Relationship Tips: ಭಾವನಾತ್ಮಕವಾಗಿ ಸ್ಪಂದಿಸದ ಗೆಳತಿ: ಸಂಬಂಧದಲ್ಲಿ ಇದೇನಾಯ್ತು?

By Suvarna News  |  First Published Apr 3, 2023, 5:04 PM IST

ಸಂಬಂಧದಲ್ಲಿ ನೆಮ್ಮದಿ, ತೃಪ್ತಿ ಇಲ್ಲದಿರುವುದರ ಹಿಂದೆ ಅನೇಕ ಕಾರಣಗಳಿರಬಹುದು. ನಿಮ್ಮ ಸಂಗಾತಿಯೂ ಇದಕ್ಕೆ ಪ್ರಮುಖವಾಗಿ ಕಾರಣವಾಗಿರಬಹುದು. ಏಕೆಂದರೆ, ಆಕೆ ನಿಮ್ಮಿಂದ ಭಾವನಾತ್ಮಕವಾಗಿ ಸಮೀಪದಲ್ಲಿ ಇಲ್ಲದೆ, ಸ್ಪಂದನೆರಹಿತವಾಗಿದ್ದಿರಬಹುದು. ಅಂಥ ಸಮಯದಲ್ಲಿ ಅವರು ಕೆಲವು ವರ್ತನೆಗಳನ್ನು ತೋರುತ್ತಾರೆ.
 


ರೋಮ್ಯಾಂಟಿಕ್ ಸಂಬಂಧದಲ್ಲಿ ಜೋಡಿಗಳು ಭಾವನಾತ್ಮಕವಾಗಿ ಒಂದಾಗಿರುತ್ತಾರೆ. ಆರೋಗ್ಯಕರ ಬಾಂಧವ್ಯ ಹೊಂದಿರುತ್ತಾರೆ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ, ಒಬ್ಬರಿಗೆ ಮತ್ತೊಬ್ಬರು ಸ್ಪಂದಿಸುತ್ತಾರೆ. ಆದರೆ, ಸಂಗಾತಿಗಳಲ್ಲಿ ಯಾರಾದರೂ ಒಬ್ಬರು ಭಾವನಾತ್ಮಕವಾಗಿ ಸ್ಪಂದಿಸುವ ಗುಣ ಹೊಂದಿಲ್ಲದೆ ಇದ್ದಾಗ ಕಷ್ಟವಾಗುತ್ತದೆ. ಅಂತಹ ಸಂಗಾತಿ ಆಳವಾದ ಸಂಬಂಧ ಹೊಂದಲು ಹಿಂದೇಟು ಹಾಕುತ್ತಾರೆ. ಸಂಬಂಧದಲ್ಲಿ  ಅಂತರ ಕಾಯ್ದುಕೊಳ್ಳುತ್ತಾರೆ. ಇಂತಹ ಗುಣ ಹೊಂದಿರುವ ಮಹಿಳೆಯರು ಸಂಬಂಧದಲ್ಲಿ ವಿರಕ್ತಿ ಹೊಂದಿರುವಂತೆ ಮಾತನಾಡುತ್ತಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಅನಿವಾರ್ಯ ಎನ್ನುವಂತೆ ವರ್ತಿಸುತ್ತಾರೆ. ಇದು ಕೆಲವೊಮ್ಮೆ ಅನಾರೋಗ್ಯಕರ ಸಂಬಂಧಕ್ಕೂ ನಾಂದಿಯಾಗುತ್ತದೆ. ಬದ್ಧತೆ ಹೊಂದಲು ಭಯಪಡುವ ವ್ಯಕ್ತಿಗಳು ಸಾಮಾನ್ಯವಾಗಿ ಭಾವನಾತ್ಮಕ ಸ್ಪಂದನೆ ಹೊಂದಿರುವುದು ಕಡಿಮೆ. ಅಂಥವರು ಕೆಲವು ಲಕ್ಷಣಗಳನ್ನು ಹೊಂದಿರುತ್ತಾರೆ. ಅದರ ಆಧಾರದ ಮೇಲೆ ನೀವು ಅವರ ಸ್ವಭಾವವನ್ನು ನಿಷ್ಕರ್ಷೆ ಮಾಡಿಕೊಳ್ಳಬಹುದು. ಒಂದೊಮ್ಮೆ ನಿಮ್ಮ ಗೆಳತಿಯೂ ಇಂಥವರಾಗಿದ್ದರೆ ಕೆಲವು ವರ್ತನೆಗಳ ಮೂಲಕ ಗುರುತಿಸಿಕೊಳ್ಳಿ. ನಿಮ್ಮ ಗೆಳತಿ ನಿಮ್ಮ ಕುಟುಂಬಸ್ಥರನ್ನು, ಸ್ನೇಹಿತರನ್ನು ಭೇಟಿಯಾಗಲು ಹಿಂದೇಟು ಹಾಕುತ್ತಿದ್ದಾರಾ? ಹಾಗಿದ್ದರೆ ಅವರು ಭಾವನಾತ್ಮಕವಾಗಿ ನಿಮ್ಮೊಂದಿಗೆ ಒಂದಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.

