ವಿವಾಹಿತ ಪುರುಷರು ತಪ್ಪದೇ ತಿನ್ನಬೇಕಾದ ತರಕಾರಿಗಳಿವು

By Suvarna NewsFirst Published May 20, 2022, 11:40 AM IST
Highlights

ಭಾರತೀಯರಲ್ಲಿ ಬಂಜೆತನ (Infertility)ಸಮಸ್ಯೆ ಹೆಚ್ಚಾಗ್ತಿದೆ. ಮಹಿಳೆಯರಿಗೆ ಮಾತ್ರವಲ್ಲ ಪುರುಷ(Male)ರಿಗೂ ಈ ಸಮಸ್ಯೆ ಕಾಡ್ತಿದೆ. ವಿಶೇಷವೆಂದ್ರೆ ನಗರವಾಸಿ ಪುರುಷರಿಗೆ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಫಲವತ್ತತೆ (Fertility) ಹೆಚ್ಚಿಸಿಕೊಳ್ಳಲು ಎಂಥಾ ಆಹಾರ (Food) ಸೇವಿಸುವುದು ಉತ್ತಮ ಎಂಬುದನ್ನು ತಿಳಿಯೋಣ.

ಯುವಕರಲ್ಲಿ ಹೆಚ್ಚುತ್ತಿರುವ ಬಂಜೆತನ  (Infertility) ಅಪಾಯಕಾರಿ ಸಂಗತಿ ಎಂದ್ರೆ ತಪ್ಪಾಗಲಾರದು. ಪುರುಷರಲ್ಲಿ ವಯಸ್ಸು(Age) ಹೆಚ್ಚಾದಂತೆ ಫಲವತ್ತತೆ ಕಡಿಮೆಯಾಗುತ್ತದೆ. ಪುರುಷರಲ್ಲಿ ವೀರ್ಯ(Sperm)ದ ಗುಣಮಟ್ಟವು ವಯಸ್ಸಿನೊಂದಿಗೆ ಕುಸಿಯಲು ಪ್ರಾರಂಭಿಸುತ್ತದೆ. ವಾಹಿತ ಪುರುಷರ ವೈವಾಹಿಕ ಜೀವನವು (Marrield life) ಅವನ ಫಲವತ್ತತೆ ಉತ್ತಮವಾಗಿದ್ದಾಗ ಮಾತ್ರ ಯಶಸ್ವಿಯಾಗುತ್ತದೆ. ಮದುವೆಯ ನಂತರ ಪುರುಷರು ಯಾವುದೂ ಒಂದು ಕಾರಣದಿಂದ ದುರ್ಬಲರಾಗದಂತೆ ತಮ್ಮ ಆರೋಗ್ಯದ (Health) ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಉತ್ತಮ ಆಹಾರಕ್ರಮವನ್ನು ರೂಢಿಸಿಕೊಳ್ಳಬೇಕು. ಎಣ್ಣೆ ಪದಾರ್ಥ, ಜಂಕ್‌ಫುಡ್ ಸೇವನೆಯನ್ನು ಬಿಟ್ಟು ಆರೋಗ್ಯಕರ ಹಣ್ಣು, ತರಕಾರಿ (Vegetables)ಗಳನ್ನು ಸೇವಿಸಬೇಕು.

ಟೆಸ್ಟೋಸ್ಟೆರಾನ್ ಹಾರ್ಮೋನ್ ಕಾರ್ಯವು ಪುರುಷ ಫಲವತ್ತತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮೂಳೆಯ ಬಲ ಮತ್ತು ಸ್ನಾಯುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೆಲವು ಕಾರಣಗಳಿಂದ ಈ ಹಾರ್ಮೋನ್ ಕೊರತೆಯಿದ್ದರೆ, ಭಯಪಡುವ ಅಗತ್ಯವಿಲ್ಲ, ಮನೆಯ ಈ ತರಕಾರಿಗಳನ್ನು ತಿನ್ನುವ ಮೂಲಕ ನೀವು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಿಸಲು ಆಯ್ದ ಕೆಲವು ತರಕಾರಿಗಳನ್ನು ತಿನ್ನುವುದು ಅತ್ಯುತ್ತಮ. ಅದು ಯಾವುದು ತಿಳಿದುಕೊಳ್ಳೋಣ.

Male Fertility : ಮಹಿಳೆಯರನ್ನು ಮಾತ್ರವಲ್ಲ ಪುರುಷರನ್ನು ಹೆಚ್ಚಾಗಿ ಕಾಡ್ತಿದೆ ಬಂಜೆತನ

ಹಸಿರು ಎಲೆಗಳ ತರಕಾರಿಗಳು: ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಹಸಿರು ಎಲೆಗಳ ತರಕಾರಿಗಳ (Green leafy vegetbles) ಸೇವನೆ ಅತ್ಯುತ್ತಮ. ಅದರಲ್ಲೂ ಪುರುಷರು ಇದನ್ನು ನಿಯಮಿತವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಪುರುಷರು ಪ್ರತಿದಿನ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಿದರೆ ಅವರ ಫಲವತ್ತತೆ ಉತ್ತಮವಾಗಿರುತ್ತದೆ. ಯಾಕೆಂದರೆ ಹಸಿರು ಎಲೆಗಳ ತರಕಾರಿಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮೆಗ್ನೀಸಿಯಮ್ ಕಂಡುಬರುತ್ತದೆ, ಇದರಿಂದಾಗಿ ಟೆಸ್ಟೋಸ್ಟೆರಾನ್ ಮಟ್ಟವು ಉತ್ತಮವಾಗಿರುತ್ತದೆ. 

