attractive traits: ಹುಡುಗಿ ಹೀಗಿದ್ರೆ ಹೆಚ್ಚು ಆಕರ್ಷಕವಂತೆ!

Published : Nov 26, 2021, 04:56 PM ISTUpdated : Nov 26, 2021, 05:24 PM IST
attractive traits: ಹುಡುಗಿ ಹೀಗಿದ್ರೆ ಹೆಚ್ಚು ಆಕರ್ಷಕವಂತೆ!

ಸಾರಾಂಶ

ಚೆನ್ನಾಗಿರೋ ಹುಡುಗಿಯರೆಲ್ಲ ಅಟ್ರ್ಯಾಕ್ಟಿವ್ ಆಗಿರಬೇಕಿಲ್ಲ. ಅಂದಚೆಂದವೇ ಬೇರೆ. ಅಟ್ರ್ಯಾಕ್ಟ್ ಮಾಡೋ ಸಂಗತಿಗಳೇ ಬೇರೆ. ನಿಜವಾಗಿ ಹುಡುಗಿಯರಲ್ಲಿ ಹುಡುಗರನ್ನು ಆಕರ್ಷಿಸುವ ಗುಣಗಳ್ಯಾವುವು ಗೊತ್ತಾ?

ಕೆಲ ಹುಡುಗಿಯರು ನೋಡಲು ಸಾಧಾರಣ ಎನಿಸಿದರೂ ಅವರಿಂದ ಕಣ್ತೆಗೆಯುವುದು ಕಷ್ಟವಾಗುತ್ತದೆ. ಅವರ ಹಾವಭಾವ, ಎನರ್ಜಿ, ಯೋಚನೆಗಳು ಇತ್ಯಾದಿ ಕಾರಣಕ್ಕಾಗಿ ಅವರೆಡೆಗೆ ಸೆಳೆಯುತ್ತಾರೆ. ಮತ್ತೆ ಕೆಲ ಹುಡುಗಿಯರು ಬಹಳ ಸುಂದರಿಯರಾಗಿದ್ದರೂ ಆಕರ್ಷಕ(attractive) ಎನಿಸುವುದಿಲ್ಲ. ಇದು ಏಕೆ ಹೀಗೆ? ನಿಜವಾಗಿ ಹುಡುಗರಿಗೆ ಹುಡುಗಿಯರಲ್ಲಿ ಹೆಚ್ಚು ಆಕರ್ಷಕ ಎನಿಸುವ ಸಂಗತಿಗಳಾವುವು? ಈ ಬಗ್ಗೆ ಹಲವಾರು ಅಧ್ಯಯನಗಳು(studies) ನಡೆದಿವೆ. ಅವುಗಳ ವರದಿಯಂತೆ ಈ ಕೆಳಗಿನ ಸಂಗತಿಗಳು ಹುಡುಗಿಯನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಎಂದಿದ್ದಾರೆ ಪುರುಷರು. ಅವುಗಳಲ್ಲಿ ಕೆಲವು ನಿಜಕ್ಕೂ ಸರ್ಪ್ರೈಸಿಂಗ್ ಆಗಿವೆ. 

ಕಣ್ಣುಗಳು
ಕೆಲವು ಹುಡುಗಿಯರ ಕಣ್ಗಳು ಅಗಲವಾಗಿಯೂ, ಆಳವಾಗಿಯೂ ಇರುತ್ತವೆ. ಅವನ್ನು ನೋಡುತ್ತಿದ್ದಂತೆ ಅವೇನೋ ಮಾತಾನಾಡುತ್ತಿರುವಂತೆ ಭಾಸವಾಗುತ್ತದೆ. ಹೀಗೆ ಹೆಚ್ಚು ಕಮ್ಯುನಿಕೇಟಿವ್ ಆಗಿರುವ ಕಣ್ಗಳು (communicative eyes) ಹುಡುಗರಿಗೆ ಬಹಳ ಆಕರ್ಷಕ ಎನಿಸುತ್ತದಂತೆ. 


