ಪತಿ ಇನ್ನಷ್ಟು ಹತ್ತಿರ ಬರಬೇಕೆಂದ್ರೆ ಇಲ್ಲಿದೆ ಮ್ಯಾಜಿಕ್ ಮಂತ್ರ

Suvarna News   | Asianet News
Published : Mar 17, 2022, 06:09 PM IST
ಪತಿ ಇನ್ನಷ್ಟು ಹತ್ತಿರ ಬರಬೇಕೆಂದ್ರೆ ಇಲ್ಲಿದೆ ಮ್ಯಾಜಿಕ್ ಮಂತ್ರ

ಸಾರಾಂಶ

ದಾಂಪತ್ಯದಲ್ಲಿ ಚಿಕ್ಕ ಚಿಕ್ಕ ವಿಷ್ಯಗಳು ಪ್ರೀತಿ ಹೆಮ್ಮರವಾಗಿ ಬೆಳೆಯಲು ಕಾರಣವಾಗಿರುತ್ತದೆ. ವಿವಾಹವಾಗಿ ಎಷ್ಟೇ ವರ್ಷ ಕಳೆದಿದ್ದರೂ ಕಲಿಕೆ ನಿರಂತರ. ಅನೇಕ ಬಾರಿ ಪತಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಕೆಲ ಟ್ರಿಕ್ಸ್ ಪಾಲಿಸ್ಲೇಬೇಕು. ಅದು ತೋರಿಕೆಗಾಗಿರದೆ ಮನಸ್ಸಿನಾಳದಿಂದ ಬಂದಿದ್ರೆ ಸಂತೋಷ ನೂರು ಪಟ್ಟು ಹೆಚ್ಚಾಗುತ್ತದೆ.  

ಹೊಗಳಿಕೆ (Praise) ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಸಣ್ಣ ಮಕ್ಕಳು ಕೂಡ ಹೊಗಳಿಕೆಯನ್ನು ಇಷ್ಟಪಡ್ತಾರೆ. ಸೌಂದರ್ಯ (Beauty), ಬುದ್ಧಿವಂತಿಕೆ (Wisdom),ಮಾತನಾಡುವ ಶೈಲಿ ಅಥವಾ ಬೇರೆ ಯಾವುದೋ ಕಲೆಯ ಬಗ್ಗೆ ಬೇರೆಯವರ ಬಾಯಿಂದ ತನ್ನ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಾಗ ಮನುಷ್ಯನಿಗೆ ಸಂತೋಷ (Happiness) ವಾಗುತ್ತದೆ. ಸಾಮಾನ್ಯವಾಗಿ ಹೊಗಳಿಕೆ ಎಂಬ ಶಬ್ಧ ಬಂದಾಗ ನೆನಪಾಗುವುದು ಹುಡುಗಿಯರು. ಪುರುಷ (Male) ರಿಗಿಂತ ಮಹಿಳೆಯರು ಹೊಗಳಿಕೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬ ಮಾತಿದೆ. ಆದರೆ ಹುಡುಗರು ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಅನೇಕ ಹುಡುಗರಿಗೆ ಹೊಗಳಿಕೆ ಇಷ್ಟವಾಗುತ್ತದೆ. ವಿಶೇಷವಾಗಿ ತನ್ನ ಗೆಳತಿ (Girlfriend ) ಅಥವಾ ಹೆಂಡತಿಯಿಂದ ಅಭಿನಂದನೆ ಅಥವಾ ಹೊಗಳಿಕೆಯನ್ನು ಪುರುಷನಾದವನು ಬಯಸ್ತಾನೆ. ಸ್ವಲ್ಪ ವಿಚಿತ್ರವೆನಿಸಿದ್ರೂ ಇದು ಸತ್ಯ.

ಹೊಗಳಿಕೆ ವಿಷ್ಯ ಬಂದಾಗ ಹುಡುಗರು ಮತ್ತು ಹುಡುಗಿಯರ ಭಾವನೆಗಳು ಭಿನ್ನವಾಗಿರುತ್ತವೆ. ಸೌಂದರ್ಯ, ಅಡುಗೆ ವಿಷ್ಯದಲ್ಲಿ ಹುಡುಗಿಯರು ಹೆಚ್ಚು ಹೊಗಳಿಕೆ ಬಯಸ್ತಾರೆ. ಆದ್ರೆ  ಪುರುಷರು ಇದ್ರಲ್ಲಿ ಭಿನ್ನವಾಗಿ ಆಲೋಚನೆ ಮಾಡ್ತಾರೆ. 

