ಮಹಿಳೆಯರಿಗೆ ಏನಿಷ್ಟ ಅನ್ನೋದೆ ಗೊತ್ತಾಗಲ್ಲ ಗುರು ಎನ್ನುವವರಿದ್ದಾರೆ. ಅದು ನೂರಕ್ಕೆ ನೂರು ಸತ್ಯವೂ ಹೌದು. ಇಂದು ಚೆಂದ ಕಂಡಿದ್ದು ನಾಳೆ ಇಷ್ಟವಾಗೋದಿಲ್ಲ. ಆದ್ರೆ ಹುಡುಗ್ರ ವಿಷ್ಯದಲ್ಲಿ ಹಾಗಲ್ಲ. ಹುಡುಗರ ಕೆಲ ಚಿತ್ರ – ವಿಚಿತ್ರ ವರ್ತನೆ ಹುಡುಗಿಯರನ್ನು ಸದಾ ಸೆಳೆಯುತ್ತದೆ.
ಮಹಿಳೆ (Woman) ಯರ ಮನಸ್ಸು ಅರಿಯೋದು ಸುಲಭವಲ್ಲ. ಅವರ ಇಷ್ಟ –ಕಷ್ಟಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಮಹಿಳೆ ಚಂಚಲೆ ಎಂದೇ ಹೆಸರು ಪಡೆದಿದ್ದಾಳೆ. ಈಗಿದ್ದ ಆಸೆ ಇನ್ನೊಂದರ್ಥ ಗಂಟೆಯಲ್ಲಿ ಬದಲಾಗುತ್ತದೆ. ಇದರ ಹೊರತಾಗಿಯೂ, ಪ್ರತಿಯೊಬ್ಬ ಮಹಿಳೆ ಸಂಗಾತಿ (Partner) ಬಗ್ಗೆ ತನ್ನದೇ ಕಲ್ಪನೆ ಹೊಂದಿರುತ್ತಾಳೆ. ಸಂಗಾತಿ ಹೇಗಿರಬೇಕು ಎಂಬುದರ ಬಗ್ಗೆ ಆಕೆಯದ್ದು ಒಂದು ಲೀಸ್ಟ್ ಸಿದ್ಧವಾಗುತ್ತದೆ. ಅದರಲ್ಲಿ ಆತನ ನೋಟ ಸುಂದರವಾಗಿರಬೇಕೆಂಬುದು ಮಾತ್ರವಲ್ಲ ಅದ್ಭುತವಾದ ಹಾಸ್ಯ ಪ್ರಜ್ಞೆಯನ್ನು ಹೊಂದಿರಬೇಕು ಎಂಬುದು ಸೇರಿರುತ್ತದೆ. ಮಹಿಳೆಯರಿಗೆ ಪುರುಷರ ಕೆಲ ವರ್ತನೆ ಸೆಕ್ಸಿಯಾಗಿ ಕಾಣೋದಲ್ಲದೆ ಅದು ಅವರನ್ನು ಹೆಚ್ಚೆಚ್ಚು ಆಕರ್ಷಿಸುತ್ತದೆ. ಹುಡುಗಿಯರಿಗೆ ಯಾವುದು ಇಷ್ಟ ಎಂಬುದು ಹುಡುಗ್ರಿಗೆ ಗೊತ್ತಾದ್ರೆ ಅವರನ್ನು ಸೆಳೆಯುವುದು ಸುಲಭ. ಆದ್ರೆ ಕೆಲ ಹುಡುಗಿಯರ ಇಷ್ಟಗಳು ವಿಚಿತ್ರವಾಗಿರುತ್ತವೆ. ಅದನ್ನು ಕೆಲ ಹುಡುಗ್ರ ಪ್ರಯತ್ನ ಪಟ್ಟರೂ ಪಡೆಯಲು ಸಾಧ್ಯವಿಲ್ಲ. ಇಂದು ನಾವು ಯಾವ ಹುಡುಗರು ಮಹಿಳೆಯರಿಗೆ ಸೆಕ್ಸಿಯಾಗಿ ಕಾಣಿಸುತ್ತಾರೆ ಎಂಬುದನ್ನು ಹೇಳ್ತೇವೆ.
