4000 ಮಹಿಳೆಯರ ಜೊತೆ ಮಲಗಿ ಎದ್ದ ಕುಬೇರ ಪತ್ನಿಯಿಂದಲೇ ಕೊಲೆಯಾದ!

Suvarna News   | Asianet News
Published : May 01, 2021, 04:24 PM IST
4000 ಮಹಿಳೆಯರ ಜೊತೆ ಮಲಗಿ ಎದ್ದ ಕುಬೇರ ಪತ್ನಿಯಿಂದಲೇ ಕೊಲೆಯಾದ!

ಸಾರಾಂಶ

ನಾಲ್ಕು ಸಾವಿರ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಂಡು ಅವರನ್ನು ಪಲ್ಲಂಗಕ್ಕೆ ಸೆಳೆದ ಈ ಬಿಲಿಯನೇರ್ ಕುಬೇರ, ಕಡೆಗೂ ತನ್ನ ಯುವ ಚೆಲುವೆ ಪತ್ನಿಯಿಂದಲೇ ಸಾವಿಗೀಡಾದ!

ಇದೊಂದು ವಿಚಿತ್ರ ಕೇಸು. ಈ ಶ್ರೀಮಂತ ಸುಮಾರು 4000 ಮಹಿಳೆಯರ ಜೊತೆ ಸೆಕ್ಸ್ ನಡೆಸಿದ್ದನಂತೆ. ಕಡೆಗೂ ಈತ ತನ್ನ ಹಾಲಿ ಪತ್ನಿ, ಪ್ರೇಯಸಿಯಿಂದಲೇ ಕೊಲೆಗೀಡಾಗಿದ್ದಾನೆ. ಇದು ಜಪಾನಿನ ಟೋಕಿಯೋದಲ್ಲಿ ನಡೆದ ಘಟನೆ. ಮದುವೆಯಾದ ಒಂದೇ ತಿಂಗಳಲ್ಲಿ ಈ ಪತ್ನಿ ತನ್ನ ಗಂಡ- ಕುಬೇರನನ್ನು ಕೊಲೆ ಮಾಡಿದ್ದಾಳೆ. ಅಂದ ಹಾಗೆ ಆಕೆಗೆ 25 ವರ್ಷ. ಗಂಡನಿಗೆ 77 ವರ್ಷ.

ಈಗ ಮಹಿಳೆಯನ್ನು ಬಂಧಿಸಲಾಗಿದೆ. ಕೊಲೆಯಾಧ ವ್ಯಕ್ತಿಯ ಹೆಸರು ಕೊಸುಕೆ ನಝಾಕಿ. ಈತ ತನ್ನನ್ನು ಡಾನ್ ಜಾನ್ ಎಂದು ಕರೆದುಕೊಳ್ಳುತ್ತಿದ್ದನಂತೆ. ಹಾಗೆಂದರೆ ಮಹಾನ್ ಪ್ರೇಮಿ, ರಸಿಕ, ಚಪಲಗಾರ ಎಂದರ್ಥ. ಈತ ಬಿಲಿಯನೇರ್. ಆದರೆ ತನ್ನ ಹಣದಲ್ಲಿ ಬಹಳಷ್ಟು ಮೊತ್ತವನ್ನು ನಾನಾ ಸ್ತ್ರೀಯರ ಜೊತೆ ಮಲಗುವ ತನ್ನ ತೆವಲಿಗಾಗಿ ವ್ಯಯಿಸುತ್ತಿದ್ದ. ಇದಕ್ಕಾಗಿಯೇ ಮಿಲಿಯಗಟ್ಟಲೆ ಹಣವನ್ನು ತಿಂಗಳಿಗೆ ಚೆಲ್ಲುತ್ತಿದ್ದನಂತೆ.

