ಶೋಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿ ದೂರವಾಗಿರುವ ಸಾನಿಯಾ ಮಿರ್ಜಾ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೊಂದು ಹೊಸ ಫೋಟೊ ಶೇರ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರಪೂರ ಬೆಂಬಲ, ಮೆಚ್ಚುಗೆ ದೊರೆತಿದೆ.
ಶೋಯೆಬ್ ಮಲಿಕ್ ಹಾಗೂ ಸನಾ ಜಾವೇದ್ ಮದುವೆಯ ಸುದ್ದಿ ಪ್ರಕಟವಾದ ಕೆಲ ದಿನಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಈ ಫೋಟೊಕ್ಕೆ ಹಲವು ರೀತಿಯ ಭಾವನೆಗಳ ಸ್ಪರ್ಶ ನೀಡಿದ್ದು, ತಾರೆಗೆ ಬೆಂಬಲ ಸೂಚಿಸಿದ್ದಾರೆ. ಸಾನಿಯಾ ಮಿರ್ಜಾ ದಾಂಪತ್ಯ ಮುರಿದು ಬಿದ್ದಿರುವ ಸುದ್ದಿ ಅಧಿಕೃತವಾಗಿದ್ದೇ ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಮದುವೆಯ ಫೋಟೊಗಳು ರಿವೀಲ್ ಆದ ಬಳಿಕ. ಅಲ್ಲಿಯವರೆಗೂ ಸಾನಿಯಾ ಮದುವೆಯ ಬ್ರೇಕಪ್ ಸುದ್ದಿಗಳು ಹರಿದಾಡುತ್ತಿದ್ದವೇ ಹೊರತು ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಶೋಯೆಬ್ ಮಲಿಕ್ ಇದ್ದಕ್ಕಿದ್ದ ಹಾಗೆ ತಮ್ಮ ಮದುವೆಯ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಶಾಕ್ ನೀಡಿದ್ದರು. ಸಾನಿಯಾ ಮಿರ್ಜಾರಿಂದ ದೂರವಾಗಿದ್ದಾರೆ ಎನ್ನುವ ರೂಮರ್ ಬೆನ್ನಲ್ಲೇ ತಮ್ಮ ಮೂರನೇ ಮದುವೆಯ ಫೋಟೊಗಳನ್ನು ಶೇರ್ ಮಾಡುವ ಮೂಲಕ ಆ ಸುದ್ದಿ ನಿಜವಾದದ್ದು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದ್ದರು.
ಸಾನಿಯಾ ಮಿರ್ಜಾ (Sania Mirza) ಅಭಿಮಾನಿಗಳಿಗೆ (Fans) ಅವರ ನೈಜ ಸ್ಥಿತಿ ಅರಿವಾಗಿದ್ದೇ ಆಗ. ಕೆಲವು ದಿನಗಳ ಹಿಂದೆ ಸಾನಿಯಾ, “ಮದುವೆ (Marriage) ಕಷ್ಟ, ಡಿವೋರ್ಸ್ (Divorce) ಇನ್ನೂ ಕಷ್ಟ…ʼ ಎಂದೆಲ್ಲ ಸಾಲುಗಳನ್ನು ಬರೆದುಕೊಂಡಿದ್ದು ಇದೇ ಹಿನ್ನೆಲೆಯಲ್ಲಿ ಎನ್ನುವುದು ಈಗ ಸ್ಪಷ್ಟವಾಗಿದೆ. ಶೋಯೆಬ್ (Shoaib Malik) ಈ ರೀತಿ ತಮ್ಮ ಹೊಸ ಮದುವೆಯನ್ನು ಬಹಿರಂಗಪಡಿಸಿ ಶಾಕ್ ನೀಡಿದ ಬಳಿಕ ಸಾನಿಯಾ ಮಿರ್ಜಾರಿಗೆ ಭಾರತದ ಜನತೆ (People) ಭಾವನಾತ್ಮಕ ಬೆಂಬಲ (Emotional Support) ವ್ಯಕ್ತಪಡಿಸಿದ್ದರು. ಅತ್ತ ಶೋಯೆಬ್ ಮಲಿಕ್ ತಮ್ಮ ಮೂರನೇ ವಿವಾಹವನ್ನು ದೃಢಪಡಿಸುತ್ತಿರುವಂತೆಯೇ ಇತ್ತ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಇವರಿಬ್ಬರ ಮದುವೆಯ ವಿಚ್ಛೇದನವನ್ನು ಖಾತರಿ ಪಡಿಸಿದ್ದರು. ಕೆಲವು ತಿಂಗಳುಗಳ ಹಿಂದೆಯೇ ವಿಚ್ಛೇದನ ನಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.
