#Feelfree: ವೀರ್ಯ ಹೊಟ್ಟೆಗೆ ಹೋದರೆ ಗರ್ಭಿಣಿಯಾಗಬಹುದೇ?

By Suvarna News  |  First Published Apr 30, 2021, 5:59 PM IST

ಮುಖ ಮೈಥುನದ ಸಂದರ್ಭದಲ್ಲಿ ಪುರುಷನ ವೀರ್ಯ ಮಹಿಳೆಯ ಹೊಟ್ಟೆಯೊಳಗೆ ಹೋದರೆ ಗರ್ಭಿಣಿಯಾಗುವ ಅಪಾಯವಿದೆಯೇ?


ಪ್ರಶ್ನೆ: ನಾನು ವಿವಾಹವಾಗಿ ಆರು ತಿಂಗಳು ಆಗಿದೆ. ನನ್ನ ವಯಸ್ಸು ಇಪ್ಪತ್ತಾರು, ಪತ್ನಿಯ ವಯಸ್ಸು ಇಪ್ಪತ್ತೆರಡು. ನಿನ್ನೆ ರಾತ್ರಿ ನಾವಿಬ್ಬರೂ ಪರಸ್ಪರ ಮುಖ ಮೈಥುನ ನಡೆಸಿದೆವು. ಆ ಸಂದರ್ಭದಲ್ಲಿ ನನ್ನ ವೀರ್ಯ ನನ್ನ ಪತ್ನಿಯ ಬಾಯಿಯ ಮೂಲಕ ಆಕೆಯ ಹೊಟ್ಟೆಗೆ ಹೋಯಿತು. ಇದರಿಂದ ಆಕೆಗೆ ಅಪಾಯವೇನಾದರೂ ಇದೆಯೇ? ಅಥವಾ ಆಕೆ ಗರ್ಭಿಣಿಯಾಗುವ ಸಂಭವ ಉಂಟೇ? 

ಉತ್ತರ: ನೀವು ಲೈಂಗಿಕತೆಯ ಕೆಲವು ಪ್ರಾಥಮಿಕ ಪಾಠಗಳನ್ನು ಕಲಿಯಬೇಕಿದೆ. ಏನೆಂದರೆ ವೀರ್ಯಕ್ಕೆ ಗರ್ಭ ಕಟ್ಟಿಸುವ ಶಕ್ತಿ ಇರುವುದು ಅದು ಯೋನಿಯ ಮೂಲಕ ಗರ್ಭಕೋಶ ಸೇರಿದಾಗ ಮಾತ್ರ. ಮಹಿಳೆಯ ಗರ್ಭಕೋಶದಲ್ಲಿ ಅಂಡ ಸೃಷ್ಟಿಯಾಗಿರುತ್ತದೆ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನಿಮ್ಮ ವೀರ್ಯವು ಆಕೆಯ ಯೋನಿಯಲ್ಲಿ ಬಿದ್ದು, ಯೋನಿನಾಳದ ಮೂಲಕ ಸಾಗಿ ಗರ್ಭಕೋಶವನ್ನು ಪ್ರವೇಶಿಸಿ, ಒಂದು ವೀರ್ಯಾಣು ಅಂಡದೊಂದಿಗೆ ಸಂಯೋಗಗೊಂಡಾಗ ಭ್ರೂಣ ಉಂಟಾಗುತ್ತದೆ. ನಿಮ್ಮ ವೀರ್ಯ ಬಾಯಿಯ ಮೂಲಕ ಅವರ ಹೊಟ್ಟೆಗೆ ಹೋದರೆ ನಿಮ್ಮ ಪತ್ನಿ ಗರ್ಭಿಣಿಯಾಗುವ ಸಂಭವ ಇಲ್ಲ. ಯಾಕೆಂದರೆ ಬಾಯಿಯ ಮೂಲಕ ಹೋದ ವೀರ್ಯವು ಜಠರವನ್ನು ಸೇರುತ್ತದೆ. ಜಠರದಲ್ಲಿರುವ ಆಮ್ಲೀಯ ಹಾಗೂ ಪ್ರತ್ಯಾಮ್ಲೀಯ ಸ್ರಾವಗಳು ಈ ವೀರ್ಯಾಣುಗಳನ್ನು ಎಲ್ಲ ಆಹಾರದಂತೆಯೇ ಪಚನ ಮಾಡಿ ಜೀರ್ಣ ಮಾಡಿಬಿಡುತ್ತವೆ. ಆತಂಕ ಬೇಡ.
 

Tap to resize

Latest Videos

undefined


ಇನ್ನು ವೀರ್ಯವನ್ನು ನುಂಗುವುದರಿಂದ ಬೇರೇನಾದರೂ ಅಪಾಯವಿದೆಯೇ ಎಂದು ಕೇಳಿದ್ದೀರಿ. ಯಾವ ಅಪಾಯವೂ ಇಲ್ಲ. ಕೆಲವರು ವೀರ್ಯದ ಫೇಶಿಯಲ್ ಬಳಸುವುದನ್ನು ಕೂಡ ನೀವು ಕೇಳಿರಬಹುದು. ವೀರ್ಯ ಪ್ರೊಟೀನ್‌ನ ಆಗರ. ಹಾಗಂತ ಅದನ್ನೇ ರೂಢಿ ಮಾಡಬೇಡಿ.



