ಗಂಡ ಹೆಂಡತಿ ಅಂದ್ರೆ ಜಗಳ ಆಡದೆಯೂ ಇರ್ತಾರಾ? ಇರಬಹುದಂತೆ!

By Suvarna NewsFirst Published Dec 13, 2022, 2:19 PM IST
Highlights

ಈಗಿನ ದಾಂಪತ್ಯ ವರ್ಷದಲ್ಲಿ ಮುರಿದು ಬೀಳ್ತಿದೆ. ಇದಕ್ಕೆ ಹೊಂದಾಣಿಕೆ ಕೊರತೆ ಮುಖ್ಯವಾಗ್ತಿದೆ. ಇಬ್ಬರ ಮಧ್ಯೆ ಪ್ರೀತಿ ಅಷ್ಟು ಬೇಗ ಕೊನೆಯಾಗಬಾರದು ಅಂದ್ರೆ ಏನು ಮಾಡಬೇಕು ಎಂಬುದನ್ನು ಸಂಗಾತಿ ತಿಳಿದಿರಬೇಕು.
 

ಸಂಬಂಧ ಯಾವುದೇ ಆಗಿರಲಿ, ದಿನ ಕಳೆದಂತೆ ಅದು ನೀರಸವಾಗಲು ಶುರುವಾಗುತ್ತದೆ. ಜೀವನ ಪರ್ಯಂತ ಜೊತೆಗಿರ್ತೇನೆಂದು ಮದುವೆಯಾದ ಜೋಡಿ ಮಧ್ಯೆ ಆರಂಭದಲ್ಲಿ ಅದೆಷ್ಟೇ ಪ್ರೀತಿ ಇರಲಿ, ಇದು ವರ್ಷಗಳು ಉರುಳುತ್ತಿದ್ದಂತೆ ಕಡಿಮೆಯಾಗು ಶುರುವಾಗುತ್ತದೆ. ಜವಾಬ್ದಾರಿ, ಮಕ್ಕಳು ಸೇರಿದಂತೆ ಅನೇಕ ಕೆಲಸ ಮೈಮೇಲೆ ಬರುವ ಕಾರಣ, ನಿತ್ಯದ ಜೀವನ ನೀರಸವೆನಿಸಲು ಶುರುವಾಗುತ್ತದೆ. ಇಬ್ಬರ ಮಧ್ಯೆ ರೋಮ್ಯಾನ್ಸ್ ಮರೆಯಾಗುತ್ತದೆ.  

ನಮ್ಮಲ್ಲಿ ಈಗ್ಲೂ ಕೆಲ ದಂಪತಿ ಇದಕ್ಕೆ ವಿರುದ್ಧವಾಗಿದ್ದಾರೆ. ಮದುವೆ (Marriage) ಯಾಗಿ 10 – 15 ವರ್ಷ ಕಳೆದ್ರೆ ಅವರಿಬ್ಬರ ಮಧ್ಯೆ ಪ್ರೀತಿ (Love) ಕಡಿಮೆಯಾಗಿಲ್ಲ. ಇಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಜೀವನ (Life) ದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿದ್ದಾರೆ. ಸಂಗಾತಿ ಇಲ್ಲದೆ ಜೀವನ ಶೂನ್ಯ ಎನ್ನುವ ಭಾವನೆಯಲ್ಲಿ ಬದುಕುತ್ತಿದ್ದಾರೆ. ಅನೇಕ ವರ್ಷಗಳಿಂದ ಯಶಸ್ವಿ ದಾಂಪತ್ಯ ನಡೆಸುತ್ತಿರುವ ಕೆಲ ಜೋಡಿ, ದಾಂಪತ್ಯ ಸುಖಕರವಾಗಿಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳಿದ್ದಾರೆ. 

ಡರ್ಟಿ ಟಾಕ್ಸ್ (Dirty Talks) ಅತ್ಯಗತ್ಯ : ಸೆಕ್ಸ್ (Sex) ಎಂಬುದು ಪ್ರೀತಿಯ ಜೀವನಕ್ಕೆ ಅತ್ಯಗತ್ಯವಾಗಿದೆ. ಮದುವೆಯ ಮೊದಲು ವರ್ಷ ವಾರದಲ್ಲಿ ನಾಲ್ಕು ಬಾರಿ ಶಾರೀರಿಕ ಸಂಬಂಧ ಬೆಳೆಸಿ, ಆಗಾಗ ಡರ್ಟಿ ಮಾತುಗಳನ್ನಾಡುತ್ತಾ ದಾಂಪತ್ಯವನ್ನು ರಸಮಯಗೊಳಿಸಿದ್ದ ಜೋಡಿ ದಿನ ಕಳೆದಂತೆ ಎಲ್ಲವನ್ನೂ ದೂರವಿಡ್ತಾರೆ. ವಯಸ್ಸು ಹೆಚ್ಚಾಗ್ತಿದ್ದಂತೆ ಸೆಕ್ಸ್ ತಿಂಗಳಿಗೊಮ್ಮೆ ಬಂದು ನಿಲ್ಲುತ್ತದೆ. ಡರ್ಟಿ ಮಾತುಗಳು ಮರೆಯಾಗುತ್ತವೆ. ಆದ್ರೆ ಡರ್ಟಿ ಟಾಕ್ಸ್ ಹಾಗೂ ಸೆಕ್ಸ್ ಜೀವಂತ ಇದ್ದರೆ ಮಾತ್ರ ಸಂಬಂಧದಲ್ಲಿ ಪ್ರೀತಿ ಉಳಿಯಲು ಸಾಧ್ಯ ಎನ್ನುತ್ತಾರೆ ಕೆಲ ಜೋಡಿ.

Successful Marriage: ದಾಂಪತ್ಯ ಜೀವನ ಸುಖಕ್ಕೆ ಗಂಡಸರು ಏನು ಮಾಡಬೇಕು?

ಇಬ್ಬರ ಇಷ್ಟಗಳಿಗೆ ಆದ್ಯತೆ : ಜೀವನದಲ್ಲಿ ಸಣ್ಣಪುಟ್ಟ ವಿಷ್ಯಗಳು ಸಂತೋಷವನ್ನು ಹೆಚ್ಚಿಸುತ್ತವೆ. ಪತಿ ಹಾಗೂ ಪತ್ನಿಗೆ ಯಾವುದು ಇಷ್ಟ ಎಂಬುದು ತಿಳಿದಿರಬೇಕು. ಅವರಿಗೆ ಅದನ್ನು ನೀಡುವ ಪ್ರಯತ್ನ ಮಾಡ್ಬೇಕು. ಪತ್ನಿಗೆ ಯಾವ ಆಹಾರ ಇಷ್ಟ ಎಂಬುದನ್ನು ತಿಳಿದು ಅದನ್ನು ನೀಡಬೇಕು. ಇದ್ರಿಂದ ಇಬ್ಬರ ಮಧ್ಯೆ ಪ್ರೀತಿ ಗಟ್ಟಿಯಾಗುತ್ತದೆ. ಒಬ್ಬರಿಗೊಬ್ಬರು ಹೆಚ್ಚು ಅರಿಯಬಹುದು. ಪತ್ನಿ ಕೂಡ ಪತಿಯ ಚಿಕ್ಕ ಆಸೆಗಳನ್ನು ಈಡೇರಿಸಲು ಗಮನ ನೀಡ್ಬೇಕು. 

ಪ್ರವಾಸ (Travel): ಜವಾಬ್ದಾರಿ ಎಷ್ಟೇ ಇದ್ರೂ ಇಬ್ಬರು ಪ್ರವಾಸ ಕೈಗೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪರಸ್ಪರ ಅರಿಯಲು ಇಲ್ಲಿ ನಿಮಗೆ ಸಮಯ ಸಿಗುತ್ತದೆ. ಇಬ್ಬರು ಈವರೆಗೆ ನೋಡಿರದ ಜಾಗಕ್ಕೆ ಪ್ರವಾಸ ಹೋಗಿ. ಅಲ್ಲಿ ಇಬ್ಬರೇ ಒಂದಿಷ್ಟು ಸಮಯ ಕಳೆಯಿರಿ. ಪ್ರವಾಸ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಆಪ್ತರನ್ನು ಇನ್ನಷ್ಟು ಸನಿಹಕ್ಕೆ ಬರಲು ನೆರವಾಗುತ್ತದೆ. 

