ಮಗುವಿಗೆ ಪಾಲಕರು ನೀಡಬೇಕಿರೋದು ಲಂಚವೋ, ಬಹುಮಾನವೋ?

By Suvarna News  |  First Published Feb 21, 2021, 3:06 PM IST

ಮಗುವಿನ ಪಾಲನೆಗೆ ಸಂಬಂಧಿಸಿ ಹೆತ್ತವರ ತಲೆಯಲ್ಲಿ ಹತ್ತಾರು ಅನುಮಾನಗಳು ಸದಾ ಇರುತ್ತವೆ. ಅಂಥ ಅನುಮಾನಗಳಲ್ಲಿ ಮುಖ್ಯವಾದದ್ದು ಮಗುವಿಗೆ ಇಷ್ಟವಾದ ಉಡುಗೊರೆ ನೀಡೋದು ಒಳ್ಳೆಯದೇ,ಕೆಟ್ಟದ್ದೇ ಎಂಬುದು. ಇದನ್ನು ತಿಳಿಯಲು ನೀವು ಲಂಚ ಮತ್ತು ಬಹುಮಾನದ ನಡುವಿನ ವ್ಯತ್ಯಾಸ ಅರಿಯೋದು ಮುಖ್ಯ.


ಹೋಂವರ್ಕ್ ಮಾಡಲು ಒಲ್ಲೆಅನ್ನೋ ಮಗುವಿಗೆ ತಾಯಿ ʼಪುಟ್ಟ ನೀನು ಬೇಗ ಹೋಂವರ್ಕ್ ಕಂಪ್ಲೀಟ್ ಮಾಡಿದ್ರೆ ಚಾಕಲೇಟ್ ಕೊಡ್ತೀನಿʼ ಎಂದು ಹೇಳಿದ ತಕ್ಷಣ ಆ ಮಗು ಬರೆಯಲು ಪ್ರಾರಂಭಿಸುತ್ತೆ. ಊಟ ಮಾಡಲ್ಲವೆಂದು ಹಠ ಹಿಡಿದು ಅಳುವ ಪುಟ್ಟ ಕಂದಮ್ಮನಿಂದ ಹಿಡಿದು ಪ್ರೌಢಾವಸ್ಥೆಗೆ ಬಂದ ಮಕ್ಕಳನ್ನುಕೂಡ ತಮ್ಮ ದಾರಿಗೆ ತರಲು ಅಪ್ಪ-ಅಮ್ಮಇಂಥ ಕೆಲವು ಟ್ರಿಕ್ಸ್ ಅನುಸರಿಸಬೇಕಾಗುತ್ತೆ.

ಆದ್ರೆ ಈ ಟ್ರಿಕ್ಸ್ನಲ್ಲಿ ಎರಡು ವಿಧವಿದೆ. ಒಂದು ಲಂಚ, ಇನ್ನೊಂದು ಬಹುಮಾನ. ಈ ಎರಡೂ ಕೂಡ ಅವಳಿ-ಜವಳಿಗಳಂತೆ ಒಂದಕ್ಕೊಂದು ಸಂಬಂಧವಿರುವಂತೆ,ಒಂದೇ ಅರ್ಥ ಕೊಡುವಂತೆ ಕಂಡರೂ ಇವೆರಡರ ನಡುವೆ ವ್ಯತ್ಯಾಸವಿದೆ.ಯಾವುದೋ ಒಂದು ವಸ್ತುವಿನ ಆಸೆ ತೋರಿಸಿ ಮಗುವನ್ನು ಒಪ್ಪಿಸೋದು ಒಳ್ಳೆಯ ಅಭ್ಯಾಸವಲ್ಲ ಅನ್ನೋದು ತಜ್ಞರ ಅಭಿಪ್ರಾಯ.ಇದ್ರಿಂದ ಮಗು ಪ್ರತಿ ಕೆಲಸಕ್ಕೂ ಮುನ್ನ ಪಾಲಕರಿಂದ ಇಂಥ ಭರವಸೆಯನ್ನು ನಿರೀಕ್ಷಿಸೋ ಅಭ್ಯಾಸ ರೂಢಿಸಿಕೊಳ್ಳೋ ಸಾಧ್ಯತೆಯಿದೆ. ಅದೇ ಮಗು ಉತ್ತಮ ಕೆಲ್ಸ ಮಾಡಿದ ಬಳಿಕ ನೀವು ಆತ ಅಥವಾ ಆಕೆಯನ್ನು ಪ್ರಶಂಸಿ ಅವರಿಷ್ಟದ ವಸ್ತುವನ್ನು ನೀಡಿದ್ರೆ ಅದು ಲಂಚವಲ್ಲ,ಬಹುಮಾನವಾಗುತ್ತೆ.ಇಂಥ ಬಹುಮಾನ ಮಗುವಿಗೆ ಇನ್ನಷ್ಟು ಒಳ್ಳೆಯ ಕೆಲ್ಸಗಳನ್ನು ಮಾಡಲು ಪ್ರೇರಣೆ ನೀಡುತ್ತೆ. ಹೀಗಾಗಿ ಲಂಚ ಅಥವಾ ಆಮಿಷ ನಕಾರಾತ್ಮಕ ಪರಿಣಾಮವನ್ನು ಒಳಗೊಂಡಿದ್ರೆ, ಬಹುಮಾನ ಹಾಗೂ ಹೊಗಳಿಕೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು.

