ಅಚಾನಕ್ ಪಿರಿಯಡ್ಸ್ ಆದ್ರೆ ಹುಡುಗಿ ದಂಗಾಗ್ತಾಳೆ. ಅದ್ರಲ್ಲೂ ಮೊದಲ ಬಾರಿ ಮುಟ್ಟಾದ ಹುಡುಗಿಗೆ ಆತಂಕವಾಗೋದು ಹೆಚ್ಚು. ಆ ಸಂದರ್ಭದಲ್ಲಿ ಸಹಾಯಕ್ಕೆ ಒಬ್ಬರಿರಬೇಕು. ನೀವು ನಿರೀಕ್ಷೆ ಮಾಡದ ವ್ಯಕ್ತಿ ನಿಮ್ಮ ಸಹಾಯಕ್ಕೆ ನಿಂತ್ರೆ..!
ಪಿರಿಯಡ್ಸ್ ಆದಾಗ ಹೊಟ್ಟೆ ನೋವಿಗಿಂದ ಎಲ್ಲಿ ರಕ್ತದ ಕಲೆ ಉಳಿದವರಿಗೆ ಕಾಣುತ್ತೋ ಎನ್ನುವ ಭಯವೇ ಮಹಿಳೆಯರಿಗೆ ಹೆಚ್ಚಿರುತ್ತದೆ. ಓಡಾಡುವಾಗ, ಕುಳಿತಲ್ಲಿಂದ ಎದ್ದಾಗ, ಸಾರ್ವಜನಿಕ ಪ್ರದೇಶಗಳಲ್ಲಿ ಹುಡುಗಿಯರು ಹೆಚ್ಚು ಜಾಗೃತಿ ವಹಿಸ್ತಾರೆ. ಹಿಂದೆ ಮುಂದೆ ಆಪ್ತರು ಬರ್ತಿದ್ದರೆ ನನ್ನ ಹಿಂಭಾಗ ಸರಿ ಇದ್ಯಾ? ಏನಾದ್ರೂ ಕಾಣಿಸ್ತಾ ಇದ್ಯಾ ಅಂತಾ ಕೇಳೋದಿದೆ.
ಮುಟ್ಟಿನ ಸಮಯದಲ್ಲಿ ಬ್ಲೀಡಿಂಗ್ ಸಾಮಾನ್ಯ. ಅಚಾನಕ್ ಪಿರಿಯಡ್ಸ್ (Periods) ಆದಲ್ಲಿ ಇಲ್ಲವೆ ತುಂಬಾ ಸಮಯದಿಂದ ಪ್ಯಾಡ್ (Pad) ಬದಲಿಸದೆ ಹೋದ್ರೆ ಕಲೆ ಹೊರ ಬಟ್ಟೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಮಹಿಳೆ ಬಟ್ಟೆ ಮೇಲೆ ಕಲೆ ಕಾಣಿಸಿಕೊಳ್ತಿದ್ದಂತೆ ಅದನ್ನು ಆಡಿಕೊಂಡು ನಗೋರೇ ಹೆಚ್ಚು. ಆಕೆಯ ರಕ್ಷಣೆಗೆ ಬರುವವರ ಸಂಖ್ಯೆ ಬಹಳ ಕಡಿಮೆ. ಪುರುಷರು ಮಾತ್ರವಲ್ಲ ನಗುವ ಪಟ್ಟಿಯಲ್ಲಿ ಮಹಿಳೆಯರು ಸೇರಿರ್ತಾರೆ ಅನ್ನೋದು ವಿಷಾಧನೀಯ.
VIRAL VIDEO: ಗಂಡನಾದವ ಈ ವಿಷಯ ತಿಳಿದುಕೊಂಡ್ರೆ ಸಂಸಾರದಲ್ಲಿ ಸುಖವೋ ಸುಖ...
ಆದ್ರೆ ಇಲ್ಲೊಬ್ಬ ಹುಡುಗ ಮೆಚ್ಚುಗೆ ಪಡೆಯುವ ಕೆಲಸ ಮಾಡಿದ್ದಾನೆ. ಆತನ ಕೆಲಸಕ್ಕೆ ಹುಡುಗಿ ತಂದೆ, ಹುಡುಗಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ನೈಜ ಕಥೆ ಓದಿದ ಪ್ರತಿಯೊಬ್ಬರೂ ಭೇಷ್ ಎಂದಿದ್ದಾರೆ. ವಿಶೇಷವಾಗಿ ಮಗನಿಗೆ ಸಂಸ್ಕಾರ ಕಲಿಸಿದ ತಾಯಿಗೆ ನಮನ ಸಲ್ಲಿಸಿದ್ದಾರೆ.
ಫೇಸ್ಬುಕ್ ನ Mergim ಹೆಸರಿನ ಖಾತೆಯಲ್ಲಿ ತಂದೆ ಬರೆದ ಲೆಟರ್ ಒಂದನ್ನು ಹಂಚಿಕೊಳ್ಳಲಾಗಿದೆ. ಅದ್ರಲ್ಲಿ ತನ್ನ ಮಗಳು ಮೊದಲ ಬಾರಿ ಮುಟ್ಟಾದ ಸಂದರ್ಭದಲ್ಲಿ ಏನಾಯ್ತು ಎಂಬುದನ್ನು ತಂದೆ ಬರೆದಿದ್ದಾರೆ.
