ಕೋಪಗೊಂಡ ಗರ್ಲ್ ಫ್ರೆಂಡ್ ಮುಂದೆ ಈ ಮಾತನಾಡಬೇಡಿ

By Suvarna News  |  First Published Jun 18, 2022, 3:25 PM IST

ಕೋಪಕ್ಕೆ ಬುದ್ಧಿ, ಬಾಯಿ ಎರಡೂ ಕೊಡಬಾರದು. ಕೋಪದಲ್ಲಿ ಆಡಿತ ಮಾತು ಮತ್ತೆ ಬರೋದಿಲ್ಲ. ಪ್ರೀತಿ ಸಂಬಂಧ ಸೂಕ್ಷ್ಮವಾಗಿರುತ್ತದೆ. ಅದನ್ನು ನಿಧಾನವಾಗಿ ಸಂಭಾಳಿಸಬೇಕು. ಸಿಟ್ಟಿನಲ್ಲಿ ಸಂಗಾತಿ ಮುಂದೆ ಏನೇನೋ ಮಾತನಾಡಿ ಯಡವಟ್ಟು ಮಾಡಿಕೊಳ್ಳಬೇಡಿ. 
 


ಸಂಗಾತಿ (Partner) ಮಧ್ಯೆ ಗಲಾಟೆ, ಜಗಳವಾಗ್ತಿಲ್ಲವೆಂದ್ರೆ ಅವರಿಬ್ಬರೂ ಮನಸ್ಸಿನಿಂದ ಅಲ್ಲ ಬುದ್ಧಿವಂತಿಕೆಯಿಂದ ಸಂಬಂಧ (relationship) ಮುಂದುವರೆಸಿಕೊಂಡು ಹೋಗ್ತಿದ್ದಾರೆ ಎಂದರ್ಥ. ಸಾಮಾನ್ಯವಾಗಿ ಸಂಗಾತಿ ಮಧ್ಯೆ ಗಲಾಟೆ ಕಾಮನ್. ಸಣ್ಣ ಪುಟ್ಟ ವಿಷ್ಯಗಳಿಂದ ಹಿಡಿದು ದೊಡ್ಡ ಸಂಗತಿಯವರೆಗೆ ಸಂಗಾತಿ ಜಗಳವಾಡ್ತಾರೆ. ಕೆಲವೇ ಗಂಟೆಯಲ್ಲಿ ಈ ಕೋಪ (angry) ತಣ್ಣಗಾಗುತ್ತದೆ. ಸಂಗಾತಿ ಕೋಪಗೊಂಡಾಗ ಬಾಯ್ ಫ್ರೆಂಡ್ ಅವರ ಮನವೊಲಿಸುವ ಪ್ರಯತ್ನ ನಡೆಸ್ತಾರೆ. ಆದ್ರೆ ಈ ಪ್ರಯತ್ನದ ವೇಳೆ ಅವರು ಆಡುವ ಮಾತುಗಳು ಬಹಳ ಮುಖ್ಯವಾಗುತ್ತವೆ. ತಿಳಿದೋ ತಿಳಿಯದೆಯೋ ಹೇಳಿದ ಮಾತುಗಳು ಸಂಗಾತಿ ಕೋಪವನ್ನು ಇನ್ನಷ್ಟು ಹೆಚ್ಚಿಸಬಹುದು. ಇಲ್ಲವೆ ನಿಮ್ಮಿಬ್ಬರ ಸಂಬಂಧ ಮುರಿದು ಬೀಳಲು ಕಾರಣವಾಗಬಹುದು. ಹಾಗಾಗಿ ಕೋಪಗೊಂಡ ಗರ್ಲ್ ಫ್ರೆಂಡ್ (Girlfriend) ಶಾಂತಗೊಳಿಸುವ ವೇಳೆ ಬಾಯ್ ಫ್ರೆಂಡ್ ಅಪ್ಪಿತಪ್ಪಿಯೂ ಕೆಲ ವಿಷ್ಯಗಳನ್ನು ಹೇಳಬಾರದು. ಇಂದು ಅದು ಯಾವ್ಯಾವುದು ಎಂಬುದನ್ನು ಹೇಳ್ತೇವೆ.

