ಬಾಲಿವುಡ್ ಗಾಯಕ ಕಿಶೋರ್ ಕುಮಾರ್ ದನಿಗೆ ಮಾರುಹೋಗದ ಭಾರತೀಯರಿಲ್ಲ. ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ ಹುಟ್ಟಿದ್ದೇ ಹಾಡುವುದಕ್ಕಾಗಿ ಎನ್ನುವಂತೆ ಮಧುರವಾಗಿ ಅವರು ಹಾಡಿದ ಗೀತೆಗಳು ಇಂದಿಗೂ ಅಜರಾಮರ. ಅವರ ಹಾಡುಗಳಿಗೆ ಜರ್ಮನಿಯಲ್ಲೂ ಅಭಿಮಾನಿಗಳಿದ್ದಾರೆ.
ಬಾಲಿವುಡ್ ಗಾಯಕರ ಪೈಕಿ ದನಿಯಲ್ಲೇ ಭಾವನೆಗಳ ಸಮುದ್ರವನ್ನು ಹರವಬಲ್ಲ ಮೋಹಕ ಅಪರೂಪದ ಕಂಠಸಿರಿ ಹೊಂದಿರುವ ಮಹಾನ್ ಕಲಾವಿದ ಕಿಶೋರ್ ಕುಮಾರ್. ಈಗಿನ ಅದೆಷ್ಟೋ ಯುವಮಂದಿಗೂ ಕಿಶೋರ್ ಕುಮಾರ್ ಅಚ್ಚುಮೆಚ್ಚು. ಬಾಲಿವುಡ್ ಗೀತೆಗಳನ್ನು ಜಗತ್ತಿನಾದ್ಯಂತ ಇಷ್ಟಪಡುವವರಿದ್ದಾರೆ. ಕಿಶೋರ್ ಕುಮಾರ್ ಸ್ವರವಂತೂ ಸಪ್ತ ಸಮುದ್ರದ ಆಳವನ್ನು ಹೊತ್ತಿರುವಂಥದ್ದು. ಅದು ಸಪ್ತಸಾಗರವನ್ನೂ ದಾಟಿ ಜನಪ್ರಿಯತೆ ಹೊಂದಿದೆ. ಮಧುರ ಹಾಡುಗಳ ಒಡೆಯ ಕಿಶೋರ್. ಕಿಶೋರ್ ಕುಮಾರ್ ಅವರ ಕಾಲದ ಇತರ ಹಾಡುಗಾರರಿಗಿಂತ ಭಿನ್ನ. ಏಕೆಂದರೆ, ಇವರು ಬಾಲಿವುಡ್ ಗೆ ನಟನಾಗಿ ಬಂದವರು. ಶಾಸ್ತ್ರೀಯ ಸಂಗೀತದ ಗಂಧಗಾಳಿಯೂ ಇರಲಿಲ್ಲ. ಆದರೆ, ಬಳಿಕ ಹಾಡಿದ ಗೀತೆಗಳನ್ನು ಕೇಳಿದರೆ ಬಾಲಿವುಡ್ ಇವರಿಂದ ಗೀತೆಗಳನ್ನು ಹಾಡಿಸಿಕೊಳ್ಳಲೆಂದೇ ಇವರನ್ನು ಕರೆಸಿಕೊಂಡಿತ್ತೇನೋ ಎನಿಸದೇ ಇರದು. ಹೀಗೆ, ಅವರು ಹಾಡಿದ ಕೆಲವು ಗೀತೆಗಳು ಇಂದಿಗೂ ಅಮರವಾಗಿವೆ. ನಮ್ಮ ದೇಶದಲ್ಲಿ ಬಿಡಿ, ವಿದೇಶಗಳಲ್ಲೂ ಕಿಶೋರ್ ಕುಮಾರ್ ಗೆ ಇಂದಿಗೂ ಅಭಿಮಾನಿಗಳಿದ್ದಾರೆ ಎಂದರೆ ಅಚ್ಚರಿಯಾದೀತು. ಜರ್ಮನಿಯಲ್ಲೂ ಕಿಶೋರ್ ಗೆ ಅಭಿಮಾನಿಗಳಿದ್ದಾರೆ. ವೃತ್ತಿಯಲ್ಲಿ ಪ್ರೊಫೆಸರ್ ಮತ್ತು ಸಂಶೋಧಕರಾಗಿರುವ ಸೋನಿಕ್ ಭಾಟಿಯಾ ಅವರು ಇತ್ತೀಚೆಗೆ ಜರ್ಮನಿಗೆ ಹೋದಾಗಿನ ತಮ್ಮ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ.
