
ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆಗೂ ಅದರದ್ದೇ ಆದ ಮಹತ್ವವಿದೆ. ಪುರುಷ ಮತ್ತು ಮಹಿಳೆ ದೈಹಿಕವಾಗಿ ಒಂದಾಗುವ ಕ್ರಿಯೆಯನ್ನು ಸೆಕ್ಸ್ ಎನ್ನುತ್ತಾರೆ.ದೈಹಿಕವಾಗಿ ಲೈಂಗಿಕ ಕ್ರಿಯೆ (Sex) ನಡೆಸಲು ದಿಢೀರನೆ ಸಿದ್ಧವಿಲ್ಲದವರು ಮೊದಲಿಗೆ ಫೋನ್ ಸೆಕ್ಸ್ ಹೊಂದಲು ಮುಂದಾಗುತ್ತಾರೆ. ಹಾಗಿದ್ರೆ ಮೊದಲಿಗೆ ಫೋನ್ ಸೆಕ್ಸ್ (Phone Sex) ಎಂದರೇನು ? ಫೋನ್ ಸೆಕ್ಸ್‌ನ್ನು ಪ್ರಾರಂಭಿಸುವುದು ಹೇಗೆ ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳೋಣ.
ಫೋನ್ ಸೆಕ್ಸ್ ಎಂದರೇನು ?
ಫೋನ್ ಸೆಕ್ಸ್ ಎಂಬುದು ಫೋನ್ ಆಧಾರಿತ ಲೈಂಗಿಕ ಸಂಭಾಷಣೆಯಾಗಿದೆ. ಇದು ಕರೆಯ ಮೂಲಕ ಮಾತನಾಡುವ ಮೂಲಕ ಆಗಿರಬಹುದು, ಪರಸ್ಪರ ಸಂದೇಶಗಳನ್ನು ಕಳುಹಿಸುವ ಮೂಲಕ ಆಗಿರಬಹುದು ಅಥವಾ ವೀಡಿಯೋ ಕಾಲ್ (Video Call) ಮೂಲಕ ಸಹ ಆಗಿರಬಹುದು. ಸಂಬಂಧ (Relationship)ದಲ್ಲಿ ಅನ್ಯೋನ್ಯತೆಯನ್ನು ಬೆಳೆಸಲು ಇದು ಒಂದು ಉತ್ತಮ ಮಾರ್ಗವಾಗಿದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. ನೇರವಾಗಿ ಇಬ್ಬರು ಲೈಂಗಿಕತೆಯಲ್ಲಿ ಭಾಗವಹಿಸುವ ಬದಲು ಫೋನ್ ಸೆಕ್ಸ್ ಮಾಡುವುದು ಇಬ್ಬರಿಗೂ ಕಂಫರ್ಟ್ ಝೋನ್ ತರುತ್ತದೆ ಎನ್ನುತ್ತಾರೆ.
ಫೋನ್ ಸೆಕ್ಸ್‌ನ್ನು ಪ್ರಾರಂಭಿಸುವುದು ಹೇಗೆ ?
ಉತ್ತಮ ಫೋನ್ ಸೆಕ್ಸ್ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಇದು ನಿಜವಾಗಿಯೂ ಸ್ಪಷ್ಟವಾದ ಸಂಭಾಷಣೆಯಂತೆ ಕಾಣಿಸಬಹುದು. ಆದರೆ ಇಲ್ಲಿ ನೀವು ಲೈಂಗಿಕ ಕ್ರಿಯೆಯ ಬಗ್ಗೆ ಮುಕ್ತವಾಗಿ ಮಾತನಾಡಬಹುದು. ಇದಕ್ಕೆ ನಿಮ್ಮ ಸಂಗಾತಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಿಕೊಳ್ಳಬೇಕು. ನಂತರ ಅವರು ಅದರಲ್ಲಿ ಮುಂದುವರಿಸಲು ಬಯಸುತ್ತಾರಾ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಲಬೇಕು. ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಉತ್ಸಾಹಿಗಳಾಗಿದ್ದಾಗ ಮಾತ್ರ ಫೋನ್ ಸೆಕ್ಸ್ ಚೆನ್ನಾಗಿರುತ್ತದೆ. ಒಬ್ಬರಿಂದ ನಿರಾಸಕ್ತಿ ಕಂಡು ಬಂದರೂ ಅದನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ. ಫೋನ್ ಸೆಕ್ಸ್ ಮಾಡುವಾಗ ಯಾವುದೆಲ್ಲಾ ಹಂತಗಳಿವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಗರ್ಲ್‌ಫ್ರೆಂಡ್ ಇದ್ದರೂ ಬೇರೆ ಹುಡುಗಿಯರ ಜೊತೆ ಫ್ಲರ್ಟ್ ಮಾಡೋ ಅಭ್ಯಾಸ ಸರೀನಾ ?