ಸಂಗಾತಿಯಿಂದ ಹುಡುಗರು ಬಯಸೋದೇನು? 

ನಾನು ನಿನ್ನನ್ನು ನಂಬುತ್ತೇನೆ : ಪ್ರೀತಿ ಜೊತೆಗೆ ಸಂಬಂಧದಲ್ಲಿ ವಿಶ್ವಾಸ ಬಹಳ ಮುಖ್ಯ. ಸಂಗಾತಿಯಾದವಳು ಪತಿಯ ಮೇಲೆ ನಂಬಿಕೆಯಿಡುವುದು ಮುಖ್ಯವಾಗುತ್ತದೆ. ಅದೇನೇ ಬರಲಿ ನಾನು ನಿನ್ನನ್ನು ನಂಬುತ್ತೇನೆ ಎಂದು ಸಂಗಾತಿ ಹೇಳಿದ್ರೆ ಹುಡುಗ್ರಿಗೆ ಅದಕ್ಕಿಂತ ದೊಡ್ಡ ಖುಷಿಯಿಲ್ಲ. ನಿನ್ನ ಮೇಲಿರುವ ನಂಬಿಕೆ ನನಗೆ ಎಂದೂ ಕಡಿಮೆಯಾಗುವುದಿಲ್ಲ ಎಂಬ ಮಾತು ಹುಡುಗರಿಗೆ ಹೆಚ್ಚು ಇಷ್ಟವಾಗುತ್ತದೆ. ಹಾಗೆ ಹಿಂದಿಗಿಂತ ಈಗ, ನನ್ನ ಜೊತೆಗಿರುವಾಗ ಸಂಗಾತಿ ಖುಷಿಯಾಗಿದ್ದಾಳೆ ಎಂಬ ವಿಷ್ಯವೂ ಅವರಿಗೆ ಸಂತೋಷ ನೀಡುತ್ತದೆ. ನಿನ್ನ ಜೊತೆ ಕಳೆದ ಪ್ರತಿ ಕ್ಷಣ ನನಗೆ ವಿಶೇಷ, ನೀನು ನನ್ನ ಬಾಳಿನಲ್ಲಿ ಬಂದ್ಮೇಲೆ ನಾನು ಸಂತೋಷವಾಗಿದ್ದೇನೆ ಎಂಬೆಲ್ಲ ಮಾತುಗಳನ್ನು ಹುಡುಗಿಯ ಬಾಯಿಂದ ಕೇಳಲು ಹುಡುಗ್ರು ಇಷ್ಟಪಡ್ತಾರೆ. 