ಪ್ರಶ್ನೆ: ನಾನು ಹದಿನೇಳು ವರ್ಷದ ಯುವಕ. ನನಗೆ ಇನ್ನೂ ಮೀಸೆ ಬಂದಿಲ್ಲ. ವಿಚಿತ್ರ ಎಂದರೆ, ನನ್ನ ಎದೆ ಹೆಣ್ಣುಮಕ್ಕಳ ಎದೆಯಂತೆ ಉಬ್ಬಿಕೊಂಡಿದೆ. ಇದರಿಂದ ಕಾಲೇಜಿನಲ್ಲಿ ಸಹಪಾಠಿಗಳಿಂದ, ಗೆಳೆಯರಿಂದ ಗೇಲಿ, ಅವಮಾನ ಎದುರಿಸುತ್ತಿದ್ದೇನೆ. ಇದಕ್ಕೆ ಕಾರಣವೇನು, ಇದನ್ನು ಕಡಿಮೆ ಮಾಡುವುದು ಹೇಗೆ?

ಉತ್ತರ: ಇದರಲ್ಲಿ ಮುಜುಗರ ಪಟ್ಟುಕೊಳ್ಳಬೇಕಾದುದು ಏನೂ ಇಲ್ಲ. ಇಂದು ಪ್ರತಿ ಹತ್ತು ಗಂಡು ಮಕ್ಕಳಲ್ಲಿ ಒಬ್ಬರಿಗೆ ಈ ಸಮಸ್ಯೆ ಇದೆ. ನಿಮ್ಮಲ್ಲಿ ಪುರುಷ ಹಾರ್ಮೋನ್‌ (ಟೆಸ್ಟಾಸ್ಟಿರೋನ್) ಕಡಿಮೆಯಾಗಿದೆ ಹಾಗೂ ಸ್ತ್ರೀ ಹಾರ್ಮೋನ್ (ಈಸ್ಟ್ರೋಜೆನ್) ಜಾಸ್ತಿಯಾಗಿ ಸ್ರಾವ ಆಗುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಗೈನೆಕೋಮಾಸ್ಟಿಯಾ ಎಂದು ಕರೆಯುತ್ತಾರೆ. ಇದಕ್ಕೆ ಔಷಧ ಇದೆ. ನುರಿತ ವೈದ್ಯರಲ್ಲಿಗೆ ಹೋಗಿ ಈ ಸಮಸ್ಯೆಯನ್ನು ಮುಕ್ತವಾಗಿ ತಿಳಿಸಿ. ಅವರು ಕೆಲವು ಹಾರ್ಮೋನಲ್ ಇಂಜೆಕ್ಷನ್ ಅಥವಾ ಮಾತ್ರೆಗಳನ್ನು ಕೊಡಬಹುದು. ಕೆಲವೇ ತಿಂಗಳಲ್ಲಿ  ಹಾರ್ಮೋನ್ ವ್ಯತ್ಯಾಸವು ಸರಿಹೋಗಿ, ಎದೆ ಸರಿಯಾದ ಪ್ರಮಾಣಕ್ಕೆ ಬರುತ್ತದೆ. ಇನ್ನು ಗೆಳೆಯರ ಜೊತೆ ಬೆರೆಯುವಾಗ, ನಿಮ್ಮ ಆತ್ಮವಿಶ್ವಾಸ ಕುಗ್ಗಿಸುವಂಥ ಗೆಳೆಯರ ಜೊತೆ ಬೆರೆಯಲೇಬೇಡಿ. ಬದಲಾಗಿ ನಿಮ್ಮ ವ್ಯಕ್ತಿತ್ವವನ್ನು ಬೆಳೆಸುವಂಥ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.  



ಪ್ರಶ್ನೆ: ಇಪ್ಪತ್ತಾರು ವರ್ಷ, ವಿವಾಹಿತ. ಹೆಂಡತಿಗೆ ಇಪ್ಪತ್ತಮೂರು ವರ್ಷ. ಮದುವೆಯಾಗಿ ಎರಡು ತಿಂಗಳಾಗಿದೆ. ಮದುವೆಯಾದ ಒಂದು ವಾರ ನಾವು ದೂರ ಇದ್ದೆವು. ನಂತರ ನನಗೆ ಕೊರೊನಾ ಪಾಸಿಟಿವ್ ಬಂದುದರಿಂದ ಮುಂದಿನ ಹದಿನೈದು ದಿನ ದೂರ ಉಳಿದೆ. ಹೀಗಾಗಿ ಇದುವರೆಗೂ ಸಂಭೋಗ ನಡೆಸಲು ಸಾಧ್ಯವಾಗಿಲ್ಲ. ಈಗ ನನಗೂ ನನ್ನ ಪತ್ನಿಗೂ ಕೊರೊನಾ ನೆಗೆಟಿವ್‌ ಬಂದಿದೆ. ಈಗ ನಾವು ಲೈಂಗಿಕ ಕ್ರಿಯೆ ನಡೆಸಬಹುದೇ? ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?

ಉತ್ತರ: ಖಂಡಿತವಾಗಿಯೂ ನಡೆಸಬಹುದು. ಆದರೆ ಕೊರೊನಾದಿಂದ ಆಗಿರುವ ಸುಸ್ತು ಇನ್ನೂ ಇದ್ದರೆ ಸ್ವಲ್ಪ ದಿವಸ ತಡೆಯಿರಿ. ಪೌಷ್ಟಿಕ ಆಹಾರ ಹಾಗೂ ಬಿಸಿನೀರು ಸಾಕಷ್ಟು ಸೇವಿಸಿ. ಮೊದಲು ಆರೋಗ್ಯವಂತರಾಗಿ, ಬಳಿಕ ಲೈಂಗಿಕ ಕ್ರಾಂತಿ!



 

click me!