ಸುಖಕರ ದಾಂಪತ್ಯಕ್ಕೆ ಸಂಗಾತಿಗಳ ಮಧ್ಯೆ ಇರಬೇಕಾದ ಏಜ್ ಗ್ಯಾಪ್ ಎಷ್ಟು? ಅಧ್ಯಯನದ ವರದಿಯಲ್ಲೇನಿದೆ?

By Vinutha PerlaFirst Published Dec 19, 2023, 2:23 PM IST
Highlights

ಇತ್ತೀಚಿಗೆ ಕೆಲ ವರ್ಷಗಳಲ್ಲಿ ಸಂಬಂಧ ಆರಂಭವಾದಷ್ಟೇ ಸುಲಭವಾಗಿ ಮುಗಿದು ಕೊನೆಗೊಳ್ಳುವುದು ತುಂಬಾ ಸಾಮಾನ್ಯವಾಗಿದೆ. ಡೇಟಿಂಗ್‌ ಮಾಡ್ತಿರೋ ಬ್ರೇಕಪ್ ಮಾಡ್ಕೊಂಡು, ಮದುವೆಯಾದವರು ಡಿವೋರ್ಸ್‌ ಮಾಡ್ಕೊಂಡು ರಿಲೇಶನ್‌ ಶಿಪ್‌ ದಿ ಎಂಡ್ ಮಾಡಿ ಬಿಡ್ತಾರೆ. ಹಾಗಿದ್ರೆ ಸಂಬಂಧ ಚೆನ್ನಾಗಿರ್ಬೇಕು ಅಂದ್ರೆ ಏಜ್ ಗ್ಯಾಪ್ ಎಷ್ಟಿರಬೇಕು?

ಇತ್ತೀಚಿಗೆ ಕೆಲ ವರ್ಷಗಳಲ್ಲಿ ಸಂಬಂಧ ಆರಂಭವಾದಷ್ಟೇ ಸುಲಭವಾಗಿ ಮುಗಿದು ಕೊನೆಗೊಳ್ಳುವುದು ತುಂಬಾ ಸಾಮಾನ್ಯವಾಗಿದೆ. ಡೇಟಿಂಗ್‌ ಮಾಡ್ತಿರೋ ಬ್ರೇಕಪ್ ಮಾಡ್ಕೊಂಡು, ಮದುವೆಯಾದವರು ಡಿವೋರ್ಸ್‌ ಮಾಡ್ಕೊಂಡು ರಿಲೇಶನ್‌ ಶಿಪ್‌ ದಿ ಎಂಡ್ ಮಾಡಿ ಬಿಡ್ತಾರೆ. ಹೀಗೆ ಸಂಬಂಧ ಹಾಳಾಗಲು ಹಲವಾರು ವಿಷಯಗಳು ಕಾರಣವಾಗುತ್ತವೆ. ಸಂಬಂಧ ಆರಂಭಿಸುವ ಮೊದಲು ಎಲ್ಲಾ ವಿಚಾರವಾಗಿ ತಿಳಿದುಕೊಳ್ಳದಿರುವುದು, ಪರಸ್ಪರ ಅರ್ಥ ಮಾಡಿಕೊಳ್ಳಲು ಯತ್ನಿಸದಿರುವುದು ಸಹ ಇದಕ್ಕೆ ಕಾರಣವಾಗಿರಬಹುದು. ಕೆಲವೊಮ್ಮೆ ವಯಸ್ಸಿನ ಅಂತರವೂ ಇಬ್ಬರ ನಡುವೆ ವೈಮನಸ್ಸು ಮೂಡಲು ಕಾರಣವಾಗುತ್ತದೆ.

