ಹಳ್ಳಿಯಲ್ಲಿ ಲವರ್ಸ್‌ಗಳದ್ದು ಮುಗಿಯದ ಗೋಳು. ಹಗಲಲ್ಲಿ ಮೀಟ್ ಆಗೋಕೆ ಆಗಲ್ಲ. ರಾತ್ರಿಯಾದ್ರೆ ಮನೆಯವರ ಕಣ್ಣು ತಪ್ಪಿಸಿ ಹೊರಗೆ ಹೋಗೋಕೆ ಆಗಲ್ಲ. ಒಟ್ನಲ್ಲಿ ವಿರಹ ವೇದನೆ. ಹೀಗಿರುವಾಗ ಇಲ್ಲೊಬ್ಬ ಯುವತಿ ತನ್ನ ಪ್ರಿಯಕರನ ಮೀಟ್ ಆಗೋಕೆ ಅದೆಂಥಾ ಖತರ್ನಾಕ್ ಐಡಿಯಾ ಮಾಡಿದ್ದಾಳೆ ನೋಡಿ..
ಪ್ರೀತಿ ಅಂದರೆ ಹಾಗೆಯೇ. ಅದಕ್ಕೆ ಅದ್ಭುತವಾದ ಶಕ್ತಿಯಿದೆ. ಪ್ರೀತಿಸಿದವರನ್ನು ಸೇರಲು ಪ್ರೇಮಿಗಳು ಎಲ್ಲಾ ಜಾಣತನವನ್ನೂ ಉಪಯೋಗಿಸ್ತಾರೆ. ಅಷ್ಟೇ ಯಾಕೆ ಖತರ್ನಾಕ್ ಐಡಿಯಾವನ್ನು ಮಾಡ್ತಾರೆ. ಈಕೆಯೂ ಅಂಥವಳೇ. ಹಳ್ಳಿಯಲ್ಲಿ ಲವರ್ಸ್‌ಗಳದ್ದು ಮುಗಿಯದ ಗೋಳು. ಹಗಲಲ್ಲಿ ಮೀಟ್ ಆಗೋಕೆ ಆಗಲ್ಲ. ರಾತ್ರಿಯಾದ್ರೆ ಮನೆಯವರ ಕಣ್ಣು ತಪ್ಪಿಸಿ ಹೊರಗೆ ಹೋಗೋಕೆ ಆಗಲ್ಲ. ಒಟ್ನಲ್ಲಿ ವಿರಹ ವೇದನೆ. ಹೀಗಿರುವಾಗ ಇಲ್ಲೊಬ್ಬ ಯುವತಿ ತನ್ನ ಪ್ರಿಯಕರನ ಮೀಟ್ ಆಗೋಕೆ ಅದೆಂಥಾ ಖತರ್ನಾಕ್ ಐಡಿಯಾ ಮಾಡಿದ್ದಾಳೆ ನೋಡಿ..ಬಿಹಾರದ ಯುವತಿಯೊಬ್ಬಳು ಪ್ರಿಯಕರನ ಸೇರಲು ಪ್ರತೀ ರಾತ್ರಿ ಊರಿನ ವಿದ್ಯುತ್ ಸಂಪರ್ಕ ಕಟ್ ಮಾಡ್ತಿದ್ಲು.
ಬಿಹಾರದ ಇಡೀ ಬೆಟ್ಟಿಯಾ ಗ್ರಾಮದ ಯುವತಿ (Girl) ಪ್ರತೀ ರಾತ್ರಿ ಸಂಪೂರ್ಣ ಗ್ರಾಮದ ಪವರ್ ಕಟ್ ಮಾಡಿ ತನ್ನ ಪ್ರಿಯಕರನನನ್ನು (Lover) ಭೇಟಿಯಾಗ್ತಿದ್ಲು. ಕರೆಂಟ್ ಯಾಕಿಲ್ಲವೆಂದು ಗ್ರಾಮಸ್ಥರು ಪರಿಶೀಲನೆ ನಡೆಸಿದಾಗ ಯುವತಿ ಮಾಡಿರೋ ಕೆಲ್ಸ ಬಯಲಿಗೆ ಬಂದಿದೆ. ಗ್ರಾಮಸ್ಥರು ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ. ಈ ವಿಷಯ ತಿಳಿದ ಗ್ರಾಮಸ್ಥರು ಪ್ರಿಯಕರನಿಗೆ ಬೆಲ್ಟ್‌ನಿಂದ ಥಳಿಸಿದ್ದಾರೆ. ಹುಡುಗಿ ತನ್ನ ಪ್ರಿಯಕರನನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲ್ಲಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಂಡನೂ ಬೇಡ, ಈ ಮದ್ವೆನೂ ಬೇಡ; ವಜ್ರದ ನೆಕ್ಲೇಸ್ ಕದ್ದು ಪ್ರೇಮಿಯೊಂದಿಗೆ ನವವಧು ಪರಾರಿ!
