Parenting Tips : ಪರೀಕ್ಷೆ ಬರ್ತಿದ್ದಂತೆ ಮಕ್ಕಳು ಹೀಗೆಲ್ಲ ಆಡ್ತಿದ್ದಾರಾ?

By Suvarna NewsFirst Published Jan 31, 2023, 3:36 PM IST
Highlights

ಮಕ್ಕಳಿಗೆ ಪರೀಕ್ಷೆ ಎನ್ನುವುದು ದುಃಸ್ವಪ್ನವಿದ್ದಂತೆ. ಪರೀಕ್ಷೆ ಹತ್ತಿರ ಬರ್ತಿದ್ದಂತೆ ಶಾಲೆ, ಪಾಲಕರ ಒತ್ತಡ ಹೆಚ್ಚಾಗುತ್ತದೆ. ಓದಿ ಓದಿ ಸುಸ್ತಾಗುವ ಮಕ್ಕಳು ವಿಪರೀತ ಸಮಸ್ಯೆ ಎದುರಿಸುತ್ತಾರೆ. ಒತ್ತಡದಿಂದ ಪರೀಕ್ಷೆ ಸಮಯದಲ್ಲಿ ಬಂದಿದ್ದನ್ನೂ ಮರೆತು ಬರುವ ಮಕ್ಕಳು ಸಾಕಷ್ಟು ಮಂದಿ.
 

ಮಕ್ಕಳ ಎಲ್ಲ ಸಂಭ್ರಮದ ದಿನಗಳು ಮುಗಿದಿದೆ. ಎಲ್ಲ ಶಾಲೆಗಳು ವಾರ್ಷಿಕೋತ್ಸವ ಸಮಾರಂಭಗಳನ್ನು ಮುಗಿಸಿ ಶಿಕ್ಷಣದ ಕಡೆ ಗಮನ ಹರಿಸ್ತಿವೆ. ಮಕ್ಕಳಿಗೆ ಅಂತಿಮ ಪರೀಕ್ಷೆ ಹತ್ತಿರ ಬರ್ತಿದ್ದಂತೆ ಪಾಲಕರು ಕೂಡ ಸ್ಟ್ರಿಕ್ಟ್ ಆಗ್ತಿದ್ದಾರೆ. ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಒತ್ತಡಕ್ಕೆ ಒಳಗಾಗ್ತಾರೆ.  ಶಿಕ್ಷಕರು ಮತ್ತು ಕುಟುಂಬದ ಸದಸ್ಯರ ನಿರೀಕ್ಷೆ ಮಕ್ಕಳ ಒತ್ತಡವನ್ನು ಹೆಚ್ಚಿಸುತ್ತದೆ.  

ಮಕ್ಕಳಿ (Children) ಗೆ ಪರೀಕ್ಷೆ (Exam) ಹತ್ತಿರ ಬರ್ತಿದ್ದಂತೆ ಪಾಲಕರು ಎಲ್ಲ ಮನರಂಜನೆ ಮೂಲವನ್ನು ಕಟ್ ಮಾಡ್ತಾರೆ. ನೋ ಟಿವಿ, ನೋ ಮೊಬೈಲ್. ಹೊರಗೆ ಆಟವಾಡಲು ಕೆಲ ಮಕ್ಕಳಿಗೆ ಅವಕಾಶವಿರುವುದಿಲ್ಲ. ಇಡೀ ದಿನ ಓದಿನಲ್ಲಿ ನಿರತರಾಗುವ ಮಕ್ಕಳು ಮತ್ತಷ್ಟು ಒತ್ತರಕ್ಕೆ ಒಳಗಾಗಿ, ವಿದ್ಯಾಭ್ಯಾಸ (Education) ದ ಕಡೆ ಗಮನ ನೀಡಲು ಸಾಧ್ಯವಾಗೋದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವರು ಎಷ್ಟೇ ಓದಿದ್ರೂ ಅಕ್ಷರ ತಲೆಯಲ್ಲಿ ನಿಲ್ಲೋದಿಲ್ಲ. ಪರೀಕ್ಷೆ ಎಂಬುದು ಮಕ್ಕಳನ್ನು ಭೂತದಂತೆ ಕಾಡುತ್ತದೆ. ನಿಮ್ಮ ಮಕ್ಕಳು ಪರೀಕ್ಷೆ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದನ್ನು ನೀವು ತಿಳಿಯುವ ಅಗತ್ಯವಿದೆ. ಅದ್ರಿಂದ ಮಕ್ಕಳನ್ನು ಹೊರಗೆ ತರುವ ಪ್ರಯತ್ನ ಕೂಡ ನಡೆಯಬೇಕಿದೆ. ನಾವಿಂದು ಪರೀಕ್ಷೆ ಒತ್ತಡಕ್ಕೊಳಗಾದ ಮಕ್ಕಳ ಲಕ್ಷಣಗಳು ಏನು ಎಂಬುದನ್ನು ನಿಮಗೆ ಹೇಳ್ತೆವೆ.

