ಚೀನಾದ ಶಾಂಘೈನಲ್ಲಿ ಹಣ್ಣು ಮಾರಾಟ ಮಾಡುವ ಲಿಯು ಎಂಬಾತನಿಗೆ ಮಾ ಎಂಬ ವೃದ್ಧ ತನ್ನ ಸಮಸ್ತ ಆಸ್ತಿಯನ್ನೂ ಬರೆದು ಸಾವಿಗೀಡಾಗಿದ್ದಾನೆ. ಕೊನೆಕಾಲದಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಂಡ ಲಿಯು ಮತ್ತವನ ಕುಟುಂಬ ಚೆನ್ನಾಗಿರಲೆಂದು ಬರೋಬ್ಬರಿ 3.8 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಮತ್ತು ಇತರ ಆಸ್ತಿಯನ್ನು ಲಿಯು ಹೆಸರಿಗೆ ವಿಲ್ ಮಾಡಿದ್ದಾನೆ.
ಯಾವುದಾದರೂ ವಸ್ತು ಮಾರಾಟ ಮಾಡುವವರು ಮತ್ತು ಗ್ರಾಹಕರ ನಡುವೆ ಆಪ್ತ ಸಂಬಂಧ ಇರುವುದು ಕಡಿಮೆ. ಎಷ್ಟು ಬೇಕೋ ಅಷ್ಟು ವ್ಯಾವಹಾರಿಕ ಸಂಬಂಧ ಮಾತ್ರವಿರುತ್ತದೆ. ಆದರೆ, ಕೆಲವರು ಮಾತ್ರ ಕೊಡು-ಕೊಳ್ಳುವಿಕೆಯ ಸಂಬಂಧಕ್ಕೂ ಮಿಗಿಲಾದ ಆಪ್ತತೆ, ಆತ್ಮೀಯತೆ ಹೊಂದಿರುತ್ತಾರೆ. ಅಂತಹ ಆತ್ಮೀಯತೆ ಇದ್ದಾಗ ಜೀವನ ಹೇಗೆ ಬೇಕಾದರೂ ಬದಲಾಗುತ್ತದೆ ಎನ್ನುವುದಕ್ಕೆ ಚೀನಾದ ಹಣ್ಣು ವ್ಯಾಪಾರಿಯೊಬ್ಬ ಸಾಕ್ಷಿಯಾಗಿದ್ದಾನೆ. ಹಣ್ಣು ಮಾರುವ ಈತನ ಜೀವನ ಮೂರಕ್ಕೆ ಇಳಿಯುತ್ತಿರಲಿಲ್ಲ, ಆರಕ್ಕೇರುತ್ತಿರಲಿಲ್ಲ. ಆದರೆ, ಈಗ ಹೇಗೆ ಅದೃಷ್ಟ ಬಂದೊದಗಿದೆ ಎಂದರೆ, 3 ಕೋಟಿಗೂ ಅಧಿಕ ಮೌಲ್ಯದ ಫ್ಲಾಟ್ ಹಾಗೂ ಇತರ ಆಸ್ತಿಗಳ ಒಡೆಯನಾಗಿ ಬಿಟ್ಟಿದ್ದಾನೆ. ಹಣ್ಣುಗಳನ್ನು ಮಾರಿ ಜೀವನ ನಡೆಸುತ್ತಿದ್ದ ವ್ಯಕ್ತಿ ಏಕಾಏಕಿ ಕೋಟ್ಯಧಿಪತಿಯಾಗಿಬಿಟ್ಟಿದ್ದಾನೆ. ಈ ಹಣ್ಣು ವ್ಯಾಪಾರಿಗೆ ಕಾಯಂ ಗ್ರಾಹಕನೊಬ್ಬನಿದ್ದ. ವಯಸ್ಸಾದ ಆ ಗ್ರಾಹಕನನ್ನು ಕಂಡರೆ ಈ ಹಣ್ಣು ಮಾರುವವನಿಗೆ ಅದೇನೋ ಮಮತೆಯಿತ್ತು. ವಯಸ್ಸಾಗಿದೆಯಲ್ಲ ಎಂದು ಪ್ರಾಮಾಣಿಕವಾಗಿ ತನ್ನ ಕೈಲಾದ ಸಹಾಯ, ಕೆಲಸ ಮಾಡುತ್ತಿದ್ದ ಹಾಗೂ ವಿಶ್ವಾಸ ತೋರುತ್ತಿದ್ದ. ಆ ವಯೋವೃದ್ಧನಿಗೆ ಈತ ತೋರಿಸಿದ ಮಮಕಾರ ಎಷ್ಟು ಇಷ್ಟವಾಯಿತು ಎಂದರೆ, ತನ್ನ ಇಡೀ ಜೀವಮಾನದ ಗಳಿಕೆಯನ್ನು ಈತನಿಗೆ ಸಮರ್ಪಿಸಿಬಿಟ್ಟ!
