
ಮಕ್ಕಳು (Children) ಮಕ್ಕಳಾಗಿಯೇ ಇರಬೇಕು. ಪ್ರತಿ ಮಗುವೂ ಭಿನ್ನವಾಗಿರುತ್ತದೆ. ಮಕ್ಕಳನ್ನು ಸಂಭಾಳಿಸುವುದು ಎಲ್ಲ ಪಾಲಕರಿ (Parents)ಗೂ ಕಷ್ಟ. ಇನ್ನೊಬ್ಬರ ಮಗು ಚೆನ್ನಾಗಿದೆ ಎನ್ನಿಸಬಹುದು. ಆದ್ರೆ ಆ ಮಗುವಿನ ಪಾಲಕರಿಗೆ ಅವರನ್ನು ನೋಡಿಕೊಳ್ಳುವ ಕಷ್ಟ (difficult) ಗೊತ್ತಿರುತ್ತದೆ. ಮಗುವನ್ನು ನಿಯಂತ್ರಿಸಲು, ಪಾಲಕರ ಹಿಡಿತಕ್ಕೆ ತರಲು ಎಲ್ಲ ಪಾಲಕರು ಒಂದು ಮಾತನ್ನು ಪದೇ ಪದೇ ಹೇಳ್ತಾರೆ. ಮೊದಲೇ ಹೇಳಿದಂತೆ ಪಾಲಕರು ಹೇಳಿದ್ದನ್ನೆಲ್ಲ ಮಕ್ಕಳು ಕೇಳುವುದಿಲ್ಲ. ಕೆಲ ಮಕ್ಕಳು ಆಹಾರ ಸರಿಯಾಗಿ ಸೇವನೆ ಮಾಡುವುದಿಲ್ಲ. ಮತ್ತೆ ಕೆಲ ಮಕ್ಕಳು ಶಾಲೆಗೆ ಹೋಗಲು ಅಳ್ತಾರೆ, ಇನ್ನು ಕೆಲ ಮಕ್ಕಳು ಟಿವಿ ನೋಡ್ತಾರೆ. ಓದಿಲ್ಲದೆ ಕೆಲ ಮಕ್ಕಳು ಆಟವಾಡಿದ್ರೆ ಮತ್ತೆ ಕೆಲವರು ರಾತ್ರಿ ನಿದ್ದೆ ಮಾಡುವಾಗ ಅಳ್ತಾರೆ. ಹೀಗೆ ಮಕ್ಕಳ ಸ್ವಭಾವ ಭಿನ್ನವಾಗಿರುತ್ತದೆ. ಮಕ್ಕಳನ್ನು ಕಂಟ್ರೋಲ್ ಮಾಡಲು ಎಲ್ಲ ಪಾಲಕರು ಒಂದೇ ಮಾತು ಹೇಳ್ತಾರೆ. ಹೊಡೆದುಬಿಡ್ತೇನೆ ಅಂತಾ.
ಸಾಮಾನ್ಯವಾಗಿ ನಿಮ್ಮ ಪಾಲಕರೂ ನಿಮಗೆ ಈ ಮಾತು ಹೇಳಿರ್ತಾರೆ. ಅಥವಾ ನೀವು ಪಾಲಕರಾಗಿದ್ದರೆ ಹೊಡೆದ್ಬಿಡ್ತೇನೆ ನೋಡು ಅಂತಾ ಹೇಳಿರ್ತೀರಿ.
ಅಮ್ಮಾ ನಾನು ಶಾಲೆಗೆ ಹೋಗೋದಿಲ್ಲ ಅಂತಾ ಮಗು ಹೇಳಿದ್ರೆ, ಗಲಾಟೆ ಮಾಡ್ಬೇಡ, ಸುಮ್ಮನೆ ಹೋಗ್ದೆ ಹೋದ್ರೆ ನಾಲ್ಕು ಬಾರಿಸ್ತೇನೆ ಎನ್ನುತ್ತಾರೆ ಅಮ್ಮಂದಿರು.
ಅಪ್ಪಾ, ನಾನು ಆಟಕ್ಕೆ ಹೋಗ್ಲಾ ಅಂತಾ ಕೇಳಿದ್ರೆ, ಪರೀಕ್ಷೆ ಹತ್ರಾ ಬಂತು. ಓದ್ಕೋ, ಇಲ್ಲ ಅಂದ್ರೆ ಬೀಳುತ್ತೆ ಒದೆ ಎನ್ನುತ್ತಾರೆ. ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಬ್ಬ ಪಾಲಕರ ಬಾಯಲ್ಲೂ ಈ ಮಾತನ್ನು ನಾವು ಕೇಳ್ತೇವೆ.
ವಾಸ್ತವವಾಗಿ ನೋಡಿದರೆ, ತಂದೆ-ತಾಯಿಗಳು ತಮ್ಮ ಮಕ್ಕಳು ತಮ್ಮ ಇಚ್ಛೆಯಂತೆ ನಡೆದುಕೊಳ್ಳಬೇಕೆಂದು ಬಯಸ್ತಾರೆ. ನಾವು ಹೇಳುವುದನ್ನು ನಮ್ಮ ಮಗು ಮಾಡಬೇಕೆಂದು ಅವರು ಬಯಸುತ್ತಾರೆ. ಅದನ್ನು ಮಾಡಿಸಲು ಭಯ ಹುಟ್ಟಿಸುತ್ತಾರೆ.