ಮದುವೆಯಾಗಲು ಸೂಕ್ತವಾದ ವಯಸ್ಸಿನ ಅಂತರ ಯಾವುದು?
ಹಿಂದೆಯೆಲ್ಲಾ ಮದುವೆ ಮಾಡುವ ಮುನ್ನ ಅನೇಕ ಸಂಗತಿಗಳನ್ನು ಗಮನಿಸುತ್ತಿದ್ದರು. ಹುಡುಗ, ಹುಡುಗಿ ವಯಸ್ಸು (Age) ಇದರಲ್ಲಿ ಮುಖ್ಯವಾಗಿತ್ತು. ಒಂದೇ ವಯಸ್ಸಿನ ಹುಡುಗ–ಹುಡುಗಿ ಮದುವೆಗೆ ಮನೆಯವರು ಒಪ್ಪುತ್ತಿರಲಿಲ್ಲ. ಇಬ್ಬರ ಮಧ್ಯೆ 5-6 ವರ್ಷವಾದ್ರೂ ಅಂತರವಿರಬೇಕು ಎಂಬ ನಿಯಮವನ್ನು ಪಾಲಿಸುತ್ತಿದ್ದರು. ಪತಿಗಿಂತ ಪತ್ನಿ (Wife) ದೊಡ್ಡವಳಿರಬಾರದು ಎನ್ನುವ ಅಲಿಖಿತ ನಿಯಮವನ್ನೂ ಮದುವೆ ಮಾಡುವ ಸಮಯದಲ್ಲಿ ಪಾಲನೆ ಮಾಡಲಾಗ್ತಿತ್ತು. ಅರೆಂಜ್ ಮ್ಯಾರೇಜ್ ನಲ್ಲಿ ಇದೆಲ್ಲವನ್ನೂ ಜನ ಗಮನಿಸ್ತಾರೆ. ಲವ್ ಮ್ಯಾರೇಜ್ ನಲ್ಲಿ ವಯಸ್ಸು ಗಮನಕ್ಕೆ ಬರೋದಿಲ್ಲ. ಒಂದೇ ವಯಸ್ಸಿನ ತಮ್ಮ ಸ್ನೇಹಿತರ ಕೈ ಹಿಡಿಯುವ ಅನೇಕರಿದ್ದಾರೆ. ಆದರೆ ಸಂಬಂಧದಲ್ಲಿ ವಯಸ್ಸಿನ ಅಂತರ ಮುಖ್ಯ ಅನ್ನೋದು ಹಲವರ ಅಭಿಪ್ರಾಯ.

Latest Videos

ಏಜ್ ಗ್ಯಾಪ್ ತುಂಬಾ ಇದ್ಯಾ? ಆದ್ರೂ ಡೇಟಿಂಗ್ ಮಾಡ್ತಾ ಇದೀರಿ ಅಂದ್ರೆ ಈ ಕಡೆ ಇರಲಿ ಗಮನ!

ಸಂಬಂಧದಲ್ಲಿ ವಯಸ್ಸಿನ ಅಂತರ ಹೇಗಿರಬೇಕು? ಸಂಶೋಧನೆಯಿಂದ ಮಾಹಿತಿ
ಸಂಬಂಧದಲ್ಲಿ ವಯಸ್ಸಿನ ಅಂತರ ಹೇಗಿರಬೇಕು ಎಂಬ ಬಗ್ಗೆ ಸಂಶೋಧನೆಯೂ ಸ್ಪಷ್ಟ ಮಾಹಿತಿಯನ್ನು ನೀಡಿದೆ. ವಯಸ್ಸಿನ ಅಂತರವು ಸಂಬಂಧದ ದೀರ್ಘಾಯುಷ್ಯವನ್ನು ನಿರ್ಧರಿಸುತ್ತದೆ ಎಂದು ಸಂಶೋಧನೆ (Study) ತಿಳಿಸಿದೆ. ಅಧ್ಯಯನದಲ್ಲಿ ಹೇಳಿರುವ ಪ್ರಕಾರ ಹೆಚ್ಚು ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳು ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳಂಥಾ ನಕಾರಾತ್ಮಕ ಸಮಸ್ಯೆಯನ್ನು ಎದುರಿಸುತ್ತಾರೆ. ಕಡಿಮೆ ವಯಸ್ಸಿನ ಅಂತರ ಹೊಂದಿರುವ ದಂಪತಿಗೆ (Couple) ಹೋಲಿಸಿದರೆ, ಹೆಚ್ಚು ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿ ಕಡಿಮೆ ವೈವಾಹಿಕ ಸಂತೃಪ್ತಿಯನ್ನು ಅನುಭವಿಸುತ್ತಾರೆ ಎಂದು ತಿಳಿದುಬಂದಿದೆ.

