After Divorce : ವಿಚ್ಛೇದನದ ನಂತ್ರ ಸಂಗಾತಿಯ ನೆನಪು ಕಾಡೋದು ತಪ್ಪಾ?

Suvarna News   | Asianet News
Published : Jan 27, 2022, 10:54 AM IST
After Divorce : ವಿಚ್ಛೇದನದ ನಂತ್ರ ಸಂಗಾತಿಯ ನೆನಪು ಕಾಡೋದು ತಪ್ಪಾ?

ಸಾರಾಂಶ

ವಿಚ್ಛೇದನ ಒಂದು ಸವಾಲು. ಸಂಬಂಧದಿಂದ ಹೊರಬರಲು ಕಷ್ಟವಾಗುತ್ತದೆ. ಕೋಪ, ನೋವು,ತಿರಸ್ಕಾರ ಎಲ್ಲವನ್ನೂ ನಿಯಂತ್ರಿಸುವುದು ಕಷ್ಟ. ವಿಚ್ಛೇದನ ಅಂತ್ಯವಲ್ಲ. ಸುರಂಗದ ಕೊನೆಯಲ್ಲೂ ಬೆಳಕಿದೆ ಎಂಬ ಭರವಸೆಯಲ್ಲಿ ಹೆಜ್ಜೆ ಹಾಕಬೇಕು.  

ಮದುವೆ (Marriage) ಎಂಬ ಸಂಬಂಧ(Relationship) ಪ್ರತಿಯೊಬ್ಬರಿಗೂ ಮಹತ್ವದ್ದು. ಮದುವೆ ನಂತ್ರ ಸಂಗಾತಿ(Partner)ಜೊತೆ ಸುಂದರ ಜೀವನ (Life) ನಡೆಸುವ ಕನಸನ್ನು ಎಲ್ಲರೂ ಕಾಣ್ತಾರೆ. ಆದ್ರೆ ಎಲ್ಲರ ಕಸನು,ನನಸಾಗುವುದಿಲ್ಲ. ಮದುವೆ ದುಃಸ್ವಪ್ನವಾಗಿ ಕಾಡುತ್ತದೆ. ಅನೇಕ ಕಾರಣಗಳಿಗೆ ದಾಂಪತ್ಯದಲ್ಲಿ ಗಲಾಟೆ ಶುರುವಾಗುತ್ತದೆ. ಸಣ್ಣ-ಪುಟ್ಟ ಗಲಾಟೆಯೂ ವಿಚ್ಛೇದನಕ್ಕೆ ಬಂದು ನಿಲ್ಲುತ್ತದೆ. ಡೈವರ್ಸ್ ನಂತ್ರ ಸಂಗಾತಿ ಮಾತ್ರ ದೂರವಾಗುವುದಿಲ್ಲ. ಸಂಗಾತಿ ಕುಟುಂಬ, ಅವರ ಪ್ರೀತಿ ಮತ್ತು ಇತರ ಸೌಲಭ್ಯಗಳನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ. ನಿಮ್ಮ ಕುಟುಂಬಸ್ಥರು ಒಟ್ಟಿಗಿದ್ದರೂ ಒಂಟಿತನ ಮತ್ತು ಹತಾಶೆ ಕಾಡುತ್ತದೆ. ವಿಚ್ಛೇದನ (Divorce) ಜೀವನದ ಅಂತ್ಯವಲ್ಲ. ವಿಚ್ಛೇದನ ತಪ್ಪೂ ಅಲ್ಲ. ಡೈವರ್ಸ್ ಆದ್ಮೇಲೆ ಅನೇಕರು ಮುಜುಗರಕ್ಕೊಳಗಾಗ್ತಾರೆ. ಅದನ್ನು ಎಲ್ಲರ ಮುಂದೆ ಹೇಳುವುದಿಲ್ಲ. ಸ್ನೇಹಿತರು,ಸಂಬಂಧಿಕರ ಜೊತೆ ಸೇರಲು ಹಿಂದೇಟು ಹಾಕ್ತಾರೆ. ವಿಚ್ಛೇದನದ ನಂತ್ರವೂ ಒಂದು ಜೀವನವಿದೆ. ಸಂತೋಷ, ಖುಷಿಯಾಗಿರಲು ಅವಕಾಶವಿದೆ. ಇದನ್ನು ನೀವು ಅರಿಯಬೇಕು, ಎಲ್ಲರ ಜೊತೆ ಬೆರೆಯಬೇಕು. ವಿಚ್ಛೇದನ ನಂತ್ರ ಸಂತೋಷವಾಗಿರಲು ಏನು ಮಾಡ್ಬೇಕು?