ಮಕರ ರಾಶಿಯವರು ಲವ್ವಲ್ಲಿ ಬಿದ್ದರೆ ಈ ಪ್ರಾಬ್ಲಂ ಗ್ಯಾರಂಟಿ, ನಿಮ್ ರಾಶಿ ಲವ್‌ ಲೈಫ್‌ ಹೇಗಿದೆ?

ಸಂಗಾತಿಗೆ ಸಮಯ ನೀಡಿ : ಪ್ರತಿಯೊಬ್ಬರಿಗೂ ಕೆಲಸ ಭಾರ ತಲೆ ಮೇಲೆ ಇರುತ್ತದೆ ನಿಜ. ಆದ್ರೆ ನಿಮಗೆ ಯಾವಾಗ ಸಮಯ ಹೊಂದಿಸಲು ಸಾಧ್ಯವೋ ಆಗ ಸಂಗಾತಿಗೆ ಆ ಸಮಯ ಮೀಸಲಿಡಿ. ನೀವು ಬಯಸಿದ್ರೆ ರಾತ್ರಿ ಇಬ್ಬರು ಒಟ್ಟಿಗೆ ಒಂದಿಷ್ಟು ಸಮಯ ಕಳೆಯಬಹುದು. ಇಬ್ಬರು ಒಟ್ಟಿಗೆ ಊಟ ಮಾಡಬಹುದು. ಊಟ ಮಾಡುವ ಸಂದರ್ಭದಲ್ಲಿ ದಿನದಲ್ಲಿ ಏನೆಲ್ಲ ಆಯ್ತು, ಯಾವ ಆಹಾರ ಸೇವನೆ ಮಾಡಿದ್ರೆ ಎಂಬುದರಿಂದ ಹಿಡಿದು ಆರೋಗ್ಯದ ಬಗ್ಗೆ ಹೊರ ಪ್ರಪಂಚದ ಸಮಸ್ಯೆ ಬಗ್ಗೆಯೂ ನೀವು ಚರ್ಚಿಸಬಹುದು. ಪ್ರತಿ ದಿನ ಇಬ್ಬರು ಒಟ್ಟಿಗೆ ಒಂದಿಷ್ಟು ಸಮಯ ಕಳೆದ್ರೆ ಅದು ನಿಮ್ಮ ಬಾಂಡಿಂಗ್ ಗಟ್ಟಿ ಮಾಡುತ್ತದೆ. 

ಸ್ವಭಾವ ಅರಿತರೆ ಕೆಲಸ ಸುಲಭ : ಕೆಲ ದಂಪತಿ ಮಧ್ಯೆ ಜಗಳ ನಡೆಯುತ್ತಿರುತ್ತದೆ. ಆದ್ರೆ ಅವರಿಬ್ಬರ ಸ್ವಭಾವ ಪರಸ್ಪರ ತಿಳಿದಿರುತ್ತದೆ. ಹಾಗಾಗಿ ಕೆಲವೇ ಕ್ಷಣಗಳಲ್ಲಿ ಸಂಗಾತಿ ಮತ್ತೆ ಒಂದಾಗ್ತಾರೆ. ಸಂಗಾತಿ ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯೆ ನೀಡ್ತಾರೆ ಹಾಗೆ ನೀವು ಯಾವ ಪ್ರತಿಕ್ರಿಯೆ ನೀಡಿದ್ರೆ ಅವರು ಸಹಜ ಸ್ಥಿತಿಗೆ ಮರಳುತ್ತಾರೆ ಎಂಬುದನ್ನು ಅರಿತಿರುವುದು ಮುಖ್ಯ. 

click me!