ನವದೆಹಲಿ: ಕೆಲವು ತಿಂಗಳ ಹಿಂದೆ ಗುಜರಾತ್‌ನ 24 ವರ್ಷದ ಯುವತಿ ಕ್ಷಮಾ ಬಿಂದು ಎಂಬಾಕೆ ತನ್ನನ್ನೇ ತಾನು ಮದುವೆಯಾಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದಳು. ಈ ಘಟನೆ ಮಾಸುವ ಮೊದಲೇ ಇದೇ ರೀತಿ 24ರ ಹರೆಯದ ಯುವತಿಯೊಬ್ಬಳು ತನ್ನನ್ನೇ ತಾನು ಮದ್ವೆಯಾಗಿ 24 ಗಂಟೆಯಲ್ಲೇ ವಿಚ್ಛೇದನ ನೀಡಿಕೊಂಡಿದ್ದಾಳೆ. ಈ ವಿಚಿತ್ರ ಪ್ರಕರಣವೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಹೀಗೆ ತನ್ನನ್ನೇ ತಾನು ಮದ್ವೆಯಾಗಿ ವಿಚ್ಛೇದನ (Divorce) ನೀಡಿದ ಯುವತಿಯ ಹೆಸರು ಸೋಫಿ ಮೌರೆ. ಈಕೆ ಎಲ್ಲಿಯವಳು ಯಾವ ದೇಶದವಳು ಯಾವ ಊರಿನವಳು ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ಆದರೆ ಈಕೆ ತಾನು ತನ್ನನ್ನೇ ಮದ್ವೆಯಾಗಿದ್ದು, ಮದ್ವೆಯಾದ 24 ಗಂಟೆಯಲ್ಲಿ ಇದು ನನ್ನಿಂದಾಗಾದು ಎಂದು ವಿಚ್ಛೇದನ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಈ ವಿಚಿತ್ರ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಗೋವಾಗೆ ಹನಿಮೂನ್‌ಗೆ ಹೊರಟ ತನ್ನನ್ನು ತಾನೇ ಮದ್ವೆಯಾದ ಯುವತಿ
25 ವರ್ಷದ ಯುವತಿ ಆಕೆಯನ್ನೇ ಆಕೆ ಮದ್ವೆಯಾಗ್ತಾಳೆ. ನಂತರ 24 ಗಂಟೆಯಲ್ಲೇ ವಿಚ್ಛೇದನ ಪಡೆದಿದ್ದಾಗಿ ಹೇಳಿಕೊಳ್ಳುತ್ತಾಳೆ. ಸೋಫಿ ಮೌರ್ (Sofi Maure) ಫೆಬ್ರವರಿಯಲ್ಲಿ ತನ್ನನ್ನು ತಾನು ಮದುವೆಯಾಗುವ ನಿರ್ಧಾರವನ್ನು ಪ್ರಕಟಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಅವರು ವಧುವಿನಂತೆ ಸಿಂಗರಿಸಿಕೊಂಡು ಬಿಳಿ ಬಣ್ಣದ ಗೌನ್ ಧರಿಸಿಕೊಂಡಿದ್ದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ತಾನು ತನ್ನನ್ನೇ ಮದ್ವೆಯಾಗುತ್ತಿರುವ ವಿಚಾರವನ್ನು ತಿಳಿಸಿದ್ದರು. ಅಲ್ಲದೇ ತಮ್ಮ ಮದ್ವೆಗಾಗಿ ಅವರು ಕೇಕ್ ತಯಾರಿಸಿರುವುದನ್ನು ಕೂಡ ಹೇಳಿಕೊಂಡಿದ್ದರು. ಆದರೆ ಈಕೆ ಕ್ಷಮಾ ಬಿಂದು (Kshama Bindu) ಅವರಂತೆ ತಮ್ಮ ಮದುವೆಗೆ ಬದ್ಧರಾಗಿ ಉಳಿದಿಲ್ಲ. ಕೇವಲ 24 ಗಂಟೆಯಲ್ಲಿ ಅವರಿಗೆ ಮದ್ವೆ ಸಾಕೆನಿಸಿದ್ದು ವಿಚ್ಛೇದನ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
Sologomy ಅಂದ್ರೇನು ? ಇದಕ್ಕಿದ್ಯಾ ಕಾನೂನು ಮಾನ್ಯತೆ ?
ಇಂದು ನನ್ನ ಜೀವನದ ಅತ್ಯಂತ ಹುಸಿ ಎನಿಸಿದ ಕ್ಷಣ, ನಾನು ಮದ್ವೆ ಧಿರಿಸನ್ನು ಖರೀದಿಸಿದೆ ಮತ್ತು ನನ್ನನ್ನೇ ಮದ್ವೆಯಾಗಲು ನನಗಾಗಿ ನಾನು ಕೇಕ್ ತಯಾರಿಸಿದೆ ಎಂದು ಆಕೆ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ. ಹೀಗೆ ಫೆಬ್ರವರಿ 20 ರಂದು ಮದ್ವೆಯಾದ ಈಕೆ ನಾನು ವಿಚ್ಛೇದನ ಪಡೆಯಲು ಮುಂದಾಗಿದ್ದೇನೆ ಹಾಗೂ ಅದರ ಪ್ರಕ್ರಿಯೆ ಹೇಗೆ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಆದರೆ ಈಕೆಯ ಪೋಸ್ಟ್‌ಗೆ ಜನ ಹಲವು ಕಾಮೆಂಟ್ ಮಾಡಿದ್ದು, ಮೊದಲು ಕೆಲಸ ಹುಡುಕಿ ಎಂದು ಪ್ರತಿಕ್ರಿಯಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.