Parenting Tips : ಮಕ್ಕಳ ಜೀವನ ಹಾಳು ಮಾಡುತ್ತೆ ಪಾಲಕರ ಅತಿಯಾದ ಮುದ್ದು

By Suvarna News  |  First Published Jan 26, 2022, 5:06 PM IST

ಅಯ್ಯೋ ಅಲ್ಲಿ ಹೋಗ್ಬೇಡ ಬಿದ್ದು ಹೋಗ್ತಿಯಾ? ಮಗು ಅಳಿಸ್ಬೇಡಿ, ಅದು ಕೇಳಿದ್ದನ್ನ ಕೊಟ್ಟುಬಿಡಿ. ಅದು ನನ್ನ ಮಗು, ಏನು ಮಾಡಿದ್ರೂ ಸರಿಯಾಗೇ ಮಾಡುತ್ತೆ… ಹೀಗೆ ಮಕ್ಕಳ ಮೇಲೆ ನೀವು ತೋರಿಸುವ ಅತಿಯಾದ ಪ್ರೀತಿ, ಕಾಳಜಿ ಮುಂದೆ ಅವರ ಜೀವನದ ಮೇಲೆ ಏನೆಲ್ಲ ಪ್ರಭಾವ ಬೀರುತ್ತೆ ಗೊತ್ತಾ? 
 


ಪ್ರಪಂಚದಲ್ಲಿ ನಿಮ್ಮ ಪ್ರೀತಿ(Love) ಯಾರಿಗೆ ಎಂದು ಕೇಳಿದ್ರೆ ನೂರಕ್ಕೆ ನೂರು ಜನರು ಹೇಳುವುದು ತಮ್ಮ ಮಕ್ಕಳ (Children) ಹೆಸರನ್ನು. ಮಕ್ಕಳು ಎಷ್ಟೇ ಇರಲಿ, ಎಲ್ಲ ಮಕ್ಕಳನ್ನು ಪಾಲಕರು ಸಮಾನವಾಗಿ ಪ್ರೀತಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಒಂದು ಮಗುವಿಗೆ ಆದ್ಯತೆ ನೀಡ್ತಿದ್ದಾರೆ. ಒಂದೇ ಮಗು ಎಂಬ ಕಾರಣಕ್ಕೆ ಸುರಕ್ಷತೆ(Safety) ಬಗ್ಗೆ ವಿಶೇಷ ಗಮನ ಹರಿಸ್ತಾರೆ. ಆದರೆ ಅತಿಯಾದ ರಕ್ಷಣೆ ,ಪ್ರೀತಿ ನಮ್ಮ ಮಗುವಿನ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ. ಅತಿ ರಕ್ಷಣೆ ಎಂದರೆ ಅವಶ್ಯಕತೆಗಿಂತ ಹೆಚ್ಚು ಸುರಕ್ಷತೆ. ಕೆಲವೊಮ್ಮೆ ನಮ್ಮ ಪ್ರೀತಿ ಅಥವಾ ಕಾಳಜಿ ಮಗುವಿಗೆ ಸಮಸ್ಯೆಯಾಗುತ್ತದೆ.  ದೊಡ್ಡವರಾದ ಮೇಲೆ ಅವರೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದಾಗ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮಕ್ಕಳನ್ನು ಪ್ರೀತಿಸುವುದು ತಪ್ಪಲ್ಲ. ಯಾವುದೂ ಮಿತಿಗಿಂತ ಹೆಚ್ಚಿರಬಾರದು. ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯೊಂದರ  ಪ್ರಕಾರ, ಅತಿಯಾದ ರಕ್ಷಣೆ,ಪ್ರೀತಿ, ಮಕ್ಕಳು ಬೆಳೆದಂತೆ ಅನೇಕ ರೋಗಗಳಿಗೆ ಕಾರಣವಾಗುತ್ತದೆಯಂತೆ.  ಪಾಲಕರ ಅತಿಯಾದ ರಕ್ಷಣೆ,ಪ್ರೀತಿ ಮತ್ತು ಮಕ್ಕಳ ವ್ಯಕ್ತಿತ್ವದ ಮೇಲೆ ಇದು ಬೀರುವ ಪರಿಣಾಮಗಳ ಬಗ್ಗೆ ಇಂದು ನಾವು ನಿಮಗೆ ಹೇಳ್ತೆವೆ.