ವೃದ್ಧ-ಹಣ್ಣು ವ್ಯಾಪಾರಿಯ ಆತ್ಮೀಯತೆ
ಚೀನಾದ (China) ಶಾಂಘೈನಲ್ಲಿ ಇಂಥದ್ದೊಂದು ಘಟನೆ ವರದಿಯಾಗಿದೆ. ಮಾ (Ma) ಎಂಬ ವೃದ್ಧ (Old Man) ತನ್ನ ಆಸ್ತಿಯನ್ನು ಲಿಯು ಎನ್ನುವ ಹಣ್ಣು ಮಾರುವವನಿಗೆ (Fruit Seller) ವಿಲ್ (Will) ಮಾಡಿ ಅಸು ನೀಗಿದ್ದಾನೆ. ಮಾ ವಾಸಿಸುತ್ತಿದ್ದ ಫ್ಲಾಟ್ ಸಮೀಪದ ಮಾರುಕಟ್ಟೆಯಲ್ಲೇ ಈ ಲಿಯು ಹಣ್ಣು ಮಾರುತ್ತಾನೆ. ವರ್ಷಗಳ ಹಿಂದೆ ಸಿಕ್ಕ ಇವರಿಬ್ಬರು ಆತ್ಮೀಯ ಸ್ನೇಹಿತರಂತಾಗಿದ್ದರು.
ಜನರ ಸೇರೋ ಜಾಗಕ್ಕೆ ಹೋಗಿ, ನಿಮ್ಮ ಖುಷಿ ಇಮ್ಮಡಿಗೊಳ್ಳುತ್ತೆ! ಖಿನ್ನತೆ ದೂರವಾಗುತ್ತೆ!
ಲಿಯು ಅತ್ಯಂತ ಕಳಪೆ ಮನೆಯಲ್ಲಿ ವಾಸಿಸುತ್ತಿದ್ದ. ತನ್ನ ಮನೆಗೇ ಬಂದು ತನ್ನ ಫ್ಲಾಟ್ (Flat) ನಲ್ಲಿ ವಾಸವಾಗಿರುವಂತೆ ಮಾ ಲಿಯುನನ್ನು ಆಮಂತ್ರಿಸಿದ್ದ. ಕುಟುಂಬವನ್ನೂ ಜತೆಗೆ ಕರೆತರುವಂತೆ ತಿಳಿಸಿದ್ದ. ಹೀಗಾಗಿ, ವೃದ್ಧ ಮಾ ಅವನಿಗಿದ್ದ ಏಕೈಕ ಪುತ್ರ ತೀರಿಕೊಂಡ ನಂತರ ಲಿಯು ಆತನನ್ನು ನೋಡಿಕೊಳ್ಳುತ್ತಿದ್ದ. ಮೊದಲ ಕೇರ್ ಗಿವರ್ (Care Giver) ಅವನೇ ಆಗಿದ್ದ. ಮಾ ಬಿದ್ದು ಗಾಯಗೊಂಡಾಗ, ನಡೆಯಲು ಸಾಧ್ಯವಿಲ್ಲದಿದ್ದಾಗ ಲಿಯು ಅವನನ್ನು ಚೆನ್ನಾಗಿ ನೋಡಿಕೊಂಡ. ಆ ವೇಳೆ, ಮಾ ಕುಟುಂಬದ ಯಾವುದೇ ಸದಸ್ಯರು (Family Members) ಅವನನ್ನು ನೋಡಿಕೊಳ್ಳಲು ಬರಲಿಲ್ಲ. ಅವನ ಮೂವರು ಸೋದರಿಯರು ಸಹ ದೂರವೇ ಇದ್ದರು.