ಸಂಗಾತಿ ನೆನಪು : ವಿಚ್ಛೇದನದ ನಂತ್ರ ಸಂಗಾತಿ ನೆನಪು ಕಾಡುವುದು ಸಹಜ. ಅವರ ಪ್ರೀತಿ, ಮಾತು ಕಾಡುತ್ತಿರುತ್ತದೆ. ಇದರಿಂದ ಹೊರ ಬರಲು ಜನರು ಯೋಚಿಸದೆ ಯಾರೊಂದಿಗೂ ಸ್ನೇಹ ಬೆಳೆಸುವ ತಪ್ಪನ್ನು ಮಾಡಬೇಡಿ. ಹಾಗೆಯೇ ಹಳೆ ಪತಿ ಅಥವಾ ಪತ್ನಿ ಸನಿಹಕ್ಕೆ ಹೋಗುವಾಗ ನೂರಾರು ಬಾರಿ ಆಲೋಚನೆ ಮಾಡಿ. ವಿರಳ ಸಂದರ್ಭದಲ್ಲಿ ಪತಿ-ಪತ್ನಿ ಮಧ್ಯೆ ಪ್ರೀತಿಯಿದ್ದರೂ ಕುಟುಂಬಸ್ಥರ ಕಾರಣಕ್ಕೆ ಬೇರೆಯಾಗಿರುತ್ತಾರೆ. ಸಂಗಾತಿ ಮರೆಯಲು ಸಾಧ್ಯವಾಗದೆ ಕದ್ದುಮುಚ್ಚಿ ಭೇಟಿಯಾಗ್ತಿರುತ್ತಾರೆ. ಕೆಲ ಬಾರಿ ಇಬ್ಬರ ಮಧ್ಯೆ ಶಾರೀರಿಕ ಸಂಬಂಧವೂ ಬೆಳೆದಿರುತ್ತದೆ. ವಿಚ್ಛೇದನದ ನಂತ್ರ ಮತ್ತೆ ಸಂಗಾತಿ ಜೊತೆ ಸಂಭೋಗ ನಡೆಸುವ ಮುನ್ನ ನಿಮ್ಮ ಗುರಿ ಏನು ಎಂಬುದನ್ನು ನಿರ್ಣಯಿಸದೆ ಮುಂದಿನ ಹೆಜ್ಜೆ ಇಡಬೇಡಿ ಎಂದು ತಜ್ಞರು ಹೇಳ್ತಾರೆ.

ಹೊಸ ಆರಂಭ : ಮಾಜಿ ಸಂಗಾತಿ ಇನ್ನೊಬ್ಬರನ್ನು ಈಗಾಗಲೇ ಮದುವೆಯಾಗಿದ್ದರೆ ಆ ಬಗ್ಗೆ ದುಃಖಿಸುವ ಅಗತ್ಯವಿಲ್ಲ. ಹೊಸ ಆರಂಭಕ್ಕೆ ಅಣಿಯಾಗಿ. ಹೊಸ ಸ್ನೇಹಿತರ ಬದಲು ನಿಮ್ಮನ್ನು ಅರ್ಥ ಮಾಡಿಕೊಂಡಿರುವ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಅಥವ ಊಟಕ್ಕೆ ಹೋಗಿ. ಒಂಟಿಯಾಗಿರುವ ಬದಲು ಕುಟುಂಬದ ಜೊತೆ ಸಮಯ ಕಳೆಯಿರಿ. ಡಾನ್ಸ್,ಸಂಗೀತ ಸೇರಿದಂತೆ ನಿಮಗಿಷ್ಟವಾದ ಹವ್ಯಾಸದಲ್ಲಿ ನಿಮ್ಮನ್ನು ನೀವು ಬ್ಯುಸಿಯಾಗಿಟ್ಟುಕೊಳ್ಳಿ. 

Relationship Tips : ಪತ್ನಿಗೆ ಲೈಂಗಿಕ ಸುಖ ಸಿಕ್ಕಿದೆಯೇ ಎಂದು ತಿಳಿಯುವುದು ಹೇಗೆ?