ಹೊಳೆಯುವ ಕಣ್ಣು : ಸುಂದರ ಕಣ್ಣು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬರೀ ಮಹಿಳೆಯರ ಕಣ್ಣುಗಳು ಮಾತ್ರವಲ್ಲ ಪುರುಷರ ಕಣ್ಣು ಕೂಡ ಸೆಕ್ಸಿಯಾಗಿರುತ್ತದೆ. ಯಾವ ಹುಡುಗರ ಕಣ್ಣು ಸುಂದರವಾಗಿರುತ್ತದೆಯೋ ಹಾಗೆ ರೆಪ್ಪೆಗಳು ಉದ್ದವಾಗಿರುತ್ತವೆಯೋ ಆ ಹುಡುಗರ ಕಡೆ ಹುಡುಗಿಯರ ಗಮನ ಹೋಗುತ್ತದೆ. ಬೇಡವೆಂದ್ರೂ ಆ ಹುಡುಗ್ರನ್ನು ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆಯಾಗುತ್ತದೆ. ಈ ಹುಡುಗ್ರು ಮಾತನಾಡ್ತಿದ್ದರೆ ಹುಡುಗಿಯರು ಅವರ ಕಣ್ಣುಗಳನ್ನು ನೋಡ್ತಿರುತ್ತಾರೆ. ಉದ್ದದ ರೆಪ್ಪೆ ಹೊಂದಿರುವ ಹುಡುಗರು, ಹುಡುಗಿಯರ ಕಣ್ಣಿಗೆ ಸೆಕ್ಸಿಯಾಗಿ ಕಾಣ್ತಾರೆ. ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳಲು ಈ ಹುಡುಗ್ರು ಹೆಚ್ಚು ಪರಿಶ್ರಮಪಡಬೇಕಾಗಿಲ್ಲ. ಕಣ್ಣಿನಲ್ಲಿಯೇ ಮೋಡಿ ಮಾಡ್ಬಹುದು.
VACCINATION CERTIFICATE ಕೋವಿಡ್ ಲಸಿಕೆ ಸರ್ಟಿಫಿಕೇಟ್‌ನಿಂದ ಬಯಲಾಯ್ತು 2ನೇ ಹೆಂಡತಿ ರಹಸ್ಯ!
ಆಳವಾದ ಧ್ವನಿ : ಹುಡುಗಿಯರ ಧ್ವನಿ ಮೃದುವಾಗಿದ್ದರೆ ಎಲ್ಲರೂ ಇಷ್ಟಪಡುವಂತೆ ಹುಡುಗರ ಧ್ವನಿ ಗಡುಸಾಗಿರ್ಬೇಕು. ಹುಡುಗಿಯರಂತೆ ಮೃದುವಾದ ಧ್ವನಿಯಿರುವ ಹುಡುಗರು ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಗಡುಸಾದ ಹಾಗೂ ಆರ್ಡರ್ ಮಾಡುವಂತ ಧ್ವನಿ ಹೊಂದಿದ್ದರೆ ಹುಡುಗಿರು ಹೆಚ್ಚು ಆಕರ್ಷಿತರಾಗ್ತಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರಂತೆ ಧ್ವನಿ ಇರ್ಬೇಕೆಂದು ಅನೇಕ ಹುಡುಗಿಯರು ಬಯಸ್ತಾರೆ. ಹುಡುಗರ ಆಳವಾದ ಧ್ವನಿ, ಹುಡುಗಿಯರನ್ನು ಹಿಡಿದಿಡುತ್ತದೆ. ಆ ಹುಡುಗನ ಮಾತನ್ನು ಮತ್ತೆ ಮತ್ತೆ ಕೇಳಲು ಹುಡುಗಿರು ಬಯಸ್ತಾರೆ. ಮಂತ್ರಮುಗ್ಧವಾಗಿ ಮಾತು ಕೇಳುತ್ತಾರೆ.
