'ನಿನ್ನಿಂದ ಏನೇನೂ ಸಾಧ್ಯವಿಲ್ಲ', ಮಕ್ಕಳ ಬಗ್ಗೆ ಹೀಗೆಲ್ಲಾ ಕಾಮೆಂಟ್ ಮಾಡೋದು ಬಿಟ್ಬಿಡಿ !

By Suvarna News  |  First Published Oct 4, 2022, 1:40 PM IST

ಮಕ್ಕಳ ಲಾಲನೆ-ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳ ಜೊತೆ ಕುಳಿತು ಎಲ್ಲಾ ವಿಚಾರಗಳನ್ನು ಮಾತನಾಡಬೇಕು. ಅವರ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಜೊತೆ ಮಾತನಾಡುವಾಗ ಪದ ಬಳಕೆ ಬಗ್ಗೆ ಎಚ್ಚರವಿರಬೇಕು. ಇಲ್ಲದಿದ್ದರೆ ಪೋಷಕರ ವರ್ತನೆ ಮಕ್ಕಳ ಮನಸ್ಸನ್ನು ಘಾಸಿಗೊಳಿಸಬಹುದು. 


ಪ್ರತಿಯೊಬ್ಬ ಪೋಷಕರು ಸಹ ಮಕ್ಕಳ ಭವಿಷ್ಯಕ್ಕಾಗಿ ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಮಕ್ಕಳು ಕ್ಲಾಸ್‌ನಲ್ಲಿ ಟಾಪರ್, ಫ್ಯಾಮಿಲಿಯಲ್ಲಿ ದಿ ಬೆಸ್ಟ್ ಆಗಿರಬೇಕೆಂದು ಮಕ್ಕಳಿಗೆ ಹಲವು ರೀತಿಯಲ್ಲಿ ತಿಳಿ ಹೇಳಿ ವ್ಯಕ್ತಿತ್ವವನ್ನು ರೂಪೀಕರಿಸುತ್ತಾರೆ. ಆದರೆ ಮಕ್ಕಳನ್ನು ಹೀಗೆ ಮಾಡುವ ಭರದಲ್ಲಿ ಪೋಷಕರು ಸಹ ಹಲವು ರೀತಿಯಲ್ಲಿ ತಪ್ಪು ಮಾಡುತ್ತಾರೆ. ಕೆಲವೊಮ್ಮೆ ಹೊಡೆಯುತ್ತಾರೆ. ಕೆಟ್ಟ ಮಾತುಗಳನ್ನು ಸಹ ಆಡುತ್ತಾರೆ. ಅವರ ಮಾತುಗಳು ಮಗುವಿನ ಮೇಲೆ ತಪ್ಪು ಪರಿಣಾಮ ಬೀರಬಹುದು ಎಂದು ಸಹ ತಿಳಿದಿರುವುದಿಲ್ಲ. ಪೋಷಕರ ವರ್ತನೆಗೆ ಪ್ರತಿ ಮಗುವಿನ ಪ್ರತಿಕ್ರಿಯೆಯು ವಿಭಿನ್ನವಾಗಿರುತ್ತದೆ. ಕೆಲವರು ಈ ವಿಷಯಗಳಿಂದ ಹೊರಬರುತ್ತಾರೆ, ಕೆಲವರು ಭಾವನಾತ್ಮಕವಾಗಿ ಪ್ರಭಾವಿತರಾಗುತ್ತಾರೆ. ಮಕ್ಕಳ ಮನಸ್ಸನ್ನು ನೋಯಿಸುವಂತಹ ಭಾರತೀಯ ಪೋಷಕರು ಹೇಳುವ ಕೆಲವು ವಿಷಯಗಳ ಬಗ್ಗೆ ನಾವಿಲ್ಲಿ ಹೇಳಿದ್ದೇವೆ.