ರಾಜ್ಯದ ರೋಹನ್ ಬೋಪಣ್ಣ ಟೆನಿಸ್ ಡಬಲ್ಸ್‌ನಲ್ಲಿ ವಿಶ್ವ ನಂಬರ್ 1..! ಶುಭ ಹಾರೈಸಿದ ಸಾನಿಯಾ ಮಿರ್ಜಾ
ಅನಮ್ ಮಿರ್ಜಾ ನೀಡಿದ್ದ ಹೇಳಿಕೆಯಲ್ಲಿ, “ಸಾನಿಯಾ ಯಾವಾಗಲೂ ತಮ್ಮ ಖಾಸಗಿ (Personal) ಜೀವನವನ್ನು ಸಾರ್ವಜನಿಕರ ಕಣ್ಣುಗಳಿಂದ ದೂರವಿಟ್ಟಿದ್ದಾರೆ. ಆದರೆ, ಈಗ ಸುದ್ದಿಯೊಂದನ್ನು ಖಚಿತಪಡಿಸುವ ಸಮಯ ಎದುರಾಗಿದೆ. ಸಾನಿಯಾ ಹಾಗೂ ಶೋಯೆಬ್ ಕೆಲ ತಿಂಗಳ ಹಿಂದೆ ಡಿವೋರ್ಸ್ ಪಡೆದಿದ್ದು, ಶೋಯೆಬ್ ನೂತನ ಜೀವನಕ್ಕೆ ಸಾನಿಯಾ ಶುಭ ಹಾರೈಸುತ್ತಾರೆ. ಆಕೆಯ ಜೀವನದ ಸೂಕ್ಷ್ಮ (Sensitive) ಸಮಯ ಇದಾಗಿದೆ. ಯಾವುದೇ ರೀತಿಯ ಕುತೂಹಲದ ದೃಷ್ಟಿಯಿಂದ ದೂರವಿರಲು ಬಯಸುತ್ತೇವೆ. ಈಗ ಆಕೆಗೆ ಖಾಸಗಿತನದ ಅಗತ್ಯವಿದೆʼ ಎಂದು ಹೇಳಿದ್ದರು.
ಇದೆಲ್ಲ ಆಗಿ ಈಗ ಎರಡು ದಿನಗಳ ಬಳಿಕ, ಸಾನಿಯಾ ಮಿರ್ಜಾ ಕನ್ನಡಿಯಲ್ಲಿ (Mirror) ಕಾಣುವ ತಮ್ಮ ಪ್ರತಿಬಿಂಬದ (Reflect) ಭಾವಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕನ್ನಡಿಯನ್ನು ನೋಡುತ್ತ ನಿಂತಿರುವ ಫೋಟೊ ಹಲವು ಭಾವನೆಗಳನ್ನು ಬಿಂಬಿಸುವಂತಿದೆ. ಅಭಿಮಾನಿಗಳಂತೂ ಇದಕ್ಕೆ ಹಲವು ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಅಪಾರ ಪ್ರೀತಿ ವ್ಯಕ್ತಪಡಿಸಿದ್ದಾರೆ. ಒಬ್ಬರು, ' ಪ್ರತಿಬಿಂಬ ಎರಡು ಸಂಗತಿಗಳನ್ನು ಹೇಳುತ್ತಿದೆ. ಒಂದು, ಉನ್ನತವಾದದ್ದು (Class) ಮತ್ತು ಇನ್ನೊಂದು ಗೌರವ (Respect)ʼ ಎಂದು ಹೇಳಿದ್ದರೆ, ಮತ್ತೊಬ್ಬರು, “ಶಕ್ತಿ ಮತ್ತು ಅನುಗ್ರಹ ಎರಡೂ ನಿಮ್ಮಲ್ಲಿ ವ್ಯಕ್ತಿಗತವಾಗಿವೆ. ನಿಮ್ಮ ಸ್ಥಿರತೆ (Resilience) ನಿಜಕ್ಕೂ ಅಭಿನಂದನೆಗೆ ಅರ್ಹವಾದದ್ದು. ಸಾನಿಯಾ, ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ಹೆಚ್ಚಿನ ಸಾಮರ್ಥ್ಯ ಮತ್ತು ಸಂತಸ (Happiness) ದೊರೆಯಲಿ ಎಂದು ಬಯಸುತ್ತೇನೆʼ ಎಂದು ಹೇಳಿದ್ದಾರೆ.
'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋಡಿ
ಶೋಯೆಬ್ ಮಲಿಕ್ ಗೆ ಸನಾ ಜಾವೇದ್ (Sana Javed) ಜತೆಗಿನ ಮದುವೆ ಮೂರನೆಯದ್ದು. ಸಾನಿಯಾ ಅವರ ಎರಡನೇ ಪತ್ನಿಯಾಗಿದ್ದರು. ಮೊದಲ ಪತ್ನಿಯ ಹೆಸರು ಆಯೇಷಾ ಸಿದ್ದಿಖಿ. ಈ ನಡುವೆ, ಶೋಯೆಬ್ ಹೊಸ ಪತ್ನಿ (Wife) ಸನಾ ಜಾವೇದ್ ತಮ್ಮ ಹೆಸರನ್ನು ಸನಾ ಶೋಯೆಬ್ ಮಲಿಕ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ.