7 ವರ್ಷದ ಹಿಂದೆ ಮಗುವಿಗೆ ಜನ್ಮ ಕೊಟ್ಟಿದ್ದ ಗರ್ಲ್‌ಫ್ರೆಂಡ್‌, ಫೋಟೋ ನೋಡಿ ಬಾಯ್‌ಫ್ರೆಂಡ್‌ಗೆ ಶಾಕ್‌!

Published : May 05, 2022, 03:28 PM IST
7 ವರ್ಷದ ಹಿಂದೆ ಮಗುವಿಗೆ ಜನ್ಮ ಕೊಟ್ಟಿದ್ದ ಗರ್ಲ್‌ಫ್ರೆಂಡ್‌, ಫೋಟೋ ನೋಡಿ ಬಾಯ್‌ಫ್ರೆಂಡ್‌ಗೆ ಶಾಕ್‌!

ಸಾರಾಂಶ

* ಮಕ್ಕಳಾಗಿಲ್ಲ ಎಂದು ಹಣಿಯುತ್ತಿದ್ದ ಸಹೋದರಿ * ಸಹೋದರಿಯ ನೋವು ಮರರೆ ಮಾಡಲು ಮುಂದಾದ ಅಕ್ಕ * ತಾನೇ ಬಾಡಿಗೆ ತಾಯಿಯಾಗಿ ಸಹೋದರಿ ಮುಖದಲ್ಲಿ ಖುಷಿ ತಂದ ಯುವತಿ

ನವದೆಹಲಿ(ಮೇ.05): ದಂಪತಿಯೊಂದು ಮಕ್ಕಳು ಮಾಡಿಕೊಳ್ಳದಿರಲು ನಿರ್ಧರಿಸಿತ್ತು. ಆದರೆ ಹೀಗಿರುವಾಗಲೇ ಹುಡುಗನಿಗೆ ತನ್ನ ಗರ್ಲ್‌ಫ್ರೆಂಡ್‌ನ ಪ್ರೆಗ್ನೆನ್ಸಿ ವಿಚಾರ ತಿಳಿದಿದೆ. ಹಲವಾರು ವರ್ಷಗಳವರೆಗೆ ತನ್ನ ಗರ್ಲ್‌ಫ್ರೆಂಡ್‌ಗೆ ಮಗು ಇತ್ತೆಂಬ ವಿಚಾರ ಆತನಿಗೂ ತಿಳಿದಿರಲಿಲ್ಲ. ಈ ದಂಪತಿ ಎರಡೂವರೆ ವರ್ಷದಿಂದ ಒಟ್ಟಿಗಿದ್ದಾರೆ. ಆದರೀಗ ಮಹಿಳೆಯೇ ಇಡೀ ಘಟನೆಯ ಬಗ್ಗೆ ರೆಡ್ಡಿಟ್ ಪೋಸ್ಟ್‌ನಲ್ಲಿ ಸಂಪೂರ್ಣ ವಿವರ ನೀಡಿದ್ದಾಳೆ.

ವಾಸ್ತವವಾಗಿ, ಯುವತಿ 20 ವರ್ಷದವಳಿದ್ದಾಗ, ಅವಳು ತನ್ನ ಸಹೋದರಿಗೆ ಬಾಡಿಗೆ ತಾಯಿಯಾದಳು. ಆಕೆಯ ಸಹೋದರಿ ಗರ್ಭಧಾರಣೆಯ ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು. ಆಕೆಗೆ ಹಲವಾರು ಬಾರಿ ಗರ್ಭಪಾತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಹುಡುಗಿ ತನ್ನ ತಂಗಿಗೆ ಬಾಡಿಗೆ ತಾಯಿಯಾದಳು. ಹುಟ್ಟಿದ ಮಗುವಿಗೆ ಈಗ 7 ವರ್ಷ.

ತನ್ನ ಸೊಸೆಯ ಬಗ್ಗೆ ತಾಯಿಯ ಭಾವನೆ ಇಲ್ಲ ಎಂದು ಹುಡುಗಿ ಪೋಸ್ಟ್‌ನಲ್ಲಿ ಹೇಳಿದ್ದಾಳೆ. ಹೀಗಿರುವಾಗ ತನ್ನ ಬಾಯ್ ಫ್ರೆಂಡ್ ಗೆ ಈ ವಿಷಯವನ್ನು ಹೇಳಬೇಕು ಎಂದು ಅನಿಸಲೇ ಇಲ್ಲ ಎಂದೂ ತಿಳಿಸಿದ್ದಾಳೆ. ಮಿರರ್ ವರದಿ ಪ್ರಕಾರ, ಗೆಳೆಯ ತನ್ನ ಗೆಳತಿಯ ಹಳೆಯ ಫ್ಯಾಮಿಲಿ ಫೋಟೋವನ್ನು ನೋಡಿದಾಗ, ಆತ ಆಘಾತಕ್ಕೊಳಗಾಗಿದ್ದಾನೆ. ಏಕೆಂದರೆ ಈ ಫೋಟೋದಲ್ಲಿ ಅವಳು (ಗೆಳತಿ) ಗರ್ಭಿಣಿಯಾಗಿದ್ದಳು.

ಈ ವಿಷಯವನ್ನು ತನ್ನ ಬಾಯ್‌ಫ್ರೆಂಡ್‌ಗೆ ತಿಳಿಸದಿದ್ದಕ್ಕಾಗಿ ಕ್ಷಮೆಯನ್ನೂ ಕೇಳಿದ್ದೇನೆ ಎಂದು ಹುಡುಗಿ ಹೇಳಿದ್ದಾಳೆ. ಆದಾಗ್ಯೂ, ಈ ವಿಚಾರವನ್ನು ಯುವತಿ ತನ್ನ ಬಾಯ್‌ಫ್ರೆಂಡ್‌ಗೆ ಹೇಳದೇ ತಪ್ಪೇನು ಮಾಡಿಲ್ಲ ಎಂದು ಹಲವಾರು ರೆಡ್ಡಿಟ್ ಬಳಕೆದಾರರು ಅಭಿಪ್ರಾಯ ಕೊಟ್ಟಿದ್ದಾರೆ. 

ಅಂದಹಾಗೆ, ಹುಡುಗಿಯ ಪೋಸ್ಟ್ ಪ್ರಕಾರ, ಮೊದಲಿಗೆ ಅವಳ ಗೆಳೆತಿ ತನ್ನ ಮಗುವನ್ನು ಬೇರೆಯವರಿಗೆ ಕೊಟ್ಟಿದ್ದಾಳೆ ಎಂದು ಹುಡುಗ ಭಾವಿಸಿದ್ದಾನೆ. ಹುಡುಗಿ ಇಡೀ ಕಥೆಯನ್ನು ಹೇಳಿದಾಗಲೂ ಆತ ಅದೆಲ್ಲವನ್ನೂ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದ ಎನ್ನಲಾಗಿದೆ.  

ಪ್ರೇಯಸಿಗೆ ತಿಂಗಳಿಗೆ 82 ಲಕ್ಷ ರೂ. ಸ್ಯಾಲರಿಯಾಗಿ ಕೊಡುತ್ತಾನೆ ಈ ಬಾಯ್‌ಫ್ರೆಂಡ್‌ !

 

ಖ್ಯಾತ ಫುಟ್ಬಾಲ್ ಆಟಗಾರ (Football Player)  ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ವಿಶ್ವದ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಅಥ್ಲೆಟಿಕ್ಸ್ ಹೊರತುಪಡಿಸಿ, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಸಮಯದಲ್ಲಿ, ಅವರು ತಮ್ಮ ಗೆಳತಿ (Girlfriend) ಜಾರ್ಜಿನಾ ರೋಡ್ರಿಗಸ್ ಬಗ್ಗೆ ಮಾತನಾಡುತ್ತಿರುತ್ತಾರೆ. ವರದಿಗಳ ಪ್ರಕಾರ, ರೊನಾಲ್ಡೊ ತನ್ನ ಗೆಳತಿಗೆ ಮಾಸಿಕ ವೆಚ್ಚದಲ್ಲಿ 80 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ನೀಡುತ್ತಾರಂತೆ. ಗೆಳತಿಯರಿಗೆ ಪಾವತಿಸಿದ ಹಣವನ್ನು ಬ್ರಿಟಿಷ್ ಮಾಧ್ಯಮಗಳಲ್ಲಿ 'ಸಂಬಳ' ಎಂದು ಉಲ್ಲೇಖಿಸಲಾಗಿದೆ. ಅಷ್ಟಕ್ಕೂ ಕೆಲಸದವರಿಗೆ ಸಂಬಳ (Salary) ನೀಡುತ್ತಾರೆ. ಹೆಂಡತಿಗೆ ಸಂಬಳ ಯಾಕೆ ಎಂಬ ಪ್ರಶ್ನೆ ಮೂಡಬಹುದು.

