ದಾಂಪತ್ಯ ಸಂಬಂಧ ಬಲಗೊಳ್ಳಲು ನಿರಂತರ ಪ್ರಯತ್ನ ಅಗತ್ಯ. ಪತಿ – ಪತ್ನಿ ಇಬ್ಬರು ಹತ್ತಿರವಾದಷ್ಟು, ಅರ್ಥವಾದಷ್ಟು ಸಂಬಂಧ ಸುಖವಾಗಿರುತ್ತದೆ. ದಂಪತಿ ಮಧ್ಯೆ ಅನ್ಯೋನ್ಯತೆ ಇದ್ದಲ್ಲಿ ವಿಚ್ಛೇದನಕ್ಕೆ ಅವಕಾಶ ಸಿಗೋದಿಲ್ಲ
ಇಂಟಿಮೆಸಿ ಅನ್ಯೋನ್ಯತೆ ಎಂಬುದನ್ನು ಹೆಚ್ಚಿನ ಜನರು ಲೈಂಗಿಕ ಚಟುವಟಿಕೆ, ಪ್ರಣಯ ಎಂದು ಭಾವಿಸಿದ್ದಾರೆ. ಆದ್ರೆ ಅನ್ಯೋನ್ಯತೆ ಅರ್ಥ ಇದಕ್ಕಿಂತ ಆಳವಾಗಿದೆ. ಸಂಗಾತಿಯ ಹೊರತಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಬಹುದು. ಅನ್ಯೋನ್ಯತೆ ಎಂಬುದು ಇನ್ನೊಬ್ಬ ವ್ಯಕ್ತಿಯೊಂದಿಗೆ ನಂಬಿಕೆ, ಸ್ವೀಕಾರ ಮತ್ತು ಭಾವನಾತ್ಮಕ ಸಂಪರ್ಕವನ್ನು ಒಳಗೊಂಡಿರುತ್ತದೆ. ಆರೋಗ್ಯಕರ ಲೈಂಗಿಕ ಸಂಬಂಧಕ್ಕೆ ಇಬ್ಬರು ವ್ಯಕ್ತಿಗಳ ನಡುವಿನ ಅನ್ಯೋನ್ಯತೆ ಮುಖ್ಯ. ನಾವಿಂದು ಸಂಗಾತಿ ಮಧ್ಯೆ ಅನ್ಯೋನ್ಯತೆ ಹೇಗಿರಬೇಕು ಎಂಬುದನ್ನು ಹೇಳ್ತೇವೆ.
ಅನ್ಯೋನ್ಯತೆ (Intimacy) ಯಿಂದಾಗುವ ಲಾಭ : ನಿಮ್ಮ ಸಂಗಾತಿ, ಸ್ನೇಹಿತರು, ಕುಟುಂಬಸ್ಥರ ಜೊತೆ ನೀವು ಅನ್ಯೋನ್ಯತೆ ಬೆಳೆಸಿಕೊಂಡ್ರೆ ಒತ್ತಡ ಮತ್ತು ನಕಾರಾತ್ಮಕ (Negative) ಭಾವನೆ ಕಡಿಮೆಯಾಗುತ್ತದೆ. ಅದ್ರ ವಿರುದ್ಧ ಹೋರಾಡುವ ಶಕ್ತಿ ನಿಮಗೆ ಸಿಗುತ್ತದೆ. ನಿಮ್ಮನ್ನು ಯಾರಾದ್ರೂ ಪ್ರೀತಿ (Love) ಮಾಡಿದ್ರೆ ಅಥವಾ ನೀವು ಪ್ರೀತಿಯನ್ನು ತೋರಿಸಿದ್ರೆ, ಭಾವನಾತ್ಮಕ ಬೆಂಬಲ ನಿಮಗೆ ಸಿಕ್ಕಿದೆ, ನಿಮ್ಮ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯದಲ್ಲಿ ಸುಧಾರಣೆ ಕಾಣಿಸುತ್ತದೆ.