Alcohol ಸೇವಿಸದ ಸ್ನೇಹಿತರಿಗೂ ಇರಲಿ ನಿಮ್ಮ ಪಾರ್ಟಿಯಲ್ಲಿ ಜಾಗ

ಬುದ್ಧಿವಂತಿಕೆಯ ಪ್ರಶಂಸೆ : ಈಗಿನ ಕಾಲದಲ್ಲಿ ಹುಡುಗ್ರು ತಮ್ಮ ಸಂಗಾತಿಯನ್ನು ಸ್ನೇಹಿತೆಯಂತೆ ನೋಡ್ತಾರೆ. ಹಾಗಾಗಿ ಸಂಗಾತಿಯಾದವಳು ತನ್ನ ಬುದ್ಧಿವಂತಿಕೆಯನ್ನು ಮೆಚ್ಚುವ ಜೊತೆಗೆ ಆಗಾಗ ನನ್ನ ಬಳಿ ಸಲಹೆ ಕೇಳಲಿ  ಎಂದು ಬಯಸ್ತಾರೆ. ಆದ್ರೆ ಕೆಲವೇ ಕೆಲವು ದಂಪತಿಯಲ್ಲಿ ಈ ಗುಣವನ್ನು ನೋಡಬಹುದು. ಯಾಕೆಂದ್ರೆ ಬಹುತೇಕ ಹುಡುಗಿಯರು ತಾವು ಬುದ್ಧಿವಂತರೆಂದು ಭಾವಿಸಿರುತ್ತಾರೆ. ಸಂಗಾತಿ ಬಳಿ ಸಲಹೆ ಕೇಳಿದ್ರೆ ತನ್ನ ಇಮೇಜ್ ಹಾಳಾಗುತ್ತೆ ಎಂಬ ಭ್ರಮೆಯಲ್ಲಿರುತ್ತಾರೆ. ಆದ್ರೆ ಈ ಸಣ್ಣ ಸಣ್ಣ ವಿಷ್ಯಗಳು ಸಂಗಾತಿಯನ್ನು ಹತ್ತಿರಕ್ಕೆ ತರುತ್ತವೆ ಎಂಬುವು ಅವರಿಗೆ ತಿಳಿದಿರುವುದಿಲ್ಲ. ಇನ್ನಾದ್ರೂ ಪತಿ ಬಳಿ ಆಗಾಗ ಸಲಹೆ ಕೇಳ್ತಿರಿ. 

ತುಂಬಾ ಚೆನ್ನಾಗಿ ಕಾಣ್ತಿದ್ದೀರಾ : ಈ ಮಾತಿನಲ್ಲಿ ಮ್ಯಾಜಿಕ್ ಇದೆ. ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ಈ ಮಾತು ಇಷ್ಟವಾಗುತ್ತದೆ. ಅನೇಕ ಬಾರಿ ಹುಡುಗರು ತಮ್ಮ ದೇಹದ ಬಗ್ಗೆ ಅಸುರಕ್ಷತೆ ಅನುಭವಿಸುತ್ತಾರೆ.  ಪತ್ನಿ ಅಥವಾ ಸಂಗಾತಿಗಾಗಿ ಸುಂದರವಾಗಿ ಡ್ರೆಸ್ ಮಾಡಿಕೊಳ್ಳಲು ಅವರು ಬಯಸ್ತಾರೆ. ಜಿಮ್ ಗೆ ಹೋಗಿ ತೂಕ ಇಳಿಸಿದಾಗ, ಹೇರ್ ಡ್ರೈ ಮಾಡಿದಾಗ, ಹೊಸ ಬಟ್ಟೆ ಧರಿಸಿದಾಗ, ಪ್ರೀತಿಸುವವರು ನಾಲ್ಕು ಮೆಚ್ಚುಗೆ ಮಾತನಾಡಲಿ ಎಂಬ ಆಸೆ ಅವರಿಗೂ ಇರುತ್ತದೆ. ಪ್ರೀತಿಸುವ ಸಂಗಾತಿ ಅವರ ನೋಟದ ಬಗ್ಗೆ ಮೆಚ್ಚುಗೆ ಮಾತನಾಡಿದ್ರೆ ಅವರಿಗೆ ಇಷ್ಟವಾಗುತ್ತದೆ.  

ಮಗುವನ್ನು ಬಿಟ್ಟು ಕೆಲ್ಸಕ್ಕೆ ಹೋಗ್ತಿದ್ದೀನಿ ಅನ್ನೋ ಬೇಜಾರಾ ? MOM GUILT ಹೋಗಲಾಡಿಸಲು ಹೀಗೆ ಮಾಡಿ

ಗೌರವ : ಹುಡುಗ-ಹುಡುಗಿ ಇಬ್ಬರೂ ಗೌರವ ಪಡೆಯುವುದನ್ನು ಇಷ್ಟಪಡ್ತಾರೆ. ಇದು ಹುಡುಗರಲ್ಲಿ ಸ್ವಲ್ಪ ಹೆಚ್ಚಿರುತ್ತದೆ. ನಾಲ್ಕು ಜನರ ಮುಂದೆ ಸಂಗಾತಿ ತನಗೆ ಗೌರವ ನೀಡಲಿ,ತನ್ನನ್ನು ಗೌರವದಿಂದ ಕಾಣಲಿ ಎಂದು ಹುಡುಗನಾದವನು ಬಯಸ್ತಾನೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು