ಪ್ರೀತಿಸಿದ ವ್ಯಕ್ತಿಗಳು ಸದಾ ನಮ್ಮ ಜೊತೆಗಿರಬೇಕೆಂದು ನಾವು ಬಯಸ್ತೇವೆ. ಆದ್ರೆ ಇದು ಅಸಾಧ್ಯ ಎನ್ನುವುದು ನಮಗೆಲ್ಲರಿಗೂ ಗೊತ್ತು. ಸಂಗಾತಿ ಜೊತೆಗಿಲ್ಲದ ಸಂದರ್ಭದಲ್ಲಿ ಅವರ ನೆನಪು ಕಾಡಿದ್ರೆ ಹುಡುಗಿಯರು ಏನೇನೆಲ್ಲ ಮಾಡ್ತಾರೆ ಎಂಬುದನ್ನು ನಾವು ಹೇಳ್ತೇವೆ.
ಪ್ರೀತಿ (Love)ಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ. ಅವರದೇ ಒಂದು ಸಣ್ಣ ಪ್ರಪಂಚ (World ) ನಿರ್ಮಾಣವಾಗಿರುತ್ತದೆ. ಸಂಗಾತಿ (Partner) ಜೊತೆ ಜೀವನ ನಡೆಸುವ ಬಗ್ಗೆ ಹಗಲು ರಾತ್ರಿ ಕನಸು ಕಾಣುತ್ತಾರೆ. ಪ್ರೀತಿಸಿದ ವ್ಯಕ್ತಿ ಸ್ವಲ್ಪ ಸಮಯ ದೂರವಿದ್ದರೂ ಇವರಿಗೆ ಸಹಿಸಲು ಕಷ್ಟವಾಗುತ್ತದೆ. ಆದರೆ ಮದುವೆಗೆ ಮುನ್ನ ಯಾವುದೇ ಜೋಡಿ, ಪ್ರತಿ ದಿನ, ಪ್ರತಿ ಕ್ಷಣ ಒಟ್ಟಿಗೆ ಇರಲು ಸಾಧ್ಯವಿಲ್ಲ. ದಿನದ ಕೆಲ ಗಂಟೆ ಭೇಟಿಯಾಗ್ಬಹುದು, ಇಲ್ಲವೆ ರಾತ್ರಿ ಪೂರ್ತಿ ಫೋನ್ (Phone) ನಲ್ಲಿ ಮಾತನಾಡ್ಬಹುದು, ವಿಡಿಯೋ ಕಾಲ್ ಮಾಡ್ಬಹುದು ಆದ್ರೆ ಎಲ್ಲ ಸಮಯವನ್ನು ಅಂಟಿಕೊಂಡು ಕಳೆಯಲು ಆಗುವುದಿಲ್ಲ. ಮದುವೆ ನಂತ್ರವೂ ಇದು ಸಾಧ್ಯವಿಲ್ಲ ಬಿಡಿ. ಮದುವೆ ನಂತ್ರದ ಜೀವನವೇ ಭಿನ್ನವಾಗಿದೆ. ಬರೀ ಪ್ರೀತಿಯಲ್ಲಿರುವವರ ಬಗ್ಗೆ ನಾವು ಹೇಳ್ತಿದ್ದೇವೆ. ಪ್ರೇಮಿ ಜೊತೆಗಿರದ ಸಮಯದಲ್ಲಿ ವಿರಹ ವೇದನೆ ಸಹಜ. ಒಬ್ಬ ಹುಡುಗಿ ತನ್ನ ಪ್ರೇಮಿಯನ್ನು ಮಿಸ್ ಮಾಡಿಕೊಳ್ತಿರುವ ಸಮಯದಲ್ಲಿ ಏನು ಆಲೋಚನೆ ಮಾಡ್ತಾಳೆ ಅಥವಾ ಏನು ಕೆಲಸ ಮಾಡ್ತಾಳೆ ಎಂಬುದು ನಿಮಗೆ ಗೊತ್ತಾ? ಲವ್ವರ್ ಜೊತೆಗಿಲ್ಲದ ಸಮಯದಲ್ಲಿ ಹುಡುಗಿಯಾದವಳು ಏನೇನು ಮಾಡ್ತಾಳೆ ಎಂಬ ರಹಸ್ಯವನ್ನು ನಾವಿಂದು ಹೇಳ್ತೇವೆ.
ವಿರಹದಲ್ಲಿ ಹುಡುಗಿಯರು ಏನು ಮಾಡ್ತಾರೆ?
ಸಾಮಾಜಿಕ ಜಾಲತಾಣ : ಹುಡುಗನನ್ನು ನೋಡ್ದೇ ಬೋರ್ ಆಗಿದೆ ಎನ್ನುವ ಸಂದರ್ಭದಲ್ಲಿ ಹುಡುಗಿಯರು ಮೊದಲು ಮಾಡುವ ಕೆಲಸ ಸಾಮಾಜಿಕ ಜಾಲತಾಣದ ಸ್ಟೇಟಸ್ ಚೆಕ್ ಮಾಡುವುದು. ಅರ್ಧ ಗಂಟೆಗೊಮ್ಮೆ ಹುಡುಗನ ಸ್ಟೇಟಸ್ ಚೆಕ್ ಮಾಡ್ತಾಳೆ. ಆತನ ಫೋಟೋ ನೋಡುವುದು. ಸಾಮಾಜಿಕ ಜಾಲತಾಣದಲ್ಲಿ ಆತ ಹಾಕಿರುವ ಪೋಸ್ಟ್ ಗೆ ಬೇರೆಯವರು ಏನು ಕಮೆಂಟ್ ಮಾಡಿದ್ದಾರೆ ಎಂಬುದನ್ನು ನೋಡುವುದು.
ಪ್ರಣಯದ ಕನಸು : ಹಗಲುಕನಸು ಕಾಣೋದ್ರಲ್ಲಿ ಹುಡುಗಿಯರು ಮುಂದಿದ್ದಾರೆ. ನಿಂತಲ್ಲಿ, ಕುಂತಲ್ಲಿ ಹುಡುಗಿಯರು ಕನಸು ಕಾಣ್ತಿರುತ್ತಾರೆ. ಇನ್ನು ಪ್ರೀತಿಯಲ್ಲಿ ಬಿದ್ದಾಗ ಕೇಳ್ಬೇಕಾ? ರೋಮ್ಯಾಂಟಿಕ್ ಕನಸುಗಳು ಒಂದಾದ್ಮೇಲೆ ಒಂದರಂತೆ ಬರ್ತಿರುತ್ತವೆ. ನೆಚ್ಚಿನ ಹೀರೋ ಸ್ಥಾನದಲ್ಲಿ ಹುಡುಗನನ್ನು ಕಲ್ಪಿಸಿಕೊಂಡು, ಸಿನಿಮಾ ಸ್ಟೈಲ್ ನಲ್ಲಿ ಕನಸು ಕಾಣ್ತಿರುತ್ತಾರೆ. ಹುಟ್ಟುಹಬ್ಬ ಅಥವ ಬೇರೆ ವಿಶೇಷ ದಿನಗಳನ್ನು ಹೇಗೆ ಎಂಜಾಯ್ ಮಾಡ್ಬೇಕು ಎಂಬ ಪ್ಲಾನ್ ಮಾಡ್ತಾಳೆ. ಇಷ್ಟಕ್ಕೆ ಸುಮ್ಮನಿರುವವಳು ಅವಳಲ್ಲ. ಅದನ್ನು ಸಂದೇಶದ ಮೂಲಕ ಸಂಗಾತಿಗೆ ಕಳುಹಿಸಿ,ಹಾಗೆ ಮಾಡೋಣ,ಹೀಗೆ ಮಾಡೋಣ ಅಂತಾ ತಲೆ ತಿನ್ನಲು ಶುರು ಮಾಡ್ತಾಳೆ.
ಪ್ರಣಯವಿಲ್ಲದ Co-Parenting ಜೀವನ ಹೇಗಿರುತ್ತೆ ಗೊತ್ತಾ?
ಮಾತನಾಡಲು ಕಾರಣದ ಹುಡುಕಾಟ : ಪ್ರೇಮಿಯ ಭೇಟಿಯಾಗಿ ಮೂರ್ನಾಲ್ಕು ದಿನ ಕಳೆದಿದ್ದರೆ ಹುಡುಗಿಯ ಚಡಪಡಿಕೆ ಹೆಚ್ಚಿರುತ್ತದೆ. ಪದೇ ಪದೇ ಪ್ರೇಮಿಗೆ ಮೆಸ್ಸೇಜ್ ಮಾಡುವುದು ಅಥವಾ ಸಣ್ಣ ಸಣ್ಣ ವಿಷ್ಯಕ್ಕೆ ಕರೆ ಮಾಡುವುದು ಮಾಡ್ತಾಳೆ. ಆ ಕಡೆಯಿಂದ ಸರಿಯಾಗಿ ರೆಸ್ಪಾನ್ಸ್ ಬರೆದ ಹೋದ್ರೆ ಕೋಪಗೊಳ್ತಾಳೆ. ಇಬ್ಬರ ಮಾತುಕತೆ ಗಂಟೆಗಟ್ಟಲೆ ನಡೆಯಲಿ,ತನ್ನ ಎಲ್ಲ ಮಾತುಗಳನ್ನು ಆತ ಕೇಳಲಿ ಎಂಬ ತುಡಿತ ಆಕೆಗಿರುತ್ತದೆ. ಇಲ್ಲಿನ ವಿಶೇಷವೆಂದ್ರೆ ಐ ಲವ್ ಯು ಎಂದು ಶುರುವಾಗುವ ಮಾತು ಐ ಲವ್ ಯುನಲ್ಲಿ ಅಂತ್ಯವಾಗುತ್ತದೆ.
ಸ್ನೇಹಿತರ ಮುಂದೆ ಗುಣಗಾನ : ಹುಡುಗ ಸಿಗದೆ ಅನುಭವಿಸುತ್ತಿರುವ ನೋವನ್ನು ಹುಡುಗಿ ಸ್ನೇಹಿತರ ಮುಂದೆ ಮಾತಿನ ಮೂಲಕ ಹೊರ ಹಾಕ್ತಾಳೆ. ಮಾತು ಮಾತಿಗೂ ಆತನನ್ನು ಎಳೆದು ತರ್ತಾಳೆ. ತಮ್ಮ ಪ್ರೀತಿಯ ವಿಷ್ಯವನ್ನು ಅವರ ಮುಂದೆ ಹೇಳ್ತಾ ಮತ್ತೊಮ್ಮೆ ಹಳೆ ನೆನಪನ್ನು ಮೆಲುಕು ಹಾಕ್ತಾಳೆ.
DIVORCE: ವಿಚ್ಛೇದನದ ಹಾದಿಯಲ್ಲಿ ಈ ಎಚ್ಚರಿಕೆ ಇರಲಿ
ಸಂಗಾತಿ ನೀಡಿದ ಉಡುಗೊರೆ : ಸಂಗಾತಿ ನೀಡಿದ ಉಡುಗೊರೆ ಮೇಲೆ ವಿಶೇಷ ಕಾಳಜಿಯಿರುತ್ತದೆ ನಿಜ. ಆದ್ರೆ ಎಷ್ಟೂ ದಿನಗಳ ಹಿಂದೆ ನೀಡಿದ ಉಡುಗೊರೆಯನ್ನು ಈಗ್ಲೂ ದಿಟ್ಟಿಸಿ ನೋಡ್ತಾಳೆ ಹುಡುಗಿ. ಇದು ಮಾತ್ರವಲ್ಲ ಆತ ಕಳುಹಿಸಿದ ಮೆಸ್ಸೇಜ್ ಅಥವಾ ಪತ್ರವನ್ನು ಕೂಡ ಪದೇ ಪದೇ ಓದುತ್ತಾಳೆ. ಈ ಮೂಲಕ ಆತ ತನ್ನ ಹತ್ತಿರವಿದ್ದಾನೆಂಬ ಭಾವನೆಗೊಳಗಾಗ್ತಾಳೆ.