ತಾವು ಹೋದಲ್ಲೆಲ್ಲ ಉತ್ತಮ ಭಾವನೆ ಮೂಡಿಸುವ, ಸಕಾರಾತ್ಮಕ ಪ್ರಭಾವ ಬೀರುವ ಜನರನ್ನು ನೀವು ಕಂಡಿರಬಹುದು. ಅವರಲ್ಲಿ ಅನೇಕ ಉತ್ತಮ ಗುಣಗಳು ಅಡಕವಾಗಿರುತ್ತವೆ. ಕರುಣೆ ಜತೆಗೆ, ಜೀವನವನ್ನು ಬಂದಂತೆ ಸ್ವೀಕರಿಸುವ ಬಹುದೊಡ್ಡ ಗುಣ ಅವರಲ್ಲಿರುತ್ತದೆ. ಹೀಗಾಗಿಯೇ, ಅವರ ಒಡನಾಟ ಎಂದಿಗೂ ಹಿತವಾದ ಭಾವನೆಯನ್ನೇ ಮೂಡಿಸುತ್ತದೆ.
ಕೆಲ ಜನರೊಂದಿಗೆ ಒಡನಾಡಿದ ಬಳಿಕ ಮನದಲ್ಲಿ ಹಿತವಾದ ಭಾವನೆ ಮೂಡುತ್ತದೆ. ಅವರ ಕುರಿತು ಗೌರವ ಮೂಡುವ ಜತೆಗೆ, ಅವರಲ್ಲಿ ಏನೋ ಒಂದು ರೀತಿಯ ಎನರ್ಜಿ ಇರುವಂತೆ ಭಾಸವಾಗುತ್ತದೆ. ಅವರು ಎಲ್ಲೇ ಹೋದರೂ ಅಂಥದ್ದೊಂದು ಪ್ರಭಾವ ಬೀರುತ್ತಾರೆ. ತಾವಿರುವ ಕಡೆಯಲ್ಲಿ ಅತ್ಯುತ್ತಮ ವಾತಾವರಣ ನಿರ್ಮಿಸುತ್ತಾರೆ. ಅವರಿರುವ ಕಡೆಯಲ್ಲಿ ನೆಗೆಟಿವ್ ಭಾವನೆ, ಕೆಡುಕಿನ ಧೋರಣೆಗಳಿಗೆ ಅವಕಾಶವೇ ಇರುವುದಿಲ್ಲ. ಯಾವತ್ತೂ ಉತ್ತಮ ಕಂಪನಗಳು ಮೂಡುತ್ತವೆ. ನೀವು ಗುರುತಿಸಬಹುದು, ಅವರು ಯಾವತ್ತೂ ಆಶಾವಾದಿಗಳಾಗಿರುತ್ತಾರೆ. ಹೀಗಾಗಿ, ಅವರ ಒಡನಾಟ ಖುಷಿ ಎನಿಸುತ್ತದೆ. ಜೀವನದ ಸಕಾರಾತ್ಮಕ ಅಂಶಗಳನ್ನೇ ಅವರು ಫೋಕಸ್ ಮಾಡುವುದರಿಂದ ಅವರಲ್ಲಿ ಧನಾತ್ಮಕ ಅಂಶ ತುಂಬಿರುತ್ತದೆ. ನಿನ್ನೆ ಏನಾಯಿತು ಎಂದು ಅವರಿಗೆ ಬೇಕಾಗಿರುವುದಿಲ್ಲ. ಇಂದು ಹೇಗಿರುತ್ತೇವೆ ಎನ್ನುವುದರ ಬಗ್ಗೆ ಆದ್ಯತೆ ನೀಡುತ್ತಾರೆ. ಕೆಟ್ಟ ಸನ್ನಿವೇಶಗಳಲ್ಲೂ ಉತ್ತಮ ಅಂಶವನ್ನೇ ಕಾಣುವ ಜತೆಗೆ, ಮುಂದಿನ ದಿನಗಳ ಬಗ್ಗೆ ಆಶಾವಾದಿಯಾಗಿರುತ್ತಾರೆ. ಇದೊಂದೇ ಗುಣವಲ್ಲ, ಇನ್ನೂ ಅನೇಕ ಗುಣಗಳು ಇವರಲ್ಲಿರುತ್ತವೆ.
• ಮುಕ್ತ ಮನಸ್ಸು (Open Mind)
ಮುಕ್ತ ಮನಸ್ಸಿಗೂ ಅವರು ಉತ್ತಮ ಪ್ರಭಾವ (Positive Effect) ಬೀರುವುದಕ್ಕೂ ಏನು ಸಂಬಂಧ ಎನ್ನಿಸಬಹುದು. ಮುಕ್ತ ಮನಸ್ಸನ್ನು ಹೊಂದಿದ್ದಾಗ ಜನರು ತಮ್ಮದೇ ನ್ಯಾಯದ (Judgement) ಧೋರಣೆಯಿಂದ ಹೊರತಾಗಿರುತ್ತಾರೆ ಹಾಗೂ ಎಲ್ಲ ರೀತಿಯ ವಿಭಿನ್ನತೆಗಳನ್ನು ಸ್ವೀಕರಿಸುವ ಬುದ್ಧಿ ಹೊಂದಿರುತ್ತಾರೆ. ಹೀಗಾಗಿ, ನಿಮ್ಮ ಹಿನ್ನೆಲೆ ಏನು, ಎಲ್ಲಿಂದ ಬಂದಿದ್ದೀರಿ ಎನ್ನುವುದೆಲ್ಲ ಇವರಿಗೆ ಮುಖ್ಯವಾಗುವುದಿಲ್ಲ. ನಿಮ್ಮ ಅಭಿಪ್ರಾಯ, ಪ್ರತಿಭೆಗೆ (Talent) ಮಾತ್ರ ಬೆಲೆ ನೀಡುತ್ತಾರೆ. ಜತೆಗೆ, ಮುಕ್ತ ಮನಸ್ಸಿನ ಜನ ಅತ್ಯುತ್ತಮ ವಿನೋದ (Fun) ಬುದ್ಧಿಯನ್ನೂ ಹೊಂದಿರುತ್ತಾರೆ.
ಪ್ರಣಯಕ್ಕೆ ತೊಂದರೆಯಾಗುತ್ತೆ ಅನ್ನೋ ಕಾರಣಕ್ಕೆ ಮಕ್ಕಳು ಬೇಡ ಅಂತಾರಂತೆ ಈ ಜನರೇಷನ್ ಜೋಡಿ!
• ತಮ್ಮನ್ನು ಅತೀ ಗಂಭೀರವಾಗಿ (Serious) ಪರಿಗಣಿಸೋದಿಲ್ಲ
ಬಾಲ್ಯದ ದಿನಗಳನ್ನು ಒಮ್ಮೆ ನೆನೆಪಿಸಿಕೊಳ್ಳಿ. ಯಾವ ಶಿಕ್ಷಕರು ನಿಮಗೆ ಹೆಚ್ಚು ಇಷ್ಟವಾಗಿದ್ದರು? ಶಿಸ್ತಿನ ಶಿಕ್ಷಕರೋ ಅಥವಾ ಖುಷಿಯಿಂದ ನಿಮ್ಮೊಂದಿಗೆ ನಿಮ್ಮಂತೆ ಒಡನಾಡಿದ ಶಿಕ್ಷಕರೋ? ತಮ್ಮನ್ನು ಅತಿ ಗಂಭೀರವಾಗಿ ಪರಿಗಣಿಸದ ಜನ ಅಭಿವೃದ್ಧಿಯನ್ನು (Development) ಬಯಸುತ್ತಾರೆ. ಹಳೆದ ಶಿಷ್ಟಾಚಾರಗಳಲ್ಲಿ ಮುಳುಗಿರುವುದಿಲ್ಲ ಹಾಗೂ ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠ ಎನ್ನುವ ಭಾವನೆಯೂ ಇವರಲ್ಲಿರುವುದಿಲ್ಲ.