ಜರ್ಮನಿಯ (Germany) ಫ್ರಾಂಕ್ ಫರ್ಟ್ (Frankfurt) ನಲ್ಲಿ ಡಾ.ಜೊಹಾನ್ ವರ್ತ್ (Dr. Johann Werth) ಎನ್ನುವ ಫಿಸಿಕ್ಸ್ ಪ್ರೊಫೆಸರ್ (Physics Professor) ಅವರಿಗೆ ಕಿಶೋರ್ ಕುಮಾರ್ ಎಂದರೆ ಭಾರೀ ಇಷ್ಟವಂತೆ. ಅವರ ದನಿಯಲ್ಲಿನ ಗಾಢತೆ ಈ ಪ್ರೊಫೆಸರ್ ಅವರನ್ನು ಎಷ್ಟೋ ವರ್ಷಗಳ ಹಿಂದೆಯೇ ಸೆಳೆದಿದೆಯಂತೆ. ವೈಜ್ಞಾನಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನ ಐಐಎಸ್ ಸಿಗೂ ಭೇಟಿ ನೀಡಿದ್ದಾರಂತೆ. ಅವರೊಂದಿಗೆ ಕಾರಿನಲ್ಲಿ ಸಾಗುವಾಗ ಕಿಶೋರ್ ಕುಮಾರ್ (Kishore Kumar) ಹಾಡಿರುವ ಹಿಂದಿ ಹಾಡುಗಳು (Hindi Songs) ಡಾ. ಜೊಹಾನ್ ವರ್ತ್ ಅವರಿಗೆ ತುಂಬ ಇಷ್ಟ ಎನ್ನುವುದು ಸೋನಿಕ್ ಭಾಟಿಯಾ ಅವರಿಗೆ ತಿಳಿದುಬಂತು. “ತುಂಬ ಅಚ್ಚರಿಯಾಯಿತು’ ಎಂದು ಅವರು ಹೇಳಿಕೊಂಡಿದ್ದಾರೆ.
Life Lessons: ಸುಧಾಮೂರ್ತಿಯವರ ಅದ್ಭುತ ಜೀವನ ಪಾಠಗಳು
ಕ್ಯಾಬ್ ನಲ್ಲಿ ದೊರೆತ ಕಿಶೋರ್!
ಡಾ. ಜೊಹಾನ್ ವರ್ತ್ ಒಮ್ಮೆ ಬೆಂಗಳೂರಿನ ಐಐಎಸ್ ಸಿ ಗೆ ಫಿಸಿಕ್ಸ್ ಗೆ ಸಂಬಂಧಿಸಿದ ಯಾವುದೋ ಕಾರ್ಯಕ್ರಮಕ್ಕೆಂದು (Program) ಭೇಟಿ ನೀಡಿದ್ದರು. ಅಲ್ಲಿಗೆ ಹೋಗುವಾಗ ಕ್ಯಾಬ್ (Cab) ನಲ್ಲಿ ಕಿಶೋರ್ ಕುಮಾರ್ ಹಾಡನ್ನು ಕೇಳಿದಾಗ ಭಾಷೆ (Language) ಅರ್ಥವಾಗದಿದ್ದರೂ ಅವರ ಸ್ವರ ಇವರನ್ನು ಸೆಳೆಯಿತು. ಧ್ವನಿಯಲ್ಲಿನ ಮಾಧುರ್ಯಕ್ಕೆ ಮನಸೋತರು. ಡ್ರೈವರ್ ಬಳಿ ವಿಚಾರಿಸಿದಾಗ ಆತ ಕಿಶೋರ್ ಕುಮಾರ್ ಅವರ ಹೆಸರನ್ನು ಹೇಳಿದ. ಅದನ್ನು ಡೈರಿಯಲ್ಲಿ ನೋಟ್ ಮಾಡಿಟ್ಟುಕೊಂಡ ಪ್ರೊಫೆಸರ್, ಅಂತರ್ಜಾಲದಲ್ಲಿ (Internet) ಅವರ ಗೀತೆಗಳನ್ನು (Songs) ಅಕ್ಷರಶಃ ಗೀಳು ಹಿಡಿದವರಂತೆ ಹುಡುಕಾಡಿದರು. ಅಗಾಧ ಭಂಡಾರವೇ ಅವರಿಗೆ ಸಿಕ್ಕಿತು.
