ಕೋಟ್ಯಾಧೀಶನ ಕೈ ಹಿಡೀಬೇಕೆನ್ನುವ ಕನಸು ಕಾಮನ್, ಕೋಟ್ಯಾಧಿಪತಿಗೆ ಪತ್ನಿಯಾಗುವ ಮುನ್ನ...!

By Suvarna NewsFirst Published Dec 13, 2022, 12:23 PM IST
Highlights

ಮದುವೆ ಬಗ್ಗೆ ಪ್ರತಿಯೊಬ್ಬ ಹುಡುಗಿ ಕನಸು ಕಂಡಿರ್ತಾಳೆ. ತವರಲ್ಲಿ ಹಣಕಾಸಿನ ಸಮಸ್ಯೆ ಎದುರಿಸಿದ ಬಹುತೇಕ ಹುಡುಗಿಯರು ಶ್ರೀಮಂತ ಹುಡುಗನ ಮದುವೆಯಾಗುವ ಕನಸು ಕಾಣ್ತಾರೆ. ಆದ್ರೆ ಅಲ್ಲಿನ ಬದುಕು ಹೇಗಿರುತ್ತೆ ಎಂಬ ಅರಿವು ಅವರಿಗಿರೋದಿಲ್ಲ. 
 

ಜೀವನ ಪರ್ಯಂತ ದುಡಿದು ತಿನ್ನಬೇಕು ಅಂದ್ರೆ ಯಾರಿಗೆ ಇಷ್ಟವಾಗುತ್ತೆ ಹೇಳಿ. ಮದುವೆ ನಂತ್ರವಾದ್ರೂ ಐಷಾರಾಮಿ ಜೀವನ ನಡೆಸಬೇಕು, ಯಾವುದಕ್ಕೂ ಕಡಿಮೆ ಆಗಬಾರದು ಎಂದು ಅನೇಕ ಹುಡುಗಿಯರು ಆಲೋಚನೆ ಮಾಡ್ತಾರೆ. ಇದೇ ಕಾರಣಕ್ಕೆ ಮದುವೆಗೆ ಮುನ್ನ ಕೋಟ್ಯಾಧಿಪತಿ ಆಯ್ಕೆಗೆ ಹೆಚ್ಚು ಮಹತ್ವ ನೀಡ್ತಾರೆ. ಸಾಮಾನ್ಯವಾಗಿ ಕೋಟ್ಯಾಧಿಪತಿ ಎಂದಾಗ ಮಧ್ಯಮ ವರ್ಗದ ಜನರಲ್ಲಿ ಅನೇಕ ಕಲ್ಪನೆಗಳಿರುತ್ತವೆ. ಐಷಾರಾಮಿ ಜೀವನ, ಕಾಲಿನೊಂದು ಕೈಗೊಂದು ಆಳು, ಇಡೀ ದಿನ ಆರಾಮವಾಗಿ ಸಮಯ ಕಳೆಯಬಹುದು ಎಂದುಕೊಳ್ಳುವವರೇ ಹೆಚ್ಚು. ಆದ್ರೆ ಕೋಟ್ಯಾಧಿಪತಿ ಮದುವೆಯಾದ ಮಹಿಳೆಯೊಬ್ಬಳು ಅವಳ ಜೀವನ ಹೇಗಿದೆ ಎಂಬುದನ್ನು ಹೇಳಿದ್ದಾಳೆ. ಅಷ್ಟೇ ಅಲ್ಲ ಯಾವುದರ ಬಗ್ಗೆಯೂ ಅತಿಯಾದ ಕಲ್ಪನೆ ಬೇಡ. ಇದ್ರಿಂದ ಮುಂದೆ ಸಮಸ್ಯೆಯಾಗುತ್ತದೆ ಎಂದು ಮಹಿಳೆ ಸಲಹೆ ನೀಡಿದ್ದಾಳೆ. 

