ಫಸ್ಟ್‌ನೈಟ್‌ನಲ್ಲಿ ನವದಂಪತಿಗೆ ಕೇಸರಿ ಹಾಲು ಕೊಡೋದ್ಯಾಕೆ? ಕಾಮಸೂತ್ರದಲ್ಲಿದೆ ಕಾರಣ

Published : Oct 28, 2023, 04:53 PM IST
ಫಸ್ಟ್‌ನೈಟ್‌ನಲ್ಲಿ ನವದಂಪತಿಗೆ ಕೇಸರಿ ಹಾಲು ಕೊಡೋದ್ಯಾಕೆ? ಕಾಮಸೂತ್ರದಲ್ಲಿದೆ ಕಾರಣ

ಸಾರಾಂಶ

ಹಿಂದೂ ಸಂಸ್ಕೃತಿಯ ವಿವಾಹದ ಮೊದಲ ರಾತ್ರಿ ವಧು ಕೇಸರಿ ಹಾಲಿನ ಲೋಟದೊಂದಿಗೆ ಮಲಗುವ ಕೋಣೆಗೆ ಪ್ರವೇಶಿಸುತ್ತಾಳೆ. ಆದರೆ ಇದರ ಹಿಂದಿರುವ ಕಾರಣದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? 

ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಅರ್ಥಪೂರ್ಣ ಆಚರಣೆಗಳಿವೆ. ಪೂಜೆ, ಗೃಹಪ್ರವೇಶ, ಮದುವೆ, ಸೀಮಂತ ಹೀಗೆ ಎಲ್ಲವೂ ಶಾಸ್ತ್ರಪ್ರಕಾರವಾಗಿ ನಡೆಯುತ್ತವೆ. ಎಲ್ಲಾ ಆಚರಣೆಯ ಹಿಂದೆ ನಿರ್ಧಿಷ್ಟವಾದ ಕಾರಣವಿರುತ್ತದೆ. ಆದರೆ ಹಿಂದಿನ ಕ್ರಮಗಳನ್ನು ಯಥಾಪ್ರಕಾರ ಅಥವಾ ಸ್ಪಲ್ಪ ಬದಲಾಯಿಸಿ ಆಚರಿಸುವ ಅದೆಷ್ಟೋ ಮಂದಿಗೆ ಅದರ ಹಿಂದಿರುವ ಕಾರಣ ಗೊತ್ತಿಲ್ಲ. ಹಳೆಯ ಆಚರಣೆಗಳನ್ನು ಪ್ರಶ್ನಿಸುವುದು ಮತ್ತು ಅವುಗಳ ಹಿಂದೆ ತರ್ಕವನ್ನು ಕಂಡುಹಿಡಿಯುವುದು ಅನೇಕರಿಗೆ ತಪ್ಪಾಗಿ ಕಾಣಿಸಬಹುದು. ಆದರೆ ಸಂಸ್ಕೃತಿ, ಆಚರಣೆಗಳ ಬಗ್ಗೆ ಪೂರ್ಣವಾಗಿ ತಿಳಿದುಕೊಂಡು ಅದನ್ನು ಅನುಸರಿಸುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.

ಹಿಂದೂ ಸಂಸ್ಕೃತಿಯ ವಿವಾಹದ ಮೊದಲ ರಾತ್ರಿ ವಧು ಕೇಸರಿ ಹಾಲಿನ ಲೋಟದೊಂದಿಗೆ ಮಲಗುವ ಕೋಣೆಗೆ ಪ್ರವೇಶಿಸುತ್ತಾಳೆ. ಆದರೆ ಇದರ ಹಿಂದಿರುವ ಕಾರಣದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? 

ರಾತ್ರಿಯಿಡೀ ಎದ್ದು, ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯಾ, ಸ್ನೇಹಿತರ ಫಸ್ಟ್ ನೈಟ್ ವಿಶ್‌ ಬ್ಯಾನರ್ ವೈರಲ್‌

ಭಾರತದಲ್ಲಿ ವಿವಾಹದ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳನ್ನು (Rituals) ಅನುಸರಿಸಲಾಗುತ್ತದೆ. ಮದುವೆಯಾದ ಮೊದಲ ರಾತ್ರಿ ವಧುವರರಿಗೆ ಕುಡಿಯಲು ಹಾಲು ನೀಡುವುದು ಹಿಂದೂ ಧರ್ಮದಲ್ಲಿರುವ ಸಂಪ್ರದಾಯ. ಈ ಪದ್ಧತಿಯ ಹಿಂದಿನ ನಿಜವಾದ ಕಾರಣ ಹಲವಾರು ಜನರಿಗೆ ಇಂದಿಗೂ ತಿಳಿದಿಲ್ಲ. ಈ ಸಂಪ್ರದಾಯದ ಹಿಂದಿನ ಕೆಲವು ನೈಜ ಕಾರಣಗಳು ಇಲ್ಲಿವೆ.

