
ಮದುವೆ ಎನ್ನುವುದು ಒಂದು ಪವಿತ್ರ ಬಂಧನ. ವೈವಾಹಿಕ ಜೀವನಕ್ಕೆ ಕಾಲಿಡುವ ಮೊದಲು ಗಂಡು ಹೆಣ್ಣು ಇಬ್ಬರಲ್ಲಿಯೂ ಅನೇಕ ಗೊಂದಲ, ಕುತೂಹಲ, ಹೆದರಿಕೆಗಳು ಇರುತ್ವೆ. ಲವ್ ಮ್ಯಾರೇಜ್ ಆಗಿರಲಿ ಇಲ್ಲ ಅರೇಂಜ್ ಮ್ಯಾರೇಜ್ ಆಗಲಿ ಇದರಲ್ಲಿ ಯಾವುದೇ ವ್ಯತ್ಯಾಸ ಇರೋದಿಲ್ಲ. ಮೊದಲೆಲ್ಲ ತಂದೆ ತಾಯಿ ನೋಡಿದ ಹುಡುಗನನ್ನು ಮದುವೆ (Marriage) ಮಂಟಪದಲ್ಲಿ ಹುಡುಗಿಯರು ನೋಡ್ತಿದ್ದರಂತೆ. ಆ ಕಾಲ ಈಗಿಲ್ಲ ಬಿಡಿ. ಹಾಗಂತ ಈಗ್ಲೂ ಅನೇಕರು ಅರೇಂಜ್ಡ್ ಮ್ಯಾರೇಜ್ (Arranged) ಆಗ್ತಾರೆ. ಆದ್ರೆ ಮದುವೆಗೆ ಮುನ್ನು ಅವರ ನಡುವೆ ಸಾಕಷ್ಟು ಮಾತುಕತೆ, ಭೇಟಿ ಇತ್ಯಾದಿಗಳು ನಡೆದಿರುತ್ತವೆ. ಮೊಬೈಲ್, ಫೇಸ್ ಬುಕ್, ಮೆಟ್ರಿಮೊನಿ (Matrimony) ಮುಂತಾದವುಗಳಿಂದ ಹುಡುಗನ ಬಗ್ಗೆ ಹುಡುಗಿಗೆ, ಹುಡುಗಿಯ ಬಗ್ಗೆ ಹುಡುಗನಿಗೆ ಸಾಕಷ್ಟು ವಿಷಯಗಳು ತಿಳಿದಿರುತ್ತವೆ. ಒಬ್ಬರನ್ನೊಬ್ಬರು ಇಷ್ಟೊಂದು ತಿಳಿದ ಮೇಲೂ ಅನೇಕ ಸಂಬಂಧಗಳು ಮದುವೆಗೆ ಮುನ್ನವೇ ಮುರಿದು ಬಿದ್ದಿರುವುದನ್ನು ನಾವು ನೋಡುತ್ತೇವೆ.
ಈಗಿನ ಯುವಜನತೆ ತಮ್ಮ ಬ್ಯಾಚುಲರ್ (Bachelor) ದಿನಗಳಿಗೆ ಗುಡ್ ಬೈ ಹೇಳುವ ಮೊದಲೇ ತಮ್ಮ ಕೆಲವು ನಡವಳಿಕೆ, ಮಾತು, ವರ್ತನೆಗಳಿಂದ ಸಂಬಂಧವನ್ನು ಮುರಿದುಕೊಳ್ಳುತ್ತಾರೆ. ಹಾಗಾಗಿ ಮದುವೆಯಾಗುವ ಹುಡುಗ ಹುಡುಗಿ ಸಾಕಷ್ಟು ಎಚ್ಚರದಿಂದ ಇರಬೇಕು. ಮದುವೆಗೂ ಮುನ್ನ ಅವರು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ.
ಮದುವೆಗೂ ಮುನ್ನ ಕುಡಿತ ಬೇಡ : ಕುಡಿದ ಅಮಲಿಯಲ್ಲಿ ಯಾರು ಹೇಗೆ ಮಾತಾಡ್ತಾರೆ, ಅವರ ಬಾಯಿಂದ ಏನೇನು ಬರುತ್ತೆ ಅನ್ನೋದು ಊಹೆಗೂ ನಿಲುಕದ್ದು. ಹಾಗಾಗಿ ಮದುವೆಯ ಸಮಯದಲ್ಲಿ ಹಾಗೂ ಮದುವೆಗೂ ಮೊದಲು ಕುಡಿಯುವುದನ್ನು ನಿಲ್ಲಿಸಿ. ಮದುವೆ ನಿಶ್ಚಯವಾಗಿರುವಾಗ ಹುಡುಗ ಅಥವಾ ಹುಡುಗಿ ಕುಡಿಯುವುದರಿಂದ ಎಲ್ಲರ ಮುಂದೆ ಅವರ ಗೌರವಕ್ಕೆ ಧಕ್ಕೆ ಬರುತ್ತದೆ. ಅವರ ಬಗ್ಗೆ ಇತರರಲ್ಲಿ ಕೆಟ್ಟ ಭಾವನೆ ಮೂಡಿ ಮದುವೆ ಮುರಿಯಬಹುದು.