ನೆರೆಮನೆಯ ಹುಡುಗನನ್ನು ನೋಡಿ ಕಲಿ: ಬಾಲ್ಯದಲ್ಲಿ, ಪೋಷಕರ ಕೆಲವು ಪದಗಳು ಅಥವಾ ಮೂದಲಿಕೆಗಳು ಮಕ್ಕಳ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತವೆ ಮತ್ತು ಈ ಮೂದಲಿಕೆಗಳು ಭಾರತೀಯ ಮನೆಗಳಲ್ಲಿ ಬಹಳ ಪ್ರವೃತ್ತಿಯಲ್ಲಿವೆ. ಭಾರತೀಯ ಪೋಷಕರು (Parents)  ನಿಲ್ಲಿಸಬೇಕಾದ ಇಂತಹ ಕೆಲವು ಅಪಹಾಸ್ಯಗಳು ಮತ್ತು ಕಾಮೆಂಟ್‌ಗಳಲ್ಲೊಂದು ನೆರೆಮನೆಯ ಹುಡುಗನನ್ನು ನೋಡಿ ಕಲಿ ಎಂಬುದಾಗಿದೆ. ಇದು ಭಾರತದಲ್ಲಿ ಹೆಚ್ಚಿನ ಪೋಷಕರು ಬಳಸುವ ಪದವಾಗಿದೆ. ಯಾವಾಗ ನೋಡಿದರೂ ನೆರೆಹೊರೆಯ ಹುಡುಗನನ್ನು ನೋಡಿ ಕಲಿ. ಸ್ನೇಹಿತನನ್ನು ನೋಡಿ ಕಲಿ ಎಂದು ಟೀಕಿಸುತ್ತಾರೆ. ಆದ್ರೆ ಈ ರೀತಿಯ ಕಂಪೇರಿಸನ್ ಮಕ್ಕಳ ಮನಸ್ಸನ್ನು ನೋಯಿಸಬಹುದು. ಎಲ್ಲಾ ಮಕ್ಕಳು ಒಂದಲ್ಲಾ ಒಂದು ರೀತಿಯ ಟ್ಯಾಲೆಂಟ್ ಹೊಂದಿರುತ್ತಾರೆ. ಹೀಗಾಗಿ ಮತ್ತೊಬ್ಬರಿಗೆ ಕಂಪೇರ್ ಮಾಡಿ ಅವರನ್ನು ಮೂದಲಿಸುವುದು ಸರಿಯಲ್ಲ.

Tap to resize

Latest Videos

ಪೋಷಕರು ಮೊದಲು ತಪ್ಪನ್ನು ಒಪ್ಕೊಳ್ಳಿ, ಆಗ ಮಕ್ಕಳೂ ತಮ್ಮನ್ನು ತಿದ್ದಿಕೊಳ್ಳುತ್ತವೆ!

ರಿಸ್ಕ್‌ ತೆಗೆದುಕೊಂಡಿದ್ದು ಯಾಕೆ ? : ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ (Children) ಒಂದು ಚೌಕಟ್ಟನ್ನು ಹಾಕಿಬಿಡುತ್ತಾರೆ. ಅಂಥದ್ದೇ ಮಾಡಬೇಕು, ಇಂಥದ್ದನ್ನು ಮಾಡಬೇಕು ಎಂದು ಖಡಾಖಂಡಿತವಾಗಿ ಹೇಳಿ ಬಿಡುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳು ಹೊಸತಾಗಿ ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಕ್ಕಳನ್ನು ಅವರ ಪಾಡಿಗೆ ಬಿಟ್ಟುಬಿಡಿ. ಮಕ್ಕಳು ತಮ್ಮ ತಪ್ಪು (Mistake)ಗಳಿಂದ ಕಲಿಯುತ್ತಾರೆ. ಮತ್ತೆ ಸರಿಪಡಿಸಿಕೊಳ್ಳುತ್ತಾ ಹೋಗುತ್ತಾರೆ.

ತಿನ್ನಲು ಮರೆಯಬೇಡಿ : ಹೆಚ್ಚಿನ ಪೋಷಕರು ಮಕ್ಕಳಿಗೆ ನಿರಂತರವಾಗಿ ಇಂಥಾ ಬೈಗುಳ ಪ್ರಯೋಗಿಸುತ್ತಾರೆ. ಮಕ್ಕಳ ಮಾರ್ಕ್ಸ್ ಕಡಿಮೆ ಬಂದಾಗ, ತಪ್ಪುಗಳನ್ನು ಮಾಡಿದಾಗ ಸರಿಯಾಗಿ ತಿನ್ನು, ಏನೂ ಮಾಡ್ಬೇಡ ಎಂದು ಟೀಕಿಸುತ್ತಾರೆ. ಆದರೆ ಇಂಥಾ ಮಾತುಗಳು ಮಕ್ಕಳ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತವೆ. ಓದ್ಬೇಡ, ಬರೀ ತಿನ್ತಾ ಇರು, ತಿಂದಿದ್ದಾಕ್ಕಾದ್ರೂ ಮಾರ್ಕ್ಸ್‌ ತೆಗಿ, ಎಷ್ಟು ತಿನ್ತೀಯಾ ಮೊದಲಾದ ಮಾತುಗಳನ್ನು ಮಕ್ಕಳ ಮುಂದೆ ಆಡೋ ಮೊದ್ಲು ಎಚ್ಚರವಿರಲಿ. ನಿಮ್ಮ ಮಗುವಿಗೆ ಆಹಾರ (Food) ನೀಡುವುದರ ಮೂಲಕ ನೀವು ಯಾವುದೇ ಉಪಕಾರವನ್ನು ಮಾಡುತ್ತಿಲ್ಲ, ಅದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಮಗುವನ್ನು ನಿರ್ದೇಶಿಸಲು ಈ ರೀತಿಯ ಹೇಳಿಕೆಗಳನ್ನು ನೀಡಬೇಡಿ.

