
ಈಗಿನ ಬಹಳಷ್ಟು ಸೊಸೆಯಂದಿರು ಅತ್ತೆಯನ್ನು ಅತ್ತೆ ಎಂದು ಕೂಗುವುದಿಲ್ಲ, ಅಮ್ಮ ಎಂದೇ ಕರೆಯುತ್ತಾರೆ. ಆದರೆ, ಅತ್ತೆಗೆ ನಿಜಕ್ಕೂ ಅಮ್ಮನ ಸ್ಥಾನವನ್ನು ಮನಸ್ಸಲ್ಲಿ ನೀಡುತ್ತಾರೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಅತ್ತೆ ಬದಲಾಗಿದ್ದರೂ ಸೊಸೆ ಮಾತ್ರ ತನ್ನದೇ ಧೋರಣೆಯ ಮೂಲಕ ಮನೆಯಲ್ಲಿ ಸಾಕಷ್ಟು ವೈಮನಸ್ಯಗಳನ್ನು ಸೃಷ್ಟಿಸಲು ಕಾರಣವಾಗುತ್ತಾಳೆ. ಸಾಮಾನ್ಯವಾಗಿ ಅತ್ತೆ-ಸೊಸೆ ವಿಚಾರ ಅಥವಾ ವಿವಾದ ಎಂದಾಕ್ಷಣ ಅತ್ತೆಯದೇ ತಪ್ಪು ಎನ್ನುವ ಭಾವನೆ ಎಲ್ಲರಲ್ಲೂ ಮೂಡುತ್ತದೆ. ಅತ್ತೆಯೇ ಸೊಸೆಯನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಭಾವಿಸಲಾಗುತ್ತದೆ. ಆದರೆ, ಈಗಿನ ಕಾಲ ಹಾಗಿಲ್ಲ. ಬಹಳಷ್ಟು ಮನೆಗಳಲ್ಲಿ ಸೊಸೆಯಂದಿರೇ ಅತ್ತೆ-ಮಾವನನ್ನು ಹೈರಾಣ ಮಾಡುತ್ತಾರೆ. ಮನೆ ಎಂದ ಮೇಲೆ ಎಲ್ಲರಿಗೂ ಸ್ವಾತಂತ್ರ್ಯ, ಗೌರವ ಇರಬೇಕು. ಆದರೆ, ಇವರು ಹಿರಿಯರ ಮೇಲೆ ಗೌರವ, ಪ್ರೀತಿಯನ್ನೂ ತೋರದೆ ತಮ್ಮದೇ ಹಠಮಾರಿತನದಿಂದ ಮನೆಯನ್ನು ನರಕ ಮಾಡಿಬಿಡುತ್ತಾರೆ. ಕೆಲವು ಗುಣಸ್ವಭಾವದ ಹುಡುಗಿಯರು ಮದುವೆಯಾಗಿ ಮನೆಗೆ ಬಂದ ನಂತರದಲ್ಲಿ ತಮ್ಮ ಅತ್ತೆ-ಮಾವನ ಜೀವನವನ್ನು ಅಕ್ಷರಶಃ ಮೂಲೆಗುಂಪು ಮಾಡುತ್ತಾರೆ. ಸೊಸೆಯಲ್ಲಿ ಕೆಲವು ಸ್ವಭಾವವಿದ್ದರೆ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.
• ಚೂರೂ ಹೊಂದಾಣಿಕೆ (Adjustment) ಇಲ್ಲ
ಮನೆಗೆ ಬಂದ ಸೊಸೆಯೇ (Daughter in Law) ಎಲ್ಲದಕ್ಕೂ ಹೊಂದಿಕೊಂಡು ಹೋಗಬೇಕು ಎನ್ನುವ ಕಾಲ ಇದಲ್ಲ. ಆದರೆ, ಸ್ವಲ್ಪವಾದರೂ ಹೊಂದಾಣಿಕೆಯ ಭಾವನೆ ಇರಬೇಕಾಗುತ್ತದೆ. ಸ್ವಲ್ಪೇ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಲೂ ಸೊಸೆ ಸಿದ್ಧವಿಲ್ಲ ಎಂದಾದರೆ ಖಂಡಿತವಾಗಿ ಅತ್ತೆ-ಮಾವ (In Laws) ಹೈರಾಣಾಗುತ್ತಾರೆ. ಇವರು ಎಷ್ಟು ಹೊಂದಿಕೊಂಡರೂ ಮನೆಯಲ್ಲಿ ಶಾಂತಿ (Peace) ನೆಲೆಸುವುದಿಲ್ಲ.
ಸೀತಾ ಮಾತೆಯ ಈ ಗುಣಗಳೂ ಪತ್ನಿಯಲ್ಲೂ ಇರಬೇಕೆಂದು ಬಯಸ್ತಾರೆ ಪುರುಷರು
• ಮಗನನ್ನು (Son) ದೂರ ಮಾಡುವ ಸೊಸೆ
ಬಹಳಷ್ಟು ಪರಿವಾರಗಳಲ್ಲಿ (Family) ಅತ್ತೆ-ಸೊಸೆಯ ಮಧ್ಯೆ ಅದೇನೋ ವಿಚಿತ್ರವಾದ ಸ್ಪರ್ಧೆ ಇರುತ್ತದೆ. ಮಗ ತನ್ನಿಂದ ದೂರ ಹೋದರೆ ಎನ್ನುವ ಆತಂಕ ಅಮ್ಮನಿಗೆ ಇದ್ದರೆ, ಪತಿ (Husband) ಅಮ್ಮನ ಮಾತು ಕೇಳಿಕೊಂಡು ತನ್ನನ್ನು ಅನಾದರಿಸುವ ಆತಂಕ ಪತ್ನಿಗೆ (Wife) ಇರುತ್ತದೆ. ಹೀಗಾಗಿ, ಇಬ್ಬರೂ ಸ್ಪರ್ಧೆಗೆ ಬಿದ್ದವರಂತೆ ವರ್ತಿಸುತ್ತಾರೆ. ಕೆಲವು ಸೊಸೆಯಂದಿರು ಸ್ವಾರ್ಥಕ್ಕಾಗಿ ತಮ್ಮ ಪತಿಯನ್ನು ಅವರ ಪಾಲಕರಿಂದ ದೂರ ಮಾಡುತ್ತಾರೆ. ಅವರಿಂದ ದೂರ ಇರುವುದೊಂದೇ ಆಕೆಯ ಏಕೈಕ ಗುರಿಯಾಗಿರುತ್ತದೆ.