ಆಕೆ ಕೂಡ ಶ್ರೀಮಂತ (Rich) ವ್ಯಕ್ತಿಯನ್ನು ಮದುವೆ (Marriage) ಯಾಗುವ ಮುನ್ನ ಸಾಕಷ್ಟು ಕನಸು (Dream) ಕಂಡಿದ್ದಳಂತೆ. ಮುಂದೆ ಯಾವುದಕ್ಕೂ ನಾನು ತೊಂದರೆಪಡಬೇಕಾಗಿಲ್ಲ. ನನ್ನ ಜೀವನ ಸಂಪೂರ್ಣ ಬದಲಾಗುತ್ತದೆ ಎಂದುಕೊಂಡಿದ್ದಳಂತೆ. ಆದ್ರೆ ಆಕೆ ಅಂದುಕೊಂಡಿದ್ದು ಎಲ್ಲವೂ ಸತ್ಯವಾಗಲಿಲ್ಲ. ಮನೆಯಲ್ಲಿ ಹಣದ (Money) ಕೊರತೆಯಿಲ್ಲ ನಿಜ. ಹಾಗಂತ ನನ್ನ ಬದುಕು ಸಾಮಾನ್ಯರಂತೆ ಇದೆ ಎನ್ನುತ್ತಾಳೆ ಆಕೆ. 

ಸಂಗಾತಿ ಸನಿಹದಲ್ಲಿಯೇ ಇರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ!

ದಿನವಿಡಿ ಐಷಾರಾಮಿ ಜೀವನ (Luxurious Life) ನಡೆಸೋದಿಲ್ಲ : ಕೋಟ್ಯಾಧಿಪತಿ ಮದುವೆಯಾದ್ರೆ ದಿನದ 24 ಗಂಟೆ ಐಷಾರಾಮಿ ಜೀವನ ನಡೆಸಬಹುದು ಎಂದು ಅನೇಕರು ಅಂದುಕೊಳ್ತಾರೆ. ಆದ್ರೆ ಇದು ತಪ್ಪು ಎನ್ನುತ್ತಾಳೆ ಮಹಿಳೆ. ನಾವು ಕೂಡ ಸಾಮಾನ್ಯರಂತೆ ಜೀವನ ನಡೆಸ್ತೇವೆ. ನನ್ನ ಪತಿ ಕೂಡ ಶಾರ್ಟ್ ಹಾಗೂ ಟೀ ಶರ್ಟ್ ಧರಿಸ್ತಾರೆ. ಇಬ್ಬರೂ ಟಿವಿ ಮುಂದೆ ಕುಳಿತು ಸಿನಿಮಾ ನೋಡ್ತೇವೆ. ಜೊತೆಗೆ ಪಾಪ್ ಕಾರ್ನ್ ತಿನ್ನುತ್ತೇವೆ ಎನ್ನುತ್ತಾಳೆ ಮಹಿಳೆ. 

ಸಾಮಾನ್ಯರಂತೆ ಇದೆ ನನ್ನ ಜೀವನ : ಅತ್ತೆ ಮನೆಯಲ್ಲಿ ಪತಿಯೊಬ್ಬನೆ ದುಡಿಯುವ ವ್ಯಕ್ತಿ. ಈಕೆ ಬ್ಲಾಗರ್ ಆಗಿ ಸ್ವಲ್ಪ ಸಂಪಾದನೆ ಮಾಡ್ತಾಳೆ. ದೊಡ್ಡ ಖರ್ಚಿಗೆ ಪತಿಯನ್ನೇ ಆಶ್ರಯಿಸಬೇಕಿದೆ. ಹಾಗಾಗಿ ಆತನ ಒತ್ತಡವನ್ನು ಹೊರ ಹಾಕಲು ಕೈಲಾದ ಪ್ರಯತ್ನ ನಡೆಸುತ್ತೇನೆ. ಆತ ಮನೆಗೆ ಬಂದಾಗ ನಗ್ತಾ ವೆಲ್ ಕಂ ಮಾಡ್ತೆನೆ ಎನ್ನುತ್ತಾಳೆ ಮಹಿಳೆ. ಮದುವೆಯಾದ ಆರಂಭದಲ್ಲಿ ನನಗೆ ಹೊಂದಿಕೊಳ್ಳೋದು ಕಷ್ಟವಾಗಿತ್ತು. ಆತನಿಗಾಗಿ ನನ್ನ ಸಮಯ ಮೀಸಲಿಡಬೇಕೆಂದು ನಾನು ಕಿರಿಕಿರಿ ಅನುಭವಿಸಿದ್ದೆ. ನಂತ್ರ ವೈವಾಹಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹಣ ಮುಖ್ಯವಲ್ಲ, ಹೊಂದಾಣಿಕೆ ಮುಖ್ಯ ಎಂಬುದು ಗೊತ್ತಾಯ್ತು ಎನ್ನುತ್ತಾಳೆ ಮಹಿಳೆ. 

