
ನಿಮಗೆ ಗೊತ್ತೇ? ಜೀವನವಿಡೀ ಗಂಡಸಾಗಲೀ ಹೆಂಗಸಾಗಲೀ ಲೈಂಗಿಕ ಅನುಭವ ಇಲ್ಲದೆಯೇ ಬದುಕಿಬಿಡಬಹುದು. ಆದರೆ ಕಾಮ ಎಂಬುದು ಅವನ/ಳ ಜೀವನಪ್ರವೃತ್ತಿಯಾಗಿ ಕೊನೆಯವರೆಗೂ ಹಿಂಬಾಲಿಸಿಕೊಂಡು ಉಳಿದುಬಿಡುತ್ತದೆ.
ಕೆಲವರನ್ನು ನೀವು ನೋಡಿರಬಹುದು. ಸಣ್ಣ ಸಣ್ಣ ವಿಷಯಗಳಿಗೂ ಸಿಡುಕುತ್ತಿರುತ್ತಾರೆ. ಇನ್ನು ಕೆಲವರು ಯಾವಾಗ ನೋಡಿದರೂ ಫ್ರಸ್ಟ್ರೆಟ್ ಆಗಿರುತ್ತಾರೆ. ಇವರು ಲೈಂಗಿಕವಾಗಿ ಅತೃಪ್ತರು ಎಂದು ಹೇಳಬಹುದು. ಸರಿಯಾದ ಲೈಂಗಿಕ ಅನುಭವ, ಪ್ರೇಮಪೂರ್ವಕವಾದ ಕಾಮದ ಅನುಭವ ದೊರೆತರೆ ಮನುಷ್ಯ ಪಕ್ವವಾಗುತ್ತಾನೆ. ಇದು ಹೆಣ್ಣಿಗೂ ಅನ್ವಯ.
ನಮ್ಮೆಲ್ಲರಲ್ಲೂ ಲೈಂಗಿಕತೆ ಇದೆ. ಅದನ್ನು ಅಡಗಿಸಿ ಇಡಲು ಆಗೋಲ್ಲ. ಆದರೆ ನಮ್ಮ ಧರ್ಮಗಳು, ರಿಲಿಜನ್‌ಗಳು ಏನು ಮಾಡಿವೆ ಅಂದರೆ, ಲೈಂಗಿಕತೆಯನ್ನು ನಿಷೇಧಕ್ಕೆ ಒಳಪಡಿಸಿವೆ. ಅದರ ಬಗ್ಗೆ ಮಾತಾಡುವುದು, ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳುವುದು ಅಸಹ್ಯ ಎಂಬಂತೆ ಬೋಧಿಸಿವೆ. ಆದರೆ ಇದು ಧರ್ಮದ, ಮತದ ಸಮಸ್ಯೆ ಅಲ್ಲ. ಬದಲು ಧರ್ಮದ ವಕ್ತಾರರು, ಪಾದ್ರಿ, ಮುಲ್ಲಾಗಳು ಮಾಡಿಕೊಂಡಿರುವ ಸಮಸ್ಯೆ. ಅವರು ಜನರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳೋಕೆ ಒಂದಲ್ಲ ಒಂದು ಸುಳ್ಳು ಹೇಳ್ತಾನೇ ಇರುತ್ತಾರೆ.
ಜುರಾಹೋ ಮುಂತಾದ ದೇವಾಲಯಗಳ ಹೊರಗೋಡೆಗಳನ್ನು ನೋಡಿ. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲೈಂಗಿಕ, ಮಿಥುನ ಶಿಲ್ಪಗಳನ್ನು ಕೆತ್ತಿರುವುದು ಕಾಣುತ್ತೀರಿ. ಲೈಂಗಿಕತೆ ಸಲ್ಲದು ಅಂತಾದರೆ ಈ ಲೈಂಗಿಕ ಶಿಲ್ಪಗಳು ಯಾಕೆ ಇರುತ್ತವೆ? ಅದೂ ಎಲ್ಲರೂ ಭೇಟಿ ಕೊಡುವಂಥ ದೇವಾಲಯಗಳಲ್ಲಿ? ದೇವಾಲಯಗಳಿಗೆ ಬರುವವರು ಸಂಸಾರಸ್ಥರೇ ತಾನೆ? ಕೇವಲ ಸನ್ಯಾಸಿಗಳು ಮಾತ್ರ ಅಲ್ಲವಲ್ಲ? ಹಾಗಿದ್ದರೆ ಇಲ್ಲಿ ಯಾಕೆ ಇವುಗಳನ್ನು ಕೆತ್ತಿಸಿದರು? ಆರೋಗ್ಯಕರ ಲೈಂಗಿಕತೆ ನಿಮ್ಮ ಜೀವನದಲ್ಲಿ ಇರಲಿ ಅಂತಲೇ ಅಲ್ವೇ?
ನಮ್ಮ ದೇಹದ ಹಾಗೆ ನಮ್ಮ ಪ್ರಜ್ಞೆಯ ಬಗ್ಗೆ ಕೂಡ ನಮಗೆ ಅರಿವು ಇರಬೇಕಾದುದು ಅಗತ್ಯ. ನಾವು ನಮ್ಮ ದೇಹದ ಬಗ್ಗೆ ಗಮನ ಕಡಿಮೆ ಮಾಡುತ್ತ ಹೋಗಿ, ನಮ್ಮ ಮನಸ್ಸಿನ ಬಗ್ಗೆ, ನಮ್ಮ ಪ್ರಜ್ಞೆಯ ಬಗ್ಗೆ, ನಮ್ಮ ಆತ್ಮದ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕು. ಅದೇ ಅಧ್ಯಾತ್ಮ. ದೇಹದ ಬಗ್ಗೆ ಪಶು ಕೂಡ ಗಮನ ಕೊಡುತ್ತದೆ. ಆದರೆ ಆತ್ಮದ ಬಗ್ಗೆ ಗಮನ ಕೊಡುವುದು ಮಾನವನಿಂದ ಮಾತ್ರ ಸಾಧ್ಯ. ಹೀಗಾಗಿಯೇ ಮಾನವ ಜನ್ಮ ದೊಡ್ಡದು.