•    ಕುಟುಂಬಗಳ ಸಮ್ಮಿಲನಕ್ಕೆ (Meet Family) ಹಿಂದೇಟು
ನಿಮ್ಮ ಗೆಳತಿ ನಿಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ನಿರಾಸಕ್ತಿ ಹೊಂದಿದ್ದಾರೆಯೇ? ಆಕೆ ನಿಮ್ಮ ಸಂಬಂಧಕ್ಕೆ (Relation) ಬದ್ಧತೆ (Commit) ಹೊಂದಲು ಸಿದ್ಧವಾಗಿಲ್ಲದೆ ಇರಬಹುದು. 

Latest Videos

undefined

Relationship Tips : ಮದುವೆಯಾದ್ರೆ ಹೆಚ್ಚು ಕಾಲ ಬದುಕ್ತಿರಾ ನೋಡಿ!

•    ಬದ್ಧತೆಗೆ ಭಯ
ತಮಗೇನು ಬೇಕು ಎನ್ನುವುದರ ಬಗ್ಗೆ ನಿಮ್ಮ ಗೆಳತಿಯಲ್ಲಿ ಸ್ಪಷ್ಟತೆ (Clarity) ಇಲ್ಲವೇ? ಒಂದು ದಿನ ನಿಮ್ಮಲ್ಲಿ ಅಪಾರ ಪ್ರೀತಿ (Love) ಹೊಂದಿರುವಂತೆ ಕಂಡುಬಂದರೆ, ಮತ್ತೊಮ್ಮೆ ಆಸಕ್ತಿ ಇಲ್ಲದಂತೆ ವರ್ತಿಸುತ್ತಾರೆಯೇ? ಹಾಗಾದರೆ ಆಕೆ ನಿಮ್ಮ ಸಂಬಂಧಕ್ಕೆ ಬದ್ಧಳಾಗಲು ಸಿದ್ಧರಿಲ್ಲ ಎಂದರ್ಥ. ಆಗ ನೀವು ಆಕೆಗೆ ಏನಾದರೂ ತೊಂದರೆ ಕೊಟ್ಟರೆ ಭಾರೀ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಆದರೆ, ನಿಮಗೆ ತೊಂದರೆ ಕೊಡಲು ಯೋಚಿಸುವುದಿಲ್ಲ. ಆಕೆಯನ್ನು ಅರ್ಥ ಮಾಡಿಕೊಳ್ಳುವುದೇ ನಿಮಗೆ ಕಷ್ಟವಾಗಬಹುದು.

•    ಅಂತರ (Distance) ಕಾಪಾಡಿಕೊಳ್ತಾರೆ
ಭಾವನಾತ್ಮಕವಾಗಿ ನಿಮ್ಮೊಂದಿಗೆ ಸ್ಪಂದನೆ ಹೊಂದಿಲ್ಲದ ಗೆಳತಿ (Girl Friend) ನಿಮ್ಮಿಂದ ಅಂತರ ಕಾಪಾಡಿಕೊಳ್ಳಬಹುದು. ನಿಮ್ಮೊಂದಿಗಿನ ಸಂಬಂಧವನ್ನು ಎಲ್ಲರೊಂದಿಗೆ ಹೇಳಿಕೊಳ್ಳಲು ಹಿಂದೇಟು ಹಾಕಬಹುದು. ನಿಮ್ಮೊಂದಿಗೆ ರೋಮ್ಯಾನ್ಸ್ ನಲ್ಲೂ ಪಾಲ್ಗೊಳ್ಳುವುದು ಕಡಿಮೆ ಇರಬಹುದು.