ಈತನನ್ನು ಕೊಂದ ಪತ್ನಿಯ ಹೆಸರು ಸಕಿ ಸುಡೋ. ಈಕೆ ಗಂಡನಿಗೆ ಹೆಚ್ಚು ಡ್ರಗ್ಸ್  ತುಂಬಿಕೊಟ್ಟು ಕೊಲೆ ಮಾಡಿದ್ದಾಳೆ ಎಂಬ ಶಂಕೆ. ನಝಾಕೆ ಮೈಮೇಲೆ ಚುಚ್ಚಿದ ಗುರುತು ಇಲ್ಲವಾದ್ದರಿಂದ, ತಂಪು ಪಾನೀಯದ ಒಳಗೆ ಡ್ರಗ್ಸ್ ಹಾಕಿ ಕೊಡಲಾಗಿದೆ ಎಂಬ ಅನುಮಾನ. ಪತಿಯ ಸಾವಿಗೆ ಕೆಲ ದಿನಗಳ ಮೊದಲು ಸಕಿ, ಆನ್‌ಲೈನ್‌ನಲ್ಲಿ ಡ್ರಗ್ಸ್ ಬಗ್ಗೆ ಹುಡುಕಾಟ ನಡೆಸಿರುವುದು ಗೊತ್ತಾಗಿದೆ. ನಝಾಕಿ ತಾನು ವಾಸವಿದ್ದ ಜಪಾನಿನ ವಾಕಯಾಮ ಪ್ರಾಂತ್ಯದ ತನಾಬೆಗೆ 1.3 ಶತಕೋಟಿ ಯೆನ್ ದಾನವಾಗಿ ನೀಡಲು ವಿಲ್‌ನಲ್ಲಿ ಉಲ್ಲೇಖಿಸಿದ್ದ.

#Feelfree: ವೀರ್ಯ ಹೊಟ್ಟೆಗೆ ಹೋದರೆ ಗರ್ಭಿಣಿಯಾಗಬಹುದೇ? ...

ಆದರೆ ಅವನ ರಿಯಲ್ ಎಸ್ಟೇಟ್‌ನ ಅರ್ಧದಷ್ಟು ಭಾಗ ನಾಗರಿಕ ಕಾನೂನಿನಡಿಯಲ್ಲಿ ಆತನ ವಿಧವೆಗೆ ಹೋಗುವುದರಿಂದ, ನಗರಾಡಳಿತವು ಸುಡೋ ಅವರೊಂದಿಗೆ ಹಣವನ್ನು ವಿಭಜಿಸಿ ಪಡೆಯುವ ಬಗ್ಗೆ ಮಾತುಕತೆ ನಡೆಸಿದೆ. ನಝಾಕಿ ಬ್ಲಾಗ್ ಡೈರಿ ಬರೆದಿಡುತ್ತಿದ್ದ. ಅದರಲ್ಲಿ ಒಂದು ಕಡೆ, ತನಗೂ ತನ್ನ ಹೊಸ ಪತ್ನಿಗೂ ಇರುವ ಐವತ್ತು ವರ್ಷಗಳ ಅಂತರದ ಬಗ್ಗೆ ಬರೆದಿದ್ದಾನೆ. ಕೆಲವರು ತನ್ನ ಪತ್ನಿ ತನ್ನ ಆಸ್ತಿಯ ಮೇಲೆ ಕಣ್ಣಿಟ್ಟೇ ತನ್ನನ್ನು ಮದುವೆಯಾಗಿದ್ದಾಳೆ ಎಂದು ದೂಷಿಸಿದ್ದಾರೆ, ಆದರೆ ಇದು ನಿಜವಲ್ಲ ಎಂದೂ ನಝಾಕಿ ಬರೆದುಕೊಂಡಿದ್ದರು. ಅವರನ್ನು ಸಕಿ ಸುಡೋ ನಂಬಿಕಸ್ಥೆಯಂತೆ ನಂಬಿಸಿ ಕೊಂದು ಹಾಕಿರಬಹುದು.

ಅಂದ ಹಾಗೆ ಈ ರಿಯಾಲ್ಟಿ ಎಸ್ಟೇಟ್ ಉದ್ಯಮಿ ಆತ್ಮಚರಿತ್ರೆಯನ್ನೂ ಬರೆದುಕೊಂಡಿದ್ದಾನೆ. ಇವನು ಮದ್ಯ ಮಾರಾಟ ಕಂಪನಿಯನ್ನೂ ನಡೆಸುತ್ತಿದ್ದ. ಹಣ ಸಾಲ ನೀಡುವ ಫೈನಾನ್ಸ್ ಕಂಪನಿ ಕೂಡ ನಡೆಸುತ್ತಿದ್ದ. ನಾನು ಸುಮಾರು 4000 ಮಹಿಳೆಯರ ಜೊತೆ ಸೆಕ್ಸ್ ನಡೆಸಿದ್ದೇನೆ. ಅವರಿಗಾಗಿ 3 ಬಿಲಿಯ ಯೆನ್‌ (ಸುಮಾರು 203 ಕೋಟಿ ರೂಪಾಯಿ) ಖರ್ಚು ಮಾಡಿದ್ದೇನೆ ಎಂದೂ ಇವನು ತನ್ನ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾನೆ.