ಉಳಿತಾಯ ಅನಿವಾರ್ಯ : ಕೋಟ್ಯಾಧಿಪತಿಗೆ ಪತ್ನಿಯಾಗ್ತಿದ್ದೇನೆ ಎನ್ನುವ ಕಾರಣಕ್ಕೆ, ಆತನ ಅಂತಸ್ತಿಗೆ ತಕ್ಕಂತೆ ನಾನು ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಿದ್ದೆ. ಬ್ಯಾಗ್ ನಿಂದ ಹಿಡಿದು ಎಲ್ಲ ಬ್ರಾಂಡೆಡ್ ವಸ್ತುಗಳನ್ನು ಖರೀದಿಸಿದ್ದೆ. ಆದ್ರೆ ಮದುವೆಯಾದ್ಮೇಲೆ ಇದೆಲ್ಲ ವ್ಯರ್ಥ ಎಂಬುದು ನನ್ನ ಅರಿವಿಗೆ ಬಂತು. ಹಾಗಾಗಿ ಯಾವುದೇ ವಸ್ತುವನ್ನು ಖರೀದಿ ಮಾಡುವಾಗ್ಲೂ ಆಲೋಚನೆ ಮಾಡ್ತೇನೆ. ಕೈನಲ್ಲಿ ಹಣವಿಲ್ಲ ಎಂದಲ್ಲ. ಖರ್ಚು ಮಿತಿಮೀರಬಾರದು, ಹಾಗೆಯೇ ನಾನು ಸ್ವಲ್ಪ ಉಳಿತಾಯ ಕೂಡ ಮಾಡ್ತಿದ್ದೇನೆ ಎನ್ನುತ್ತಾಳೆ ಮಹಿಳೆ. 

ಮದ್ವೆಯಾಗಿ ಆರು ತಿಂಗಳಾಗಿಲ್ಲ, ಡಿವೋರ್ಸ್ ಕೇಳ್ತಿದ್ದಾನಂತೆ ಪತಿ!

ಮದುವೆಗೂ ಮುನ್ನ ಒಪ್ಪಂದದ ಬಗ್ಗೆ ಚರ್ಚೆ : ಮದುವೆ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಚರ್ಚೆ ಅನಿವಾರ್ಯವಾಗುತ್ತದೆ. ಆಗ್ಲೇ ಆತನ ಆದಾಯ (Income), ಖರ್ಚು (Expenses), ಆಸ್ತಿ, ಹೂಡಿಕೆ (Investment) ಬಗ್ಗೆ ತಿಳಿದ್ರೆ ನಿಮಗೆ ಮುಂದೆ ಸಮಸ್ಯೆ ಕಾಡುವುದಿಲ್ಲ. ಇದೇ ಕಾರಣಕ್ಕೆ ನಾವು ಮದುವೆಗೂ ಮುನ್ನ ಕೆಲ ಒಪ್ಪಂದ ಮಾಡಿಕೊಂಡಿದ್ದೆವು ಎನ್ನುತ್ತಾಳೆ ಮಹಿಳೆ. ನಮ್ಮಿಬ್ಬರ ಜೀವನ ಸಂತೋಷವಾಗಿದೆ, ಆದ್ರೂ ಭವಿಷ್ಯದ ಬಗ್ಗೆ ನಾನು ಆಲೋಚನೆ ಮಾಡುತ್ತೇನೆ ಎನ್ನುತ್ತಾಳೆ ಮಹಿಳೆ. 
 

click me!