• ಜೀವನವನ್ನು ಸಂಪೂರ್ಣವಾಗಿ ಅನುಭವಿಸುವ ಬಯಕೆ
ಸಿಗುವುದೊಂದೇ ಜೀವನ (Life), ಅದನ್ನು ಖುಷಿಯಾಗಿ, ಸಂಪೂರ್ಣವಾಗಿ ಅನುಭವಿಸು ಎನ್ನುವ ಥಿಯರಿ ಇವರದ್ದು. ಹೊಸ ಅನುಭವಗಳಿಗೆ, ಸಾಹಸಗಳಿಗೆ ಇವರು ಸದಾ ಮುಕ್ತರಾಗಿರುತ್ತಾರೆ. ತಮ್ಮ ಹವ್ಯಾಸಗಳನ್ನು (Habit) ಅನುಸರಿಸುತ್ತಾರೆ. ಸಂಬಂಧಗಳನ್ನು (relationship) ಚೆನ್ನಾಗಿಟ್ಟುಕೊಳ್ಳುತ್ತಾರೆ. ತಮ್ಮ ಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ. ಜೀವನದ ಪ್ರತಿ ಕ್ಷಣವನ್ನೂ ಎಂಜಾಯ್ (Enjoy) ಮಾಡುತ್ತಾರೆ.
Relationship Tips: ಕೋಪದಲ್ಲಾದರೂ ಇಂಥ ಮಾತುಗಳನ್ನ ಎಂದಿಗೂ ಆಡ್ಬೇಡಿ!
• ಕೃತಜ್ಞತಾ ಭಾವನೆ (Gratitude)
ಉತ್ತಮ ವೈಬ್ರೇಷನ್ (Vibration) ಹೊಂದಿರುವ ಜನರಲ್ಲಿ ಕೃತಜ್ಞತಾ ಭಾವನೆ ಇರುತ್ತದೆ. ಈ ಭಾವನೆ ಇರುವಾಗ ಜೀವನವನ್ನು ವಿಸ್ತಾರವಾದ ದೃಷ್ಟಿಕೋನದಲ್ಲಿ ನೋಡಲು ಸಾಧ್ಯವಾಗುತ್ತದೆ. ಅವರಿಗೂ ಕಷ್ಟಗಳು ಬರುತ್ತವೆ, ಅವರೂ ಇತರರಂತೆ ಉದ್ಯೋಗ (Job) ಕಳೆದುಕೊಳ್ಳುತ್ತಾರೆ, ಅನಾರೋಗ್ಯ ಕಾಡುತ್ತದೆ. ಆದರೂ ಅವರು ನಕಾರಾತ್ಮಕ (Negative) ಭಾವನೆಯಲ್ಲಿ ಮುಳುಗುವುದಿಲ್ಲ.
• ಹರಿವು (Flow) ಬಂದಂತೆ ಸಾಗುವ ಜನ
ಎಲ್ಲೇ ಇದ್ದರೂ ಅಲ್ಲೊಂದು ಉತ್ತಮ ವೈಬ್ರೇಷನ್ ಮೂಡಿಸುವ ಜನರಲ್ಲಿ ಹರಿವು ಬಂದಂತೆ ಸಲಿಲವಾಗಿ ಸಾಗುವ ಮನೋಧರ್ಮವೂ ಇರುತ್ತದೆ. ಇವರು ಬದಲಾವಣೆಯನ್ನು (Change) ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಅಂದುಕೊಂಡಿದ್ದು ಆಗದಿದ್ದರೆ ಮತ್ತೊಂದು ರೀತಿಯಲ್ಲಿ ಪ್ರಯತ್ನಿಸುತ್ತಾರೆಯೇ ಹೊರತು ಕೈಚೆಲ್ಲುವುದಿಲ್ಲ. ಇಂಥವರ ಜತೆಗಿರುವುದು ಎಂದಿಗೂ ಸುಲಭವೆನಿಸುತ್ತದೆ. ಅಂದುಕೊಂಡಿದ್ದು ಆಗದೇ ಇರುವಾಗ ಮೈ ಪರಚಿಕೊಳ್ಳುವ ಜನರ ಒಡನಾಟ ಕಷ್ಟ. ಇವರು ಸುಲಭವಾಗಿ ಬೇರೊಬ್ಬರನ್ನು ದೂರುತ್ತಾರೆ. ಆದರೆ, ಉತ್ತಮ ಜನರು ಬೇರೆಯವರ ಮೇಲೆ ದೂಷಣೆ (Blame) ಮಾಡುವ ಪ್ರವೃತ್ತಿ ಹೊಂದಿರುವುದಿಲ್ಲ.