ಯಾರು ಹೆಚ್ಚು ಮಹತ್ವಾಕಾಂಕ್ಷಿಗಳು? ನಿಮ್ಮ ಜನ್ಮರಾಶಿ ಪ್ರಕಾರ ಚೆಕ್ ಮಾಡಿ!
ನಿಮ್ಮ ಆಪ್ತರ ಬಳಿ ಕುಳಿತಾಗ, ಅವರು ಸ್ಪರ್ಶಿಸಿದಾಗ, ಅವರ ಜೊತೆ ಮಾತನಾಡಿದಾಗ ನಿಮಗೆ ಹಿತವೆನ್ನಿಸುತ್ತದೆ. ಆ ಸಂದರ್ಭದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ಒತ್ತಡ ಕಡಿಮೆ ಮಾಡುವ ಜೊತೆಗೆ ನೆಮ್ಮದಿ ನೀಡುತ್ತದೆ. ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆ ಬಲವಾದಂತೆ ಡೋಪಮೈನ್‌ನಂತಹ ಸಂತೋಷದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ನಿಮ್ಮನ್ನು ಆರೋಗ್ಯವಾಗಿಡುತ್ತದೆ.
ಇನ್ನು ಲೈಂಗಿಕ ಸಂಬಂಧದಲ್ಲಿ ಅನ್ಯೋನ್ಯತೆ ಇದ್ರೆ ಇದು ನಿಮ್ಮಿಬ್ಬರ ಸಂಬಂಧ ಸುಧಾರಿಸುತ್ತದೆ. ಸಂಗಾತಿ ಜೊತೆ ನಿಮ್ಮ ಆಸೆಯನ್ನು ನೀವು ಯಾವುದೇ ಮುಜುಗರವಿಲ್ಲದೆ ಹೇಳಬಹುದು. ಪರಾಕಾಷ್ಠೆ ತಲುಪಲು ಕೂಡ ಇದು ನೆರವಾಗುತ್ತದೆ.
ಅನ್ಯೋನ್ಯತೆ ಕಾಪಾಡಿಕೊಳ್ಳೋದು ಹೇಗೆ? :
ಸ್ವೀಕಾರದ ಭಾವನೆ (Feeling of Acceptance): ನಿಮ್ಮ ದಾಂಪತ್ಯ ಹಾಗೂ ಲೈಂಗಿಕ ಜೀವನದಲ್ಲಿ ಅನ್ಯೋನ್ಯತೆ ಅತ್ಯಗತ್ಯ. ಹಾಗಾಗಿ ನೀವು ಸಂಗಾತಿಯನ್ನು ಅವರ ಒಳ್ಳೆಯತನ ಹಾಗೂ ತಪ್ಪಿನ ಜೊತೆ ಸ್ವೀಕರಿಸಬೇಕು. ಅವರೂ ನಿಮ್ಮನ್ನು ನಿಮ್ಮ ತಪ್ಪು ಹಾಗೂ ಸರಿ ಜೊತೆ ಒಪ್ಪಿಕೊಂಡಾಗ ಅನ್ಯೋನ್ಯತೆ ಬಲಪಡೆಯುತ್ತದೆ.
