಂದ ಮಕ್ಕಳು ಶಾಲೆಗೆ ಹೋಗಿರಲಿಲ್ಲ. ಮನೆಯಲ್ಲಿಯೇ ಬಂಧಿಯಾಗಿದ್ದ ಮಕ್ಕಳು ರಸ್ತೆಗೆ ಇಳಿದಿಲ್ಲ. ಮೊಬೈಲ್, ಕಂಪ್ಯೂಟರ್ ಅವರ ಜೀವನವಾಗಿದೆ. ಸ್ಮಾರ್ಟ್ಫೋನ್, ಕಂಪ್ಯೂಟರ್, ಟಿವಿ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ತಿದ್ದಾರೆ. ಮಕ್ಕಳ ಈ ಚಟ ಪಾಲಕರ ದೊಡ್ಡ ತಲೆಬಿಸಿಗೆ ಕಾರಣವಾಗಿದೆ. ತಾಸು, ಎರಡು ತಾಸು ಗೆಜೆಟ್ ಮುಂದೆ ಕುಳಿತುಕೊಳ್ತಿರುವ ಮಕ್ಕಳ ದೈಹಿಕ ಆರೋಗ್ಯ ಮಾತ್ರ ಹದಗೆಟ್ಟಿಲ್ಲ. ಮಾನಸಿಕ ಆರೋಗ್ಯ ಕೂಡ ಹಾಳಾಗಿದೆ. ಅನೇಕ ಮಕ್ಕಳು ಒತ್ತಡ, ಕಿರಿಕಿರಿ, ಖಿನ್ನತೆ, ಕೋಪ ಹಾಗೂ ಹಠಮಾರಿಯಾಗ್ತಿದ್ದಾರೆ. ಮಕ್ಕಳ ಕಣ್ಣು ಹಾಳಾಗ್ತಿದೆ. ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಪಾಲಕರು, ಮಕ್ಕಳ ಜೀವನ ಸುಧಾರಿಸಬೇಕೆಂಬ ಪಾಲಕರು ಮಕ್ಕಳ ಸ್ಮಾರ್ಟ್ಫೋನ್ ಹವ್ಯಾಸವನ್ನು ಸುಲಭವಾಗಿ ಬಿಡಿಸಬಹುದು.
ಮೊಬೈಲ್ ನಿಂದ ಮಕ್ಕಳನ್ನು ದೂರವಿಡಲು ಇಲ್ಲಿದೆ ಉಪಾಯ
ಮನೆಯಿಂದ ಹೊರಗೆ ಆಟ : ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಒಳ್ಳೆಯದು. ಅದಕ್ಕಾಗಿ ಮಕ್ಕಳಿಗೆ ಮನೆಯಿಂದ ಹೊರಗೆ ಹೋಗಿ ಆಡುವಂತೆ ಸಲಹೆ ನೀಡಿ. ಸಾಧ್ಯವಾದ್ರೆ ಅವರ ಸ್ನೇಹಿತರನ್ನು ಆಟವಾಡಲು ಕರೆತನ್ನಿ. ಮಕ್ಕಳು ಒಮ್ಮೆ ಔಟ್ ಡೋರ್ ಗೇಮ್ಸ್ ರುಚಿ ನೋಡಿದ್ರೆ ಫೋನ್ ಮಿಸ್ ಮಾಡುವುದಿಲ್ಲ. ನಿಧಾನವಾಗಿ ಮೊಬೈಲ್ ಚಟ ಬಿಡುತ್ತದೆ.
ಪ್ರಕೃತಿ ಮೇಲೆ ಆಸಕ್ತಿ : ಮಕ್ಕಳ ಮೊಬೈಲ್, ಲ್ಯಾಪ್ ಟಾಪ್ ಆಸಕ್ತಿ ಕಡಿಮೆಯಾಗ್ಬೇಕೆಂದ್ರೆ ಮಕ್ಕಳನ್ನು ಪ್ರಕೃತಿ ಜೊತೆ ಬೆರೆಸುವ ಪ್ರಯತ್ನ ಮಾಡಿ. ಮಕ್ಕಳಿಗೆ ಪಕ್ಷಿ, ಪ್ರಾಣಿ, ಗಿಡ – ಮರಗಳ ಬಗ್ಗೆ ಹೇಳ್ತಿರಿ. ಹತ್ತಿರದ ಪಾರ್ಕ್ ಗೆ ಕರೆದುಕೊಂಡು ಹೋಗಿ ಅಲ್ಲಿನ ಪರಿಸರದ ಬಗ್ಗೆ ಮಾಹಿತಿ ನೀಡಿ. ಮಕ್ಕಳು ಅದ್ರಲ್ಲಿ ಆಸಕ್ತಿ ಬೆಳೆಸಿಕೊಳ್ತಿದ್ದಂತೆ ಮೊಬೈಲ್, ಟಿವಿಯಿಂದ ಸ್ವಲ್ಪ ದೂರವಾಗ್ತಾರೆ. ನಿಧಾನವಾಗಿ ಅದ್ರಲ್ಲಿ ಆಸಕ್ತಿ ಕಳೆದುಕೊಳ್ತಾರೆ.
