ಮಕ್ಕಳ ಮೇಲೆ ತಾಯಿಗೆ ವಿಶೇಷ ಪ್ರೀತಿಯಿರುತ್ತದೆ. ಅವರನ್ನು ಅತಿ ಕಾಳಜಿಯಲ್ಲಿ ನೋಡ್ತಾಳೆ ತಾಯಿ. ಆದ್ರೆ ಮಕ್ಕಳಿಗೂ ವೈಯಕ್ತಿಕ ಸಮಯ ನೀಡ್ಬೇಕಾಗುತ್ತದೆ. ಸದಾ ಅವ್ರ ಹಿಂದೆ – ಮುಂದೆ ಸುತ್ತುತ್ತಿದ್ದರೆ ಸೊಸೆ ಗತಿ ಏನಾಗಬೇಡ.
ಮಕ್ಕಳು ಎಷ್ಟೇ ದೊಡ್ಡವರಾದ್ರೂ ಪಾಲಕರಿಗೆ ಅವರ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಆದ್ರೆ ಮಕ್ಕಳ ವೈಯಕ್ತಿಕ ವಿಷ್ಯದಲ್ಲಿ ತಲೆ ಹಾಕುವ ಅವಶ್ಯಕತೆ ಇರೋದಿಲ್ಲ. ಕೆಲ ಪಾಲಕರು ಮಕ್ಕಳಿಗೆ ಮದುವೆಯಾಗಿ, ಮಕ್ಕಳಾದ್ರೂ ಅವರ ವೈಯಕ್ತಿಕ ಜೀವನದ ಬಗ್ಗೆ ಸಲಹೆ ನೀಡ್ತಿರುತ್ತಾರೆ. ಇದು ಅನೇಕ ಬಾರಿ ಮಕ್ಕಳ ದಾಂಪತ್ಯ ಹಾಳು ಮಾಡುವ ಸಾಧ್ಯತೆಯಿರುತ್ತದೆ. ಈ ಮಹಿಳೆಗೆ ಕೂಡ ಅದೇ ಆಗಿದೆ. ಅತ್ತೆಗೆ ಮಗನ ಮೇಲಿರುವ ಅತಿಯಾದ ಪ್ರೀತಿ ದಂಪತಿ ಮಧ್ಯೆ ಬಿರುಕು ಮೂಡಿಸ್ತಿದೆ.
ಈ ಮಹಿಳೆಗೆ ಮದುವೆ (Marriage) ಯಾಗಿ ಕೆಲವೇ ಕೆಲವು ವರ್ಷ ಕಳೆದಿದೆ. ಲಾಕ್ ಡೌನ್ (Lock Down) ಸಂದರ್ಭದಲ್ಲಿ ಅತ್ತೆ ಇವಳ ಮನೆಗೆ ಬಂದು ವಾಸ ಶುರು ಮಾಡಿದ್ದಾಳಂತೆ. ಮಗನನ್ನು ಅತಿಯಾಗಿ ಮುದ್ದು ಮಾಡುವ ಅತ್ತೆ, ಗಂಡ-ಹೆಂಡತಿಗೆ ಪ್ರೈವಸಿ ನೀಡ್ತಿಲ್ಲವಂತೆ. ಮಗ ಹಾಗೂ ಸೊಸೆ ಇಬ್ಬರು ಒಟ್ಟಿಗೆ ಕುಳಿತುಕೊಳ್ಳಲು ಬಿಡೋದಿಲ್ಲವಂತೆ. ಮಗನ ಹಿಂದೆ ಮುಂದೆ ತಿರುಗುವ ಅತ್ತೆ, ಸದಾ ಒಂದಲ್ಲ ಒಂದು ವಿಷ್ಯ ಹೇಳಿ ಆತನನ್ನು ಪ್ಯಾಂಪರಿಂಗ್ (Pampering) ಮಾಡ್ತಾಳಂತೆ. ಬರೀ ಇಷ್ಟೇ ಅಲ್ಲ, ರಾತ್ರಿ ಬೆಡ್ ರೂಮ್ ಗೂ ಅತ್ತೆ ಬರ್ತಾಳೆ ಎನ್ನುತ್ತಾಳೆ ಮಹಿಳೆ. ತನ್ನ ರೂಮಿನಲ್ಲಿ ಮಲಗಲು ಭಯ ಎನ್ನುವ ಅತ್ತೆ, ಮಗನ ರೂಮ್ ಸೇರ್ತಾಳಂತೆ. ಆಕೆಯಿಂದಾಗಿ, ನಮ್ಮಿಬ್ಬರ ಮಧ್ಯೆ ಅಂತರ ಹೆಚ್ಚಾಗ್ತಿದೆ ಎನ್ನುತ್ತಾಳೆ ಮಹಿಳೆ.
ತಜ್ಞರ ಉತ್ತರ : ಅತ್ತೆ – ಸೊಸೆ ಸಂಬಂಧ ಬಹಳ ಸೂಕ್ಷ್ಮವಾದದ್ದು ಎನ್ನುತ್ತಾರೆ ತಜ್ಞರು. ಒಂದೇ ವ್ಯಕ್ತಿಯನ್ನು ಇಬ್ಬರು ಪ್ರೀತಿಸುತ್ತಿದ್ದರೆ ಆ ಸಂಬಂಧವನ್ನು ನಿಭಾಯಿಸುವುದು ಕಷ್ಟ. ಮಗನೆಂಬ ಕಾರಣಕ್ಕೆ ಅತ್ತೆ ಹೆಚ್ಚು ಸಲಿಗೆಯಿಂದ ವರ್ತಿಸರ್ತಾಳೆ. ಗಂಡ ಎಂಬ ಕಾರಣಕ್ಕೆ ಸೊಸೆ ಆತನ ಜೊತೆಗಿರಲು ಬಯಸ್ತಾಳೆ. ಆದ್ರೆ ಇದೇ ಪ್ರೀತಿಯ ಪೈಪೋಟಿ ಸಮಸ್ಯೆ ತಂದಿಡುತ್ತದೆ ಎನ್ನುತ್ತಾರೆ ತಜ್ಞರು.
