ನವದೆಹಲಿ(ಮೇ.23); ಕೋವಿಡ್ ಲಸಿಕೆ ಪ್ರಮಾಣ ಪತ್ರದ ಅವಶ್ಯಕತ ಕುರಿತು ಬಿಡಿಸಿ ಹೇಳಬೇಕಾಗಿಲ್ಲ.ಹಲವು ಉಪಯೋಗಗಳ ಈ ಲಸಿಕೆ ಸರ್ಟಿಫಿಕೇಟ್ ಇದೀಗ ಪತಿಯ ಮೋಸದಾಟವನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದೆ. ಹೌದು, ಲಸಿಕೆ ಸರ್ಟಿಫಿಕೇಟ್‌ನಿಂದ ಪತಿಯ ಎರಡನೇ ಹೆಂಡತಿ ರಹಸ್ಯ ಬಯಲಾಗಿದೆ. ಪರಿಣಾಮ ಇದೀಗ ಪತಿ ಹಾಗೂ ಮಾವನ ವಿರುದ್ಧ ಕೇಸ್ ದಾಖಲಾಗಿದೆ.
ಮಧ್ಯಪ್ರದೇಶದ ಇಂಧೋರ್‌ನಲ್ಲಿ ರಾಜೇಂದ್ರ ಭೀಸೆ ಕುಟುಂಬ ನೆಲೆಸಿದೆ. 20 ವರ್ಷಗಳ ಹಿಂದೆ ರಾಜೇಂದ್ರ ಭೀಸೆ, ರೇಖಾ ಬೀಸೆಯನ್ನು ಮದುವೆಯಾಗಿದ್ದಾರೆ. ಆದರೆ ಕಳೆದ 8 ವರ್ಷಗಳಿಂದ ಪತ್ನಿ ರೇಖಾ ಬೀಸೆಗೆ ಇನ್ನಿಲ್ಲದ ಚಿತ್ರ ಹಿಂಸೆ ನೀಡಲಾಗುತ್ತಿದೆ. ಪತಿಯ ತಂದೆ ಗಹಿನಾಥ್ ಬೀಸೆ ಕೂಡ ಸಣ್ಣ ಪುಟ್ಟ ಕಾರಣಗಳಿಗೆ ತೊಂದರೆ ನೀಡಲು ಆರಂಭಿಸಿದ್ದಾರೆ.
ಫ್ರೆಂಡ್ಸ್ ಜೊತೆ ಟ್ರಿಪ್ ಹೋದ ಹೆಂಡ್ತಿ, ಏನೇನೋ ಮಾಡ್ಕೊಂಡಳಂತೆ!
ಪತಿ ಹಾಗೂ ಮಾನವ ಟಾರ್ಚರ್‌ನಿಂದ ಬೇಸತ್ತ ಪತ್ನಿ ರೇಖಾ ಭೀಸೆ ಹಲವು ಬಾರಿ ತವರು ಮನೆಗೆ ಹೋಗಿ ನೆಲೆಸಿದ್ದಾರೆ. ಬಳಿಕ ಕುಟುಂಬದವರ ರಾಜಿ ಪಂಚಾಯಿತಿಯಿಂದ ಮತ್ತೆ ಪತಿ ಮನೆಗೆ ವಾಪಾಸ್ಸಾಗಿದ್ದಾರೆ. ಪ್ರತಿ ಬಾರಿ ಜಗಳವಾಡಿ ರಾಜೀ ಸಂಧಾನದ ವೇಳೆ ರೇಖಾ ಭೀಸೆ, ತನ್ನ ಪತಿಗೆ ಬೇರೆ ಮಹಿಳೆ ಜೊತೆ ಸಂಬಂಧವಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ಸಾಕ್ಷಿ, ಆಧಾರ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ರೇಖಾ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ.