ಪ್ರೀತಿ ಉಳಿಸಿಕೊಳ್ಳಲು ಐದು ಸೂತ್ರಗಳು!

Tap to resize

Latest Videos

undefined

ವ್ಯತ್ಯಾಸ ಗುರುತಿಸೋದು ಹೇಗೆ?
*ಮಗುವಿನ ಉತ್ತಮ ವರ್ತನೆಯನ್ನು ಗುರುತಿಸಿ ನೀವು ಏನಾದ್ರೂ ನೀಡಿದ್ರೆ ಅದು ಬಹುಮಾನ ಅಥವಾ ಪ್ರಶಸ್ತಿ ಅನ್ನಿಸಿಕೊಳ್ಳುತ್ತೆ. ಉದಾಹರಣೆಗೆ ಮಗು ಆಟವಾಡಿದ ಬಳಿಕ ಮನೆ ತುಂಬಾ ಹರಡಿರೋ ಆಟಿಕೆಗಳನ್ನು ಆಯ್ದು ಬ್ಯಾಗ್ಗೆ ತುಂಬಿಸಿ ಸ್ವಸ್ಥಾನದಲ್ಲಿಟ್ಟಿದೆ ಎಂದಾದ್ರೆ ನೀವು ಖುಷಿಯಿಂದ ಮಗುವಿಗೆ ನೀಡೋ ವಸ್ತು ಬಹುಮಾನವಾಗುತ್ತೆ. ಕೆಟ್ಟ ವರ್ತನೆಯನ್ನು ನಿಲ್ಲಿಸಲು ನೀವು ಮಗುವಿಗೆ ಏನಾದ್ರು ನೀಡಿದ್ರೆ ಅದು ಲಂಚವಾಗುತ್ತೆ. ಉದಾಹರಣೆಗೆ ನೀವು ವಿನಾಕಾರಣ ಕೋಪಿಸಿಕೊಳ್ಳೋ, ಅಳೋ ಮಗುವಿಗೆ ಹಾಗೇ ಮಾಡದ್ರಿದೆ ಚಾಕಲೇಟ್ ನೀಡುತ್ತೇನೆ ಎಂದ್ರೆ ಅದು ಲಂಚವೇ ಹೊರತು ಬಹುಮಾನವಲ್ಲ.


* ಇನ್ನು ನೀವು ಮಗುವಿಗೆ ನೀಡೋ ಸರ್ಪ್ರೈಸ್ ಗಿಫ್ಟ್ಗಳನ್ನು ಇವೆರಡರಲ್ಲಿ ಯಾವ ಸಾಲಿಗೆ ಸೇರಿಸೋದು ಎಂದು ಯೋಚಿಸುತ್ತಿದ್ರೆ ಇದನ್ನು ಬಹುಮಾನದ ಸಾಲಿಗೇ ಸೇರಿಸಬಹುದು. ಮಗು ಇಷ್ಟಪಡೋ ಆಟಿಕೆಯನ್ನು ಖರೀದಿಸಿ ತಂದು ಮಗುವಿಗೆ ನೀಡಿದ್ರೆ ಅದು ಬಹುಮಾನ. ಅದೇ ಶಾಪಿಂಗ್ಗೆ ಹೋದಾಗ ರಚ್ಚೆ ಹಿಡಿದು ಅಳುತ್ತ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆಯೋ ಮಗುವನ್ನು ಸುಮ್ಮನಿರಿಸಲು ಆಟಿಕೆ ಖರೀದಿಸಿ ಕೊಟ್ರೆ ಅದು ಲಂಚ.

*ಒಂದು ವೇಳೆ ನೀವು ನಿಮ್ಮ ಮಗುವಿಗೆ ಯಾವುದೋ ಖುಷಿ ಅಥವಾ ಸಕಾರಾತ್ಮಕ ಕಾರಣಕ್ಕೆ ಗಿಫ್ಟ್ ನೀಡಿದ್ರೆ ಅದು ಖಂಡಿತಾ ಬಹುಮಾನವೇ. ಒಂದು ವೇಳೆ ಮಗುವಿನ ವರ್ತನೆಯಿಂದ ಒತ್ತಡ ಹಾಗೂ ಆತಂಕಕ್ಕೊಳಗಾಗಿ ಏನು ಮಾಡೋದು ಎಂದು ತಿಳಿಯದೆ ಮಗುವಿಗೆ ಏನಾದ್ರು ನೀಡಿದ್ರೆ ಅದು ಲಂಚವಾಗುತ್ತೆ.