ಮಗಳು ಮೊದಲ ಬಾರಿ ಬಸ್ ನಲ್ಲಿ ಮುಟ್ಟಾಗಿದ್ದಳು. ಆಕೆಯನ್ನು ಹತ್ತಿರಕ್ಕೆ ಕರೆದ ಆಕೆಗಿಂತ ವಯಸ್ಸಿನಲ್ಲಿ ಒಂದು ವರ್ಷ ದೊಡ್ಡವನಿರಬಹುದಾದ ಹುಡುಗ , ಕಿವಿಯಲ್ಲಿ ಈ ವಿಷ್ಯವನ್ನು ಹೇಳಿದ್ದಾನೆ. ನಿನ್ನ ಪ್ಯಾಂಟ್ ಒದ್ದೆಯಾಗಿದೆ. ಶಾಕ್ ಆಗ್ಬೇಡ. ನನ್ನ ಸ್ವೆಟರನ್ನು ನಿನ್ನ ಸೊಂಟಕ್ಕೆ ಸುತ್ತಿಕೊಂಡು ಮನೆಗೆ ಹೋಗು ಎಂದಿದ್ದಾನೆ. ನಾನಿಂದು ಇಂಥ ಮಗನನ್ನು ಬೆಳೆಸಿದ ತಾಯಿಗೆ ಧನ್ಯವಾದ ಹೇಳುತ್ತೇನೆ. ಸದಾ ಕೆಟ್ಟ ಸುದ್ದಿಯನ್ನೇ ಕೇಳುವ ನಮ್ಮ ಕಿವಿಗೆ ಒಂದಿಷ್ಟು ಪಾಸಿಟಿವ್ ಸುದ್ದಿಯೂ ಕೇಳಲಿ ಎನ್ನುವ ಕಾರಣಕ್ಕೆ ನಾನು ಈ ವಿಷ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ತಿದ್ದೇನೆ. ಅನಾಮಿಕ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ಇದ್ರ ಬಗ್ಗೆ ಕಮೆಂಟ್ ಮಾಡ್ತಿದ್ದಾರೆ. ಹುಡುಗನ ಕೆಲಸಕ್ಕೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಪಾಲಕರು ತಲೆ ಎತ್ತುವ ಕೆಲಸವನ್ನು ಹುಡುಗ ಮಾಡಿದ್ದಾನೆ ಎಂದು ಅನೇಕರು ಹೇಳಿದ್ದಾರೆ. ನನ್ನ ಬಾಯ್ ಫ್ರೆಂಡ್ ನಾನು ಹೈಸ್ಕೂಲಿನಲ್ಲಿರುವಾಗ ಇದೇ ಕೆಲಸ ಮಾಡಿದ್ದ. ನಾನು ಆ ಸಹಾಯವನ್ನು ಎಂದಿಗೂ ಮರೆಯಲಾರೆ ಎಂದು ಒಬ್ಬಳು ಕಮೆಂಟ್ ಮಾಡಿದ್ದಾಳೆ.
ಅಪಹರಣಕಾರರಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಹೀಗೆ ಪಾಸ್ವರ್ಡ್ ಬಳಸಿ!
ತಾಯಿಯ ಪಾತ್ರ ದೊಡ್ಡದು : ಮುಟ್ಟು ಅನ್ನೋದು ಹುಡುಗಿಯರಿಗೆ ಮಾತ್ರ ಮೀಸಲು ಎನ್ನುವ ಪರಿಸರ ನಮ್ಮಲ್ಲಿದೆ. ಮಗಳು ದೊಡ್ಡವಳಾಗ್ತಿದ್ದಂತೆ ಆಕೆಗೆ ಮುಟ್ಟಿನ ಬಗ್ಗೆ ಪಾಲಕರು ಮಾಹಿತಿ ನೀಡ್ತಾರೆ. ಆದ್ರೆ ಮಗನಿಂದ ಮುಟ್ಟಿನ ವಿಷ್ಯವನ್ನು ಮುಚ್ಚಿಡುತ್ತಾರೆ. ಅನೇಕ ಕುಟುಂಬಗಳಲ್ಲಿ ಪಿರಿಯಡ್ಸ್ ಹೆಸರನ್ನು ಕೂಡ ಹೇಳೋದಿಲ್ಲ. ಆದ್ರೆ ಹುಡುಗಿಯಂತೆ ಪ್ರತಿಯೊಬ್ಬ ಹುಡುಗ ಕೂಡ ಮುಟ್ಟಿನ ಬಗ್ಗೆ ತಿಳಿಯುವ ಅಗತ್ಯವಿದೆ.
ಮುಟ್ಟಿನ ಅನುಭವವನ್ನು ತಾಯಿಯಾದವಳು ಮಗನಿಗೆ ಹೇಳಬೇಕು. ನಿಮ್ಮ ಮಗನಿಗೆ ನೀವು ಎಷ್ಟು ಹೆಚ್ಚು ಶಿಕ್ಷಣ ನೀಡುತ್ತೀರೋ, ಅವರು ಹುಡುಗಿಯರು ಮತ್ತು ಮಹಿಳೆಯರ ಬಗ್ಗೆ ಅಷ್ಟೇ ಸಹಾನುಭೂತಿಯಿಂದ ವರ್ತಿಸಲು ಸಾಧ್ಯವಾಗುತ್ತದೆ. ಮುಟ್ಟಿನ ಬಗ್ಗೆ ನೀವು ಸರಿಯಾದ ಮಾಹಿತಿ ನೀಡಿದ್ರೆ ಪುರುಷರು ಅದನ್ನು ಕಳಂಕದಂತೆ ನೋಡೋದಿಲ್ಲ. ಹಾಗೆಯೇ ಸುರಕ್ಷಿತ ಲೈಂಗಿಕತೆ ಮತ್ತು ಗರ್ಭನಿರೋಧಕಗಳ ಪ್ರಾಮುಖ್ಯತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಈ ಮಾಹಿತಿ ನೆರವಾಗುತ್ತದೆ.