ಅತಿಯಾದ ಸುರಕ್ಷತೆ ಎಂದರೇನು? ಅದರ ಲಕ್ಷಣವೇನು? : ಹೆಸರೇ ಹೇಳುವಂತೆ ಮಿತಿಗಿಂತ ಹೆಚ್ಚು ಸುರಕ್ಷತೆ ಒದಗಿಸುವುದಕ್ಕೆ ಓವರ್ ಪ್ರೊಟೆಕ್ಟ್ ಎಂದು ಕರೆಯಲಾಗುತ್ತದೆ. ಮಕ್ಕಳಿಗೆ ಸ್ವಂತವಾಗಿ ಯಾವುದೇ ಕೆಲಸವನ್ನು ಮಾಡಲು ಬಿಡದೆ,ಮಕ್ಕಳನ್ನು ಸದಾ ತಮ್ಮ ಬಳಿಯೇ ಇಟ್ಟುಕೊಂಡು,ಹೆಜ್ಜೆ ಹೆಜ್ಜೆಗೂ ಅವರನ್ನು ಎಚ್ಚರಿಸುವ ಪಾಲಕರು ನೀವಾಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ಇದನ್ನೇ ಓವರ್ ಪ್ರೊಟೆಕ್ಟ್ ಎಂದು ಕರೆಯಲಾಗುತ್ತದೆ. 
ಮಕ್ಕಳು ಪ್ರತಿಯೊಂದು ಹಂತದಲ್ಲೂ ನಿಸರ್ಗದ ಮೂಲಕ ಕಲಿಯುತ್ತಾರೆ. ಪ್ರತಿ ದಿನ ಮಕ್ಕಳು ಬೆಳೆಯುತ್ತಿರುತ್ತಾರೆ. ವಯಸ್ಸಿಗೆ ತಕ್ಕಂತೆ ಅವರಿಗೆ ಜವಾಬ್ದಾರಿ ಕಲಿಸುವ ಅವಶ್ಯಕತೆಯಿರುತ್ತದೆ. ಆದ್ರೆ ಅತಿ ರಕ್ಷಣೆ ನೀಡುವ ಪಾಲಕರು ಕೆಲವೊಂದು ಲಕ್ಷಣ ಹೊಂದಿರುತ್ತಾರೆ.
1. ತಪ್ಪು ಮಾಡಲು ಮಕ್ಕಳಿಗೆ ಬಿಡದೆ, ಮಕ್ಕಳ ಕೆಲಸವನ್ನು ಪಾಲಕರೇ ಮಾಡುತ್ತಾರೆ. ಆನ್ಲೈನ್ ಕ್ಲಾಸ್ ಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ತಪ್ಪು ಮಕ್ಕಳಿಗೆ ಅನೇಕ ಸಂಗತಿಗಳನ್ನು ಕಲಿಸುತ್ತದೆ ಎಂಬುದನ್ನು ನೆನಪಿಡಿ.
2. ಮಕ್ಕಳಿಗೆ ಜವಾಬ್ದಾರಿ ಕಲಿಸದಿರುವುದು.
3. ಅವಶ್ಯಕತೆಗಿಂತ ಹೆಚ್ಚು ಸೌಕರ್ಯವನ್ನು ಮಕ್ಕಳಿಗೆ ನೀಡುವುದು.
4. ಮಕ್ಕಳು ಅತ್ತ ತಕ್ಷಣ ಅವರಿಗೆ ಬೇಕಾದ ವಸ್ತುಗಳನ್ನು ನೀಡುವುದು.
5. ಮಕ್ಕಳ ಸ್ನೇಹಿತರ ಮೇಲೆ ಸದಾ ನಿಗಾ ಇಡುವುದು.
6. ಅದು ಮಾಡ್ಬೇಡ,ಇದು ಮಾಡ್ಬೇಡ ಎಂದು ಅವರಿಗೆ ಹೇಳ್ತಿರುವುದು.
7. ಮಕ್ಕಳನ್ನು ಹೊರಗೆ ಆಡಲು ಬಿಡದಿರುವುದು.
8. ಮಕ್ಕಳಿಗೆ ಸಾಹಸ ಕೆಲಸ ಮಾಡದಂತೆ ಸೂಚಿಸುವುದು.
9. ಮಕ್ಕಳಿಗೆ ಅನವಶ್ಯಕ ಭಯ ಹುಟ್ಟಿಸುವುದು.
10. ಮಕ್ಕಳು ಕ್ರಿಯಾತ್ಮಕ ಕೆಲಸದಲ್ಲಿ ತೊಡಗಿದಾಗ ಅದನ್ನು ತಡೆಯುವುದು.
11. ಮನೆಯಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲನೆಗೆ ಸೂಚನೆ ನೀಡುವುದು.
12. ಸ್ಕೂಲಿನಲ್ಲಿ ಪ್ರಥಮ ಸ್ಥಾನಕ್ಕೆ ಒತ್ತಡ ಹೇರುವುದು.
ಈ ಎಲ್ಲ ಲಕ್ಷಣಗಳು ನಿಮ್ಮಲ್ಲೂ ಇದ್ದರೆ,ನೀವು ಮಕ್ಕಳಿಗೆ ಓವರ್ ರಕ್ಷಣೆ ನೀಡ್ತಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಇಂದೇ ನಿಮ್ಮ ಸ್ವಭಾವ ಬದಲಿಸುವ ಪ್ರಯತ್ನ ನಡೆಸಿ.