ಉತ್ತಮ ಸಂಗಾತಿಯಾಗಲು ಈ ಕಾಮಸೂತ್ರ ನಿಯಮ ಪಾಲಿಸಿ ...

2016ರಲ್ಲಿ ಇವನು ಬರೆದ ಡಾನ್ ಜಾನ್ ಆಫ್ ಕಿಶು ಎಂಬ ಆತ್ಮಚರಿತ್ರೆ ಪ್ರಕಟವಾಯಿತು. ಅದರಲ್ಲಿ, ನಾನು ಹಣ ಸಂಪಾದನೆ ಮಾಡುವ ಉದ್ದೇಶವೇ ಸುಂದರವಾದ ಸ್ತ್ರೀಯರೊಂದಿಗೆ ಡೇಟ್ ಮಾಡುವುದು ಹಾಗೂ ಮಲಗುವುದು ಎಂದು ಬರೆದುಕೊಂಡಿದ್ದ. ಚೆಲುವೆಯರಾದ ಮಹಿಳೆಯರು ನನ್ನ ಶೋಕಿ, ನನಗೆ ಕಾರುಗಳು ಮತ್ತು ಮನೆಗ ಮೇಲೆ ಅಂಥ ಆಸಕ್ತಿಯೇನೂ ಇಲ್ಲ ಎಂದಿದ್ದ. ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ತನ್ನ ಕಂಪನಿ ಸಿಬ್ಬಂದಿಯನ್ನು ತಾನು ಯಾವ ರೀತಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದೆ ಎಂದೂ ಉಲ್ಲೇಖಿಸಿದ್ದಾನೆ.

ಹೀಗ್ ಮಾಡಿದರೆ ಸಂಗಾತಿಗೆ ರೊಮ್ಯಾಂಟಿಕ್ ಎನಿಸೋದು ಗ್ಯಾರಂಟಿ! ...

ಈತ ತನ್ನ 77ನೇ ವಯಸ್ಸಿನಲ್ಲಿ ಮರು ಮದುವೆಯಾದ. ಈ ಹಿಂದೆ ಎಷ್ಟು ಬಾರಿ ಮದುವೆಯಾಗಿದ್ದನೋ, ಡೈವೋರ್ಸ್ ಕೊಟ್ಟಿದ್ದನೋ ಬಹುಶಃ ಅವನಿಗೂ ಲೆಕ್ಕವಿಲ್ಲ. ಹೊಸದಾಗಿ ಮದುವೆಯಾಗಿ ಹಾಲಿ ಪತ್ನಿಯ ಜೊತೆ ಬಾಳಿದ್ದು ಒಂದೇ ತಿಂಗಳು. 25ರ ಸುಡೋಳನ್ನು ಮದುವೆಯಾಗಿ ನಾನು ಸಂತೋಷವಾಗಿರುತ್ತೇನೆ ಎಂದು ಬರೆದುಕೊಂಡಿದ್ದ. ಸುಡೋಳನ್ನು ನಝಾಕಿ ಟೋಕಿಯೋ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದ. ಹೀಗೆ ಪರಿಚಯವಾದ ಇವರು ನಂತರ ಮದುವೆಯಾದರು. ಆದರೆ ಇದೇ ಪರಿಚಯ ಅವನ ದುರಂತಕ್ಕೂ ಕಾರಣವಾಯಿತು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ಗಂಡ ಹೆಂಡತಿಗೆ ಮುಳ್ಳಾದ ಈರುಳ್ಳಿ ಬೆಳ್ಳುಳ್ಳಿ, 11 ವರ್ಷದ ದಾಂಪತ್ಯ ಜೀವನ ಡಿವೋರ್ಸ್‌ನಲ್ಲಿ ಅಂತ್ಯ