ಬಾಲ್ಯ ಅಮೂಲ್ಯವಾದದ್ದು. ಮಕ್ಕಳು ಸುಲಭವಾಗಿ ಎಲ್ಲವನ್ನೂ ಕಲಿತುಬಿಡ್ತಾರೆ. ಆದ್ರೆ ಮಕ್ಕಳಿಗೆ ಏನು ಕಲಿಸಬೇಕು ಎಂಬುದು ಪಾಲಕರಿಗೆ ತಿಳಿದಿರಬೇಕು. ದೊಡ್ಡವರಾದ್ಮೇಲೆ ಮಕ್ಕಳ ಜೀವನ ನೋಡಿ ಪಶ್ಚಾತ್ತಾಪಪಡುವ ಬದಲು ಬಾಲ್ಯದಲ್ಲೇ ಮಕ್ಕಳಿಗೆ ಕೆಲ ವಿಷ್ಯ ಕಲಿಸಿದ್ರೆ ಒಳ್ಳೆಯದು.
ಮಕ್ಕಳ (Children) ಭವಿಷ್ಯ ಉಜ್ವಲವಾಗಿರಲೆಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಮಕ್ಕಳ ಉತ್ತಮ ಭವಿಷ್ಯ ಮತ್ತು ವೃತ್ತಿಜೀವನ (Career) ದ ಬಗ್ಗೆ ಅನೇಕ ಕನಸು (Dream ) ಕಾಣುತ್ತಾರೆ. ತಮ್ಮ ಮಕ್ಕಳಿಗೆ ಉತ್ತಮ ಉದ್ಯೋಗ ಸಿಗಬೇಕೆಂದು ಬಯಸುತ್ತಾರೆ. ಮಕ್ಕಳ ಜೀವನ ಸುಖವಾಗಿರಲಿ, ಆರಾಮದ ಕೆಲಸವಾಗಿದ್ದು, ಸಂಬಳ ಜಾಸ್ತಿಬರಲಿ ಎಂದು ಎಲ್ಲ ಪಾಲಕರೂ ಇಚ್ಛೆ ಹೊಂದಿರುತ್ತಾರೆ. ಆದ್ರೆ ಎಲ್ಲವೂ ಅಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಅನೇಕ ಬಾರಿ ಪಾಲಕರ ತಪ್ಪಿನಿಂದಲೂ ಮಕ್ಕಳ ಭವಿಷ್ಯ ಹಾಳಾಗಿರುತ್ತದೆ. ಪಾಲಕರಾದವರು ಬಾಲ್ಯದಲ್ಲಿಯೇ ಮಕ್ಕಳಿಗೆ ಅನೇಕ ವಿಷ್ಯಗಳನ್ನು ಕಲಿಸಬೇಕು. ಆಗಲೇ ಮಕ್ಕಳು ದೊಡ್ಡವರಾಗಿ ದೊಡ್ಡ ಸಾಧನೆ ಮಾಡಲು ಸಾಧ್ಯ. ಹೆಚ್ಚಿನ ಸಂಭಾವನೆ ಪಡೆಯಲು ಎಲ್ಲಾ ಮಕ್ಕಳು ಕೆಲವೊಂದು ವಿಷ್ಯವನ್ನು ಅಧ್ಯಯನ ಮಾಡಿರಬೇಕು. ಭವಿಷ್ಯದಲ್ಲಿ ಮಗು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡ್ಬೇಕೆಂದು ಬಯಸಲು ಪಾಲಕರು ಕೆಲ ಸಂಗತಿಯನ್ನು ಮಗುವಿಗೆ ಕಲಿಸಬೇಕು. ಇಂದು ನಾವು ಅದು ಯಾವುದು ಎಂಬುದನ್ನು ಹೇಳ್ತೇವೆ.
ಪೇಪರ್ ಅಥವಾ ರಿಜಿಸ್ಟರ್ ಹ್ಯಾಂಡ್ಲಿಂಗ್ ಕೆಲಸ ಈಗಿಲ್ಲ. ಎಲ್ಲ ಕಚೇರಿಯಲ್ಲಿ ಎಸಿ ರೂಮಿನಲ್ಲಿ ಕುಳಿತು ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಸಮಯ ಇದು. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯು ಕಂಪ್ಯೂಟರ್ ಹಾಗೂ ಇಂಟರ್ನೆಟ್ ಬಗ್ಗೆ ಜ್ಞಾನ ಹೊಂದಿರಬೇಕು. ಕಳೆದ ಕೆಲವು ವರ್ಷಗಳಲ್ಲಿ, ಅನೇಕ ಹೊಸ ಉದ್ಯೋಗಗಳು ಬಂದಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ.
Child Care : ಓದಲು ಆಸಕ್ತಿ ತೋರದ ಮಕ್ಕಳ ಪಾಲಕರಿಗೆ ಇಲ್ಲಿದೆ ಟಿಪ್ಸ್
ಮುಂಬರುವ ದಿನಗಳಲ್ಲಿ ರೋಬೋಟ್‌ಗಳು ನಮ್ಮ ಕೆಲಸವನ್ನು ಮಾಡಲು ಪ್ರಾರಂಭಿಸುತ್ತವೆ ಎಂದು ಹೇಳಲಾಗ್ತಿದೆ. ಈಗಾಗಲೇ ಅನೇಕ ಕಡೆ ರೋಬೋಟ್ ಲಗ್ಗೆಯಿಟ್ಟಿದೆ. ಆಗ ನಮ್ಮ ಕೆಲಸ ಹೋಗುವುದು ಖಚಿತ. ಆದರೆ ರೋಬೋಟ್‌ಗಳು ಮಾಡಲಾಗದ ಕೆಲವು ಕೆಲಸಗಳನ್ನು ಮನುಷ್ಯರು ಮಾಡಬೇಕು. ಮುಂಬರುವ ಸಮಯದಲ್ಲಿ ನಿಮ್ಮ ಮಗುವು ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯಬೇಕೆಂದು ನೀವು ಬಯಸಿದರೆ ನಿಮ್ಮ ಮಗುವಿಗೆ ಇಲ್ಲಿ ತಿಳಿಸಲಾದ 5 ವಿಷಯಗಳನ್ನು ಕಲಿಸಬೇಕು.