ಘಟನೆಯ ವಿವರ:
ಯುವತಿ ಸಂಪೂರ್ಣ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ (Power cut) ಪ್ರಿಯಕರನನ್ನು ಭೇಟಿಯಾಗುತ್ತಿದ್ದಳೆ. ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸುತ್ತಿದ್ದ ಟ್ರಾನ್ಸ್‌ಫಾರ್ಮರ್ ಬಳಿ ಬಂದು ಪ್ರೇಮಿಯನ್ನು ಭೇಟಿ (Meet)ಯಾಗಲು ಕಾಯುತ್ತಿದ್ದಳು. ಪ್ರಿಯಕರ ಬಂದು ಮೊದಲು ಟ್ರಾನ್ಸ್‌ಫಾರ್ಮರ್‌ನಲ್ಲಿದ್ದ ಎಬಿ (ಏರ್ ಬ್ರೇಕ್ ಸ್ವಿಚ್) ಸ್ವಿಚ್ ಕೆಳಗೆ ಬೀಳಿಸುತ್ತಿದ್ದನು. ಇದರಿಂದಾಗಿ ಇಡೀ ಗ್ರಾಮದ ದೀಪಗಳು ಆಫ್ ಆಗುತ್ತಿದ್ದವು. ಆಗ ಇಬ್ಬರೂ ರಾತ್ರಿಯ ಕತ್ತಲಲ್ಲಿ ಭೇಟಿಯಾಗುತ್ತಿದ್ದರು. ನಂತರ ಪ್ರಿಯಕರ ಮರಳಿ ಹೋದ ನಂತರ ಯುವತಿ ಟ್ರಾನ್ಸ್‌ಫಾರ್ಮರ್ ಸ್ವಿಚ್ ಹಾಕುತ್ತಿದ್ದಳು.
ಗ್ರಾಮದಲ್ಲಿ ದಿನಾಲೂ ಕರೆಂಟ್ ಕಟ್ ಆಗುವ ಕಾರಣ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಜನರು ನಿಗಾ ವಹಿಸಿದ್ದರು. ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದರು. ಇದೇ ವೇಳೆ ಜುಲೈ 14ರಂದು ಗೆಳತಿಯನ್ನು ಭೇಟಿಯಾಗಲು ಬಂದಿದ್ದ ಲವರ್ಸ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಓದಿಸಿದ ಗಂಡನನ್ನೇ ಜೈಲಿಗಟ್ಟಿದ್ದ ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಲವರ್ ಸಸ್ಪೆಂಡ್
ವಿಡಿಯೋದಲ್ಲಿ ಆರರಿಂದ ಏಳು ಮಂದಿ ಜೋಡಿಯನ್ನು ಸುತ್ತುವರಿದಿದ್ದಾರೆ. ಎಲ್ಲರೂ ಸೇರಿ ಹುಡುಗನಿಗೆ ಬೆಲ್ಟ್‌ನಿಂದ ಹೊಡೆಯುತ್ತಾರೆ. ಈ ಸಂದರ್ಭದಲ್ಲಿ ಯುವತಿ ತನ್ನ ಪ್ರಿಯಕರನನ್ನು ಥಳಿಸುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ಜನರನ್ನು ಹೊಡೆದಿದ್ದಾಳೆ. ಥಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ಹೆಚ್ಚು ವೈರಲ್ ಆಗಿದೆ. ಇದರಲ್ಲಿ ಕೆಲವರು ಯುವಕನಿಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ಕಂಡುಬರುತ್ತದೆ. ನೌತಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ಯುವತಿಯ ಪ್ರೇಮಿ ಆಕೆಯ ಗ್ರಾಮಕ್ಕೆ ಬಂದು ಆಕೆಯನ್ನು ಥಳಿಸಿದವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ಪೊಲೀಸರು, ವೀಡಿಯೋ ಆಧರಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪ್ರಿಯಕರ ಮತ್ತು ಗೆಳತಿಯ ಕುಟುಂಬಗಳ ನಡುವೆ ಸಮಸ್ಯೆ (Problem) ಇತ್ಯರ್ಥವಾಗಿದೆ. ಇಬ್ಬರೂ ಶೀಘ್ರದಲ್ಲೇ ಮದುವೆ (Marriage)ಯಾಗಲಿದ್ದಾರೆ ಎಂದು ಗೆಳತಿ ಮತ್ತು ಗೆಳೆಯನ ಸಂಬಂಧಿಕರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ನೌತನ್ ಪೊಲೀಸ್ ಠಾಣೆಯ ಮುಖ್ಯಸ್ಥ ಖಾಲಿದ್ ಅಖ್ತರ್, ಈ ವಿಷಯವು ಪ್ರೇಮ ಸಂಬಂಧವಾಗಿದೆ. ಹೀಗಾಗಿ ಸೂಕ್ಷ್ಮವಾಗಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.