•    ಮತ್ತೊಬ್ಬರ ಬಗ್ಗೆ ಭಾವನೆ (Feelings) ಹೊಂದಿರಬಹುದು!
ನಿಮ್ಮೊಂದಿಗೆ ಭಾವನಾತ್ಮಕ ದೂರ ಹೊಂದಿರುವ ನಿಮ್ಮ ಗೆಳತಿಯ ಮನದಲ್ಲಿ ಬೇರೊಬ್ಬ ವ್ಯಕ್ತಿ ಇರಬಹುದು. ಇಂತಹ ಸನ್ನಿವೇಶದಲ್ಲೂ ಬಾಯಿಬಿಟ್ಟು ಹೇಳಲಾಗದೆ ಅವರು ನಿಮ್ಮಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಬಹುದು. 

•    ಭಾವನೆಗಳನ್ನು ಹಂಚಿಕೊಳ್ಳೋದಿಲ್ಲ
ಆಳವಾದ, ಭಾವುಕ ಮಾತುಕತೆಗಳಿಂದ ಆಕೆ ದೂರವಿರಬಹುದು. ಆಕೆ ನಿಮ್ಮ ಭಾವನೆಗಳನ್ನು ಪರಿಗಣಿಸದೇ ಇರಬಹುದು ಹಾಗೂ ತನ್ನ ಭಾವನೆಗಳನ್ನು ಸಹ ಹೇಳಿಕೊಳ್ಳದೆ ದೂರವಿರಬಹುದು. ಒಂದೊಮ್ಮೆ ನೀವು ಪದೇ ಪದೆ ಪ್ರಶ್ನಿಸಿದರೂ ಸರಿಯಾಗಿ ಉತ್ತರ ನೀಡದೆ ಇರಬಹುದು. ನಿಮ್ಮ ಕಷ್ಟದ ಸನ್ನಿವೇಶದಲ್ಲೂ ಹೆಚ್ಚು ಸ್ಪಂದಿಸದೆ, ಬೆಂಬಲಕ್ಕೆ ನಿಲ್ಲದೆ ದೂರವೇ ಇರಬಹುದು. ತಮ್ಮ ಕುಟುಂಬಸ್ಥರು, ಸ್ನೇಹಿತರು, ಹಿಂದಿನ ಜೀವನದ ಬಗ್ಗೆ ನಿಮ್ಮಿಂದ ಮುಚ್ಚಿಡಬಹುದು.

ಈ ರಾಶಿಯವರು ಮನೆಯ ಪಕ್ಕದಲ್ಲಿರುವ ವ್ಯಕ್ತಿಯನ್ನೇ ಮದುವೆಯಾಗ್ತಾರೆ!

•    ಸಂಘರ್ಷದಿಂದ (Conflict) ದೂರ
ಎಲ್ಲ ಸನ್ನಿವೇಶದಲ್ಲೂ ಮೇಲುಮೇಲಿನ ಮಾತುಕತೆ (Discussion) ನಡೆಸುವ ನಿಮ್ಮ ಗೆಳತಿ ಸಂಘರ್ಷಗಳಿಂದ ದೂರವಿರಲು ಬಯಸುತ್ತಾರೆ. ನೀವು ಸ್ಪಷ್ಟವಾಗಿ ಮಾತುಕತೆ ನಡೆಸಲು ಇಷ್ಟಪಟ್ಟಾಗ ಆ ಸಮಯದಲ್ಲಿ ರಕ್ಷಣಾತ್ಮಕವಾಗಿ ಮಾತುಕತೆ ನಡೆಸುತ್ತಾರೆ. ಆದರೆ, ವಾದದಿಂದ ದೂರವಿರುತ್ತಾರೆ. ಸತ್ಯವನ್ನು ಎದುರಿಸುವ ಶಕ್ತಿ ಇರದೆ ಗೊಂದಲದ ಉತ್ತರ ನೀಡುತ್ತಾರೆ. 

•    ಸೂಕ್ತ ಸಂಗಾತಿ (Partner) ಅಲ್ಲ
ನಿಮ್ಮ ಗೆಳತಿಯ ಮನದಲ್ಲಿ ನೀವು ಸೂಕ್ತ ಸಂಗಾತಿ ಅಲ್ಲ ಎನ್ನುವ ಭಾವನೆ ಮೂಡಿರಬಹುದು ಅಥವಾ ಆಕೆ ನಂಬಿಕೆ ಇಡಲು ಸಮಸ್ಯೆ ಎದುರಿಸುತ್ತಿರಬಹುದು. 

click me!