ಪುಸ್ತಕ ಓದುವ ಹವ್ಯಾಸ ಬೆಳೆಸಿ : ಮೊಬೈಲ್ ಮನಸ್ಸನ್ನು ಹಾಳು ಮಾಡುತ್ತದೆ. ಅದೇ ಪುಸ್ತಕ ಮನಸ್ಥಿತಿಯನ್ನು ಸುಧಾರಿಸುತ್ತದೆ. ರಜೆಯಲ್ಲಂತೂ ಮಕ್ಕಳು ಪುಸ್ತಕ ಓದುವುದಿಲ್ಲ. ಮಕ್ಕಳಿಗೆ ಆಸಕ್ತಿದಾಯಕ ಪುಸ್ತಕಗಳನ್ನು ನೀಡಿ. ಅದನ್ನು ನೀವೂ ಓದಿ. ಅವರಿಗೂ ಓದಲು ಕೊಡಿ. ಪಾಲಕರು ಪುಸ್ತಕ ಓದುತ್ತಿದ್ದರೆ ಅದನ್ನು ನೋಡಿ ಮಕ್ಕಳು ಓದಲು ಕಲಿಯುತ್ತಾರೆ.
ಮನೆಯ ಕೆಲಸದಲ್ಲಿ ಸಹಾಯ : ಮಕ್ಕಳನ್ನು ಮೊಬೈಲ್ ನಿಂದ ದೂರವಿಡಬೇಕೆಂದ್ರೆ ಅವರನ್ನು ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿ ಮಾಡ್ಬೇಕು. ಮಕ್ಕಳನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ. ಸಣ್ಣಪುಟ್ಟ ಮನೆ ಕೆಲಸಗಳನ್ನು ಮಕ್ಕಳಿಗೆ ನೀಡಿ. ಮಕ್ಕಳಿಗೆ ಕೆಲಸ ಮಾಡುವಾಗ ಬೋರ್ ಆಗ್ಬಹುದು. ಹಾಗಾಗಿ ಕೆಲಸ ಮಾಡ್ತಲೆ ಮಕ್ಕಳ ಜೊತೆ ಮೋಜು – ಮಸ್ತಿ ಮಾಡಿ. ಇದ್ರಿಂದ ಮಕ್ಕಳು ಮನೆ ಕೆಲಸವನ್ನು ಕಲಿಯುವ ಜೊತೆಗೆ ಮೊಬೈಲ್ ನಿಂದ ದೂರವಿರಲು ಬಯಸ್ತಾರೆ.
ಮಕ್ಕಳನ್ನು ಮನೇಲಿ ಒಬ್ಬರೇ ಬಿಟ್ಟುಹೋಗುವಾಗ ಈ ವಿಚಾರ ಹೇಳಿಕೊಡೋದನ್ನು ಮರೀಬೇಡಿ
ಫೋನ್ ಗೆ ಲಾಕ್ : ನಿಮ್ಮ ಒಪ್ಪಿಗೆ ಇಲ್ಲದೆ ಮಕ್ಕಳು ಮೊಬೈಲ್ ತೆಗೆದುಕೊಳ್ತಾರೆ. ಕದ್ದು ಮುಚ್ಚಿ ಮೊಬೈಲ್ ನೋಡ್ತಾರೆ. ಅದನ್ನು ತಪ್ಪಿಸಬೇಕೆಂದ್ರೆ ಫೋನ್ ಗೆ ಲಾಕ್ ಹಾಕಿ. ಆಗ ಮಕ್ಕಳನ್ನು ನಿಯಂತ್ರಿಸಬಹುದು. ಮಕ್ಕಳು ಮೊಬೈಲ್ ನೋಡುವ ಸಮಯವನ್ನು ನೀವು ನಿಗದಿ ಮಾಡ್ಬಹುದು. ಆ ಸಮಯದಲ್ಲಿ ಮಾತ್ರ ನೀವು ಲಾಕ್ ತೆಗೆದುಕೊಡಬಹುದು.
Parenting Tips : ಮಕ್ಕಳ ಖಿನ್ನತೆ ಕಾರಣವಾಗುತ್ತೆ ಪಾಲಕರ ಈ ವರ್ತನೆ
ಇತರ ಹವ್ಯಾಸಕ್ಕೆ ಪ್ರೋತ್ಸಾಹ : ಮಕ್ಕಳನ್ನು ಬೇರೆ ಬೇರೆ ಹವ್ಯಾಸದಲ್ಲಿ ತೊಡಗಿಸಿ. ಅವರನ್ನು ಸಂಗೀತ, ಡಾನ್ಸ್ ಸೇರಿದಂತೆ ಬೇರೆ ಕ್ಲಾಸ್ ಗೆ ಸೇರಿಸಿ. ಸದಾ ಬ್ಯುಸಿಯಾಗಿರುವ ಮಕ್ಕಳು ನಿಧಾನವಾಗಿ ಫೋನ್ ಮರೆಯುತ್ತಾರೆ.