Parenting Tips : ಮಕ್ಕಳ ಮುಂದೆ ಈ ಕೆಲಸ ಮಾಡಿ ಅವ್ರ ಭವಿಷ್ಯ ಹಾಳ್ಮಾಡ್ಬೇಡಿ

ಯಾವತ್ತಿದ್ರೂ ಮದ್ವೆಯಾಗಿ ಹೋಗುವವಳು: ಹೆಣ್ಣುಮಕ್ಕಳನ್ನು ಹುಟ್ಟಿನಿಂದಲೂ ತಾತ್ಸಾರವಾಗಿ ನೋಡಲಾಗುತ್ತದೆ. ಹೀಗಾಗಿ ಆಕೆ ಏನೂ ಮಾಡಿದರೂ ಅವಮಾನ ತಪ್ಪುವುದಿಲ್ಲ. ಹೆಣ್ಣು ಮಕ್ಕಳು ಮದುವೆ (Marriage)ಯಾಗಿ ಹೋಗುವವರು ಅನ್ನೋ ಕಾರಣಕ್ಕೆ ಅವರ ಬಗ್ಗೆ ಹೆಚ್ಚು ಉಡಾಫೆ ತೋರುತ್ತಾರೆ. ಮಾತು ಮಾತಿನಲ್ಲಿಯೂ ನೀನೆಷ್ಟಾದ್ರೂ ಮದ್ವೆಯಾಗಿ ಹೋಗುವವಳು ಎಂದು ಹೆಣ್ಣು ಮಕ್ಕಳನ್ನು ನೋಯಿಸದಿರಿ. ಚಿಕ್ಕಂದದಿನಲ್ಲೇ ನಿಮ್ಮ ಮಗಳನ್ನು ಇನ್ನೊಂದು ಕುಟುಂಬದ ಭಾಗವಾಗಿ ಪರಿಗಣಿಸಬೇಡಿ. ಮದುವೆ ಎನ್ನುವುದು ಒಬ್ಬ ವ್ಯಕ್ತಿಯ ಗುರುತು ಅಲ್ಲ ಆದರೆ ಅದೊಂದು ಸಂಬಂಧ.

ನಿನ್ನಿಂದ ಏನೇನೂ ಸಾಧ್ಯವಿಲ್ಲ: ನಿಮ್ಮ ಮಗುವಿನ ಸಾಮರ್ಥ್ಯ (Capacity)ವನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ. ಮಗುವು ತಾನು ಮಾಡುವ ಕೆಲಸದಲ್ಲಿ ಮೊದಲ ಬಾರಿಗೆ ವಿಫಲವಾದರೆ, ಪ್ರೋತ್ಸಾಹ ನೀಡಿ. ನಂತರ ಯಶಸ್ವಿಯಾಗಲು ಸಹಾಯ ಮಾಡಿ. ಸೋಲಿಗೆ ಏನು ಕಾರಣವಾಗುತ್ತಿದೆ ಎಂಬುದನ್ನು ಅವರಿಗೆ ತಿಳಿಸಿ. ಬದಲಿಗೆ ನಿನ್ನಿಂದ ಏನೂ ಸಾಧ್ಯವಿಲ್ಲ ಅನ್ನೋ ಟೀಕೆ ಅವರನ್ನು ಮತ್ತಷ್ಟು ಕುಗ್ಗಿಸುತ್ತದೆ

ನಮಗಿಂತ ಹೆಚ್ಚು ನಿಮಗೆ ತಿಳಿದಿದೆಯೇ: ನಿಮ್ಮ ಮಗುವಿಗೆ ಕೆಲವು ವಿಷಯಗಳ ಬಗ್ಗೆ ನಿಮಗಿಂತ ಹೆಚ್ಚು ತಿಳಿದಿರಬಹುದು. ಎಲ್ಲವನ್ನೂ ತಿಳಿದುಕೊಳ್ಳಲು ವಯಸ್ಸು (Age) ಖಾತರಿಪಡಿಸುವುದಿಲ್ಲ, ಅಲ್ಲವೇ? ನಿಮ್ಮ ಮಗುವಿಗೆ ಇಂದಿನ ಪೀಳಿಗೆಯ ಬಗ್ಗೆ ಚೆನ್ನಾಗಿ ತಿಳಿದಿರಬಹುದು. ಹೀಗಾಗಿ ಮಕ್ಕಳ ಮುಂದೆ ಹೀಗೆಲ್ಲಾ ಹೇಳೋದನ್ನು ತಪ್ಪಿಸಿ..

click me!