ಮನಸ್ಥಿತಿಯನ್ನು ಹೊಂದಿಸಿ
ದೈಹಿಕ ಸ್ಥಿತಿಯಲ್ಲಿ ಲೈಂಗಿಕತೆಯು ಅದ್ಭುತವಾಗಿದೆ. ಆದರೆ ನೀವು ಫೋನ್ ಸೆಕ್ಸ್ ಅನ್ನು ಆರಿಸಿಕೊಂಡಾಗ, ಅದು ಸಂಪೂರ್ಣವಾಗಿ ವಿಭಿನ್ನ ಅನುಭವವಾಗಿದೆ. ಹೀಗಾಗಿ ನೀವು ದೈಹಿಕವಾಗಿ ಒಟ್ಟಿಗೆ ಇಲ್ಲದಿದ್ದರೆ ಸರಿಯಾದ ಮನಸ್ಥಿತಿಯನ್ನು ಹೊಂದಿಸಿಕೊಳ್ಳಿ. ಸಂಗಾತಿಯ ಜತೆ ಹೆಚ್ಚು ರೋಮ್ಯಾಂಟಿಕ್ ಆಗಿರಿ. ಮನಸ್ಥಿತಿಯನ್ನು ಅನುಭವಿಸಲು, ನಿಮ್ಮ ಕೋಣೆಯನ್ನು ದೀಪಗಳನ್ನು ಮಂದಗೊಳಿಸಿ. ನಿಮ್ಮ ಸೆಕ್ಸಿಯೆಸ್ಟ್ ಒಳ ಉಡುಪುಗಳನ್ನು ಧರಿಸಿ ಅಥವಾ ನೀವು ಬಯಸಿದಂತೆ ಬೆತ್ತಲೆಯಾಗಿರಿ.
ಸೃಜನಶೀಲರಾಗಿರಿ
ನಿಮ್ಮ ಸಂಗಾತಿಗೆ ಅಕ್ಷರಶಃ ನೀವು ಏನು ಮಾಡಲು ಬಯಸುತ್ತೀರಿ ಎಂಬುದನ್ನು ವಿವರಿಸಿ. ನಿಮ್ಮ ಸಂಗಾತಿಯ ಕಲ್ಪನೆಯನ್ನು ಮಾತ್ರವಲ್ಲದೆ ನಿಮ್ಮ ಸ್ವಂತ ಕಲ್ಪನೆಯನ್ನೂ ಉತ್ತೇಜಿಸಿ. ಉತ್ತಮ ಸಂಭಾಷಣೆಗಾಗಿ ಮುಂದಾಳತ್ವ ವಹಿಸಿ, ನಿಮ್ಮ ಸಂಗಾತಿಯನ್ನು ಅವರು ಹೇಗೆ ಸ್ಪರ್ಶಿಸಲು ಬಯಸುತ್ತಾರೆ ಎಂದು ಕೇಳಿ. ನೀವು ಅವರಿಗೆ ಏನು ಮಾಡಬೇಕೆಂದು ಅವರಿಗೆ ತಿಳಿಸಿ.
ಸಂಗಾತಿ ಜೊತೆ ಮುಂಜಾನೆ ಈ ಕೆಲಸ ಮಾಡಿದ್ರೆ, ದಿನವಿಡೀ ರೊಮ್ಯಾಂಟಿಕ್ ಮೂಡ್ ನಿಮ್ಮದಾಗುತ್ತೆ
ರೋಮ್ಯಾಂಟಿಕ್ ಪದಗಳನ್ನು ಬಳಸಿ
ಫೋನ್ ಸೆಕ್ಸ್‌ನ್ನು ಸುಂದರ ಮಾಡುವುದೇ ಪದಗಳ ಆಯ್ಕೆ. ಹೀಗಾಗಿ ರೋಮ್ಯಾಂಟಿಕ್ ಪದಗಳನ್ನು ಬಳಸುವುದನ್ನು ಮರೆಯದಿರಿ. ಇದು ಇಬ್ಬರ ನಡುವಿನ ಬಿಸಿಯನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ. ಹೆಚ್ಚು ಆಪ್ತವೆನಿಸುವ ಪದಗಳನ್ನೇ ಆಯ್ಕೆ ಮಾಡಿಕೊಳ್ಳಿ
ಜತೆಗಿದ್ದ ಕ್ಷಣಗಳನ್ನು ನೆನಪಿಸಿಕೊಳ್ಳಿ
ಸಂಗಾತಿಯ ಜತೆ ಒಟ್ಟಿಗಿದ್ದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಿ. ನೀವು ಪರಸ್ಪರ ಜತೆಯಾಗಿ ಮಾತನಾಡಿದ್ದ ಪೋಲಿ ಮಾತುಗಳು, ಕ್ಷಣಗಳು, ರೋಮ್ಯಾಂಟಿಕ್ ಸಮಯಗಳ ಬಗ್ಗೆ ಹೆಚ್ಚು ಮಾತನಾಡಿ
ವ್ಯಕ್ತಿ ನಂಬಲರ್ಹರೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೀವು ಫೋನ್ ಸೆಕ್ಸ್‌ಗೆ ಹೋಗುತ್ತಿದ್ದರೆ, ಮೊದಲನೆಯದಾಗಿ, ನೀವು ಈ ವ್ಯಕ್ತಿಯನ್ನು ನಂಬಬಹುದು ಎಂದು ಖಚಿತಪಡಿಸಿಕೊಳ್ಳಿ. ಒಮ್ಮೆ ನೀವು ನಿರ್ಧರಿಸಿದ ನಂತರ ಮಾತ್ರ ಅದಕ್ಕೆ ಸಿದ್ಧರಾಗಿ. ನಿಮ್ಮ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ನಂಬಲರ್ಹರಲ್ಲ ಎಂಬುದು ಗೊತ್ತಾದರೆ ಫೋನ್ ಸೆಕ್ಸ್‌ಗೆ ಅವಕಾಶ ಕೊಡಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.