ಆಸ್ತಿ (Asset) ಬರೆದ
ಇಂತಹ ಸ್ಥಿತಿಯಲ್ಲಿ 2020ರಲ್ಲಿ ಮಾ, ಹಣ್ಣು ಮಾರಾಟಗಾರ ಲಿಯು ಜತೆ ಒಂದು ಒಡಂಬಡಿಕೆ ಮಾಡಿಕೊಂಡ. ತನ್ನ ಸಾವಿನ ನಂತರವೇ ಕುಟುಂಬಸ್ಥರು ಬಂದು ನೋಡುವಂತೆ ತಿಳಿಸಿದ. ಬಳಿಕ, ಇತ್ತೀಚೆಗೆ ಸಾವಿಗೂ ಮುನ್ನ ತನ್ನ ಫ್ಲಾಟ್ ಸೇರಿದಂತೆ ಸುಮಾರು 3. 8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲಿಯು ಹೆಸರಿಗೇ ಮಾಡಿ ಉಸಿರು ಬಿಟ್ಟ. ವೃದ್ಧನಿಗೆ 3 ಸೋದರಿಯರಿದ್ದರೂ ಒಬ್ಬರಿಗೂ ಒಂದು ನಯಾಪೈಸೆ ನೀಡಿಲ್ಲ. ಈ ಉಯಿಲು ಕುಟುಂಬಸ್ಥರ ಕೋಪಕ್ಕೆ ಮೂಲವಾಗಿ, ಪ್ರಕರಣವನ್ನು ನ್ಯಾಯಾಲಯಕ್ಕೆ (Court) ತೆಗೆದುಕೊಂಡು ಹೋದರು.
ಮದುವೆ ಬಂಧ ಒಪ್ಪಿಕೊಳ್ಳೋ ಹುಡುಗಿ ಸಿದ್ಧವಾಗಿದ್ದರೆ ಸಂಬಂಧಕ್ಕೆ ಕೊಡ್ತಾಳೆ ಬೆಲೆ!
ಪ್ರಕರಣದ ವಿಚಾರಣೆ ನಡೆಸಿದ ಶಾಂಘೈ ಕೋರ್ಟ್ ಲಿಯು ಪರವಾಗಿಯೇ ತೀರ್ಪು (Judge) ನೀಡಿದೆ. ಮಾ ಬರೆದ ವಿಲ್ ಅಧಿಕೃತವಾದದ್ದು, ಅದರಲ್ಲಿ ಅನುಮಾನಪಡುವ ಪ್ರಶ್ನೆಯಿಲ್ಲ ಎಂದು ಹೇಳಿದೆ. ಮಾ ಸಾಯುವ ಸಮಯದಲ್ಲಿ ಆತನಿಗೆ ಮತಿಭ್ರಮಣೆಯಾಗಿತ್ತು ಎಂದು ಆತನ ಸಂಬಂಧಿಗಳು ವಾದಿಸಿದ್ದರು. ಆದರೆ, ಇದು ಸುಳ್ಳು ಎಂದು ಕೋರ್ಟ್ ಹೇಳಿದ್ದು, ಲಿಯುನಿಗೆ ಮಾ ಅಸ್ತಿಯನ್ನು ನೀಡಿದೆ.