ಕೋಪಗೊಂಡ ಸಂಗಾತಿ ಮುಂದೆ ಈ ವಿಷ್ಯ ಹೇಳ್ಬೇಡಿ : 
ಪ್ರತಿ ಬಾರಿ ಇದೇ ನಾಟಕವಾಯ್ತು ನಿಂದು :
ಸಣ್ಣಪುಟ್ಟ ಸಂಗತಿಗೆ ಪದೇ ಪದೇ ಜಗಳವಾಗ್ತಿರುತ್ತದೆ. ಪ್ರತಿ ಬಾರಿ ಗರ್ಲ್ ಫ್ರೆಂಡ್ ಮುನಿಸಿಕೊಂಡಾಗ ಬಾಯ್ ಫ್ರೆಂಡ್ ಪರಿಸ್ಥಿತಿ ಶಾಂತಗೊಳಿಸುವ ಪ್ರಯತ್ನ ಮಾಡ್ತಾನೆ ಅಂದಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ ಬಾಯಿ ತಪ್ಪಿ, ` ಪ್ರತಿ ದಿನ ನಿಂದು ಇದೇ ನಾಟಕವಾಯ್ತು’ ಅಂತಾ ಹೇಳ್ಬೇಡಿ. ಇದು ಸಂಗಾತಿ ಕೋಪವನ್ನು ದುಪ್ಪಟ್ಟು ಮಾಡ್ಬಹುದು. ತಾಳ್ಮೆ ತಂದುಕೊಂಡು ಪ್ರೀತಿಯಿಂದ ಸಮಸ್ಯೆ ಬಗೆಹರಿಸಿ. ನಿಮ್ಮ ಈ ಮಾತು ಅವರ ಮನಸ್ಸಿಗೆ ದೊಡ್ಡ ಗಾಯ ಮಾಡ್ಬಹುದು.

Tap to resize

Latest Videos

ನೀನು ಪ್ರೀತಿಗೆ ಯೋಗ್ಯಳಲ್ಲ : ಪದೇ ಪದೇ ಜಗಳ ಮಾಡ್ತೀಯಾ, ನೀನು ಪ್ರೀತಿಗೆ ಯೋಗ್ಯಳಲ್ಲ ಅಂತಾ ಕೆಲ ಹುಡುಗ್ರು ಹೇಳ್ತಿರುತ್ತಾರೆ. ಆದ್ರೆ ಎಂದಿಗೂ ಈ ಮಾತನ್ನು ಗರ್ಲ್ ಫ್ರೆಂಡ್ ಮುಂದೆ ಹೇಳ್ಬಾರದು. ಪ್ರೀತಿಗೆ ಯೋಗ್ಯಳಲ್ಲ ಎಂಬ ಮಾತು ಅವಳ ನೋವನ್ನು ದ್ವಿಗುಣಗೊಳಿಸಬಹುದು. ಆಕೆ ಹೃದಯ ಒಡೆದು ಹೋಗ್ಬಹುದು. ನಿಮ್ಮಿಂದ ಆಕೆ ಸಂಪೂರ್ಣವಾಗಿ ದೂರವಾಗ್ಬಹುದು. 