ಮಕ್ಕಳ ಆರೈಕೆ ಮತ್ತು ಇತರ ವೆಚ್ಚಗಳಿಗಾಗಿ 82 ಲಕ್ಷ ರೂ.
ರೊನಾಲ್ಡೊ ಮತ್ತು ಜಾರ್ಜಿನಾ  ಐಷಾರಾಮಿ ಜೀವನ (Luxurious Life) ನಡೆಸುತ್ತಿದ್ದಾರೆ. ಈ ಹಿಂದೆ, ರೊನಾಲ್ಡೊ ತನ್ನ ಗೆಳತಿ ಜಾರ್ಜಿನಾಗೆ 1.5 ಕೋಟಿ ಮೌಲ್ಯದ ವಾಹನವನ್ನು ನೀಡಿದ್ದರು. ದಂಪತಿ ಆಗಾಗ ವಿದೇಶಗಳಲ್ಲಿ ಎಂಜಾಯ್‌ ಮಾಡುವುದನ್ನು ನೋಡಬಹುದು. ಜಾರ್ಜಿನಾ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರ ಐಷಾರಾಮಿ ಜೀವನವನ್ನು ಪ್ರತಿಬಿಂಬಿಸುವ ಫೋಟೋಗಳನ್ನು ನೋಡಬಹುದು. ಜಾರ್ಜಿನಾ ಮತ್ತು ರೊನಾಲ್ಡೊ 2017ರಿಂದ ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ. ಎಲ್ ನ್ಯಾಶನಲ್ ಪ್ರಕಾರ ಜಾರ್ಜಿನಾ ರೋಡ್ರಿಗಸ್ ಪ್ರತಿ ತಿಂಗಳು ಮಕ್ಕಳ ಆರೈಕೆ ಮತ್ತು ಇತರ ವೆಚ್ಚಗಳಿಗಾಗಿ" 83,000 ಪೌಂಡ್‌ಗಳನ್ನು (ಸುಮಾರು ರೂ 82 ಲಕ್ಷ) ಪಡೆಯುತ್ತಾರೆ ಎಂದು ತಿಳಿದುಬಂದಿದೆ.

ಕ್ರಿಸ್ಟಿಯಾನೋ ರೊನಾಲ್ಡೋ ಜರ್ಸಿಗಳ ಸೇಲ್‌ನಿಂದ 1,900 ಕೋಟಿ ರುಪಾಯಿ ಗಳಿಕೆ!

ಜಾರ್ಜಿನಾ ವೃತ್ತಿಪರ ಮಾಡೆಲ್‌. ಅವರು ವಿವಿಧ ಪ್ರಸಿದ್ಧ ವ್ಯವಹಾರಗಳ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ, ಅವರು ಸುಮಾರು 36 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಪ್ರತಿ ಫೋಟೋವನ್ನು ಲಕ್ಷಾಂತರ ಜನರು ಇಷ್ಟಪಡುತ್ತಾರೆ ಮತ್ತು ಕಾಮೆಂಟ್ ಮಾಡುತ್ತಾರೆ. ಇತ್ತೀಚೆಗೆ, 'ಐ ಆಮ್ ಜಾರ್ಜಿನಾ' ಸಾಕ್ಷ್ಯಚಿತ್ರದಲ್ಲಿ, ಜಾರ್ಜಿನಾ ಅವರ ಜೀವನದ ಎಲ್ಲಾ ಅಂಶಗಳನ್ನು ಚರ್ಚಿಸಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