ಅದರಲ್ಲೂ ಪಾಲಕ್ ಸೊಪ್ಪು ಮೆಗ್ನೀಸಿಯಮ್‌ನ ಅತ್ಯುತ್ತಮ ಆಹಾರ ಮೂಲಗಳಲ್ಲಿ ಒಂದಾಗಿದೆ, ಇದು ಸ್ನಾಯುಗಳ ಬೆಳವಣಿಗೆಯಲ್ಲಿ ತೊಡಗಿರುವ ಖನಿಜವಾಗಿದೆ ಮತ್ತು ಎಲ್ಲಾ ವಯಸ್ಸಿನ ಪುರುಷರಲ್ಲಿ ಸಂತಾನೋತ್ಪತ್ತಿ ಕಾರ್ಯಕ್ಕೆ ಅಗತ್ಯವಾಗಿರುತ್ತದೆ.

ಈರುಳ್ಳಿ: ಈರುಳ್ಳಿ (Onion) ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಇದು ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸಲು ಬಹಳ ಸಹಾಯಕವಾಗಿದೆ. ತರಕಾರಿ, ಖಾದ್ಯಗಳ ರುಚಿ ಹೆಚ್ಚಿಸಲು ಇದನ್ನು ಬಳಸುತ್ತಿದ್ದರೂ ಈರುಳ್ಳಿಯನ್ನು ಹಸಿಯಾಗಿಯೇ ತಿಂದರೆ ದೇಹದ ಮೇಲೆ ಉತ್ತಮ ಪರಿಣಾಮ ಬೀರುವುದರ ಜೊತೆಗೆ ಪೋಷಕಾಂಶಗಳೂ ಲಭ್ಯವಾಗುತ್ತವೆ.

ಪುರುಷರು ಈ ಆಹಾರ ಸೇವಿಸಿದ್ರೆ ವೀರ್ಯದ ಸಂಖ್ಯೆ ಕಡಿಮೆಯಾಗುತ್ತಂತೆ !

ಬೆಳ್ಳುಳ್ಳಿ: ಬೆಳ್ಳುಳ್ಳಿ (Garlic) ಮತ್ತು ಈರುಳ್ಳಿಗಳು ಡಯಾಲಿಲ್ ಡೈಸಲ್ಫೈಡ್ ಎಂಬ ರಾಸಾಯನಿಕವನ್ನು ಹೊಂದಿರುತ್ತವೆ, ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸುವ ಹಾರ್ಮೋನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ.ಬೆಳ್ಳುಳ್ಳಿ ಅಲಿಸಿನ್ ಎಂಬ ಸಂಯುಕ್ತವನ್ನು ಹೊಂದಿದೆ, ಇದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ, ಇದು ಸ್ನಾಯು ಕೋಶಗಳ ಒಳಗೆ ಟೆಸ್ಟೋಸ್ಟೆರಾನ್ ವಿರುದ್ಧ ಸ್ಪರ್ಧಿಸುವ ಹಾರ್ಮೋನ್ ಆಗಿದೆ. ಕಾರ್ಟಿಸೋಲ್ ಅನ್ನು ಹೊರಹಾಕುವುದು ಟೆಸ್ಟೋಸ್ಟೆರಾನ್‌ಗೆ ಜಾಗವನ್ನು ನೀಡುತ್ತದೆ.

ಶುಂಠಿ: ಶುಂಠಿ (Ginger)ಯನ್ನು ಸಾಮಾನ್ಯವಾಗಿ ಹಲವು ಆಹಾರಗಳನ್ನು ತಯಾರಿಸುವಾಗ ಬಳಸಿಕೊಳ್ಳಲಾಗುತ್ತದೆ. ಈ ಶುಂಠಿಯ ಸೇವನೆ ಪುರುಷರ ಫಲವತ್ತತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಶುಂಠಿ ಸೇವನೆಯ ಮೂಲಕ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಬಹುದು, ಇದನ್ನು ನೇರವಾಗಿ ತಿನ್ನಬಹುದು ಅಥವಾ ಚಹಾದೊಂದಿಗೆ ಸೇವಿಸಬಹುದು. ಇದು ಪುರುಷರ ಫಲವತ್ತತೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ, ಇದರಿಂದಾಗಿ ತಂದೆಯಾಗುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ.

ಕಾಮ ಕಸ್ತೂರಿ: ಕಸ್ತೂರಿಯ ಮೂಲಕ ವೀರ್ಯದ ಸಂಖ್ಯೆ ಮತ್ತು ಪುರುಷ ಫಲವತ್ತತೆಯನ್ನು ಹೆಚ್ಚಿಸಬಹುದು ಏಕೆಂದರೆ ಇದು ಬಹಳಷ್ಟು ಸತುವನ್ನು ಹೊಂದಿರುತ್ತದೆ. ಈ ಪೋಷಕಾಂಶದ ಕೊರತೆಯು ಪುರುಷರಲ್ಲಿ ಹೈಪೊಗೊನಾಡಿಸಮ್ ಸಮಸ್ಯೆಯನ್ನು ಉಂಟುಮಾಡುತ್ತದೆ, ಇದರಿಂದಾಗಿ ಟೆಸ್ಟೋಸ್ಟೆರಾನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕಸ್ತೂರಿಯಿಂದ ಬಯಸಿದ ಫಲಿತಾಂಶವನ್ನು ಪಡೆಯಬಹುದು.

click me!