Parenting Tips: ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸುವ ಮುನ್ನ ಇದನ್ನೋದಿ

ಒತ್ತಡಕ್ಕೊಳಗಾದ ಮಕ್ಕಳಲ್ಲಿ ಕಾಣಿಸುತ್ತೆ ಈ ಲಕ್ಷಣ : 

ಬದಲಾಗುತ್ತೆ ಮಕ್ಕಳ ನಡವಳಿಕೆ : ಪರೀಕ್ಷೆಯ ದಿನ ಹತ್ತಿರ ಬರ್ತಿದ್ದಂತೆ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದರೆ ಅದು ಒತ್ತಡಕ್ಕೆ ಕಾರಣವಾಗಬಹುದು. ಮಗು ಶಾಂತವಾಗಿದ್ದರೆ ಅಥವಾ ಒಂಟಿಯಾಗಿ ಕುಳಿತಿರುತ್ತಿದ್ದರೆ ಅದು ಕೂಡ ಒತ್ತಡದ ಲಕ್ಷಣವಾಗಿದೆ. ಸದಾ ಖುಷಿಯಿಂದ ಮತ್ತು ಲವಲವಿಕೆಯಿಂದ ಮಾತನಾಡ್ತಾ ಇರುವ ಮಗು ಶಾಂತವಾಗಿದ್ರೂ ಅದು ಒತ್ತಡದ ಲಕ್ಷಣವನ್ನು ತೋರಿಸುತ್ತದೆ.

ನಿದ್ರೆಯ ಕೊರತೆ : ಮಕ್ಕಳು 8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ. ಮೊದಲೆಲ್ಲ ಆರಾಮವಾಗಿ ನಿದ್ರೆ ಮಾಡ್ತಿದ್ದ ಮಗು ಈಗ ನಿದ್ರಿಸಲು ತೊಂದರೆಪಡ್ತಿದೆ ಅಂದ್ರೆ ಅದು ಒತ್ತಡದ ಲಕ್ಷಣವಿರಬಹುದು. ಮಗು ನಿದ್ರೆ ಸರಿಯಾಗಿ ಮಾಡದೆ ಹೋದ್ರೆ, ಮಧ್ಯರಾತ್ರಿ ನಿದ್ರೆಯಿಂದ ಎಚ್ಚರಗೊಂಡು ಚಡಪಡಿಸಿದ್ರೆ ಇದನ್ನು ಪಾಲಕರು ಗಂಭೀರವಾಗಿ ಪರಿಗಣಿಸಬೇಕಿದೆ. 

ಸದಾ ಓದಿನಲ್ಲಿ ಮಗ್ನವಾಗಿರುವುದು : ನಿಮಗೆ ಇದು ವಿಚಿತ್ರವೆನಿಸಬಹುದು ಆದ್ರೆ ಇದು ಕೂಡ ಒತ್ತಡದ ಒಂದು ಲಕ್ಷಣವಾಗಿದೆ. ಮಗು ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ರೆ ಸದಾ ಓದುತ್ತಿದೆ ಎಂದು ಪಾಲಕರು ಭಾವಿಸ್ತಾರೆ. ಆದ್ರೆ ಮಗುವಿಗೆ ಪರೀಕ್ಷೆ ಬಗ್ಗೆ ವಿಪರೀತ ಭಯವಿರುತ್ತದೆ. ಮನಸ್ಸಿನಲ್ಲಿ ಸದಾ ಭಯವಿರುತ್ತದೆ. ಹೆಚ್ಚು ಓದಿದ್ರೆ ಹೆಚ್ಚು ಅಂಕ ಪಡೆಯಬಹುದು ಎನ್ನುವ ಕಾರಣಕ್ಕೆ ಮಗು ಕುಳಿತಲ್ಲಿ, ನಿಂತಲ್ಲಿ ಓದುತ್ತದೆ. ಕೆಲ ಮಕ್ಕಳು ಪರೀಕ್ಷೆ ಫಲಿತಾಂಶ ಬಂದ ನಂತ್ರೂ ಓದು ಮುಂದುವರೆಸುತ್ತಾರೆ. ನಿಮ್ಮ ಮಗು ಕೂಡ ಸದಾ ಓದುತ್ತಿದ್ದರೆ ಅದಕ್ಕೆ ಒತ್ತಡ ಕಾಡ್ತಿದೆ ಎಂದರ್ಥ.