ಭಾರತೀಯ ಪೋಷಕರ ಸ್ವಭಾವವಿದು : ಪ್ರತಿಯೊಬ್ಬ ಭಾರತೀಯ ಪೋಷಕರಲ್ಲಿ ಮಕ್ಕಳನ್ನು ಬೆದರಿಸುವ ಸ್ವಭಾವನ್ನು ನೋಡ್ಬಹುದು. ಬಾಲ್ಯದಲ್ಲಿ ಮಕ್ಕಳಿಗೆ ಪಾಲಕರು ಅವಲಂಬಿತರಾಗುವುದನ್ನು ಕಲಿಸುತ್ತಾರೆ. ಇದರಿಂದಾಗಿ ಅನೇಕ ಮಕ್ಕಳು ಬೆಳೆದ ನಂತರವೂ ಸ್ವತಂತ್ರರಾಗಲು ಸಾಧ್ಯವಾಗುವುದಿಲ್ಲ.
COMPARING WITH OTHERS: ಹೋಲಿಸಿ ಕೊಂಡರೆ ನೆಮ್ಮದಿ ಕಳ್ಕೊಳ್ಳಬೇಕಷ್ಟೇ!
ಮಗುವಿನ ಬೆಳವಣಿಗೆ ಕುಂಠಿತ : ಕಾಲಕ್ಕೆ ತಕ್ಕಂತೆ ಬದಲಾಗದ ಪೋಷಕರು ತಮ್ಮ ಮಗುವಿನ ಬೆಳವಣಿಗೆ ಕುಂಠಿತಗೊಳಿಸ್ತಾರೆ. ಹೆತ್ತವರು ತಮ್ಮ ಆಸೆಗಳನ್ನು ಮಗುವಿನ ಮೇಲೆ ಹೇರಿದಾಗ ಆ ಮಗು ವಿರೋಧಿಸಲು ಕಲಿಯುತ್ತದೆ. ತಪ್ಪು ದಾರಿಯ ಹುಡುಕಾಟ ನಡೆಸುತ್ತದೆ. ಬಾಲ್ಯದಲ್ಲಿ ಮಕ್ಕಳನ್ನು ಬೆದರಿಸುವುದು ತಪ್ಪು. ಇದ್ರಿಂದ ಮಕ್ಕಳ ಪ್ರತಿಭೆ ಹೊರ ಬರುವುದಿಲ್ಲ. ಜೊತೆಗೆ ಒತ್ತಾಯಕ್ಕೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ.
ಪಾಲಕರ ಬೆದರಿಕೆ ಸ್ವಭಾವ ತಿರುಗು ಬಾಣವಾಗಬಹುದು : ಯಾವಾಗ ಪೋಷಕರು ಮಗುವನ್ನು ತುಂಬಾ ಬೈಯುತ್ತಾರೆ ಅಥವಾ ಅವರನ್ನು ಹೊಡೆಯುತ್ತಾರೆ, ಆಗ ಈ ಕೆಟ್ಟ ನೆನಪು ಮಗುವಿನ ಹೃದಯದಲ್ಲಿ ದೀರ್ಘಕಾಲ ಉಳಿಯಬಹುದು. ಈ ಎಲ್ಲಾ ವಿಷಯಗಳು ಅತಿಯಾದರೆ, ಅದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಉತ್ತಮ ನೆನಪುಗಳಿಂದ ತುಂಬಿದ ಬಾಲ್ಯವನ್ನು ನೀಡುವುದು ಬಹಳ ಮುಖ್ಯ. ಬಾಲ್ಯದಲ್ಲಿ ಮನಸ್ಸಿಗೆ ಗಾಯವಾದ್ರೆ ಅದರ ಕೆಟ್ಟ ಪರಿಣಾಮ ಯೌವನದವರೆಗೂ ಇರುತ್ತದೆ ಮತ್ತು ಇದು ಮಗುವಿನ ಮಾನಸಿಕ ಆರೋಗ್ಯ ಹದಗೆಡಿಸುತ್ತದೆ.
33 ವರ್ಷ ದಾಂಪತ್ಯದ ನಂತ್ರವೂ ವಂಚಿಸಿದ ಪತಿ! ಆದರೆ, ನೀವಂದುಕೊಂಡಂತೆ ಆಗಿಲ್ಲ
ಜಾಣನಿಗೆ ಮಾತಿನ ಪೆಟ್ಟು : ಮಾತು ಮಾತಿಗೆ ಹೊಡೆಯುವ ಬದಲು ಅಥವಾ ಕೈ ಎತ್ತುವ ಬದಲು ಮಾತಿನ ಮೂಲಕ ಮಗುವಿಗೆ ತಿಳಿ ಹೇಳಿ. ಸಿಹಿಯಾದ ಮಾತಿನ ಮೂಲಕ ನೀವು ಹೇಳಿದ್ರೆ ಮಗು ತಿದ್ದಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಪಾಲಕರು ಏನು ಮಾಡ್ಬೇಕು>?: ಮೊದಲನೇಯದಾಗಿ ಹೊಡೆಯುತೇನೆ ಎಂಬ ಪದವನ್ನು ತೆಗೆದುಹಾಕಿ. ಪ್ರತಿ ಮಾತಿಗೂ ಮಗುವನ್ನು ಹೊಡೆಯಬೇಡಿ. ಮಗುವಿನ ಭಾವನೆ ಮತ್ತು ಆಸೆಯನ್ನು ಆಲಿಸಿ. ಆಗ ಮಗು ಮುಕ್ತವಾಗಿ ತನ್ನ ಮನಸ್ಸಿನ ಆಸೆಯನ್ನು ಹೇಳುತ್ತದೆ. ಇದು ಮಗುವಿನ ಬೆಳವಣಿಗೆಗೆ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.