ಬಹುಕೋಟಿ ಉದ್ಯಮಿ ಎಲಾನ್ ಮಸ್ಕ್ ತನ್ನ ಕಂಪನಿಯಲ್ಲಿ ಯಾರಿಗೆ ಪ್ರಮೋಶನ್ ಕೊಡಬಹುದು ಎಂಬುದನ್ನು ನಿರ್ಧರಿಸುವಲ್ಲಿ ಜಾಣ. ಪ್ರಮೋಶನ್ ಬಗ್ಗೆ ಆತ ನೀಡಿರುವ ಸೂತ್ರಗಳನ್ನು ನೀಊ ಪಾಲಿಸ್ತೀರಾ ನೋಡಿ.
ಎಲಾನ್ ಮಸ್ಕ್ ತಮ್ಮ ಕಂಪನಿಯ ಸಿಬ್ಬಂದಿಗೆ ಕಾಲಕಾಲಕ್ಕೆ ಪ್ರಮೋಶನ್ ಕೊಡುವುದರಲ್ಲಿ, ಅಪ್ರಯೋಜಕರನ್ನು ಕಿತ್ತೆಸೆಯುವುದರಲ್ಲಿ ಫೇಮಸ್ಸು. ನೀನು ಹೇಗೆ ಪ್ರಮೋಶನ್ ನಿರ್ಧಾರ ಮಾಡ್ತೀಯಾ ಅಂತ ಕೇಳಿದಾಗ ಆತ ಕೆಲವು ಸೂತ್ರಗಳನ್ನು ನೀಡ್ತಾನೆ. ಆ ಸೂತ್ರಗಳು ಇಲ್ಲಿವೆ.
1) ಯಾವುದೇ ಕಂಪನಿಯಲ್ಲಿ ಪ್ರಮೋಷನ್ ಸಿಗದೇ ಹಿಂದೆ ಉಳಿದವರ ಗೋಳು ಯಾವಾಗ್ಲೂ ಒಂದೇ- ಸಿಕ್ಕಿದವರಿಗೇ ಮತ್ತೆ ಮತ್ತೆ ಯಾಕೆ ಪ್ರಮೋಷನ್ ಸಿಗುತ್ತೆ? ನಮಗ್ಯಾಕೆ ಸಿಗಲ್ಲ? ಆದರೆ ಯಾವುದೇ ಕಂಪನಿಯಲ್ಲಿ ಪ್ರಮೋಷನ್ ಸಿಗೋಕೆ ಈ ನಾಲ್ಕು ಅಂಶಗಳು ಮುಖ್ಯವಾಗಿ ಇರಬೇಕು- ಆ ಕಂಪನಿಯಲ್ಲಿ ಪ್ರಮೋಷನ್ ಕೊಡೋಕೆ ತಕ್ಕ ಸ್ಥಾನ ಇರಬೇಕು, ಆ ಸ್ಥಾನವನ್ನು ತುಂಬೋಕೆ ನೀವು ಅರ್ಹರಾಗಿರಬೇಕು, ಆ ಸ್ಥಾನಕ್ಕೆ ಅಲ್ಲಿ ಇರೋರಲ್ಲಿ ನೀವು ಅತ್ಯುತ್ತಮ ಆಯ್ಕೆ ಆಗಿರಬೇಕು, ಆ ಸ್ಥಾನವನ್ನು ವಹಿಸಿಕೊಳ್ಳೋಕೆ ನಿಮ್ಮ ಆಸಕ್ತಿ ಮತ್ತು ಬದ್ಧತೆಯನ್ನು ನೀವು ಪ್ರದರ್ಶಿಸಬೇಕು.
