Parenting Tips: ಮಗು ರಾತ್ರಿಯಾದ್ರೂ ಮಲಗ್ತಿಲ್ವಾ ? ಇದೇ ಕಾರಣಕ್ಕೆ ಆಗಿರ್ಬೋದು

By Suvarna NewsFirst Published Feb 8, 2023, 4:46 PM IST
Highlights

ಮಕ್ಕಳಿಗೆ ನಿದ್ರೆ ಬಹಳ ಮುಖ್ಯ. ಆದ್ರೆ ಕೆಲ ಮಕ್ಕಳು ರಾತ್ರಿಯೂ ಎದ್ದಿರುತ್ತಾರೆ. ಇದು ಅವರ ಆರೋಗ್ಯ ಹಾಳು ಮಾಡುತ್ತದೆ. ನಿಮ್ಮ ಮಕ್ಕಳೂ ಸರಿಯಾಗಿ ಮಲಗ್ತಿಲ್ಲವೆಂದ್ರೆ ಅದಕ್ಕೆ ಕಾರಣ ಹಾಗೂ ಪರಿಹಾರ ತಿಳಿದುಕೊಳ್ಳಿ.
 

ಮಕ್ಕಳು ದಿನಕ್ಕೆ ಹನ್ನೆರಡರಿಂದ ಹದಿನಾಲ್ಕು ತಾಸು ನಿದ್ದೆ ಮಾಡ್ಬೇಕು ಅಂತಾರೆ. ಹಾಗೆ ಮಾಡಿದ್ರೆ ಮಾತ್ರ ಅವು ದಿನವಿಡೀ ಲವಲವಿಕೆಯಿಂದ ಇರುತ್ತವೆ. ಹಾಗೇ ಅವರ ಆರೋಗ್ಯ, ಇಮ್ಯುನಿಟಿ ಕೂಡ ಒಳ್ಳೆಯ ನಿದ್ದೆಯನ್ನೇ ಅವಲಂಬಿಸಿರುತ್ತೆ. ಆದರೆ ಕೆಲವು ಮಕ್ಕಳು ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡುವುದೇ ಇಲ್ಲ. ಇದರಿಂದ ಅವರ ಶರೀರದಲ್ಲಿ ಆಲಸ್ಯ ಹೆಚ್ಚುತ್ತದೆ. ಇದರಿಂದ ಅವರ ಮಾನಸಿಕ ಮತ್ತು ಶಾರೀರಿಕ ಸ್ವಾಸ್ತ್ಯಕೂಡ ಹದಗೆಡುತ್ತದೆ. ರಾತ್ರಿ ಸಮಯದಲ್ಲಿ ಮಕ್ಕಳು ಚೆನ್ನಾಗಿ ನಿದ್ದೆ ಮಾಡದೇ ಇರಲು ಹಲವು ಕಾರಣಗಳಿವೆ. ಹಾಗೆಯೇ ಆ ಸಮಸ್ಯೆಗೆ ಪರಿಹಾರ ಕೂಡ ಇದೆ. ಅದರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

ಹೆಚ್ಚು ಔಷಧಿ (Medicine) ಸೇವನೆ ನಿದ್ರಾಹೀನತೆಗೆ ಕಾರಣ : ಮಕ್ಕಳ (Children ) ಆರೋಗ್ಯದಲ್ಲಿ ಏರುಪೇರುಗಳು ಇದ್ದೇ ಇರುತ್ತೆ. ಮಕ್ಕಳು ಹುಶಾರು ತಪ್ಪಿದಾಗ ಹೆತ್ತವರು ಔಷಧಿ, ಮಾತ್ರೆಗಳನ್ನು ಕೊಡುತ್ತಾರೆ. ಕೆಲವರು ವೈದ್ಯರನ್ನು ಕೂಡ ಸಂಪರ್ಕಿಸದೇ ಮನೆಯಲ್ಲೇ ಇರುವ ಯಾವುದೋ ಔಷಧಿಯನ್ನು ಕೊಡುತ್ತಾರೆ. ಹೆಚ್ಚು ಹೆಚ್ಚು ಔಷಧಗಳನ್ನು ಸೇವಿಸುವುದೂ ಕೂಡ ಮಕ್ಕಳ ನಿದ್ದೆಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಮಕ್ಕಳಿಗೆ ಯಾವುದೇ ಔಷಧವನ್ನು ಕೊಡುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಮಕ್ಕಳಿಗೆ ಯಾವುದೋ ಖಾಯಿಲೆ ಅಥವಾ ಅಲರ್ಜಿಯ ಸಮಸ್ಯೆಯಿಂದ ಔಷಧ ನೀಡುತ್ತಿದ್ದೀರಿ ಎಂದಾದರೆ ಔಷಧಗಳ ನಡುವೆ ಅಂತರವನ್ನು ಕಾಯ್ದುಕೊಳ್ಳಿ. ಒಮ್ಮೆಲೇ ಎಲ್ಲ ಔಷಧವನ್ನೂ ಕೊಡಬೇಡಿ.

ಇದೆಂಥಾ ವಿಚಿತ್ರ ಸಂಪ್ರದಾಯ, ಕುಟುಂಬದ ಎಲ್ಲಾ ಸಹೋದರರು ಒಬ್ಬಳನ್ನೇ ಮದ್ವೆಯಾಗ್ತಾರೆ!

ಸ್ವಚ್ಛತೆ (Clean)ಯ ಸಮಸ್ಯೆ :  ಪುಟ್ಟ ಮಕ್ಕಳು ಪದೇ ಪದೇ ಹಾಸಿಗೆಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಹಾಗಾದಾಗ ಕಿರಿಕಿರಿಗೆ ಒಳಗಾಗುತ್ತವೆ. ಹಾಗಾಗಿ ಮಕ್ಕಳ ಬಟ್ಟೆ ಮತ್ತು ಹಾಸಿಗೆಯ ಬಟ್ಟೆಗಳನ್ನು ಬದಲಿಸುತ್ತಿರಬೇಕು. ರಾತ್ರಿಯ ಸಮಯದಲ್ಲಿ ಮಕ್ಕಳಿಗೆ ಹಿತವೆನಿಸುವ ಬಟ್ಟೆಯನ್ನೇ ಹಾಕಬೇಕು. ಮಕ್ಕಳ ಕೋಣೆ ಅಥವಾ ಸುತ್ತಲಿನ ಪರಿಸರ ಕೊಳಕಾಗಿದ್ದರೂ ಕೂಡ ಅವು ಸರಿಯಾಗಿ ನಿದ್ದೆಮಾಡದೇ ಇರಬಹುದು. ಅದಕ್ಕಾಗಿ ಸುತ್ತಲ ಪರಿಸರ, ಮಕ್ಕಳ ಕೋಣೆ ಕೂಡ ಚೊಕ್ಕಟವಾಗಿರಬೇಕು.

ಸರಿಯಾದ ರುಟಿನ್ ಸೆಟ್ ಮಾಡಿ : ಮಕ್ಕಳು ಒಂದು ಹಂತಕ್ಕೆ ಬೆಳೆದು ದೊಡ್ಡವರಾಗುವವರೆಗೂ ಅವರ ಜವಾಬ್ದಾರಿಗಳನ್ನು ನಾವೇ ತೆಗೆದುಕೊಳ್ಳಬೇಕು. ಅವರ ಸ್ನಾನ, ತಿಂಡಿ, ಊಟ, ನಿದ್ದೆಯ ದಿನಚರಿಯನ್ನು ಸರಿಯಾಗಿ ಮಾಡಬೇಕು. ಮಕ್ಕಳು ಚಿಕ್ಕವರಿರುವಾಗ ಪದೇ ಪದೇ ನಿದ್ದೆ ಮಾಡುತ್ತಾರೆ. ಅವರು ಸ್ವಲ್ಪ ದೊಡ್ಡವರಾದ ಮೇಲೆ ಅವರ ನಿದ್ದೆಯ ಸಮಯವನ್ನು ಕೂಡ ನಿಧಾನವಾಗಿ ನಾವೇ ಸೆಟ್ ಮಾಡಬೇಕು. ಅವರ ಮಲಗುವ ಸಮಯ ಸರಿಯಾದಾಗ ಮಾತ್ರ ಅವರ ಅನೇಕ ಸಮಸ್ಯೆಗಳು ದೂರವಾಗುತ್ತವೆ. ರಾತ್ರಿ ಹೊತ್ತು ಮಕ್ಕಳಿಗೆ ಬ್ರಶ್ ಮಾಡುವುದು ಮತ್ತು ವಾಕ್ ಮಾಡುವುದನ್ನು ಕೂಡ ಕಲಿಸಬೇಕು. ಮಕ್ಕಳು ಮಲಗುವ 3-4 ಗಂಟೆ ಮುನ್ನ ಅವರಿಗೆ ಊಟ ಮಾಡಿಸಬೇಕು. ಇದರಿಂದ ಮಕ್ಕಳಲ್ಲಿ ಹೊಟ್ಟೆ ನೋವು, ಗ್ಯಾಸ್ ಮುಂತಾದ ಸಮಸ್ಯೆಗಳು ಕಾಣಿಸುವುದಿಲ್ಲ.

ಒತ್ತಡದ ಸಮಸ್ಯೆ ಇರಬಹುದು : ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದಾಗ ಅವರ ಮೇಲೆ ಕೆಲವು ಒತ್ತಡಗಳು ಬೀಳಬಹುದು. ಮಾನಸಿಕ ಒತ್ತಡದಿಂದಲೂ ಮಕ್ಕಳು ಸರಿಯಾಗಿ ನಿದ್ರೆ ಮಾಡದಿರಬಹುದು. ನಿದ್ರೆಯ ಸಮಸ್ಯೆ ತುಂಬ ಹೆಚ್ಚಾದಾಗ ನೀವು ವೈದ್ಯರನ್ನು ಕಾಣಬಹುದು ಅಥವಾ ಮಕ್ಕಳಿಗೆ ಡೀಪ್ ಬ್ರೀದಿಂಗ್ ವ್ಯಾಯಾಮ ಮಾಡಿಸಬಹುದು.

Personality Tips: ಕೆಲವರನ್ನ ಬದಲಾಯ್ಸೋಕೆ ಸಾಧ್ಯನೇ ಇಲ್ಲ, ಅದ್ಯಾಕೆ ಗೊತ್ತಾ?

ಅತಿಯಾದ ಟಿವಿ, ಮೊಬೈಲ್ ವೀಕ್ಷಣೆ : ಟಿವಿ ಮೊಬೈಲ್ ಗಳನ್ನು ಬಹಳ ಸಮಯ ನೋಡುವುದರಿಂದ ಕಣ್ಣಿನ ಮೇಲೆ ಕೆಟ್ಟ ಪ್ರಭಾವ ಬೀರಿ ಅದರಿಂದ ನಿದ್ರೆಯ ಸಮಸ್ಯೆ ಆರಂಭವಾಗಬಹುದು. ಹಾಗಾಗಿ ನೀವು ಒಂದು ಗಂಟೆಗಿಂತ ಹೆಚ್ಚು ಸಮಯ ಮಕ್ಕಳು ಸ್ಕ್ರೀನ್  ನೋಡುವುದನ್ನು ತಪ್ಪಿಸಿ. ರಾತ್ರಿ ಸಮಯದಲ್ಲಂತೂ ಮಕ್ಕಳನ್ನು ಮೊಬೈಲ್, ಲ್ಯಾಪ್ ಟಾಪ್ ಮುಂತಾದವುಗಳಿಂದ ದೂರವಿಡಿ.

click me!