ಉತ್ತರಪ್ರದೇಶದ ಔರಿಯಾದಲ್ಲಿ ವಿಚಿತ್ರವಾದ ಮದ್ವೆಯೊಂದು ನಡೆದಿದೆ. 30ರ ಹರೆಯದ ಯುವತಿಯೊಬ್ಬಳು ಭಗವಾನ್ ಶ್ರೀ ಕೃಷ್ಣ ಪರಮಾತ್ಮನನ್ನೇ ವರಿಸಿದ್ದಾಳೆ. ದೇವರನ್ನೇ ವರಿಸುವ ಮಗಳ ಆಸೆಗೆ ಪೋಷಕರು ಸಾಥ್ ನೀಡಿದ್ದು, ಅದರಂತೆ ಅದ್ದೂರಿಯಾಗಿ ಶ್ರೀಕೃಷ್ಣನ ಪ್ರತಿಮೆಯೊಂದಿಗೆ ವಧುವಿನ ಮದ್ವೆ ನಡೆದಿದೆ.
ಅಔರಿಯಾ: ಉತ್ತರಪ್ರದೇಶದ ಔರಿಯಾದಲ್ಲಿ ವಿಚಿತ್ರವಾದ ಮದ್ವೆಯೊಂದು ನಡೆದಿದೆ. 30ರ ಹರೆಯದ ಯುವತಿಯೊಬ್ಬಳು ಭಗವಾನ್ ಶ್ರೀ ಕೃಷ್ಣ ಪರಮಾತ್ಮನನ್ನೇ ವರಿಸಿದ್ದಾಳೆ. ದೇವರನ್ನೇ ವರಿಸುವ ಮಗಳ ಆಸೆಗೆ ಪೋಷಕರು ಸಾಥ್ ನೀಡಿದ್ದು, ಅದರಂತೆ ಅದ್ದೂರಿಯಾಗಿ ಶ್ರೀಕೃಷ್ಣನ ಪ್ರತಿಮೆಯೊಂದಿಗೆ ವಧುವಿನ ಮದ್ವೆ ನಡೆದಿದೆ. 30 ವರ್ಷ ಪ್ರಾಯದ ರಕ್ಷಾ ಹೀಗೆ ದೇವರನ್ನೇ ವರಿಸಿದ ಯುವತಿ, ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಅವರ ಪುತ್ರಿಯಾಗಿರುವ ರಕ್ಷಾ, ಪದವಿ ಪೂರ್ಣಗೊಳಿಸಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ.
ಕೃಷ್ಣಭಕ್ತೆಯಾಗಿರುವ ರಕ್ಷಾ ಕೃಷ್ಣನೊಂದಿಗೆ ವಿವಾಹವಾಗುವ ಮೂಲಕ ಈಕೆ ತನ್ನ ಇಡೀ ಜೀವನವನ್ನು ಕೃಷ್ಣ ಧ್ಯಾನದಲ್ಲಿ ಕಳೆಯಲು ಮುಂದಾಗಿದ್ದಾಳೆ. ಹಾಗೆಯೇ ಮಗಳ ಆಸೆ ಪೂರೈಸಲು ಆಕೆಯ ಪೋಷಕರು ಅದ್ಧೂರಿಯಾಗಿ ಈ ವಿವಾಹ ಸಮಾರಂಭವನ್ನು ಆಯೋಜಿಸಿದ್ದರು. ಮದುವೆಗೆ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಆಹಾರ, ಸಂಗೀತ, ನೃತ್ಯ, ಪಾನೀಯ ಸೇರಿದಂತೆ ಎಲ್ಲವನ್ನೂ ಅಲ್ಲಿ ಏರ್ಪಡಿಸಲಾಗಿತ್ತು. ಹಾಗೆಯೇ ಮದುವೆಗಾಗಿ ಸುಂದರವಾದ ಮಂಟಪವನ್ನು ಅಲಂಕರಿಸಲಾಗಿತ್ತು. ಹಾಗೆಯೇ ಶ್ರೀಕೃಷ್ಣನ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆ ವಧುವಿನ ಮನೆಗೆ ತಲುಪುತ್ತಿದ್ದಂತೆ ದಿಬ್ಬಣ ಬಂದವರು ಡಿಜೆ ಹಾಡುಗಳಿಗೆ ಸಖತ್ ಆಗಿ ಡಾನ್ಸ್ ಮಾಡಿದರು.
undefined
ಹೀಗೂ ಮಾಡ್ತಾರಾ..ಮದುವೆಗೆ ಒತ್ತಾಯಿಸಿದ್ದಕ್ಕೆ ದೇವರನ್ನೇ ವರಿಸಿದ ಯುವತಿ !