ದೈಹಿಕ ಸಂಪರ್ಕ ಬೆಳೆಸಲೂ ಬೆಸ್ಟ್ ಟೈಮ್ ಅಂತಿರುತ್ತಾ? ಭಾವ ಬೆಸೆಯೋ ಸಮಯವಿದು
ಮೊದಲನೇಯದಾಗಿ, ಪತಿ ಜೊತೆ ಮಾತನಾಡುವಂತೆ ಅವರು ಸಲಹೆ ನೀಡಿದ್ದಾರೆ. ಈ ಎಲ್ಲ ವಿಷ್ಯವನ್ನು ಪತಿಗೆ ಹೇಳಿ. ಅತ್ತೆ ವರ್ತನೆಯಿಂದ ಏನೆಲ್ಲ ಸಮಸ್ಯೆಯಾಗ್ತಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿ ಎನ್ನುತ್ತಾರೆ ತಜ್ಞರು. ಆದ್ರೆ ಯಾವುದೇ ಕಾರಣಕ್ಕೂ ಪತಿಗೆ ಅತ್ತೆ ಬಗ್ಗೆ ದೂರು ನೀಡಬೇಡಿ ಎಂಬುದು ತಜ್ಞರ ಸಲಹೆ. ಅತ್ತೆ ಸರಿಯಾಗಿಲ್ಲ, ಅತ್ತೆ ನಮ್ಮಬ್ಬಿರನ್ನು ದೂರ ಮಾಡಲು ನೋಡ್ತಿದ್ದಾರೆ ಎಂಬ ಮಾತುಗಳನ್ನು ಆಡಬೇಡಿ. ನಾನು ಅತ್ತೆ ಪ್ರೀತಿ ಮಾಡ್ತೇನೆ, ಆದ್ರೆ ಇಡೀ ದಿನ ಅವರು ನಿಮ್ಮ ಜೊತೆ ಇರುವ ಕಾರಣ ನನಗೆ ಸಮಯ ಸಿಗ್ತಿಲ್ಲ ಎಂದು ಪತಿಗೆ ತಿಳಿಸಿ.ಎರಡನೇಯದಾಗಿ ಅತ್ತೆ ಜೊತೆ ಮಾತನಾಡುವಂತೆ ತಜ್ಞರು ಸಲಹೆ ನೀಡ್ತಾರೆ. ಮನೆಯಲ್ಲಿ ಸಣ್ಣಪುಟ್ಟ ನಿಯಮ ರೂಪಿಸಿ ಎನ್ನುತ್ತಾರೆ ತಜ್ಞರು. ಅದನ್ನು ಎಲ್ಲರೂ ಪಾಲಿಸುವಂತೆ ಇರಲಿ. ಇದ್ರಿಂದ ಎಲ್ಲರಿಗೂ ಪ್ರೈವಸಿ ಸಿಕ್ಕಂತೆ ಆಗುತ್ತದೆ.
ಈ ವಿಷ್ಯಗಳನ್ನು ಪುರುಷರು ಯಾರಿಗೂ ಹೇಳಬಾರದು, ಹೇಳಿದ್ರೆ ಮರ್ಯಾದೆ ಹರಾಜು!
ಅತ್ತೆ ಕೋಣೆಯಲ್ಲಿ ಮಲಗಲು ಏಕೆ ಭಯಪಡ್ತಿದ್ದಾರೆ ಎಂಬುದನ್ನು ಪರೀಕ್ಷೆ ಮಾಡಿ ಎನ್ನುತ್ತಾರೆ ತಜ್ಞರು. ಒಂದು ದಿನ ಸೊಸೆ ಮತ್ತೊಂದು ದಿನ ಮಗ, ಅತ್ತೆ ಜೊತೆ ಮಲಗಬೇಕು. ಇದ್ರಿಂದ ಅತ್ತೆಗೂ ಭಯ ಹೋಗುತ್ತದೆ. ರಾತ್ರಿ ಅತ್ತೆಗಾಗುವ ಸಮಸ್ಯೆ ಏನು ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ನೀವು ಏನೇ ಪ್ಲಾನ್ ಮಾಡಿ, ಆಕೆ ನಿಮ್ಮ ರೂಮಿನಲ್ಲಿ ಮಲಗದಂತೆ ನೋಡಿಕೊಳ್ಳಿ ಎನ್ನುತ್ತಾರೆ ತಜ್ಞರು. ಮಗನನ್ನು ಅತಿಯಾಗಿ ಪ್ರೀತಿಸುವ ತಾಯಿ ಸಮಯ ಸಿಕ್ಕಾಗೆಲ್ಲ ಮುದ್ದು ಮಾಡಬಹುದು. ನೀವು ಇದನ್ನು ಕಡಿಮೆ ಮಾಡಬೇಕು ಎಂದಿಲ್ಲ. ಮನೆಯಲ್ಲಿ ಸಣ್ಣಪುಟ್ಟ ಬದಲಾವಣೆಯನ್ನು ಮಾಡುವ ಮೂಲಕ ಎಲ್ಲರೂ ನೆಮ್ಮದಿಯಾಗಿರುವಂತೆ ಮಾಡಬಹುದು ಎನ್ನುತ್ತಾರ ತಜ್ಞರು.