ಮದುವೆಯಾದ್ಮೇಲೆ ಹನಿಮೂನ್ (Honeymoon) ಅಂದ್ರೆ ಎಲ್ಲರ ಮುಖದಲ್ಲೂ ನಾಚಿಕೆ ಮೂಡುತ್ತದೆ. ಖುಷಿಯಿಂದ ಹನಿಮೂನ್‌ಗೆ ಹೋಗೋದೇನೋ ಸರಿ. ಆದ್ರೆ ನೀವು ಹನಿಮೂನ್‌ಗೆ ಹೋಗಿ ಬಂದ್ಮೇಲಿ ಈ ಕೆಲಸಗಳನ್ನು ಮಾಡದಿದ್ರೆ ನಿಮ್ಮ ದಾಂಪತ್ಯ (Married Life) ಜೀವನ ಚೆನ್ನಾಗಿರುತ್ತೆ ಅನ್ನೋದಕ್ಕೆ ಗ್ಯಾರಂಟಿ ಇಲ್ಲ.
ಮದುವೆಯ ನಂತರ ಹನಿಮೂನ್ (Honeymoon)ಗೆ ಹೋಗುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ನಿಶ್ಚಿತಾರ್ಥ ಮುಗಿದ ಕೂಡಲೇ ಹನಿಮೂನ್‌ಗೆ ಎಲ್ಲಿಗೆ ಹೋಗುವುದು ಎಂಬ ಪ್ಲಾನ್ ಮಾಡಲು ತೊಡಗುತ್ತಾರೆ. ಹನಿಮೂನ್‌ನ್ನು ಸ್ಮರಣೀಯವಾಗಿಸಲು, ದಂಪತಿಗಳು ಹೊರಡುವ ಸ್ಥಳದಿಂದ ಹೋಟೆಲ್ ವರೆಗೆ ಎಲ್ಲಾ ಸಿದ್ಧತೆಗಳನ್ನು ಮುಂಚಿತವಾಗಿ ಮಾಡುತ್ತಾರೆ. ಆದರೆ ಹನಿಮೂನ್‌ನಿಂದ ಹಿಂತಿರುಗಿದ ನಂತರ, ತಮ್ಮ ವೈವಾಹಿಕ ಜೀವನದಲ್ಲಿ ಮೊದಲ ದಿನದ ಥ್ರಿಲ್ ಅನ್ನು ವರ್ಷಗಳ ವರೆಗೆ ಕಾಪಾಡಿಕೊಳ್ಳಲು ಪ್ರತಿ ದಂಪತಿಗಳು ಮಾಡಬೇಕಾದ ಪ್ರಮುಖ ಕೆಲಸಗಳು ಯಾವುವು ಎಂಬುದು ನಿಮಗೆ ತಿಳಿದಿದೆಯೇ ?
ಹೌದು, ಹನಿಮೂನ್‌ಗೆ ಹೋಗುವಾಗ ಇರುವ ಆ ಖುಷಿ ಜೀವನ ಪೂರ್ತಿ ಹಾಗೆಯೇ ಇರಬೇಕಾದರೆ ಹನಿಮೂನ್‌ನಿಂದ ಬಂದ ಕೂಡಲೇ ನೀವು ಕೆಲವೊಂದು ಕೆಲಸವನ್ನು ಮಾಡಬೇಕು. ಅದ್ಯಾವುದೆಲ್ಲಾ ನಾವು ಹೇಳ್ತೀವಿ.
ಮದುವೆಯಾದ್ಮೇಲೆ ತಂದೆ ಜೊತೆ ಹೆಣ್ಮಕ್ಕಳು ಎಂತ ಬಾಂಧವ್ಯ ಹೊಂದರಿಬೇಕು?