ಕಾಮಾಸಕ್ತಿ ಹೆಚ್ಚು, ಕಡಿಮೆಯಾಗೋದ್ರಲ್ಲೇ ತಿಳೀಬಹುದು ಆರೋಗ್ಯ ಸಮಸ್ಯೆ
ಸಂಗಾತಿ (Companion) ಜೊತೆ ಮುಚ್ಚುಮರೆ ಬೇಡ : ಸಂಗಾತಿಯ ನೈಜತೆ ಮುಖ್ಯವಾಗುತ್ತದೆ. ಸಂಗಾತಿ ಮಧ್ಯೆ ಮುಚ್ಚುಮರೆಯಿದ್ರೆ ಅನ್ಯೋನ್ಯತೆ ಕಾಪಾಡೋದು ಕಷ್ಟವಾಗುತ್ತದೆ. ಇಬ್ಬರು ತೆರೆದ ಮನಸ್ಸಿನವರಾಗಿರಬೇಕು. ನೀವು ಹೇಗೆ ಎಂಬುದು ನಿಮ್ಮ ಸಂಗಾತಿಗೆ ತಿಳಿದಿರಬೇಕು. ಸಂಗಾತಿ ಜೊತೆ ನೀವು ನಾಟಕವಾಡ್ತಿದ್ದರೆ ಅದು ಬಹುಕಾಲ ನಡೆಯೋದಿಲ್ಲ. ಇಬ್ಬರನ್ನು ಉಸಿರುಗಟ್ಟಿಸಲು ಶುರುವಾಗುತ್ತದೆ. ನೀವು ಬೇರೆಯವರ ಜೊತೆ ಹೇಗೆ ಇರಿ, ನಿಮ್ಮ ಸಂಗಾತಿ ಜೊತೆ ಮಾತ್ರ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ವ್ಯಕ್ತಪಡಿಸಿ.
ಆರೋಗ್ಯಕರ ಮಾತುಕತೆ (Healthy Conversation) : ನಿಮ್ಮ ಭಾವನೆಗಳನ್ನು ನೀವು ಮನಸ್ಸಿನಲ್ಲೇ ಇಟ್ಟುಕೊಂಡ್ರೆ ನಿಮ್ಮ ಮುಂದಿರುವವರಿಗೆ ಇದು ತಿಳಿಯುವುದಿಲ್ಲ. ಮಾತಿನ ಮೂಲಕ ನಿಮ್ಮ ಭಾವನೆ ಹಂಚಿಕೊಳ್ಳಬೇಕು. ಮಾತು ನಿಮ್ಮಿಬ್ಬರ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಷ್ಟೂ ನೀವು ಹತ್ತಿರವಾಗುತ್ತೀರಿ ಎಂಬುದು ನೆನಪಿರಲಿ.
ಫೋರ್ ಪ್ಲೇ ಮುಖ್ಯ (Significance of Fore Play) : ಸಂಗಾತಿಯೊಂದಿಗೆ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ಮುದ್ದಾಡುವುದು ಮತ್ತು ಫೋರ್‌ಪ್ಲೇಯಂತಹ ವಿಷಯಗಳು ಬಹಳ ಮುಖ್ಯ. ಹೀಗೆ ಮಾಡುವುದರಿಂದ ನೀವು ಒಬ್ಬರಿಗೊಬ್ಬರು ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೀರಿ ಎಂಬುದು ನಿಮಗೆ ಗೊತ್ತಾಗುತ್ತದೆ. ಇದು ನಿಮ್ಮ ಲೈಂಗಿಕ ಸಂಬಂಧವನ್ನು ಸುಧಾರಿಸುತ್ತದೆ.
ಇಬ್ಬರ ಮಧ್ಯೆ ಇರಲಿ ಸ್ಪೇಸ್ (Space) : ಸಂಬಂಧ ಗಟ್ಟಿಯಾಗ್ಬೇಕೆಂದ್ರೆ ಪರಸ್ಪರ ಸ್ಪೇಸ್ ನೀಡುವುದು ಮುಖ್ಯ. 24 ಗಂಟೆ ಸಂಗಾತಿ ನಿಮ್ಮ ಜೊತೆ ನಿಮ್ಮವರಾಗಿರಬೇಕು ಎಂಬುದು ತಪ್ಪು. ಅವರಿಗೆ ವೈಯಕ್ತಿಕ ಜಾಗ ನೀಡಿದಾಗ, ಅವರ ಆಸೆ – ಆಕಾಂಕ್ಷೆಗೆ ಮಹತ್ವ ನೀಡಿದಾಗ ಸಂಬಂಧ ಮತ್ತಷ್ಟು ಬಲಪಡೆಯುತ್ತದೆ.