ಲಕ್ನೋ: ಮದುವೆ ಸಮಯದಲ್ಲಾಗುವ ಮೋಸದ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ಮದುವೆಯ ಸಮಯದಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹೆಣ್ಣು ಮದುವೆಗೆ ನಿರಾಕರಿಸುವುದು. ಗಂಡು ಹೆಣ್ಣು ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ಹೀಗೆ ಮದುವೆಗಳು ಮಧ್ಯದಲ್ಲೇ ನಿಲ್ಲುವುದು ಇತ್ಯಾದಿ ಘಟನೆಗಳನ್ನು ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚೆಚ್ಚು ಕೇಳಿದ್ದೇವೆ. ಈ ಮಧ್ಯೆ ಉತ್ತರಪ್ರದೇಶದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾಗಿ ಒಂದೂವರೆ ತಿಂಗಳಾಗುವ ಮೊದಲು ವಧು ನಾಲ್ಕು ತಿಂಗಳ ಗರ್ಭವತಿಯಾಗಿದ್ದಾಳೆ. ಉತ್ತರ ಪ್ರದೇಶದ (Uttar Pradesh) ಮಹಾರಾಜ್‌ಗಂಜ್ (Maharajganj) ಜಿಲ್ಲೆಯ ಕೊಲ್ಹುಯಿ ಪೊಲೀಸ್ ಠಾಣೆ (Kolhui police station) ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.
ನವವಿವಾಹಿತೆ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟ ನಂತರ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಮಾಡಿಸಿದಾದ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲ್ಹುಯಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಯುವಕನೊಬ್ಬ ಕೊಲ್ಹುಯಿ ಠಾಣೆಗೆ ಲಿಖಿತ ದೂರು ನೀಡುವ ಮೂಲಕ ತನ್ನ ವೇದನೆ ವ್ಯಕ್ತಪಡಿಸಿದ್ದಾರೆ. ಇವರ ಗ್ರಾಮದ ಸಂಬಂಧಿಯೊಬ್ಬರ ಮೂಲಕ ಯುವಕ ಪಕ್ಕದ ಜಿಲ್ಲೆಯ ಯುವತಿಯನ್ನು ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ. ಆದರೆ ಎಲ್ಲವೂ ಸರಿಯಾಗಿ ಅರ್ಥವಾಗುವ ಮುನ್ನವೇ ಯುವಕ ವಂಚನೆಗೆ ಬಲಿಯಾಗಿದ್ದಾನೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿಯ ವಂಚನೆ ಅವನನ್ನು ತೀವ್ರವಾಗಿ ನೋಯಿಸಿದೆ. ಮದುವೆಯಾಗಿ ಒಂದೂವರೆ ತಿಂಗಳಿಗೆ ಪತ್ನಿ (wife) ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು (pregnant) ನೋಡಿ ಆತ ಆಘಾತಕ್ಕೊಳಗಾಗಿದ್ದಾನೆ.
ವಧು, ಪೋಷಕರು, ಪೂಜಾರಿ ಎಲ್ಲರೂ ನಕಲಿ.. ಮದುವೆ ಆಸೆಗೆ ಹಣ ಕಳೆದುಕೊಂಡ!
ಮದುವೆಯಾದ ಕೆಲವೇ ದಿನಗಳಲ್ಲಿ ನವವಧುವಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ಅತ್ತೆ ಮನೆಯವರು ಆಕೆಗೆ ಔಷಧಿ ನೀಡಿದ್ದರು. ಆದರೆ ಔಷಧಿ ನೀಡಿದರೂ ಸೊಸೆಯ ಹೊಟ್ಟೆನೋವು ಕಡಿಮೆ ಆಗಿರಲಿಲ್ಲ. ಇದಾದ ನಂತರ ಅತ್ತೆ ಮನೆಯವರು ಗಾಬರಿಗೊಂಡು ಬಾಲಕಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾದ ಕೊಲ್ಹುವಿಗೆ ಕರೆತಂದಿದ್ದಾರೆ. ಅಲ್ಲಿ ವೈದ್ಯರು ಹುಡುಗಿ ಗರ್ಭಿಣಿಯಾಗಿರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಂತರ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲಾಗಿದ್ದು, ವಧು ನಾಲ್ಕು ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಇದರಿಂದ ಅತ್ತೆ ಮನೆಯವರು ತೀವ್ರ ಆಕ್ರೋಶಗೊಂಡಿದ್ದಾರೆ.
ಇದಾದ ಬಳಿಕ ತಮ್ಮ ಮಗಳು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ಅತ್ತೆ ಮನೆಯವರು ವಧುವಿನ ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ . ಈ ವಿಚಾರ ತಿಳಿದು ಎರಡೂ ಮನೆಯವರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಅಲ್ಲದೇ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಿದಾಗ ಮತ್ತೆಯೂ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದು ಖಚಿತವಾಗಿತ್ತು. ಇದಾದ ಬಳಿಕ ಯುವಕನ ಕಡೆಯವರು ಮಹಿಳೆ ಹಾಗೂ ಆಕೆಯ ಮನೆಯವರ ವಿರುದ್ಧ ಕೊಲ್ಹುಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿ ಗರ್ಭಿಣಿ ಎಂದು ಈ ಜನರಿಗೆ ಮೊದಲೇ ತಿಳಿದಿತ್ತು, ಆದರೆ ಅವರು ಸತ್ಯವನ್ನು ಮರೆಮಾಚಿ ಮದುವೆ ಮಾಡಿಸಿದ್ದಾರೆ ಎಂದು ಯುವಕನ ಮನೆಯವರು ಆರೋಪಿಸಿದ್ದಾರೆ.
ಕೋಟಿ ಕೋಟಿ ಡಿಫಾಸಿಟ್ ಮಾಡಿದ್ದ 73ರ ಅಜ್ಜನ ಬುಟ್ಟಿಗೆ ಹಾಕ್ಕೊಂಡ ಬ್ಯಾಂಕ್ ಆಂಟಿ!
ವಂಚಿಸಿದ ಅಪರಾಧಕ್ಕಾಗಿ ಮೂವರ ವಿರುದ್ಧ ಗಂಭೀರ ಕ್ರಮ ಕೈಗೊಂಡು ಯುವತಿಯನ್ನು ಆಕೆಯ ಪೋಷಕರಿಗೆ ಒಪ್ಪಿಸುವಂತೆ ಯುವಕ ಕೊಲ್ಹುಯಿ ಪೊಲೀಸರಿಗೆ ಮನವಿ ಮಾಡಿದ್ದಾನೆ. ಪೊಲೀಸರು ಸಂಪೂರ್ಣ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಕೊಲ್ಹುಯಿ ಎಸ್‌ಎಚ್‌ಒ ಅಭಿಷೇಕ್ ಸಿಂಗ್ (Abhishek Singh) ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡಿದ ನಂತರ, ಪೊಲೀಸರು ಇಡೀ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಇದು ಗಂಡ ಹೆಂಡತಿ ನಡುವಿನ ವಿಚಾರವಾಗಿರುವುದರಿಂದ ಇಡೀ ವಿಷಯವನ್ನು ಹೆಚ್ಚಿನ ತಿಳುವಳಿಕೆಯೊಂದಿಗೆ ತನಿಖೆ ನಡೆಸಲಾಗುತ್ತಿದೆ. ಪ್ರಸ್ತುತ ಗಂಡ ಹೆಂಡತಿ ಜೊತೆಯಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.