ಜೀವನ ನಿರ್ವಹಣೆಗೆ ಬಜೆಟ್ ಸಿದ್ಧಪಡಿಸಿ
ಹನಿಮೂನ್‌ನಿಂದ ಹಿಂತಿರುಗಿದ ನಂತರ, ನಿಮ್ಮ ಬಿಡುವಿನ ವೇಳೆಯಲ್ಲಿ ನಿಮಗೆ ಪ್ರತಿದಿನ ಬೇಕಾಗುವ ವಸ್ತುಗಳ ಪಟ್ಟಿಯನ್ನು ನೀವು ಸಿದ್ಧಪಡಿಸಬಹುದು. ಮದುವೆಯ ನಂತರ ಸಂಸಾರದ ಜವಾಬ್ದಾರಿಯೂ ನಿಮ್ಮೊಂದಿಗೆ ಬರುತ್ತದೆ. ನೀವಿಬ್ಬರೂ ಅದನ್ನು ಮುಂಚಿತವಾಗಿಯೇ ಯೋಜಿಸಿ ಬಜೆಟ್ ಸಿದ್ಧಪಡಿಸಿದರೆ, ನಿಮ್ಮ ಭವಿಷ್ಯ (Future)ಕ್ಕಾಗಿ ಸ್ವಲ್ಪ ಹಣವನ್ನು ಉಳಿಸಲು ನಿಮಗೆ ಸಾಧ್ಯವಾಗುತ್ತದೆ.
ಕೆಲಸದಿಂದ ವಿರಾಮ ತೆಗೆದುಕೊಳ್ಳಿ
ಹನಿಮೂನ್‌ನಿಂದ ಹಿಂತಿರುಗಿದ ತಕ್ಷಣ ಕಚೇರಿ (Office)ಗೆ ಹೋಗಲು ಆತುರಪಡಬೇಡಿ. ನಿಮ್ಮ ಕೆಲಸ, ಫೋನ್ ಮತ್ತು ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುವ ಮೂಲಕ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ನಿಮ್ಮ ಹೆಂಡತಿಗೆ ಈಗ ಎಲ್ಲವೂ ಹೊಸದು. ಕುಟುಂಬಕ್ಕೆ ಹೊಂದಿಕೊಳ್ಳಲು ಅವರಿಗೆ ಸಹಾಯ ಮಾಡಿ. ಇದು ನಿಮ್ಮಿಬ್ಬರ ಬಾಂಧವ್ಯವನ್ನು ಸುಧಾರಿಸುತ್ತದೆ.
Relationship Tips : ಮದುವೆಗೂ ಮುನ್ನ ಈ ವಿಷ್ಯ ತಿಳಿದಿದ್ದರೆ ಸಮಸ್ಯೆ ಬರ್ತಿರಲಿಲ್ಲ…!
ಆಲ್ಬಮ್‌ನಲ್ಲಿ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಿರಿ
ಮದುವೆ ಮತ್ತು ಮಧುಚಂದ್ರದ ಸಮಯದಲ್ಲಿ ಕಳೆದ ಸುಂದರ ಕ್ಷಣಗಳ ನೆನಪುಗಳನ್ನು ಆಲ್ಬಮ್ (Album)ನಲ್ಲಿ ಉಳಿಸಿ. ಕಳೆದ ನೆನಪುಗಳು ಹೇಗೆ ಸುಂದರವಾಗಿರುತ್ತದೋ ಹಾಗೆಯೇ ಈ ಕ್ಷಣಗಳನ್ನು ಪೋಟೋದಲ್ಲಿ ಸೆರೆ ಹಿಡಿಯುವುದರಿಂದ ನೆನಪುಗಳು ಸ್ಮರಣೀಯವಾಗುತ್ತದೆ. ನಂತರ ನೀವು ಈ ಚಿತ್ರಗಳನ್ನು ನೋಡಿದಾಗಲೆಲ್ಲಾ, ಈ ಕ್ಷಣಗಳೊಂದಿಗೆ ನಿಮ್ಮ ಸಂಬಂಧದಲ್ಲಿ ಅದೇ ತಾಜಾತನವನ್ನು ಅನುಭವಿಸುವಿರಿ.