81ರ ಇಳಿವಯಸ್ಸಿನಲ್ಲೂ ನಿಲ್ಲದ ಕಲಿಕಾಸಕ್ತಿ, 5 ಮಾಸ್ಟರ್ ಡಿಗ್ರಿ ಮುಗಿಸಿದ ಓದಿನ 'ಒಡೆಯ!
ಹಿಂದಿ ಕಲಿತರು
ಅಸಲಿಗೆ, ಡಾ.ಜೊಹಾನ್ ವರ್ತ್ ಅವರಿಗೆ ಸಂಗೀತದಲ್ಲೂ (Music) ಆಸಕ್ತಿ. ಈ ಆಸಕ್ತಿಯೇ ಅವರನ್ನು ಹಿಂದಿ (Hindi) ಕಲಿಯಲು ಪ್ರೇರಣೆ ನೀಡಿತು ಎಂದರೆ ಅಚ್ಚರಿ ಬೇಡ. ಆನ್ ಲೈನ್ (Online) ಹಿಂದಿ ಕ್ಲಾಸ್ ಗೆ ಸೇರಿಕೊಂಡರು. ಕಿಶೋರ್ ಕುಮಾರ್ ಹಾಡುಗಳ ಅರ್ಥವನ್ನು ಅರಿಯುವುದಕ್ಕಾಗಿ ಹಿಂದಿ ಕಲಿತರು. ಕೋರ್ಸ್ ಪೂರೈಸಿದರು. ಗೀತೆಗಳಲ್ಲಿರುವ ಸಾಹಿತ್ಯವನ್ನು (Lyrics) ಅರ್ಥ ಮಾಡಿಕೊಳ್ಳುವಷ್ಟು, ಅರ್ಥವಾಗದಿದ್ದರೆ ಅದನ್ನು ಭಾಷಾಂತರ ಮಾಡಿಕೊಳ್ಳುವಷ್ಟು ಕಲಿತುಕೊಂಡರು. ಬಳಿಕ, ಅವರು ಆಲಿಸದ ಗೀತೆಗಳಿಲ್ಲ. ಕಾರಿನಲ್ಲಿ ದಿನವೂ ಓಡಾಡುವಾಗ ಕಿಶೋರ್ ಕುಮಾರ್ ಹಾಡುಗಳನ್ನೇ ಕೇಳುತ್ತಾರೆ ಎಂದರೆ ಭಾರತೀಯರಾದ ನಮಗೆ ಸಂತಸದ ಹಾಗೂ ಹೆಮ್ಮೆ (Proud) ಎನಿಸುತ್ತದೆ. ಸ್ಫೂರ್ತಿ (Inspiration) ಎಲ್ಲಿಂದ ಬೇಕಿದ್ದರೂ ದೊರೆಯಬಹುದು. ಅದಕ್ಕೆ ಜನಾಂಗ, ದೇಶ, ಭಾಷೆಗಳ ಹಂಗಿಲ್ಲ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ.