
ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಸಮಯದಲ್ಲಿ ಸಂಗಾತಿ ಅವಶ್ಯಕತೆಯಿರುತ್ತದೆ. ಸಂಗಾತಿ ನಮ್ಮ ಒಂಟಿತನವನ್ನು ನಿವಾರಿಸುತ್ತಾರೆ. ಕಷ್ಟದ ಸಂದರ್ಭದಲ್ಲಿ ಮಾತ್ರವಲ್ಲ ಸಂತೋಷ ಹಂಚಿಕೊಳ್ಳಲು, ನಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಒಬ್ಬ ಸಂಗಾತಿ ಬೇಕು. ಸಂಗಾತಿ ಬಗ್ಗೆ ಪ್ರತಿಯೊಬ್ಬರೂ ಅವರದೆ ಆದ ಭಾವನೆ ಹೊಂದಿರುತ್ತಾರೆ. ನನ್ನ ಸಂಗಾತಿ ನಾನಂದುಕೊಂಡಂತೆ ಇರಬೇಕೆಂದು ಬಯಸ್ತಾರೆ. ಪ್ರೇಮಿ ಬಗ್ಗೆ ಅತಿಯಾದ ಪೊಸೆಸಿವ್ ಕೆಲವರಿಗೆ ಇರುತ್ತದೆ. ಯಾವಾಗಲೂ ಸಂಗಾತಿ ನನ್ನ ಜೊತೆ ಮಾತ್ರ ಮಾತನಾಡಬೇಕು, ಬೇರೆಯವರೊಂದಿಗೆ ಮಾತನಾಡಬಾರದು, ಯಾರನ್ನೂ ನೋಡಬಾರದು, ಯಾರ ಜೊತೆಯೂ ಆಪ್ತವಾಗಬಾರದು ಎಂದು ಕೆಲವರು ಯೋಚಿಸ್ತಾರೆ. ಅವರ ಈ ಭಾವನೆ ಸಂಬಂಧವನ್ನು ಹಾಳು ಮಾಡುತ್ತದೆ.
ಸಂಬಂಧ (Relationship) ದಲ್ಲಿ ಅನುಮಾನ ಬಂದಾಗ ಅಥವಾ ಸಂಗಾತಿಯನ್ನು ನೀವು ನಿಯಂತ್ರಿಸಲು ಶುರು ಮಾಡಿದಾಗ ಸಂಬಂಧ ಹಳಸುವುದು ನಿಶ್ಚಿತ. ದೀರ್ಘಕಾಲ ನೀವು ಒಟ್ಟಿಗೆ ಇರಬೇಕು, ಜೀವನ (Life) ದಲ್ಲಿ ಸದಾ ಸಂತೋಷ, ಪ್ರೀತಿ (love) ಇರಬೇಕು ಎಂದಾದ್ರೆ ನಂಬಿಕೆ, ಕಾಳಜಿ ಬಹಳ ಮುಖ್ಯವಾಗುತ್ತದೆ. ಬಹುತೇಕರಿಗೆ ಸಂಗಾತಿ ಜೊತೆ ಹೇಗಿರಬೇಕು ಎಂಬುದು ತಿಳಿದಿರುವುದಿಲ್ಲ. ಇದ್ರಿಂದ ಸುಖ ದಾಂಪತ್ಯ ಹಳ್ಳ ಹಿಡಿಯುತ್ತದೆ. ನಾವಿಂದು ಸಂಗಾತಿ (Partner) ಜೊತೆ ಹೇಗಿರಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
Successful Marriage: ದಾಂಪತ್ಯ ಜೀವನ ಸುಖಕ್ಕೆ ಗಂಡಸರು ಏನು ಮಾಡಬೇಕು?
ಸಂಗಾತಿಯ ಮೇಲೆ ಕಾಳಜಿ : ನಮ್ಮ ಸಂಗಾತಿ ನಮ್ಮ ಮೇಲೆ ಅತಿ ಕಾಳಜಿ ತೋರಿಸಬೇಕು ಎಂದು ಎಲ್ಲರೂ ಬಯಸ್ತಾರೆ. ಅನಾರೋಗ್ಯ (Illness) ವಿರಲಿ ಇಲ್ಲ ಯಾವುದೇ ಸಮಸ್ಯೆಯಿರಲಿ ಸಂಗಾತಿ ಜೊತೆಗಿರಬೇಕು, ನಾವು ಮಾಡಿದ ಕೆಲಸಕ್ಕೆ ಅವರು ಬೆಂಬಲ ನೀಡಬೇಕೆಂದು ನಾವು ಬಯಸ್ತೇವೆ. ಸಂಗಾತಿ ಮೇಲೆ ನೀವು ಕಾಳಜಿವಹಿಸಿದ್ರೆ ಅವರು ನಿಮ್ಮ ಮೇಲೆ ಕಾಳಜಿ ತೋರಲು ಶುರು ಮಾಡ್ತಾರೆ. ನಿಮ್ಮ ದಾಂಪತ್ಯ ಜೀವನ ಸಂತೋಷದಿಂದ ಕೂಡಿರಬೇಕೆಂದ್ರೆ ನೀವು ಸಂಗಾತಿಯಿಂದ ನಿರೀಕ್ಷಿಸುವ ಬದಲು ನೀವೇ ಸಂಗಾತಿಗೆ ನೀಡಲು ಶುರು ಮಾಡಬೇಕು. ನಿಮ್ಮ ಕಾಳಜಿ ಅವರು ಮತ್ತಷ್ಟು ಹತ್ತಿರಕ್ಕೆ ಬರುವಂತೆ ಮಾಡುತ್ತದೆ. ನಿಮ್ಮ ಮೇಲೆ ಅವರಿಗಿರುವ ಪ್ರೀತಿ ಹೆಚ್ಚಾಗುತ್ತದೆ.