ಅಂದರೆ ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಸೆಕ್ಸ್ ಅಥವಾ ಲೈಂಗಿಕತೆಯು ಪ್ರಾಣೀಗೆ ಸಹಜವಾದ ಒಂದು ಪ್ರವೃತ್ತಿ ಅಥವಾ ಬೇಸಿಕ್ ಇನ್‌ಸ್ಟಿಂಕ್ಟ್ ಎಂಬಂತೆ ನಾವು ನೋಡುತ್ತೇವೆ. ಮಾನವ ಮಾತ್ರವೇ ಅದನ್ನು ಈ ಸಹವಾದ ಪ್ರವೃತ್ತಿಯ ನೆಲೆಯಿಂದ ಮೇಲಕ್ಕೆ ಎತ್ತಿ ಅದನ್ನು ಒಂದು ಪ್ರಜ್ಞಾಪೂರ್ವಕವಾದ ಕ್ರಿಯೆಯಾಗಿ ಮಾರ್ಪಡಿಸಲು ಸಾಧ್ಯ. ಆಗ ಅದು ನಿಮ್ಮನ್ನು ನಿಯಂತ್ರಿಸುವ ಒಂದು ಸ್ವಭಾವ ಆಗಿರುವುದಿಲ್ಲ. ಬದಲಾಗಿ, ನೀವೇ ಅದನ್ನು ನಿಯಂತ್ರಿಸುತ್ತಿರುತ್ತೀರಿ.
ಸಾಫ್ಟ್ ಸ್ವಾಪ್: ಡೇಟಿಂಗ್ ಲೋಕದಲ್ಲಿ ಸೃಷ್ಟಿಯಾಗಿರುವ ಹೊಸ ಟ್ರೆಂಡ್ ಅರ್ಥ ಏನು?
ಯಾಕೆ ನಮ್ಮ ಸಂಸಾರಗಳಲ್ಲಿ ಇಷ್ಟೊಂದು ಜಗಳಗಳು ಇವೆ? ಯಾಕೆ ತುಂಬಾ ಗಂಡಸರು ತಮ್ಮ ಸಂಗಾತಿಗೆ ಹಿಂಸೆ ಕೊಡುವವರಾಗಿದ್ದಾರೆ ಎಂಬುದನ್ನು ಗಮನಿಸಿ, ಇಲ್ಲೆಲ್ಲಾ ಲೈಂಗಿಕತೆ ಎಂಬುದು ಅವಶ್ಯಕವಾದ ಒಂದು ಅಂಶವಾಗಿ ಕೆಲಸ ಮಾಡುತ್ತಾ ಇರುತ್ತದೆ. ಕಾಮವನ್ನು ಗಂಡಸು ಆಳವಾಗಿ ಬಯಸುತ್ತಿರುತ್ತಾನೆ. ಅವನ ಹಗಲಿನ ಗುಣನಡತೆಗಳನ್ನೂ ಈ ಲೈಂಗಿಕತೆ ನಿರ್ದೇಶಿಸುತ್ತಿರುತ್ತದೆ. ಆದ್ದರಿಂದಲೇ ಈ ಸಂಸಾರಗಳು ವಿಷಮಯ ಆಗಿರುತ್ತವೆ, ಈ ಸಮಸ್ಯೆ ಹೆಣ್ಣಿಗೆ ಇಲ್ಲವೇ ಎಂದು ನೀವು ಕೇಳಬಹುದು. ಹೆಣ್ಣಿಗೂ ಇರುತ್ತದೆ. ಆದರೆ ಆಕೆಗೆ ಮಕ್ಕಳು- ಮನೆಗೆಲಸ ಎಂಬಿತ್ಯಾದಿಗಳಲ್ಲಿ ಇದು ಹಂಚಿಹೋಗುತ್ತದೆ. ಗಂಡಸಿನಲ್ಲಿ ಇದು ನಿಕ್ಷೇಪಗೊಳ್ಳುತ್ತದೆ. ಆದ್ದರಿಂದಲೇ ಗಂಡಸರು ಹೆಚ್ಚು ಹೃದಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಹೆಂಗಸರಿಗೆ ಹೃದಯ ಸಮಸ್ಯೆಗಳು, ಹೃದಯಾಘಾತ ಕಡಿಮೆ.
ಆದ್ದರಿಂದ ಗಂಡಸು ಮಾಡಬೇಕಾಗಿರುವುದು ಇಷ್ಟೆ- ತನ್ನಲ್ಲಿರುವ ಕಾಮದ ಅಂಶವನ್ನು ಸಹಜ ಎಂದು ಕಂಡುಕೊಳ್ಳುವುದು ಹಾಗೂ ಇದನ್ನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುವುದು.
ಗಂಡ-ಹೆಂಡತಿ ನಡುವಿನ ಜಗಳ ನಿಲ್ಲಿಸುವ ಸಲಹೆಗಳು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.