ಸಂಗಾತಿಗಳ ಮಧ್ಯೆ 0-3 ವಯಸ್ಸಿನ ಅಂತರವಿದ್ದರೆ ಸಮಸ್ಯೆಗಳು ಕಡಿಮೆ. ಹಾಗೆಯೇ ಸಂಗಾತಿಗಳ ಮಧ್ಯೆ 4-6 ವಯಸ್ಸಿನ ಅಂತರವಿದ್ದರೆ ಸಮಸ್ಯೆ ಹೆಚ್ಚು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ವಯಸ್ಸಲ್ಲಿ 4-6 ವಯಸ್ಸಿನ ಅಂತರವಿರೋರು, 7 ವರ್ಷಕ್ಕಿಂ ಹೆಚ್ಚು ಏಜ್ ಗ್ಯಾಪ್‌ ಇರೋರಿಗೆ ಹೋಲಿಸಿದರೆ ದಾಂಪತ್ಯದಲ್ಲಿ (Married life) ಹೆಚ್ಚು ತೃಪ್ತರಾಗಿದ್ದಾರೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ. 10 ವರ್ಷಕ್ಕಿಂತಲೂ ಹೆಚ್ಚು ವಯಸ್ಸಿನ ಅಂತರವಿದ್ದರೆ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ. ಇದರ ಜೊತೆಯಲ್ಲೇ ವಯಸ್ಸಿನ ಅಂತರ ಹೆಚ್ಚಾದಷ್ಟು ದಾಂಪತ್ಯದಲ್ಲಿ ಸಂತೃಪ್ತಿ ಕಡಿಮೆಯಾಗುತ್ತದೆ ಎಂಬುದನ್ನು ಸಹ ಅಧ್ಯಯನ ನಡೆಸಿದ ತಂಡ ಸ್ಪಷ್ಟಪಡಿಸಿದೆ. 

ಮದ್ವೆಗೂ ಮೊದ್ಲು ಏಜ್ ಗ್ಯಾಪ್ ನೋಡ್ಕೊಳ್ಳಿ, ಇಲ್ಲಾಂದ್ರೆ ಇಷ್ಟೆಲ್ಲಾ ತೊಂದ್ರೆಯಾಗುತ್ತೆ!mdu

ವಯಸ್ಸಿನ ವ್ಯತ್ಯಾಸವು ನಿಜವಾಗಿಯೂ ಮುಖ್ಯವೇ?
ವಯಸ್ಸಿನ ಅಂತರವು ಸಂಬಂಧದ ದೀರ್ಘಾಯುಷ್ಯ ಮತ್ತು ತೃಪ್ತಿಯ ಮೇಲೆ ಪ್ರಭಾವ ಬೀರಬಹುದಾದರೂ, ವಯಸ್ಸು ಸಂಬಂಧದ ಯಶಸ್ಸನ್ನು ನಿರ್ಧರಿಸುವ ಏಕೈಕ ಅಂಶವಲ್ಲ. ಇದಲ್ಲದೆ ಸಂಗಾತಿಗಳ ಮನಸ್ಥಿತಿ, ಅರ್ಥ ಮಾಡಿಕೊಳ್ಳುವ ಮನೋಭಾವ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

click me!