ಇತ್ತೀಚೆಗೆ ರಾಜಿ ಸಂಧಾನದ ಬಳಿಕ ಪತಿ ಮನೆಯಲ್ಲಿದ್ದ ರೇಖಾ ಭೀಸೆಗ ಪತಿಯ ಶರ್ಟ್ ಜೇಬಿನಲ್ಲಿ ಕೋವಿಡ್ ಲಸಿಕಾ ಸರ್ಟಿಫಿಕೇಟ್ ಪತ್ತೆಯಾಗಿದೆ. ಇದು ಸರ್ಟಿಫಿಕೇಟ್ ಮೇಲೆ ಭೂಮಿತಾ ಅನ್ನೋ ಹೆಸರಿತ್ತು. ಆದರೆ ಪತಿಯ ಹೆಸರಿನ ಬಳಿ ರಾಜೇಂದ್ರ ಭೀಸೆ ಅನ್ನೋ ಹೆಸರಿತ್ತು. ಅಲ್ಲಿಗೆ ಕಳೆದ 8 ವರ್ಷಗಳಿಂದ ರೇಖಾ ಭೀಸೆಗೆ ಇದ್ದ ಅನುಮಾನಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿತ್ತು. ತನ್ನ ಮೇಲೆ ಚಿತ್ರ ಹಿಂಸೆ ನೀಡಲು ಇದೇ ಕಾರಣ ಅನ್ನೋ ಅಂಶವೂ ಮನದಟ್ಟಾಯಿತು.
ಕಂಗನಾ ರಣಾವತ್ ಹೇಳಿದಂತೆ ಹೆಂಡ್ತಿಗೆ ಮೋಸ ಮಾಡೋ ಗಂಡಂದಿರು ಕೊಡೋ ಕಾರಣಗಳಿವು !
ಕೋವಿಡ್ ಸರ್ಟಿಫಿಕೇಟ್ ಸಾಕ್ಷ್ಯದ ಕುರಿತು ಪತಿಯನ್ನು ಪ್ರಶ್ನಿಸಲು ರೇಖಾ ಮುಂದಾಗಲಿಲ್ಲ. ಕಾರಣ ತನ್ನಿಂದ ಸರ್ಟಿಫಿಕೇಟ್ ಕಸಿದು ಕೊಳ್ಳವು ಸಾಧ್ಯತೆ ಹಾಗೂ ಅದಕ್ಕೊಂದು ಕತೆ ಕಟ್ಟುವ ಸಾಧ್ಯತೆಯನ್ನು ಅರಿತ ರೇಖಾ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತನ್ನ ಪತಿಗೆ 2 ಮದುವೆಯಾಗಿದೆ. ನನಗೆ ಮೋಸ ಮಾಡಲಾಗಿದೆ. ಪತಿ ಹಾಗೂ ಮಾವ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಪತಿಯನ್ನು ತೊರೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ರಾಜೇಂಜ್ರ ಹಾಗೂ ರೇಖಾ ದಂಪತಿಗೆ ನಾಲ್ಕು ಮಕ್ಕಳು. ಎರಡು ಗಂಡ ಹಾಗೂ ಎರಡು ಹೆಣ್ಣು. ಇದರಲ್ಲಿ ಮೂವರು ಮಕ್ಕಳನ್ನು ರಾಜೇಂದ್ರ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಕಿರಿಯ ಮಗಳು ಮಾತ್ರ ರೇಖಾ ಜೊತೆ ಇದ್ದಾಳೆ. ಕೆಲವರು ರಾಜೇಂದ್ರ ಭೀಸೆ ಪ್ರೇಯಸಿಯನ್ನು ಮದುವೆಯಾಗಿದ್ದಾರೆ ಅನ್ನೋ ಮತುಗಳನ್ನು ಆಡಿದ್ದರು. ಆದರೆ ಇದ್ಯಾವುದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಎಲ್ಲಾ ಮಾತುಗಳು ನಿಜವಾಗಿದೆ. ತನಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾಳೆ.ಇದೀಗ ರಾಜೇಂದ್ರ ಭೀಸೆ ಹಾಗೂ ತಂದೆ ಗಹೀನಾಥ್ ಬೀಸೆ ತಲೆಮರೆಸಿಕೊಂಡಿದ್ದಾರೆ.