ಮಕ್ಕಳಲ್ಲಿ ಹೆಚ್ಚಾಗುತ್ತೆ ಕೋಪ : ಯಾವುದೇ ವ್ಯಕ್ತಿಯಾದ್ರೂ ಮನಸ್ಥಿತಿ ಸರಿಯಿಲ್ಲವೆಂದ್ರೆ ಕೆರಳಿದ ವ್ಯಕ್ತಿಯಾಗ್ತಾನೆ. ಮಕ್ಕಳು ಪರೀಕ್ಷೆ ಒತ್ತಡದ ಸಂದರ್ಭದಲ್ಲಿ ಕೆರಳುತ್ತಾರೆ. ಸಣ್ಣ ಸಣ್ಣ ವಿಷ್ಯಕ್ಕೆ ಕಿರಿಕಿರಿ ಅನುಭವಿಸುತ್ತಾರೆ. ಕೋಪ ವ್ಯಕ್ತಪಡಿಸುತ್ತಾರೆ. 

ಕಡಿಮೆ ಆಹಾರ ಸೇವನೆ : ಪರೀಕ್ಷೆ ಒತ್ತಡ ಮಕ್ಕಳ ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಅವರು ಕುಡಿದು, ತಿನ್ನುವುದನ್ನು ಕಡಿಮೆ ಮಾಡ್ತಾರೆ. ನಿಮ್ಮ ಮಗು ಕೂಡ ಆಹಾರ ಸೇವನೆ ಕಡಿಮೆ ಮಾಡಿದ್ದರೆ ಅದು ಪರೀಕ್ಷೆ ಒತ್ತಡಕ್ಕೊಳಗಾಗಿದೆ ಎಂದರ್ಥ.

Parenting Tips: ಪೋಷಕರು ಮಾಡೋ ಇಂಥಾ ತಪ್ಪು ಮಕ್ಕಳ ಕಾನ್ಫಿಡೆನ್ಸ್ ಕಡಿಮೆ ಮಾಡುತ್ತೆ

ಮಕ್ಕಳನ್ನು ಪರೀಕ್ಷೆ ಭಯದಿಂದ ಹೀಗೆ ಹೊರ ತನ್ನಿ : ಮುಖ್ಯವಾಗಿ ಪರೀಕ್ಷೆಯ ಅಂಕ ಜೀವನ ನಿರ್ಧರಿಸುವುದಿಲ್ಲ ಎಂಬುದನ್ನು ಮಕ್ಕಳಿಗೆ ತಿಳಿಸಬೇಕಾಗಿದ್ದು ಪಾಲಕರ ಕರ್ತವ್ಯ. ಒಂದು ಅಂಕ ಕಡಿಮೆ ತಂದ್ರೂ ಮಕ್ಕಳಿಗೆ ಬೈಯ್ಯುವ ಪಾಲಕರಿದ್ದಾರೆ. ಇದು ತಪ್ಪು. ಪರೀಕ್ಷೆ ಸಂದರ್ಭದಲ್ಲಿ ಪಾಲಕರು ಮೊದಲು ರಿಲ್ಯಾಕ್ಸ್ ಆಗ್ಬೇಕು. ಮಕ್ಕಳಿಗೆ ಸರಿಯಾಗಿ ಓದುವ ವಿಧಾನ ತಿಳಿಸಬೇಕು. ಓದಿನ ಮಧ್ಯೆ ಸ್ವಲ್ಪ ಬಿಡುವು ತೆಗೆದುಕೊಂಡು ನೆಚ್ಚಿನ ಕೆಲಸ ಮಾಡುವಂತೆ ಸಲಹೆ ನೀಡಬೇಕು. 

click me!