ಕೋಡಿಂಗ್ : ದೃಶ್ಯ ಬ್ಲಾಕ್ ಪ್ರೋಗ್ರಾಮಿಂಗ್ ಭಾಷೆಗಳ ಮೂಲಕ 4 ವರ್ಷ ವಯಸ್ಸಿನ ಮಕ್ಕಳಿಗೆ ಕೋಡಿಂಗ್ ಅನ್ನು ಕಲಿಸಬಹುದು. 7 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿದ್ಯಾರ್ಥಿಗಳು ಪಠ್ಯ-ಆಧಾರಿತ ಕೋಡಿಂಗ್ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ಮಕ್ಕಳಿಗೆ ಮನರಂಜನೆ ಮೂಲಕವೇ ಮಕ್ಕಳಿಗೆ ಹೇಗೆ ಕೋಡ್ ಮಾಡಬೇಕೆಂದು ಕಲಿಸುತ್ತದೆ.
ಗಣಿತ ಮತ್ತು ವಿಜ್ಞಾನ : ದೊಡ್ಡ ಡೇಟಾ ಯುಗದಲ್ಲಿ, ಪ್ರತಿಯೊಂದು ವೃತ್ತಿಯಲ್ಲಿ ಗಣಿತ ಮತ್ತು ವಿಜ್ಞಾನದ ಅಗತ್ಯವಿರುತ್ತದೆ. ಗಣಿತವು ತರ್ಕಶಾಸ್ತ್ರ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹಾರವನ್ನು ಕಲಿಸುತ್ತದೆ ಮತ್ತು ಇದು ಬಹುತೇಕ ಎಲ್ಲಾ ವ್ಯವಹಾರ ಮಾದರಿಗಳಿಗೆ ಅತ್ಯಗತ್ಯವಾಗಿದೆ. ಅದೇ ಸಮಯದಲ್ಲಿ, ವಿಜ್ಞಾನವು ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಿದೆ. ಹಾಗಾಗಿ ಈ ಎರಡು ವಿಷ್ಯಗಳನ್ನು ಮಕ್ಕಳಿಗೆ ಕಲಿಸಲು ಆದ್ಯತೆ ನೀಡಿ.
ಡೇಟಾ ವಿಶ್ಲೇಷಣೆ : ಕೆಲಸದ ಸ್ಥಳಗಳಲ್ಲಿನ ಡೇಟಾ ವಿಶ್ಲೇಷಣೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ (BLS) ಪ್ರಕಾರ, ಮುಂದಿನ 7 ವರ್ಷಗಳಲ್ಲಿ ಡೇಟಾ ಅನಾಲಿಟಿಕ್ಸ್ ನಲ್ಲಿ ಕೌಶಲ್ಯ ಹೊಂದಿರುವ ವೃತ್ತಿಪರರ ಸಂಖ್ಯೆಯು 30 ಪ್ರತಿಶತಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. ಹಾಗಾಗಿ ನಿಮ್ಮ ಮಕ್ಕಳಿಗೆ ಡೇಟಾ ವಿಶ್ಲೇಷಣೆ ಬಗ್ಗೆ ಆಸಕ್ತಿ ಮೂಡಿಸಿ, ಅದನ್ನು ಕಲಿಸುವ ಪ್ರಯತ್ನನ ನಡೆಸಬಹುದು.
ಮೊಮ್ಮಕ್ಕಳನ್ನು ಎಷ್ಟು ಸಮಯ ಅಜ್ಜ – ಅಜ್ಜಿ ಜೊತೆ ಬಿಡ್ಬೇಕು?
ಲಿಬರಲ್ ಆರ್ಟ್ಸ್ ಮತ್ತು ಹ್ಯುಮಾನಿಟೀಸ್ : ಭವಿಷ್ಯದಲ್ಲಿ ಹೆಚ್ಚಿನ ಸಂಬಳದ ಉದ್ಯೋಗಗಳಿಗೆ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಬರವಣಿಗೆಯಲ್ಲಿ ಕೌಶಲ್ಯ, ಓದುವ ಕೌಶಲ್ಯ ಮತ್ತು ಮಾತನಾಡುವ ಕೌಶಲ್ಯಗಳ ಅಗತ್ಯವಿರುತ್ತದೆ. ಇವೆಲ್ಲವೂ ಲಿಬರಲ್ ಆರ್ಟ್ಸ್ ಮತ್ತು ಹ್ಯುಮಾನಿಟೀಸ್‌ಗೆ ಸಂಬಂಧಿಸಿವೆ. ನೀವು ಇದನ್ನು ಮಕ್ಕಳಿಗೆ ಅಗತ್ಯವಾಗಿ ಹಾಗೂ ಅನಿವಾರ್ಯವಾಗಿ ಕಲಿಸಬೇಕಾಗುತ್ತದೆ.