ಸಂಗಾತಿಗಾಗಿ ಏನೂ ಬೇಕಾದರೂ ಮಾಡ್ತಾರಂತೆ ಈ ರಾಶಿಯ ಮಹಿಳೆಯರು
ಮಾಜಿ ಪ್ರೇಮಿಯ ಜೊತೆ ಮಾತು ಬೇಡ : ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ ಒಮ್ಮೆ ಮದುವೆ ನಿಶ್ಚಯವಾದ ನಂತರ ತಮ್ಮ ಎಕ್ಸ್ ಲವರ್ ಜೊತೆ ಸಂಪರ್ಕದಲ್ಲಿ ಇರಬಾರದು. ನಿಮ್ಮ ಹಳೆಯ ಪ್ರೇಮಿಯ ಜೊತೆ ಪೂರ್ತಿಯಾಗಿ ಸಂಬಂಧವನ್ನು ಕಳೆದುಕೊಂಡ ನಂತರವೇ ನೀವು ಹೊಸ ಸಂಬಂಧವನ್ನು ಬೆಳೆಸಲು ಮುಂದಾಗಬೇಕು. ಮದುವೆ ಮಾತುಕತೆ ನಡೆದ ಮೇಲೆಯೂ ನೀವು ಎಕ್ಸ್ ಜೊತೆ ಸಂಬಂಧ ಇಟ್ಟುಕೊಳ್ಳುವುದರಿಂದ ನಿಮ್ಮ ಹೊಸ ಸಂಬಂಧ ಮುರಿದುಹೋಗಬಹುದು.
ಹಣಕಾಸಿನ ವ್ಯವಹಾರ (Money Transaction) ಬೇಡ : ಮದುವೆಗೂ ಮೊದಲೇ ನಿಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಗಳ ಬಗ್ಗೆಯಾಗಲೀ, ಮದುವೆಯ ಖರ್ಚು ವೆಚ್ಚಗಳ ಕುರಿತಾಗಲೀ ನಿಮ್ಮ ಭಾವಿ ಪತಿ ಅಥವಾ ಪತ್ನಿಯೊಡನೆ ಚರ್ಚಿಸಬೇಡಿ. ಹೀಗೆ ಆರ್ಥಿಕ ಪರಿಸ್ಥಿತಿಯ ಕುರಿತು ಮಾತನಾಡುವುದು, ಹಣಕಾಸಿನ ವ್ಯವಹಾರ ನಡೆಸುವುದು ಮುಂತಾದವು ಸಂಬಂಧಗಳ ನಡುವೆ ಬಿರುಕು ಮೂಡಿಸಬಹುದು. ನೀವು ನಿಮ್ಮ ತೊಂದರೆಯನ್ನು ಅವರ ಬಳಿ ಹಂಚಿಕೊಳ್ಳಬೇಕೆಂಬ ದೃಷ್ಟಿಯಿಂದ ಹೇಳಿದರೂ ಅವರು ಅದನ್ನು ತಪ್ಪಾಗಿ ಭಾವಿಸಬಹುದು. ಹಾಗಾಗಿ ಮದುವೆಯಾಗುವ ಮೊದಲು ಯಾವುದೇ ರೀತಿಯ ಬಜೆಟ್ ಕುರಿತಾದ ಚರ್ಚೆಗಳು ಬೇಡ.
ವಯಸ್ಸು 50 ಆಯಿತು, ಈಗ ಬೆಂಬಿಡದೇ ಕಾಡುತ್ತಿದೆ ಒಂಟಿತನ, ಏನ್ಮಾಡಲಿ?
ದೂರು ನೀಡುವುದನ್ನು ಬಿಡಿ : ಮದುವೆಗೂ ಮುನ್ನವೇ ಪರಸ್ಪರ ದೂರುವುದನ್ನು ನಿಲ್ಲಿಸಿ. ಕೆಲವರ ಸ್ವಭಾವವೇ ಹಾಗಿರುತ್ತದೆ. ಅವರಿಗೆ ಇನ್ನೊಬ್ಬರ ಜೊತೆ ಹೊಂದಿಕೊಂಡು ಹೋಗಲು ಕಷ್ಟವಾಗುತ್ತದೆ. ಅವರ ಮಾತುಗಳನ್ನು ಕೇಳುವ, ಗೌರವಿಸುವ ಗುಣ ಇರುವುದಿಲ್ಲ. ಒಂದು ಮದುವೆಯೆಂದರೆ ಅಲ್ಲಿ ಹೊಂದಿಕೊಂಡು ಬಾಳುವ ಸ್ವಭಾವವೇ ಮುಖ್ಯವಾಗಿರುತ್ತದೆ. ಹಾಗಿರುವಾಗ ಮದುವೆಯಾಗುವ ಹುಡುಗ ಹುಡುಗಿ ಮಾತು ಮಾತಿಗೂ ಒಬ್ಬರನ್ನೊಬ್ಬರು ದೂರು ನೀಡುತ್ತಿದ್ದರೆ ಮದುವೆಗೆ ಮೊದಲೇ ಆ ಸಂಬಂಧ ಮುರಿದುಬೀಳುತ್ತದೆ. ಇದರಿಂದ ಎರಡೂ ಮನೆಯವರ ನೆಮ್ಮದಿಯೂ ಹಾಳಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.