ನಂಬಲು ಕಲಿಯಿರಿ: ವಿಚ್ಛೇದನದ ನಂತರ ಹೊಸ ಸಂಬಂಧವನ್ನು ಪ್ರಾರಂಭಿಸುವುದು ಸುಲಭವಲ್ಲ. ಹಿಂದಿನ ಕಹಿ ಅನುಭವದಿಂದ ಹೊರಬರಲು ದೃಢವಾದ ಮನಸ್ಸಿನಿಂದ ಪ್ರಯತ್ನಿಸಿ. ಮುರಿದ ಸಂಬಂಧದ ನೋವನ್ನು ಮರೆತು ನಿಮ್ಮನ್ನು ಪ್ರೀತಿಸಲು ಕಲಿಯಿರಿ. ಸರಿಯಾದ ಸಂಗಾತಿ ಸಿಕ್ಕಾಗ, ಅವರ ಕೈ ಹಿಡಿಯಲು ಹಿಂಜರಿಯಬೇಡಿ. 

ಎಲ್ಲರಂತೆ ವರ್ತಿಸಿ :ವಿಚ್ಛೇದನ ಎಂಬುದು ನಿಮ್ಮಿಬ್ಬರ ವೈಯಕ್ತಿಕ ವಿಷ್ಯ. ಇದ್ರ ಬಗ್ಗೆ ಸ್ನೇಹಿತರು ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಅವರ ಮುಂದೆ ನೀವು ಸಹಜವಾಗಿ ವರ್ತಿಸಿ. ನಿಮ್ಮ ಬಗ್ಗೆ ಅವರು ವಿಶೇಷ ಕಾಳಜಿ ತೋರಿಸುವ ಅಗತ್ಯವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿ. 

Parenting Tips : ಮಕ್ಕಳ ಜೀವನ ಹಾಳು ಮಾಡುತ್ತೆ ಪಾಲಕರ ಅತಿಯಾದ ಮುದ್ದು

ತವರಿಗೆ ಹೊರೆಯಾಗಬೇಡಿ : ಮಕ್ಕಳ ಸಂಸಾರ ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ವಿಚ್ಛೇದನ ಅವರಿಗೆ ಬೇಸರ ತಂದಿರುತ್ತದೆ. ಮಹಿಳೆಯರು ವಿಚ್ಛೇದನದ ನಂತ್ರ ತಾಯಿಯ ಮನೆಗೆ ಬರ್ತಾರೆ. ಸಹೋದರ ಮತ್ತು ಅತ್ತಿಗೆಯೊಂದಿಗೆ ವಾಸಿಸಬೇಕಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಆಗ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ಎದುರಿಸಲು ಪ್ರಯತ್ನಿಸಿ. ನಿಮ್ಮ ಪತಿಯಿಂದ ಬೇರ್ಪಟ್ಟ ನಂತರವೂ ನಿಮ್ಮ ಜೀವನವು ನಿಂತಿಲ್ಲ ಮತ್ತು ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ ಎಂದು ನಿಮ್ಮ ಪೋಷಕರಿಗೆ ಭರವಸೆ ನೀಡಿ. ಇದಕ್ಕಾಗಿ ಕುಟುಂಬ ಸದಸ್ಯರಿಗೆ ಹೊರೆಯಾಗದಂತೆ ಆರ್ಥಿಕವಾಗಿ ಸಬಲರಾಗಿರಿ. ಮನೆಯ ಕೆಲಸಗಳಲ್ಲಿ ಅವರಿಗೆ ಸಹಾಯ ಮಾಡಿ ಮತ್ತು ಯಾವುದೇ ಕುಟುಂಬದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ.
ಈಗಾಗಲೇ ಕೆಲಸ ಮಾಡ್ತಿದ್ದರೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಕೆಲಸ ಮಾಡದಿರುವ ಮಹಿಳೆಯರು,ಆರ್ಥಿಕವಾಗಿ ಸದೃಢವಾಗಲು ಪ್ರಯತ್ನಿಸಬೇಕು.ಆತ್ಮವಿಶ್ವಾಸ,ಧೈರ್ಯದೊಂದಿಗೆ ಮುನ್ನಡೆಯಿರಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