ಬಂಧುಗಳು, ಸ್ನೇಹಿತರ ಮನೆಗೆ ಹೋಗಿ ಬನ್ನಿ
ಮದುವೆಯಾದ ನಂತರ ಸಂಬಂಧಗಳನ್ನು ಇನ್ನಷ್ಟು ಜೋಡಿಸಿ ಇಡಬೇಕಾದುದು ಅತೀ ಮುಖ್ಯ. ಹೀಗಾಗಿ ಹನಿಮೂನ್ಗೆ ಹೋಗ ಬಂದು ನವದಂಪತಿಗಳು ಎಂಬ ಲೇಬಲ್ ಹಾಕಿಕೊಂಡು ಮನೆಯಲ್ಲಿ ಇಬ್ಬರೇ ಕೂರಬೇಡಿ. ಬದಲಿಗೆ ಬಂಧುಗಳು, ಸ್ನೇಹಿತರ ಮನೆಗೆ ಹೋಗಿ ಬನ್ನಿ. ಇದು ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಭವಿಷ್ಯವನ್ನು ಭದ್ರಗೊಳಿಸಿ
ಮದುವೆಯೆಂದರೆ ಹನಿಮೂನ್, ರೋಮ್ಯಾನ್ಸ್ ಇಷ್ಟಕ್ಕೇ ಮುಗಿಯುವುದಿಲ್ಲ. ಮದುವೆಯೆಂದರೆ ಜತೆಗೆ ಹಲವು ಜವಾಬ್ದಾರಿಗಳಿರುತ್ತವೆ. ಮದುವೆಯಲ್ಲಿ, ವಧು-ವರರಿಬ್ಬರೂ ಅತಿಥಿಗಳಿಂದ ಸಾಕಷ್ಟು ಹಣವನ್ನು ಉಡುಗೊರೆಯಾಗಿ ಪಡೆಯುತ್ತಾರೆ. ಈ ಹಣದಿಂದ ಮನೆಯಲ್ಲಿ ತುಂಬಾ ಅಗತ್ಯವಾಗಿ ಬೇಕಾಗಿರುವ ಪರಿಕರಗಳನ್ನು ಖರೀದಿಸಿ. ಅಥವಾ ಈ ಹಣವನ್ನು ಎಫ್‌ಡಿ ಮಾಡುವ ಮೂಲಕ ಭವಿಷ್ಯದ ಭದ್ರತೆಗಾಗಿ ಬಳಸಬಹುದು.
ಮುಂದಿನ ಪ್ರವಾಸದ ಯೋಜನೆಗಳನ್ನು ಮಾಡಿ
ಹನಿಮೂನ್‌ನಿಂದ ಹಿಂತಿರುಗಿದ ನಂತರ, ಹೆಚ್ಚಿನ ದಂಪತಿಗಳು ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದರಿಂದಾಗಿ ಅವರು ಪರಸ್ಪರ ಸಮಯ ಕಳೆಯಲು ಸಮಯ ಸಿಗುವುದಿಲ್ಲ ಮತ್ತು ಕೆಲವೇ ಸಮಯದಲ್ಲಿ ದಾಂಪತ್ಯ ಜೀವನವು ನೀರಸವಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹನಿಮೂನ್‌ನಿಂದ ಹಿಂತಿರುಗಿದ ನಂತರ, ನಿಮ್ಮ ಸಂಗಾತಿಯೊಂದಿಗೆ ಕುಳಿತು ನಿಮ್ಮ ನೆಚ್ಚಿನ ಸ್ಥಳಗಳ ಪಟ್ಟಿಯನ್ನು ಮುಂಚಿತವಾಗಿ ಸಿದ್ಧಪಡಿಸಿ ಮತ್ತು ಮುಂದಿನ ಬಾರಿ ಯಾವಾಗ ಮತ್ತು ಎಲ್ಲಿ ಹೋಗಬೇಕೆಂದು ಯೋಜಿಸಿ. ಹೀಗೆ ಮಾಡುವುದರಿಂದ ನಿಮ್ಮ ದಾಂಪತ್ಯ (Married Life) ಜೀವನದಲ್ಲಿ ಉತ್ಸಾಹ ಮೂಡುತ್ತದೆ.