*ಒಂದು ವೇಳೆ ನೀವು ನೀಡೋ ಗಿಫ್ಟ್ ಅನ್ನು ಮಗು ಹೆಮ್ಮೆ ಹಾಗೂ ಖುಷಿಯಿಂದ ಸ್ವೀಕರಿಸಿದ್ರೆ ಅದು ಬಹುಮಾನ. ಮಗುವಿಗೆ ಬಹುಮಾನ ನೀಡಬೇಕೇ ಬೇಡವೆ ಅನ್ನೋದು ಹೆತ್ತವರ ನಿರ್ಧಾರ ಆಗಿರುತ್ತೆ. ಅದೇ ಮಗು ನಿಮ್ಮ ಬಳಿ ಬಂದು ನಾನು ರೂಮ್ ಕ್ಲೀನ್ ಮಾಡಿದ್ದೇನೆ, ಹಾಗಾಗಿ ನಂಗೆ ಟಿವಿ ನೋಡೋ ಸಮಯವನ್ನು ವಿಸ್ತರಿಸುವಂತೆ ಕೇಳಿದ್ರೆ ಡೌಟೇ ಇಲ್ಲ, ಇದು ಲಂಚವೇ.

ಈ ರಾಶಿಯ ಹುಡುಗೀರು ಹುಡುಗರಿಗೂ ಮುನ್ನವೇ ಪ್ರಪೋಸ್ ಮಾಡ್ತಾರೆ!

ಬಹುಮಾನದ ಅಗತ್ಯವೇನು?
ಎಲ್ಲ ಮಕ್ಕಳಿಗೂ ಹೊಗಳಿಕೆ ಇಷ್ಟವಾಗುತ್ತೆ. ಅವರು ಉತ್ತಮ ಕೆಲ್ಸ ಮಾಡಿದಾಗ ಹೊಗಳಿಕೆಯ ಜೊತೆ ಪುಟ್ಟ ಗಿಫ್ಟ್ ನೀಡಿದ್ರೆ ಮಗು ಖುಷಿಯಾಗೋ ಜೊತೆ ಇನ್ನಷ್ಟು ಉತ್ತಮ ಕೆಲ್ಸಗಳನ್ನು ಮಾಡುತ್ತೆ. ಒಂದು ಪುಟ್ಟ ಉಡುಗೊರೆ ಮಗುವಿಗೆ ಇನ್ನಷ್ಟು ಉತ್ತಮ ಕೆಲಸ ಮಾಡಲು, ಒಳ್ಳೆಯ ವರ್ತನೆ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತೆ.ಆದ್ರೆ ನೆನಪಿಡಿ, ನೀವು ನೀಡೋ ಬಹುಮಾನ ಅವರ ವಯಸ್ಸಿಗೆ ತಕ್ಕದಾಗಿರಲಿ. ಪ್ರೌಢಾವಸ್ಥೆಗೆ ಬಂದ ಮಗ ಅಥವಾ ಮಗಳಿಗೆ ಚಾಕಲೇಟ್ ನೀಡಿದ್ರೆ, ಖಂಡಿತಾ ಅದು ಅವರಿಗಿಷ್ಟವಾಗೋ ಉಡುಗೊರೆ ಅಲ್ಲವೇಅಲ್ಲ. 

ಈ ತಪ್ಪು ಮಾಡದೇ ಇದ್ರೆ ವೈವಾಹಿಕ ಜೀವನ ಫುಲ್ ರೊಮ್ಯಾಂಟಿಕ್

ಲಂಚ ಅಪಾಯಕಾರಿ
ಮಗುವಿನ ಕೋಪ ತಣಿಸಲು ಅಥವಾ ಆ ಕ್ಷಣಕ್ಕೆ ಸುಮ್ಮನಿರಿಸಲು ತಾಯಿ ಅಥವಾ ತಂದೆ ಚಾಕಲೇಟ್, ಐಸ್ಕ್ರೀಮ್ ಸೇರಿದಂತೆ ಏನೋ ಒಂದು ಅವರಿಗಿಷ್ಟವಾದ ವಸ್ತು ನೀಡುತ್ತಾರೆ. ಇದ್ರಿಂದ ಮಗು ಆ ಕ್ಷಣಕ್ಕೆ ಸುಮ್ಮನಾಗುತ್ತೆ ಅನ್ನೋದೇನು ನಿಜ. ಆದ್ರೆ ಹೆತ್ತವರ ಈ ಅಭ್ಯಾಸವನ್ನು ಮಗು ದುರ್ಬಳಕೆ ಮಾಡಿಕೊಳ್ಳೋ ಸಾಧ್ಯತೆ ಹೆಚ್ಚಿರುತ್ತೆ. ಚಾಕಲೇಟ್ ಸಿಗುತ್ತೆ ಎಂಬ ಕಾರಣಕ್ಕೆ ಪದೇಪದೆ ಗಲಾಟೆ ಮಾಡೋದು ಇಲ್ಲವೆ ಅಳೋದು ಮಾಡ್ಬಹುದು. ಹಾಗಾಗಿ ಮಗುವಿಗೆ ಲಂಚ ಕೊಟ್ಟು ಸುಮ್ಮನಿರಿಸೋ ಕೆಲ್ಸವನ್ನು ಆದಷ್ಟು ಕಡಿಮೆ ಮಾಡೋದು ಒಳ್ಳೆಯದು. 


 

click me!