ಮದ್ವೆಯಾಗೋ ಹುಡುಗ, ಹುಡುಗಿ ಎತ್ತರವಾಗಿರಬೇಕು ಎಂದು ಎಲ್ಲರೂ ಬಯಸ್ತಾರೆ. ಹಾಗಂತ ಹೈಟ್ ಇಲ್ಲದಿರೋದು ಮದ್ವೆಯಾಗದೆ ಇರೋಕೆ ಆಗುತ್ತಾ ? 3 ಅಡಿಯಿರೋ ದೇಹದಾರ್ಢ್ಯ ಪಟು 4 ಅಡಿ ಎತ್ತರದ ವಧುವನ್ನು ಮದುವೆಯಾಗಿದ್ದಾರೆ.
ವ್ಯಕ್ತಿಯ ಎತ್ತರದಿಂದ ಆತನ ಸಾಧನೆ, ಸಾಮರ್ಥ್ಯವನ್ನು ಅಳೆಯಲಾಗುವುದಿಲ್ಲ ಎಂಬುದು ಅದೆಷ್ಟೋ ಬಾರಿ ಸಾಬೀತಾಗಿದೆ. ಹೀಗೆಯೇ ಭಾರತದ ದೇಹದಾರ್ಢ್ಯ ಪಟು ಪ್ರತೀಕ್ ಮೋಹಿತೆ ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.ಇತ್ತೀಚೆಗಷ್ಟೇ ಈ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾಗಿದ್ದಾರೆ, ಬಾಡಿ ಬಿಲ್ಡರ್ ಪ್ರತೀಕ್ ಮೋಹಿತೆ ಸ್ವತಃ 3 ಅಡಿಯಿದ್ದಾರೆ. ಹೀಗಾಗಿ ಇವರ ಮದುವೆಯ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿವೆ.
ಪ್ರತೀಕ್ ಮೋಹಿತೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮದುವೆಗೆ (Marriage) ಸಂಬಂಧಿಸಿದ ಅನೇಕ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊಗಳಲ್ಲಿ ಒಂದರಲ್ಲಿ, ಪ್ರತೀಕ್ ತಮ್ಮ ವಧುವನ್ನು (Bride) ಕರೆದೊಯ್ಯಲು ಡಿಜೆಯ ಕಾರಿನ ಮೇಲೆ ನಿಂತಿದ್ದಾಗ ನೃತ್ಯ ಮಾಡುವುದನ್ನು ನೋಡಬಹುದು. ಇದರಲ್ಲಿ ಕ್ರೀಂ ಮತ್ತು ಮರೂನ್ ಕಲರ್ ಶೇರ್ವಾನಿ ಧರಿಸಿ ಮೆರೂನ್ ಕಲರ್ ಪೇಟ ತೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಅವರು ಮೈ ಹೂನ್ ಡಾನ್ ಹಾಡಿನಲ್ಲಿ ನೃತ್ಯ (Dance) ಮಾಡುತ್ತಿದ್ದಾರೆ.
undefined
ಇವನಿಗೇನ್ ತಲೆಕೆಟ್ಟಿದ್ಯಾ..? ತನ್ನದೇ ಫಸ್ಟ್‌ನೈಟ್ ವಿಡಿಯೋ ವೈರಲ್ ಮಾಡಿದ ವರ!
ಅಷ್ಟೇ ಅಲ್ಲ ಪ್ರತೀಕ್ ತಮ್ಮ ಸಂಗೀತ ಕಾರ್ಯಕ್ರಮದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಅತ್ತಿಗೆಯೊಂದಿಗೆ ಬಿಳಿ ಬಣ್ಣದ ಕುರ್ತಾ ಧರಿಸಿ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಪ್ರತೀಕ್ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social media) ತುಂಬಾ ವೈರಲ್ ಆಗುತ್ತಿದೆ, ಇದರಲ್ಲಿ ಅವರು ವ್ಯಕ್ತಿಯ ಭುಜದ ಮೇಲೆ ಕುಳಿತು ನೃತ್ಯ ಮಾಡುತ್ತಿದ್ದಾರೆ. ಈ ಡ್ಯಾನ್ಸಿಂಗ್ ವಿಡಿಯೋ ಅವರ ಮೆಹಂದಿ ಕಾರ್ಯಕ್ರಮದ್ದಾಗಿದೆ.
ಪ್ರತೀಕ್ ಮೋಹಿತೆ ಯಾರು?
ಪ್ರತೀಕ್ ರಾಯಗಢದ ನಿವಾಸಿ, ಅವರ ಪತ್ನಿ ಪುಣೆಯವರು. ಪ್ರತೀಕ್ 2016ರಲ್ಲಿ ದೇಹದಾರ್ಢ್ಯವನ್ನು ಪ್ರಾರಂಭಿಸಿದರು ಮತ್ತು 28 ನೇ ವಯಸ್ಸಿನಲ್ಲಿ ಪ್ರತೀಕ್ ವಿಶ್ವದ ಅತ್ಯಂತ ಕಿರಿಯ ದೇಹದಾರ್ಢ್ಯಗಾರನಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದರು. 4 ವರ್ಷಗಳ ಹಿಂದೆ ತಂದೆ ತನಗೆ ಜಯಾಗೆ ಪರಿಚಯಿಸಿದ್ದರು ಎಂದು ಪ್ರತೀಕ್ ಹೇಳಿದ್ದಾರೆ. ಅದೇ ಸಮಯದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ ಮತ್ತು 2018 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಈಗ ಇಬ್ಬರೂ ಮದುವೆಯಾಗಿದ್ದಾರೆ.
ಯಪ್ಪಾ..ಹೀಗೂ ಇರ್ತಾರ, ಗಂಡನಿಗೆ ಇನ್ನೊಬ್ಬಳ ಜೊತೆ ಅಫೇರ್ ಇರ್ಲಿ ಅನ್ನೋದೆ ಈಕೆಯ ಆಸೆಯಂತೆ!
3 ಅಡಿ ಎತ್ತರದ ವಧುವನ್ನು ವರಿಸಿದ 3 ಅಡಿ ಎತ್ತರದ ವರ
ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಹಿಂದೆ ಇಂಥದ್ದೇ ಮದ್ವೆಯೊಂದು ನಡೆದಿತ್ತು. ಇಮ್ರಾನ್ ಕಡಿಮೆ ಎತ್ತರ (Height) ಇದ್ದ ಕಾರಣದಿಂದ ಆತನ ಮದುವೆಗೆ ಅಡ್ಡಿಯಾಗುತ್ತಿತ್ತು. ಮನೆಯವರು ಸಹ ಆತ ಬೇಗ ಮದುವೆಯಾಗಿ ಸೆಟಲ್ ಆಗ್ಬೇಕು ಎಂಬ ಚಿಂತೆಯಲ್ಲಿದ್ದರು. ಆದರೆ, ಇಮ್ರಾನ್ 3 ಅಡಿ ಎತ್ತರವಿದ್ದ ಕಾರಣ, ಈತನ ಎತ್ತರಕ್ಕೆ ತಕ್ಕಂತ ವಧು ಸಿಕ್ಕಿರಲಿಲ್ಲ. ಆದರೆ, ಈ ಹುಡುಕಾಟ ಕೊನೆಗೂ ಅಂತ್ಯವಾಗಿದ್ದು, ಆತನ ಮದುವೆಯೂ ಆಯಿತು. ಇಮ್ರಾನ್ - ಖುಷ್ಬೂ ವಿವಾಹ ಫೆಬ್ರವರಿ 12, 2023 ರಂದು ಉತ್ತರ ಪ್ರದೇಶದ ಆಲಿಗಢದಲ್ಲಿ ನಡೆಯಿತು. ಖುಷ್ಬೂ ಇಮ್ರಾನ್‌ಗಿಂತ ಕೇವಲ 0.4 ಇಂಚು ಕಡಿಮೆ ಎತ್ತರವಾಗಿದ್ದಾರೆ. ಜೋಡಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಉತ್ತರ ಪ್ರದೇಶದ ಅಲಿಘರ್‌ನ ಜೀವನ್‌ಗಢ್ ಗಲ್ಲಿಯ ನಂ. 8 ರ ನಿವಾಸಿ ಇಮ್ರಾನ್ ಕಿರಿಯ ಮಗ. ಇವರಿಗೆ 6 ಜನ ಅಣ್ಣ- ಅಕ್ಕಂದಿರಿದ್ದು, ಇವರೆಲ್ಲರೂ ಮದುವೆಯಾಗಿದ್ದಾರೆ. ಇಮ್ರಾನ್ ತನ್ನ ತಾಯಿ ಬಿರ್ಜಿಸ್ ಜೊತೆ ವಾಸಿಸುತ್ತಿದ್ದು, ಜತೆಗೆ ದೋಧ್‌ಪುರದ ಹೋಟೆಲ್‌ನಲ್ಲಿ ಕೆಲಸ ಮಾಡುವ ಮೂಲಕ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದ. ಇತ್ತೀಚೆಗಷ್ಟೇ ಇಮ್ರಾನ್ ತಾಯಿ ಬಿರ್ಜಿಸ್ ಅವರ ಕಣ್ಣುಗಳಿಗೆ ಆಪರೇಷನ್ ಸಹ ಮಾಡಿಸಿದ್ದಾನೆ.