• ಗಾಸಿಪ್ (Gossip) ಮಾಡುವ ಸೊಸೆ
ಸಾಮಾನ್ಯವಾಗಿ ಗಾಸಿಪ್ ಮಾಡುವುದರಲ್ಲಿ ಅತ್ತೆಯನ್ನೇ ದೂಷಿಸುವುದು ಹೆಚ್ಚು. ಆದರೆ, ಸೊಸೆಯರಲ್ಲೂ ಈ ಗುಣ ಕಡಿಮೆ ಇರುವುದಿಲ್ಲ. ಒಬ್ಬರ ಸುದ್ದಿಯನ್ನು ಮತ್ತೊಬ್ಬರ ಬಳಿ ಹೇಳುವುದು, ಅತ್ತೆ ತನಗೇನೋ ಹೇಳಿರುವುದನ್ನು ತಿರುಚಿ ಪತಿಯ ಬಳಿ ಹೇಳುವ ಸ್ವಭಾವದ ಸೊಸೆಯಿಂದ ಮನೆ ಸದಾಕಾಲ ರಣರಂಗದಂತೆ ಇರುತ್ತದೆ. ಮನೆಯ ಶಾಂತಿ ನಾಶವಾಗುತ್ತದೆ. ಆತ್ಮೀಯತೆ (Intimacy) ದೂರವಾಗಿ, ಎಲ್ಲರೂ ಎಲ್ಲರಿಂದಲೂ ದೂರವಿರಲು ಆರಂಭಿಸುತ್ತಾರೆ.
• ಮಾನಸಿಕ (Mental) ಹಿಂಸೆ
ಹಲವು ಸೊಸೆಯಂದಿರು ತಮ್ಮ ಅತ್ತೆ-ಮಾವನೊಂದಿಗೆ ಅತ್ಯಂತ ಕಠಿಣವಾಗಿ (Harsh) ನಡೆದುಕೊಳ್ಳುತ್ತಾರೆ. ಅವರ ಬಗ್ಗೆ ಸ್ವಲ್ಪವೂ ಸಹೃದಯತೆ ತೋರುವುದಿಲ್ಲ. ಈ ಗುಣ ಅವರಿಗೆ ಭಾರೀ ಮಾನಸಿಕ ಹಿಂಸೆ ನೀಡುತ್ತದೆ. ಅವರನ್ನು ಮನೆಯಿಂದಲೂ ಹೊರಹಾಕಬಹುದು.
ಬಾಯ್ ಫ್ರೆಂಡ್ ಜೊತೆ ಓಡಿ ಹೋದ ಅಮ್ಮ, ಮನೆಯಲ್ಲಿ ಒಬ್ಬಂಟಿ ಎಂಟು ವರ್ಷದ ಈ ಹುಡುಗ!
• ಅತಿಯಾದ ಆಸೆ (Greedy)
ಮನಸ್ಸಿನಲ್ಲಿ ಅತಿಯಾದ ಮೋಹ, ಆಸೆ ತುಂಬಿಕೊಂಡಿರುವ ಹೆಣ್ಣುಮಕ್ಕಳು ಮನೆಯಲ್ಲಿ ಸೌಹಾರ್ದದ (Harmony) ವಾತಾವರಣ ನಿರ್ಮಿಸುವಲ್ಲಿ ಸೋಲುತ್ತಾರೆ. ಏಕೆಂದರೆ, ಅವರ ಗಮನವೆಲ್ಲ ಪತಿಯ ಸಂಬಳದ (Salary) ಮೇಲಿರುತ್ತದೆ. ಪತಿ ಮನೆಗಾಗಿ ಏನೂ ವೆಚ್ಚ ಮಾಡಬಾರದು, ಆತ ದುಡಿದಿದ್ದೆಲ್ಲ ತನಗೆ ಹಾಗೂ ಮಕ್ಕಳಿಗೆ ಎನ್ನುವ ಮನಸ್ಥಿತಿ ತೋರುತ್ತಾರೆ. ಸೊಸೆಯ ಈ ಗುಣದಿಂದಾಗಿ, ಎಷ್ಟೋ ಮನೆಗಳಲ್ಲಿ ವಯಸ್ಸಾದವರ ಬಳಿ ಔಷಧಕ್ಕೂ (Medicine) ಹಣವಿರುವುದಿಲ್ಲ. ಹಣ, ಚಿನ್ನದ ಬಗ್ಗೆ ಅತಿಯಾದ ಆಸೆ ಹೊಂದಿರುವ ಸೊಸೆ ಏನು ಮಾಡಲೂ ಹೇಸುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.