ಹುಡುಗರ ವಾಸನೆ : ಪ್ರತಿಯೊಬ್ಬರ ದೇಹದಿಂದಲೂ ಒಂದೊಂದು ರೀತಿಯ ಬೆವರಿನ ವಾಸನೆ ಬರುತ್ತದೆ. ಕೆಲವರ ಬೆವರು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಅಂಥವರ ಬಳಿ ಬರಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಪುರುಷರಲ್ಲಿ ದೇಹದಿಂದ ಹೊರ ಬರುವ ವಾಸನೆ ಮಹಿಳೆಯರನ್ನು ತುಂಬಾ ಆಕರ್ಷಿಸುತ್ತದೆ. ಹೆಚ್ಚಿನ ಹುಡುಗಿಯರು ಸೆಂಟ್ ಇಷ್ಟಪಡ್ತಾರೆ. ಒಳ್ಳೆಯ ಸೆಂಟ್ ಅವರನ್ನು ಆಕರ್ಷಿಸುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕೆಲವೊಮ್ಮೆ ಪುರುಷರ ಬೆವರಿನ ಜೊತೆ ಸೆಂಟ್ ಸೇರಿ ಬೇರೆಯ ವಾಸನೆ ಬರಲು ಶುರುವಾಗುತ್ತದೆ. ಅನೇಕ ಮಹಿಳೆಯರಿಗೆ ಇದು ಇಷ್ಟವಾಗುತ್ತದೆ. ಅದೇ ಕಾರಣಕ್ಕೆ ಅವರು ಹುಡುಗ್ರ ಹತ್ತಿರ ಬರಲು ಶುರು ಮಾಡ್ತಾರೆ. ಆದ್ರೆ ಸತ್ಯವನ್ನು ಮುಚ್ಚಿಟ್ಟು, ಬೇರೆ ಬೇರೆ ನೆಪ ಹೇಳಿ ಹತ್ತಿರವಾಗಲು ಬಯಸ್ತಾರೆ. ಹುಡುಗಿಯರನ್ನು ಸೆಳೆಯಬೇಕೆನ್ನುವ ಹುಡುಗ್ರು ಸೆಂಟ್ ಆಯ್ಕೆಯನ್ನು ಸರಿಯಾಗಿ ಮಾಡ್ಬೇಕು.
ಪ್ರೀತಿಗೆ ವಯಸ್ಸಿನ ಹಂಗಿಲ್ಲ ನೋಡಿ..95ರ ಹರೆಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಆತ್ಮವಿಶ್ವಾಸದ ಮನುಷ್ಯ : ತನ್ನ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿರುವ ಮನುಷ್ಯನನ್ನು ಯಾರು ಇಷ್ಟಪಡುವುದಿಲ್ಲ? ವಾಸ್ತವವಾಗಿ, ಆತ್ಮವಿಶ್ವಾಸದಿಂದ ತುಂಬಿರುವ ಪುರುಷರು ಬೇಗನೆ ಮಹಿಳೆಯರ ಗಮನವನ್ನು ಸೆಳೆಯುತ್ತಾರೆ. ಆತ್ಮವಿಶ್ವಾಸ ಮತ್ತು ಪ್ರೀತಿಯ ಸ್ವಭಾವ ಹೊಂದಿರುವ ಪುರುಷರನ್ನು ಮಹಿಳೆಯರು ತುಂಬಾ ಇಷ್ಟಪಡುತ್ತಾರೆ. ಅವರನ್ನು ತನ್ನ ಸ್ನೇಹಿತರಾಗಿಸಿಕೊಳ್ಳಲು ಹಂಬಲಿಸುತ್ತಾರೆ.