
ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್ (Matrimonial application) ನಲ್ಲಿ ವಧು – ವರರನ್ನು ಹುಡುಕಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಅಲ್ಲಿ ತಮ್ಮಿಷ್ಟದ ಸಂಗಾತಿಯನ್ನು ಹುಡುಕಿಕೊಳ್ಳುವ ಜನರು, ಆರಂಭದಲ್ಲಿ ಮೆಸೇಜ್ (Message) ಮೂಲಕ ವಿಷ್ಯಗಳನ್ನು ಹಂಚಿಕೊಳ್ತಾರೆ. ಕೆಲಸ, ಸಂಬಳ, ಕುಟುಂಬ ಸೇರಿದಂತೆ ಒಂದೊಂದೇ ಮಾಹಿತಿ ವಿನಿಮಯವಾಗುತ್ತದೆ. ಕೆಲವರು ಬಾರಿ ಚಾಟ್ ನಂಬಿ ಮೋಸ ಹೋಗುವವರಿದ್ದಾರೆ. ಆದ್ರೆ ಇಲ್ಲೊಬ್ಬ ಒಂದೇ ಒಂದು ಝೀರೋವನ್ನು ಹೆಚ್ಚಿಗೆ ಹಾಕಿ, ಹುಡುಗಿಯಿಂದ ಬೈಸಿಕೊಂಡಿದ್ದಲ್ಲದೆ, ಆಕೆ ಸಂಬಂಧವನ್ನೇ ಕಳೆದುಕೊಂಡಿದ್ದಾನೆ.
ಸೋಶಿಯಲ್ ಮೀಡಿಯಾ (social media)ದಲ್ಲಿ ಇವರಿಬ್ಬರ ಚಾಟ್ ಸ್ಕ್ರೀನ್ ಶಾರ್ಟ್ ವೈರಲ್ ಆಗಿದೆ. Kish Siff ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಚಾಟ್, ಸ್ಕ್ರೀನ್ ಶಾಟ್ (Screen Shot) ಹಂಚಿಕೊಂಡಿದ್ದಾರೆ. ಸಂಬಳದ ತಪ್ಪು ಒಪ್ಪಿಕೊಳ್ಳುವವರೆಗೂ ನಮ್ಮಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು ಎಂದು ಶೀರ್ಷಿಕೆ ಹಾಕಿದ್ದಾರೆ.
Chanakya Niti: ಹಾಸಿಗೆಯಲ್ಲೂ ಹೆಂಡತಿ ಗಂಡನಿಂದ ಈ ವಿಷಯ ಮುಚ್ಚಿಡ್ತಾಳಂತೆ! ಚಾಣಕ್ಯನಿಗೂ ಇದು ಗೊತ್ತಿತ್ತು!
ಚಾಟ್ ಆರಂಭದಲ್ಲಿ ನಮ್ಮಿಬ್ಬರ ಎಂಗೇಜ್ಮೆಂಟ್ ಯಾವಾಗ ಅಂತ ತಂದೆ ಕೇಳ್ತಿದ್ದಾರೆ ಎನ್ನುತ್ತಾಳೆ ಮಹಿಳೆ. ಅದಕ್ಕೆ ಹುಡುಗ, ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯಬೇಕು, ಯಾಕೆಂದ್ರೆ ನಮ್ಮಿಬ್ಬರಿಗೆ ಎರಡನೇ ಮದುವೆ ಅಂತ ಟೈಪ್ ಮಾಡ್ತಾನೆ. ಇದನ್ನು ನೋಡಿದ ಮಹಿಳೆ, ಪರಸ್ಪರ ಈಗಾಗ್ಲೇ ಸಾಕಷ್ಟು ಮಾತನಾಡಿದ್ದೇವೆ. ಇನ್ನು ಕಾಯುವ ಅಗತ್ಯವಿಲ್ಲ. ಬೇರೆ ಯಾರನ್ನಾದ್ರೂ ನೋಡ್ಬೇಕಾ ಅಂತ ಪ್ರಶ್ನೆ ಕೇಳ್ತಾಳೆ. ಅದಕ್ಕೆ ಉತ್ತರ ನೀಡುವ ಹುಡುಗ, ಯಾವಾಗ ಎಂಗೇಜ್ಮೆಂಟ್ ಮಾಡ್ಕೊಳ್ಳೋದು ಅಂತಾನೆ. ನವೆಂಬರ್ ನಲ್ಲಿ ಮಾಡಿಕೊಳ್ಳೋದು ಬೆಸ್ಟ್ ಎನ್ನಿಸುತ್ತೆ ಅಂತ ಟೈಪ್ ಮಾಡ್ತಾಳೆ ಮಹಿಳೆ. ಇದನ್ನು ನೋಡಿದ ವ್ಯಕ್ತಿ, ಮ್ಯಾಟ್ರಿಮೋನಿಯಲ್ ಪ್ರೊಫೈಲ್ ನಲ್ಲಿ ಸಣ್ಣದೊಂದು ತಪ್ಪಾಗಿದೆ ಎನ್ನುತ್ತಾನೆ. ಅದನ್ನು ಸಿಕ್ಕಾಗ ಮಾತನಾಡೋಣ ಅಂತ ಮಹಿಳೆ ಹೇಳಿದ್ರೂ, ಹುಡುಗ ಚಾಟ್ ಮುಂದುವರೆಸುತ್ತಾ, ಪ್ರೊಫೈಲ್ ನಲ್ಲಿ ನನ್ನ ಸಂಬಳವನ್ನು 3 ಲಕ್ಷ ಅಂತ ಹಾಕುವ ಬದಲು 30 ಲಕ್ಷ ಅಂತ ಆಗಿದೆ. ಸಣ್ಣ ಟೈಪ್ ತಪ್ಪಿನಿಂದ ಹೀಗಾಗಿದೆ ಎಂದು ಆತ ಹೇಳ್ತಾನೆ. ಈ ವಿಷ್ಯ ಗೊತ್ತಾಗ್ತಿದ್ದಂತೆ ಹುಡುಗಿ ಚಾಟ್ ಬದಲಾಗುತ್ತೆ. ಒಂದೇ ಸಮನೆ ಬೈಯ್ಯಲು ಶುರು ಮಾಡ್ತಾಳೆ. ಅಷ್ಟೇ ಅಲ್ಲ ಆಕೆ ಅಮ್ಮನ ಜೊತೆ ನಡೆದ ಚಾಟ್ ಕೂಡ ಹಂಚಿಕೊಂಡಿದ್ದಾನೆ ವ್ಯಕ್ತಿ.
ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. 4 ಲಕ್ಷಕ್ಕೂ ಹೆಚ್ಚು ಬಾರಿ ಪೋಸ್ಟ್ ವೀಕ್ಷಣೆ ಮಾಡಲಾಗಿದ್ದು 2.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ಅವರು ನಿಮ್ಮನ್ನಲ್ಲ, ನಿಮ್ಮ ಸಂಬಳವನ್ನು ಮದುವೆಯಾಗ್ತಿದ್ದಾರೆ. ಅವರನ್ನು ಮದುವೆ ಆಗುವ ಬದಲು ಆಫೀಸ್ ಕಾರಿಡಾರ್ ನಲ್ಲಿ ಮಲಗೋದು ಬೆಸ್ಟ್ ಎಂದಿದ್ದಾರೆ ಬಳಕೆದಾರರು. ಮತ್ತೆ ಕೆಲವರು ಸ್ತ್ರೀವಾದವನ್ನು ಖಂಡಿಸಿದ್ದಾರೆ. ಈಗಿನ ಹುಡುಗಿಯರು ಸಂಬಳಕ್ಕೆ ಆದ್ಯತೆ ನೀಡ್ತಾರೆ. ಮನೆಯಲ್ಲಿ ಕೆಲಸ ಮಾಡೋದಿಲ್ಲ, ಹೆತ್ತವರನ್ನು ನೋಡಿಕೊಳ್ಳೋದಿಲ್ಲ, ಮಕ್ಕಳು ಬೇಡ. ಸ್ತ್ರೀವಾದವು ಮಹಿಳೆಯರಿಗೆ ಹಾನಿಕಾರಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ನಾನೀಗ ಸಿಂಗಲ್, ಮಲೈಕಾ ಹೆಸರು ಕೇಳ್ತಿದ್ದಂತೆ ಬ್ರೇಕ್ ಅಪ್ ಗುಟ್ಟು ಬಿಚ್ಚಿಟ್ಟ ಅರ್ಜುನ್ ಕಪೂರ್
ಎರಡನೇ ಮದುವೆ ಮಾಡಿಕೊಳ್ಳುವ ಮೊದಲು ಅವರ ಹಿನ್ನಲೆಯನ್ನು ಸರಿಯಾಗಿ ತಿಳಿದುಕೊಳ್ಳಿ. ಜೀವನಾಂಶ, ಸಂಬಳ, ಕೆಲಸ ಎಲ್ಲದರ ಬಗ್ಗೆ ಮಾಹಿತಿ ಇರಲಿ. ಒಮ್ಮೆ ಬಂಗಾರ ಅಗೆದ ವ್ಯಕ್ತಿ ಮತ್ತೆ ಅದನ್ನೇ ಬಯಸ್ತಾನೆ ಎಂಬ ಕಮೆಂಟ್ ಬಂದಿದೆ. ಬಳಕೆದಾರರೊಬ್ಬರು ತಮ್ಮ ಸ್ನೇಹಿತನ ಜೀವನದಲ್ಲಾದ ಘಟನೆ ಬರೆದಿದ್ದಾರೆ. ವಿಚ್ಛೇದಿನ ಸ್ನೇಹಿತನನ್ನು ಪ್ರೀತಿ ಮಾಡ್ತಿದ್ದ ಹುಡುಗಿ ಅಪಾರ್ಟ್ಮೆಂಟ್ ಖರೀದಿ ಮಾಡುವಂತೆ ಹೇಳಿದ್ಲು. ಈ ಮನೆಯನ್ನು ತನ್ನ ಹೆಸರಿಗೆ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದಳು. ಇದನ್ನು ನಿರಾಕರಿಸ್ತಿದ್ದಂತೆ ಮದುವೆ ಮುರಿದುಕೊಂಡ್ಲಂತೆ ಹುಡುಗಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.