ಮದುವೆಯಾಗಿ ಒಂದು ತಿಂಗಳಾಗುವ ಮೊದಲೇ ನಾಲ್ಕು ತಿಂಗಳ ಗರ್ಭಿಣಿಯಾದ ನವವಧು

ಕೋಪ ಮಾಡ್ಕೊಂಡೇ ಇರು, ಮನಸ್ಸು ಸರಿಯಾದ್ಮೇಲೆ ಮಾತನಾಡು : ಕೆಲ ಹುಡುಗರು ಈ ಉದ್ದಟತನ ತೋರಿಸ್ತಾರೆ. ಹುಡುಗಿ ಕೋಪಗೊಂಡಾಗ ಅವಳಿಗೆ ಸಾಂತ್ವಾನ ಹೇಳುವುದಿಲ್ಲ. ಸಾರಿ ಕೇಳುವುದಿಲ್ಲ. ಕೋಪ ಮಾಡ್ಕೊಂಡಿರು, ನನಗೇನು. ಮನಸ್ಸು ಸರಿಯಾಗಿ, ಕೋಪ ತಣ್ಣಗಾದ್ಮೇಲೆ ಮಾತನಾಡು ಅಂತಾ ಹೇಳ್ತಿರುತ್ತಾರೆ. ಇದು ಸರಿಯಾದ ಮಾರ್ಗವಲ್ಲ. ಹುಡುಗ ಹತ್ತಿರ ಬಂದು ಮಾತನಾಡಿಸಲಿ ಎಂದೇ ಹುಡುಗಿ ಬಯಸುತ್ತಿರುತ್ತಾಳೆ. ಆತ ನಿರ್ಲಕ್ಷ್ಯ ಮಾಡಿದ್ರೆ ಅವಳ ಕೋಪ ನೆತ್ತಿಗೇರುತ್ತದೆ. ಆಕೆ ಭಾವನೆಗೆ ನೀವು ಮಹತ್ವ ನೀಡುವುದಿಲ್ಲ, ಆಕೆ ಮನಸ್ಥಿತಿ ಅರಿಯುವ ಮನಸ್ಸು ನಿಮಗಿಲ್ಲವೆಂದು ಆಕೆ ಭಾವಿಸ್ತಾಳೆ.

ನಾನು ನಿನ್ನ ಪ್ರೀತಿ ಮಾಡಿ ದೊಡ್ಡ ತಪ್ಪು ಮಾಡ್ದೆ : ಕೋಪದಲ್ಲಿರಲಿ ಇಲ್ಲ ಯಾವುದೇ ಪರಿಸ್ಥಿತಿಯಲ್ಲಿರಲಿ, ನಾನು ನಿನ್ನ ಪ್ರೀತಿ ಮಾಡಿ ದೊಡ್ಡ ತಪ್ಪು ಮಾಡ್ದೆ ಎಂಬ ಮಾತನ್ನು ಎಂದಿಗೂ ಆಟಬಾರದು. ಇದು ದೊಡ್ಡ ಪ್ರಮಾಣದಲ್ಲಿ ಆಕೆ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಈ ಮಾತು ಕೇಳ್ತಿದ್ದಂತೆ ಆಕೆ ನಿಮ್ಮ ಪ್ರೀತಿಯನ್ನು ತೊರೆಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಸಂಗಾತಿಯನ್ನು ಅಪ್ಪಿ ಮುದ್ದಾಡಿಕೊಂಡು ಮಲಗಿ, ಲೈಫ್ ಹ್ಯಾಪಿಯಾಗಿರುತ್ತೆ

ನಿನಗಿಂತ ನನ್ನ ಎಕ್ಸ್ ಚೆನ್ನಾಗಿದ್ಲು : ಗರ್ಲ್ ಫ್ರೆಂಡ್ ಜೊತೆ ಮಾತನಾಡುವಾಗ ಅಥವಾ ಯಾವುದೋ ಉದಾಹರಣೆ ನೀಡುವಾಗ ಮಾಜಿಯನ್ನು ಮಧ್ಯ ತರಬಾರದು. ಅದ್ರಲ್ಲೂ ಗರ್ಲ್ ಫ್ರೆಂಡ್ ಕೋಪಗೊಂಡಾಗ ಅವಳ ಬಗ್ಗೆ ಮಾತನಾಡುವುದೇ ತಪ್ಪು. ಹಾಗಿರುವಾಗ ನಿನಗಿಂತ ಆಕೆ ಚೆನ್ನಾಗಿದ್ಲು ಅಂದ್ರೆ ನಿಮ್ಮ ಕಥೆ ಮುಗಿತು. 

 

click me!