ಜೀವನದಲ್ಲಿ ಸಮಾನತೆಗೆ ಮಾನ್ಯತೆ ನೀಡಿ : ಸಂಬಂಧದಲ್ಲಿ ಲಿಂಗ ತಾರತಮ್ಯ ಇರಬಾರದು. ಪತಿ ಇರಲಿ ಪತ್ನಿ ಇರಲಿ ಸಂಬಂಧದಲ್ಲಿ ಸಮಾನತೆ (Equality) ಮುಖ್ಯ. ಅದು ಮನೆಯಲ್ಲಿರಲಿ ಅಥವಾ ಹೊರಗಿರಲಿ. ನಿಮ್ಮ ಸಂಗಾತಿಯನ್ನು ಎಂದಿಗೂ ಕೆಳಮಟ್ಟದಲ್ಲಿ ನೋಡಬಾರದು. ಸಂಗಾತಿ ದುಡಿಯುತ್ತಿರಲಿ ಇಲ್ಲ ಮನೆ ಕೆಲಸ ( Work ) ಮಾಡ್ತಿರಲಿ ಅವರ ನಿರ್ಧಾರಗಳಿಗೆ ಮಾನ್ಯತೆ ನೀಡಬೇಕು. ಅವರಿಗೆ ಸೂಕ್ತ ಸ್ಥಾನ ನೀಡಬೇಕು. ನೀವು ಸಂಗಾತಿಗೆ ಸಮಾನ ಹಕ್ಕು ನೀಡಿದಾಗ ಅವರು ಸದಾ ಸಂತೋಷವಾಗಿರುತ್ತಾರೆ. ಇದ್ರಿಂದ ಜೀವನದ ಬಂಡಿ ಯಾವುದೇ ಸಮಸ್ಯೆಯಿಲ್ಲದೆ ಸಾಗುತ್ತದೆ. ಕುಟುಂಬದಲ್ಲಿ ಎಲ್ಲರ ಮುಂದೆ ನೀವು ನಿಮ್ಮ ಸಂಗಾತಿಗೆ ಸಮಾನ ಹಕ್ಕು ನೀಡಿದಾಗ ಅದು ಸಂಗಾತಿ ಗೌರವವನ್ನು ಹೆಚ್ಚಿಸುತ್ತದೆ. ನೀವು ಅವರನ್ನು ಎಲ್ಲರ ಮುಂದೆ ಕೀಳಾಗಿ ನೋಡಿದ್ರೆ ಅದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.
ಮದ್ವೆಯಾಗಿ ಆರು ತಿಂಗಳಾಗಿಲ್ಲ, ಡಿವೋರ್ಸ್ ಕೇಳ್ತಿದ್ದಾನಂತೆ ಪತಿ!
ಸಂಬಂಧದಲ್ಲಿ ವಿಶ್ವಾಸ ಬಹಳ ಮುಖ್ಯ : ಒಂದು ಸಂಬಂಧ ಬಲವಾಗಿ ನಿಲ್ಲುವುದು ನಂಬಿಕೆ ಮೇಲೆ. ನಂಬಿಕೆ ಇಲ್ಲದ ಸಂಬಂಧ ಇದ್ದು ಸತ್ತಂತೆ. ಪರಸ್ಪರ ನಂಬಿಕೆ ಇಲ್ಲವೆಂದ್ರೆ ಆ ಸಂಬಂಧ ದೀರ್ಘಕಾಲ ಉಳಿಯಲಾರದು. ಬಿಕೆಯ ಕೊರತೆಯಿಂದ ಸಂಬಂಧ ಬೇಗ ಹಾಳಾಗುತ್ತದೆ. ನಿಮ್ಮ ಸಂಗಾತಿ ಮಾಡುವ ಕೆಲಸದ ಮೇಲೆ ನಿಮಗೆ ನಂಬಿಕೆ ಇರಬೇಕಾಗುತ್ತದೆ. ಅವರನ್ನು ಸಂದೇಹದಿಂದ ನೋಡಿದ್ರೆ ಅದು ಅವರ ಹಾಗೂ ನಿಮ್ಮ ನಡುವೆ ಅಂತರ ಹೆಚ್ಚಿಸುತ್ತದೆ. ಸಂಬಂಧವನ್ನು ಉಳಿಸಿಕೊಳ್ಳಲು ಬಯಸಿದರೆ ಸಂಗಾತಿಯ ಮೇಲೆ ನಂಬಿಕೆ ಇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.