ಮೆಚೂರ್ಡ್ ಲುಕ್(matured look)
ತಲೆಯಲ್ಲಿ ಒಂದೆರಡು ಕೂದಲು ಬೆಳ್ಳಗಾಗುತ್ತಿದ್ದಂತೆ ಹುಡುಗಿಯರು ನೆಕ್ಸ್ಟ್ ಏಜ್ ಗ್ರೂಪಿಗೆ ಸೇರಿಬಿಡುತ್ತಾರೆ. ಇಷ್ಟವಿಲ್ಲದಿದ್ದರೂ ಆಂಟಿ ಎನಿಸಿಕೊಳ್ಳುತ್ತಾರೆ. ಆದರೆ, ಹುಡುಗಿಯರಿಗೆ ಚಿಂತೆಯ ವಿಷಯವಾಗಿರುವ ಈ ಮೆಚೂರ್ಡ್ ಲುಕ್ ಬಹಳಷ್ಟು ಯುವಕರಿಗೆ ಅಟ್ರ್ಯಾಕ್ಟಿವ್ ಫೀಚರ್ ಎನಿಸುತ್ತದೆಯಂತೆ. ಸಾಮಾನ್ಯವಾಗಿ ಮಗುವಾಗಿದ್ದಾಗ 30 ವರ್ಷ ದಾಟಿದ ತಾಯಿಯನ್ನು ನೋಡಿಕೊಂಡು ಬೆಳೆದ ಯುವಕರಿಗೆ 30 ದಾಟಿದ ಯುವತಿಯರೇ ಹೆಚ್ಚು ಇಷ್ಟವಾಗುತ್ತಾರೆ ಎನ್ನುತ್ತವೆ ಅಧ್ಯಯನಗಳು. 

Voluntary childlessness: ಮಕ್ಳೇ ಬೇಡ ಅನ್ನೋಕ್ ಕಾರ್ಣ ಒಂದಾ ಎರ್ಡಾ?


ಅಮ್ಮನಂತಿದ್ದರೆ ಇಷ್ಟ
ಮತ್ತೆ ಕೆಲ ಅಧ್ಯಯನಗಳು ಕಂಡುಕೊಂಡ ವಿಷಯ ಬಹಳ ವಿಶೇಷವಾಗಿದೆ. ಮಕ್ಕಳ ಬದುಕಿನಲ್ಲಿ ತಂದೆತಾಯಿಯ ಪ್ರಭಾವ ತುಂಬಾ ಇರುತ್ತದೆ. ತಾಯಿ ಎಂದರೆ ಆದರ್ಶ ಎಂದುಕೊಂಡು ಬೆಳೆದ ಯುವಕರಿಗೆ ನೋಡಲಷ್ಟೇ ಅಲ್ಲ, ಸ್ವಭಾವದಲ್ಲಿ ಕೂಡಾ ತಮ್ಮ ತಾಯಿಯನ್ನೇ ಹೋಲುವಂಥ ಹುಡುಗಿಯರು ಹೆಚ್ಚು ಅಟ್ರ್ಯಾಕ್ಟಿವ್ ಎನಿಸುತ್ತಾರಂತೆ. ತಾಯಿಯ ಬಣ್ಣ, ಎತ್ತರ, ಅಥವಾ ಆಕೆಯ ಯೋಚನೆಗಳನ್ನೇ ಹೋಲುವ ಯೋಚನೆ ಇರುವುದು, ಹಾವಭಾವಗಳಲ್ಲಿ ಆಕೆಯನ್ನು ಹೋಲುವುದು ಅಥವಾ ಮತ್ತಾವುದೇ ಗುಣ ಅಮ್ಮನನ್ನು ನೆನಪಿಸುವಂತಿದ್ದರೆ ಅಂಥಾ ಹುಡುಗಿಯರನ್ನು ನೋಡಿದಾಗ ತಮಗಿವಳೇ ಸರಿ ಎನಿಸುತ್ತದಂತೆ.

Sexual health: ಲೈಂಗಿಕ ಜೀವನಕ್ಕೆ ಆಧ್ಯಾತ್ಮದ ಲಾಭ ತರುವ ತಾಂತ್ರಿಕ್ ಸೆಕ್ಸ್


ಹಾಸ್ಯಪ್ರಜ್ಞೆ(sense of humor)
ಇದು ಕೇವಲ ಯುವಕರಿಗಲ್ಲ, ಯುವತಿಯರಿಗೂ ಸೇರಿದಂತೆ ಬಹುತೇಕ ಎಲ್ಲರೂ ತಮ್ಮ ಪಾರ್ಟ್ನರ್‌ನಲ್ಲಿ ಹಾಸ್ಯಪ್ರಜ್ಞೆ ಇರಬೇಕೆಂದು ಬಯಸುತ್ತಾರೆ. ಹುಡುಗರಿಗೆ ಹೋಲಿಸಿದರೆ ಹುಡುಗಿಯರಲ್ಲಿ ಹಾಸ್ಯಪ್ರಜ್ಞೆ ಸ್ವಲ್ಪ ಕಡಿಮೆಯೇ. ಒಂದು ವೇಳೆ ಯುವತಿಯರ ಸೆನ್ಸ್ ಆಫ್ ಹ್ಯೂಮರ್ ಚೆನ್ನಾಗಿದೆ ಎಂದರೆ ಅಂಥ ಯುವತಿಯರು ಬಹಳವಾಗಿ ಸೆಳೆಯುತ್ತಾರೆ ಎನ್ನುತ್ತಾರೆ ಹುಡುಗರು. 