ತಡರಾತ್ರಿಯವರೆಗೂ ನಡೆದ ಮದುವೆ ಕಾರ್ಯಕ್ರಮದ ನಂತರ ವಧು ಕೃಷ್ಣನ ಪ್ರತಿಮೆಯ ಜೊತೆ ಸುಕಂಚಿಪುರದಲ್ಲಿರುವ ತನ್ನ ಸಂಬಂಧಿಗಳ ಮನೆಗೆ ತೆರಳಿದ್ದಾಳೆ. ನಂತರ ತನ್ನ ಮಡಿಲಲ್ಲಿ ಶ್ರೀಕೃಷ್ಣನನ್ನು ಇರಿಸಿಕೊಂಡು ತನ್ನ ತಾಯಿ ಮನೆಗೆ ಮರಳಿ ಬಂದಿದ್ದಾಳೆ. ರಕ್ಷಾ ಔರಿಯಾ (Auraiya) ಜಿಲ್ಲೆಯ ಬಿಧುನಾ (Bidhuna) ಪ್ರದೇಶದ ಭರ್ತಾನ (Bharthana) ನಿವಾಸಿಯಾಗಿದ್ದು, ಕೃಷ್ಣನನ್ನೇ ವರಿಸಲು ನಿರ್ಧರಿಸಿ ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ್ದಳು. ಜುಲೈ 2022ರಲ್ಲಿ ಈ ವಿಚಾರವನ್ನು ಈಕೆ ಪೋಷಕರಿಗೆ ತಿಳಿಸಿದಾಗ, ಪೋಷಕರು ಆಕೆಯನ್ನು ವೃಂದಾವನಕ್ಕೆ ಕರೆದುಕೊಂಡು ಹೋಗಿದ್ದರು.
ಬಾಲ್ಯದಿಂದಲೂ ಶ್ರೀಕೃಷ್ಣನ ಜೊತೆ ತನಗೆ ಅಗಾಧವಾದ ಬಾಂಧವ್ಯವಿದ್ದು, ದೀರ್ಘಕಾಲದಿಂದ ನನಗೆ ದೇವರು ಕನಸಿನಲ್ಲಿ ಬರುತ್ತಿದ್ದರು. ಕನಸಿನಲ್ಲಿ ಎರಡು ಬಾರಿ ನನಗೆ ಶ್ರೀಕೃಷ್ಣ ಹೂವಿನ ಹಾರ ಹಾಕಿದಂತಾಯಿತು ಎಂದು ಆಕೆ ಈ ಬಗ್ಗೆ ಹೇಳಿಕೊಂಡಿದ್ದಾಳೆ. ರಕ್ಷಾಳ ಹಿರಿಯ ಸಹೋದರಿ ಅನುರಾಧ ಮಾತನಾಡಿ, ಕುಟುಂಬದವರು ಹಾಗೂ ಸಂಬಂಧಿಗಳ ಒಪ್ಪಿಗೆಯೊಂದಿಗೆ ನನ್ನ ಸಹೋದರಿ ಭಗವಂತ ಶ್ರೀಕೃಷ್ಣನನ್ನು ಮದ್ವೆಯಾಗಿದ್ದಾಳೆ. ಪ್ರತಿಯೊಬ್ಬರೂ ಮದ್ವೆಗೆ ಹಾಜರಾಗಿದ್ದರು. ಶ್ರೀಕೃಷ್ಣನನ್ನು ಮದ್ವೆಯಾಗುವ ರಕ್ಷಾಳ ನಿರ್ಧಾರದಿಂದ ನಾವು ಖುಷಿಯಾಗಿದ್ದೇವೆ. ಇನ್ನು ಮುಂದೆ ಶ್ರೀಕೃಷ್ಣನೂ ನಮಗೆ ಬಂಧು. ಶ್ರೀಕೃಷ್ಣನ ಆಶೀರ್ವಾದದಿಂದಲೇ ಪ್ರತಿಯೊಂದು ನಡೆಯುತ್ತಿದೆ ಎಂದು ಅನುರಾಧ ಹೇಳಿದ್ದಾರೆ.
Relationship Tips : ಮದ್ವೆ ಆಗ್ತಿಲ್ವಾ? ಕಾರಣಗಳು ನೂರಾರು ಇರಬಹುದು