Tap to resize

Latest Videos

undefined

Kids Health: ಮಕ್ಕಳಿಗೆ 2 ವರ್ಷ ತುಂಬುವ ಮೊದಲು ಸಕ್ಕರೆಯನ್ನು ಕೊಡಲೇಬೇಡಿ

ಅತಿಯಾದ ರಕ್ಷಣೆಯಿಂದ ಮಕ್ಕಳ ಮೇಲಾಗುವ ಪರಿಣಾಮ :
ಪಾಲಕರ ಅತಿಯಾದ ರಕ್ಷಣೆ ಮಕ್ಕಳನ್ನು ಬದಲಿಸುತ್ತದೆ. ಇದು ಮಗುವನ್ನು ಸುಳ್ಳು ಹೇಳಲು ಪ್ರೋತ್ಸಾಹಿಸುತ್ತದೆ. ನಿರೀಕ್ಷೆಗಳು ತುಂಬಾ ಹೆಚ್ಚಾದಾಗ ಮತ್ತು ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿದಾಗ, ತೊಂದರೆ ತಪ್ಪಿಸಿಕೊಳ್ಳಲು ಮಗು ಸುಳ್ಳು ಹೇಳುತ್ತದೆ.  
ಕೆಲ ಪಾಲಕರು ಮಕ್ಕಳ ತಪ್ಪುಗಳನ್ನು ಸಮರ್ಥಿಸಿಕೊಳ್ತಾರೆ. ಅವರು ಅದನ್ನು ಪ್ರೀತಿ ಎಂದುಕೊಳ್ತಾರೆ. ಆದ್ರೆ ತಪ್ಪು ಮಾಡಿದಾಗೆಲ್ಲ ಪಾಲಕರು ಹಿಂದೆ ನಿಲ್ಲುತ್ತಾರೆಂಬ ಭರವಸೆಯಲ್ಲಿ ಮಕ್ಕಳು ಮತ್ತಷ್ಟು ತಪ್ಪು ಮಾಡಲು ಶುರು ಮಾಡ್ತಾರೆ. ಇದು ಅವರ ಮೇಲೆ ನಕಾರಾತ್ಮಕ ಪ್ರಭಾವವನ್ನುಂಟು ಮಾಡುತ್ತದೆ.

Healthy Food For Children: ದೊಡ್ಡವರು ತಿನ್ನುವ ಆಹಾರವನ್ನೆಲ್ಲಾ ಮಕ್ಕಳಿಗೂ ಕೊಡಬಹುದಾ ?

ಸದಾ ಪಾಲಕರು ನೆರವಿಗೆ ಬರುವುದರಿಂದ ಮಕ್ಕಳು ದೊಡ್ಡವರಾದ್ಮೇಲೆ ಭಾವನೆಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. 
ಹೇಳಿದ ತಕ್ಷಣ ಪಾಲಕರು,ಮಕ್ಕಳ ಬೇಡಿಕೆ ಈಡೇರಿಸುತ್ತಾರೆ. ದೊಡ್ಡವರಾದ್ಮೇಲೆ ಬೇಕೆಂದಾಗ ವಸ್ತುಗಳು ಸಿಗದೆ ಹೋದಲ್ಲಿ ಇದು ಮಕ್ಕಳ ಮೇಲೆ ನಕಾರಾತ್ಮ ಪ್ರಭಾವ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.

click me!