ನಗು(smile)
ನಗುವಿಗಿಂತ ಚೆಂದದ ಆಭರಣ ಮತ್ತೊಂದಿರಲಿಕ್ಕಿಲ್ಲ. ಹುಡುಗಿಯ ಮೈಯ್ಯಲ್ಲಿ ಬೇರೇನೂ ಆಭರಣಗಳಿಲ್ಲದಿದ್ದರೂ ಅವಳ ಮುಖದಲ್ಲಿ ನಗುವಿದ್ದರೆ ಅದೇ ಹೆಚ್ಚು ಆಕರ್ಷಕ ಎನ್ನುತ್ತಾರೆ ಬಹಳಷ್ಟು ಹುಡುಗರು. ಅದರಲ್ಲೂ ಹಲ್ಲುಗಳು ತೋರುವಂತೆ ದೊಡ್ಡದಾಗಿ ನಗುವವರು ಜಾಸ್ತಿ ಆಕರ್ಷಣೆ ಹೊಂದಿರುತ್ತಾರಂತೆ. 


ವ್ಯಕ್ತಿತ್ವ(personality)
ಕೇವಲ ಲುಕ್ಸ್ ಅಲ್ಲ, ಹುಡುಗಿಯರು ಅವರ ಗುಣಗಳಿಂದಾಗಿ ಯುವಕರನ್ನು ಹೆಚ್ಚು ಆಕರ್ಷಿಸಬಲ್ಲರು. ಅವುಗಳಲ್ಲಿ ಮೊದಲ ಸ್ಥಾನ ಕರುಣೆಗೆ. ಕರುಣೆ, ಪ್ರೀತಿ, ನೈತಿಕ ಪ್ರಜ್ಞೆ, ಆದರ್ಶಗಳು, ಪ್ರಾಮಾಣಿಕತೆ, ಗೌರವ, ಪಾಸಿಟಿವ್ ಆ್ಯಟಿಟ್ಯೂಡ್, ಬುದ್ಧಿವಂತಿಕೆಯಂಥ ಗುಣಗಳನ್ನು ಹೊಂದಿರುವ ಹುಡುಗಿಯರೆಂದರೆ ಹುಡುಗರಿಗಿಷ್ಟ. ಇಷ್ಟೇ ಅಲ್ಲದೆ, ರಿಸ್ಕ್ ತೆಗೆದುಕೊಳ್ಳಲು ರೆಡಿ ಇರುವ ಹುಡುಗಿಯರ ಗುಣ, ಆತ್ಮವಿಶ್ವಾಸ ಅವರನ್ನು ಹೆಚ್ಚು ಆಕರ್ಷಕವಾಗಿಸುತ್ತದೆ ಅಂತಾರೆ ಹುಡುಗರು.

ದೊಡ್ಡ ದನಿ(high pitched voice)
ಹಸ್ಕಿ ವಾಯ್ಸ್ ಸಖತ್ ಸೆಕ್ಸಿಯಾಗಿರುತ್ತದೆ ಎಂದು ನೀವು ಭಾವಿಸಿರಬಹುದು. ಆದರೆ, ಹುಡುಗರು ನಿಜವಾಗಲೂ ಆಕರ್ಷಿತರಾಗುವುದು ದೊಡ್ಡದಾಗಿ ಮಾತನಾಡುವ ಹುಡುಗಿಯರಿಗೆ. ಹಾಗಂಥ ತುಂಬಾ ದೊಡ್ಡ ದನಿಯಲ್ಲಿ ಮಾತನಾಡುವವರಲ್ಲ. ಮಾತಿನಲ್ಲಿ ಕಾನ್ಫಿಡೆನ್ಸ್ ಎದ್ದು ಕಾಣುವಂತೆ ಮಾತನಾಡುವ ಹುಡುಗಿಯರು ಅವರಿಗಿಷ್ಟ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!