2) ಪ್ರಮೋಷನ್ ಸಿಗಬೇಕಿದ್ದರೆ ಈ ಕೆಲವು ಅಂಶಗಳಾದರೂ ನಿಮ್ಮಲ್ಲಿ ಇರಬೇಕು. ಕಂಪನಿಯಲ್ಲಿ ಯಾವ ಸ್ಥಾನ ಇಲ್ಲವೋ ಅದಕ್ಕೆ ನಿಮ್ಮನ್ನು ಪ್ರಮೋಟ್ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಕಂಪನಿಗೆ ಇದೀಗ ಒಬ್ಬ ಮ್ಯಾನೇಜರ್ ಬೇಕಿಲ್ಲ ಎಂದಿದ್ದರೆ, ನಿಮಗಾಗಿ ಯಾರೂ ಆ ಸ್ಥಾನ ಕ್ರಿಯೇಟ್ ಮಾಡುವುದಿಲ್ಲ.
3) ಪ್ರಮೋಷನ್ ಎಂಬುದು ಬಹುಮಾನವಲ್ಲ. ಪುರಸ್ಕಾರವಲ್ಲ ಅಥವಾ ಶಿಕ್ಷೆಯೂ ಅಲ್ಲ. ನಿಮ್ಮ ತಂದೆ ತಾಯಿ ನೀವು ಒಳ್ಳೆ ಕೆಲಸ ಮಾಡಿದರೆ ಬಹುಮಾನ, ಕೆಟ್ಟ ಕೆಲಸ ಮಾಡಿದರೆ ಶಿಕ್ಷೆ ಕೊಡುತ್ತಾರೆ. ಆದರೆ ಪ್ರಮೋಷನ್ ಅದಲ್ಲ. ಕಂಪನಿ ನಿಮ್ಮಿಂದ ಕೆಲ ನಿರ್ದಿಷ್ಟ ಕೆಲಸಗಳನ್ನು ಅಪೇಕ್ಷಿಸುತ್ತದೆ.
4) ನೀವು ಕಂಪನಿಯಲ್ಲಿ ಬಹಳ ಕಾಲದಿಂದ ಕೆಲಸ ಮಾಡುತ್ತಿದ್ದೀರಿ ಎಂದರೆ, ಪ್ರಮೋಷನ್ ಪಡೆಯಲು ನೀವು ಅರ್ಹರು ಎಂದಲ್ಲ. ನಿಮಗೆ ಸೀನಿಯಾರಿಟಿ ಇರಬಹುದು. ಆದರೆ ಬೇರೆ ಅಂಶಗಳೂ ಪರಿಗಣಿಸಲ್ಪಡುತ್ತವೆ.
5) ಅರ್ಹತೆಯೂ ಕೆಲವೊಮ್ಮೆ ಸಾಲದು. ನಿಮ್ಮ ಕಂಪನಿಯಲ್ಲಿ ನೀವು ಮೇಲಿನ ಸ್ಥಾನಕ್ಕೆ ಅರ್ಹರೇ ಇರಬಹುದು. ಆದರೆ ನಿಮಗಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿದವರನ್ನು ಹೊರಗಿನಿಂದ ತರಲು ಕಂಪನಿ ಇಷ್ಟಪಡಬಹುದು. ಹೀಗಾಗಿ ನಿಮ್ಮ ಅರ್ಹತೆಯನ್ನು ಸದಾ ಹೆಚ್ಚಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ.
6) ನೀವು ಪ್ರಮೋಷನ್ ಪಡೆಯುವುದು, ನಂತರ ಅದೇ ಹಳೆಯ ಕೆಲಸ ಮಾಡುವುದು ಎಂದಾಗುವುದಿಲ್ಲ. ಪ್ರಮೋಷನ್ ಎಂದರೆ ಬೇರೆ ಉದ್ಯೋಗವೇ ಆಗಿರುತ್ತದೆ. ಹಳೆಯ ಉದ್ಯೋಗಕ್ಕೆ ಹೊಸ ಸಂಬಳ ಯಾರೂ ಕೊಡುವುದಿಲ್ಲ.
7) ಪ್ರಮೋಷನ್ ಎಂಬುದು ಭೂತಕಾಲಕ್ಕಲ್ಲ ಬದಲಾಗಿ ಭವಿಷ್ಯಕ್ಕೆ ಇರುವುದು. ಅಂದರೆ ನೀವು ಎಷ್ಟೇ ನಿಯತ್ತಾಗಿ ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಿರಿ, ಅದು ಪ್ರಮೋಷನ್ ವಿಚಾರದಲ್ಲಿ ಕೆಲಸಕ್ಕೆ ಬರುವುದಿಲ್ಲ. ಕಂಪನಿ ಬಯಸಿರುವ ಸ್ಥಾನದಲ್ಲಿ ನಿಮ್ಮಿಂದ ಏನು ಬಯಸುತ್ತದೆ ಎಂಬುದೇ ಮುಖ್ಯ.
8) ಕೆಲವೊಮ್ಮೆ ಪ್ರಮೋಷನ್‌ನಿಂದ ನಷ್ಟಗಳೂ ಇರಬಹುದು. ಅಂದರೆ ಸ್ಥಾನದಲ್ಲಿ ಉನ್ನತಿ ಸಿಕ್ಕಿದರೂ ಸಂಬಳ ಹೆಚ್ಚಲಿಕ್ಕಿಲ್ಲ. ಆಗ ನಿಮ್ಮ ಕೆಲಸ, ಹೊಣೆಗಾರಿಕೆ ಹೆಚ್ಚುತ್ತದೆ. ಆದರೆ ಹಳೇ ಸಂಬಳ ಇರುತ್ತದೆ, ಹಾಗಿದ್ದರೆ ಪ್ರಮೋಷನ್‌ನ ಅಗತ್ಯವೇನು? ಅದು ನಿಮ್ಮ ಹೊಣೆಗಾರಿಕೆ ಮೇಲಿಟ್ಟ ನಂಬಿಕೆ.
9) ಪ್ರಮೋಷನ್ ಎಂಬುದು ನಿಮ್ಮ ಸಂಬಳ ಹೆಚ್ಚು ಮಾಡಲು ಕಂಪನಿ ಒದಗಿಸುವ ಅವಕಾಶವಲ್ಲ. ಕಂಪನಿ ನಿಮಗೆ ಹೊರಿಸುವ ಹೊಣೆಗಾರಿಕೆಯೇ ಪ್ರಮೋಷನ್. ಹೀಗಾಗಿ ಇಲ್ಲಿ ಮೊದಲ ಸ್ಥಾನ ಹೆಚ್ಚಿನ ಹೊಣೆಗಾರಿಕೆಗೆ. ಸಂಬಳದ ಸ್ಥಾನ ಎರಡನೆಯದು.
10) ನೀವು ಬಯಸಿದ ಸ್ಥಾನಕ್ಕೆ ಹೋಗಲು ನಿರಂತರ ಪ್ರಯತ್ನ ಮಾಡುತ್ತಲೇ ಇರಬೇಕು. ಅದರ ಬಗ್ಗೆ ತಿಳಿದುಕೊಂಡು, ನಿಮ್ಮ ಅರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಾ, ಅಪ್‌ಸ್ಕಿಲ್ ಆಗುತ್ತಾ ಇರಬೇಕು.
ಇಂಟರ್ನ್‌ಶಿಪ್‌ಗೆ ರಾಜೀನಾಮೆ ನೀಡಿದ ಬೆಂಗಳೂರು ವಿದ್ಯಾರ್ಥಿ, ಕಾರಣ ಕೇಳಿದ ಬಾಸ್‌ಗೆ ಅಚ್ಚರಿ!
11) ಪ್ರಮೋಷನ್ ಆದ ಬಳಿಕ ನಾನು ಲೀಡರ್ ಆಗುತ್ತೇನೆ ಎಂದುಕೊಳ್ಳಬೇಡಿ. ನಿಮ್ಮಲ್ಲಿ ಲೀಡರ್‌ಶಿಪ್ ಕ್ವಾಲಿಟಿ ಇದ್ದರೆ ಮಾತ್ರವೇ ಪ್ರಮೋಟ್ ಆಗುತ್ತೀರಿ. ಅಂದರೆ ಪ್ರಮೋಷನ್‌ಗೆ ನಾಯಕತ್ವ ಗುಣವೂ ಒಂದು ಅರ್ಹತೆಯೇ ಆಗಿದೆ.
12) ಪ್ರಮೋಷನ್ ಆದ ಬಳಿಕ ನೀವು ಕೆಲಸಗಳನ್ನು ಮಾಡಲಾರಿರಿ; ಕೆಲವು ಕೆಲಸ ಮಾಡಲೇಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಕೈಕೆಳಗಿನ ಕೆಲವರನ್ನು ಕೆಲಸದಿಂದ ತೆಗೆಯಬೇಕಾಗಬಹುದು. ಇಂಥ ಕಠಿಣ ನಿರ್ಧಾರಗಳಿಗೆ ನೀವು ಸಿದ್ಧರಿರಬೇಕಾಗುತ್ತೆ.
13) ಸದಾ ಉತ್ತಮ ಸಂವಹನ ಇಟ್ಟುಕೊಂಡಿರುವುದು; ಕಂಪನಿ ಬಗ್ಗೆ ಉತ್ತಮ ಭಾವನೆ ಮೂಡಿಸುವುದು; ನಿಮ್ಮ ಕೆಲಸವನ್ನು ಎದ್ದು ಕಾಣಿಸುವುದು; ಸೆಲ್ಫ್ ಪ್ರಮೋಷನ್- ಇದೆಲ್ಲವೂ ಇದ್ದರೆ ಮಾತ್ರವೇ ನೀವು ಪ್ರಮೋಟ್ ಆಗುತ್ತೀರಿ.
14) ಕಂಪನಿಯಲ್ಲಿ 'ಪಾಲಿಟಿಕ್ಸ್' ಇರತ್ತೆ. ಆದರೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅದರ ಪಾಡಿಗೆ ಅದಿರಲಿ. ನಿಮ್ಮ ಪಾಡಿಗೆ ನೀವಿರಿ. ಆದರೆ ಪದೇ ಪದೇ ನಿಮ್ಮ ಕುರಿತೇ ಪಾಲಿಟಿಕ್ಸ್ ನಡೆಯುತ್ತಿದೆ ಎಂದಾದರೆ ನೀವೇ ಸಮಸ್ಯೆಯ ಕೇಂದ್ರದಲ್ಲಿದ್ದೀರಿ ಎಂದರ್ಥವಾಗುತ್ತದೆ.
15) ಪರಿಶ್ರಮಪಟ್ಟು ಕೆಲಸ ಮಾಡುವುದು ಅತ್ಯಂತ ಮುಖ್ಯ. ಈಗ ಕೊಟ್ಟಿರುವ ಕೆಲಸವನ್ನೇ ಚೆನ್ನಾಗಿ ಮಾಡದವರಿಂದ ಇನ್ನೂ ಹೆಚ್ಚಿನ ಹೊಣೆಗಾರಿಕೆ ನಿರೀಕ್ಷಿಸಲು ಆದೀತೆ? ನಿಮ್ಮಲ್ಲಿ ಇರುವ ಇದ್ಯಾವ ಗುಣವೂ ಆ ಕಂಪನಿಯಲ್ಲಿ ವರ್ಕ್ಔಟ್ ಆಗುತ್ತಿಲ್ಲ ಅಂತಾದರೆ, ಅದನ್ನು ಬಿಟ್ಟುಬಿಡಿ, ಯಾಕೆ ಅಲ್ಲಿರಬೇಕು?
ಮನೆಯಲ್ಲಿ 7 ಗಂಟೆ ನಡೆದಾಡಿ ದಿನಕ್ಕೆ 28,000 ರೂ ಸಂಪಾದಿಸಿ, ಟೆಸ್ಲಾ ಉದ್ಯೋಗ ಆಫರ್!