ಮದುವೆಯ ಮೊದಲ ರಾತ್ರಿ
ಮದುವೆಯು ಒಂದು ಪವಿತ್ರವಾದ ಬಂಧನವಾಗೊದೆ. ಹೀಗಾಗಿ ಮದುವೆಯ ಸಂದರ್ಭದಲ್ಲಿ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡ ಅನೇಕ ಸಂಪ್ರದಾಯಗಳಿವೆ,. ಇವುಗಳಂತೆಯೇ. ಮೊದಲ ರಾತ್ರಿ ಆನಂದಮಯ ವೈವಾಹಿಕ ಜೀವನಕ್ಕೆ ಅಡಿಪಾಯ ಎಂದು ನಂಬಲಾಗಿದೆ. ಸಂಪ್ರದಾಯಗಳ ಪ್ರಕಾರ, ಒಂದು ಲೋಟ ಕೇಸರಿ ಹಾಲಿ (Kesar milk)ನೊಂದಿಗೆ ವೈವಾಹಿಕ ಜೀವನವನ್ನು ಪ್ರಾರಂಭಿಸುವುದು ಸಂಬಂಧಕ್ಕೆ ಮಾಧುರ್ಯವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮದುವೆಯಾದ ಮೊದಲ ದಿನದಿಂದಲೇ ವಧು-ವರರು (Bride-groom) ಪತಿ-ಪತ್ನಿಯಾಗಿ ಸಾಂಸಾರಿಕ ಜೀವನವನ್ನು ಪ್ರಾರಂಭಿಸುತ್ತಾರೆ. ಮದುವೆಯ ನಂತರ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ  ಅರ್ಥಮಾಡಿಕೊಳ್ಳುತ್ತಾರೆ. ವರ ಮತ್ತು ವಧುವಿನ ಜೀವನದ ಮಾಧುರ್ಯವನ್ನು ಕಾಪಾಡಲು, ಮದುವೆಯ ಮೊದಲ ರಾತ್ರಿ, ಕೇಸರಿಯೊಂದಿಗೆ ಸಿಹಿ ಹಾಲನ್ನು ನವದಂಪತಿಗೆ ನೀಡಲಾಗುತ್ತದೆ. 

ಛೇ ನಾನು ಫಸ್ಟ್ ನೈಟಲ್ಲಿ ಈ ತಪ್ಪು ಮಾಡಬಾರದಿತ್ತು, ಪುರುಷರ ತಪ್ಪೊಪ್ಪಿಗೆ

ಹಾಲು ಮತ್ತು ಕೇಸರಿ ಏಕೆ?
ಮೊದಲ ರಾತ್ರಿಯಲ್ಲಿ ಹಾಲು ಮತ್ತು ಕೇಸರಿಯೇ ಯಾಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಹಾಲು ಮತ್ತು ಕುಂಕುಮವನ್ನು ಹಲವಾರು ಹಿಂದೂ ಆಚರಣೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅದಲ್ಲದೆ, ಹಿಂದೂ ಧರ್ಮದಲ್ಲಿ, ಕೇಸರಿ ಮತ್ತು ಹಾಲನ್ನು ಮಂಗಳಕರ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇದು ಮದುವೆಯ ಮೊದಲ ರಾತ್ರಿ (First night)ಯಲ್ಲಿ ಹಾಲಿನ ಮಿಶ್ರಣವನ್ನು ಸೇವಿಸುವ ಮತ್ತೊಂದು ಕಾರಣವಾಗಿದೆ. 

ಈ ಮಿಶ್ರಣವನ್ನು ಸೇವಿಸಿದಾಗ ಏನಾಗುತ್ತದೆ?
ಹಿಂದಿನಿಂದಲೂ ಕೇಸರಿಯನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ. ಇದನ್ನು ಟ್ರಿಪ್ಟೊಫಾನ್-ಸಮೃದ್ಧ ಹಾಲಿನೊಂದಿಗೆ ಬೆರೆಸುವುದು ಚೈತನ್ಯವನ್ನು ಸುಧಾರಿಸುತ್ತದೆ ಮತ್ತು ನವವಿವಾಹಿತ ದಂಪತಿಗಳ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ, ಕೇಸರಿಯು ಉತ್ತಮವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಮನಸ್ಥಿತಿಯನ್ನು ಸುಧಾರಿಸಲು, ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ನಿಯಮಿತವಾಗಿ ಸೇವಿಸಿದಾಗ ಖಿನ್ನತೆಯ ಆರಂಭಿಕ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಈ ಆಚರಣೆಯ ಮೂಲ ಯಾವುದು?
ಪುರಾತನ ಗ್ರಂಥಗಳ ಪ್ರಕಾರ, ಕಾಮಸೂತ್ರದಲ್ಲಿ ಹಾಲಿನ ಮಿಶ್ರಣವನ್ನು ಕುಡಿಯುವ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಪ್ರೀತಿ ಮಾಡುವ ಮೊದಲು ಕೆಲವು ಮಿಶ್ರಣಗಳನ್ನು ಕುಡಿಯುವುದು ತ್ರಾಣವನ್ನು ಸುಧಾರಿಸುತ್ತದೆ ಮತ್ತು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಒಂದು ಲೋಟ ಹಾಲಿಗೆ ಜೇನುತುಪ್ಪ, ಸಕ್ಕರೆ, ಅರಿಶಿನ,  ಕೇಸರಿ ಮುಂತಾದ ವಿವಿಧ ರೀತಿಯ ಸೇರ್ಪಡೆಗಳು ಈ ಪ್ರಮುಖ ಹಿಂದೂ ವಿವಾಹ ಪದ್ಧತಿಗೆ ದಾರಿ ಮಾಡಿಕೊಟ್ಟವು. ವರ್ಷಗಳಲ್ಲಿ, ಪದಾರ್ಥಗಳ ಸೇರ್ಪಡೆಯು ವೈವಿಧ್ಯತೆಯನ್ನು ಅವಲಂಬಿಸಿ ಬದಲಾಗಿರಬಹುದು, ಆದರೆ ಸಂಪ್ರದಾಯವು ಇನ್ನೂ ಅಸ್ತಿತ್ವದಲ್ಲಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