ಇವತ್ತು ಮದ್ವೆಯಾಗಿ ನಾಳೆ ಡಿವೋರ್ಸ್ ಮಾಡೋರು ಈ ವೀಡಿಯೋ ನೋಡಿ ಬದುಕೋದ ಕಲೀರಿ!

Published : Apr 19, 2023, 05:06 PM ISTUpdated : Apr 19, 2023, 05:54 PM IST
ಇವತ್ತು ಮದ್ವೆಯಾಗಿ ನಾಳೆ ಡಿವೋರ್ಸ್ ಮಾಡೋರು ಈ ವೀಡಿಯೋ ನೋಡಿ ಬದುಕೋದ ಕಲೀರಿ!

ಸಾರಾಂಶ

ಈಗಿನ ದಿನಗಳಲ್ಲಿ ಶುದ್ಧ ಪ್ರೀತಿ ಸಿಗೋದು ತುಂಬಾ ಅಪರೂಪ ಎನ್ನುವಂತಾಗಿದೆ. ಹಣ, ಐಷಾರಾಮಿ ಜೀವನದ ಹಿಂದೆ ಓಡುವ ಜನರು ಸಂಬಂಧಕ್ಕೆ ಬೆಲೆ ನೀಡ್ತಿಲ್ಲ. ಆದ್ರೆ ಈಗ್ಲೂ ಕೆಲ ಜೋಡಿ ಯುವಕರಿಗೆ ಮಾದರಿಯಾಗಿದ್ದಾರೆ. ಒಮ್ಮೆ ಸಪ್ತಪದಿ ತುಳಿದ ಮೇಲೆ ಸಂಗಾತಿ ಸುಖ – ದುಃಖ ಎಲ್ಲಡರಲ್ಲೂ ಜೊತೆಗಿರಬೇಕು ಎಂಬುದು ಇವ್ರನ್ನು ನೋಡಿದ್ರೆ ಅರಿವಿಗೆ ಬರುತ್ತೆ.     

ಇಬ್ಬರ ಮಧ್ಯೆ ಎಷ್ಟು ಪ್ರೀತಿ ಇದೆ ಅನ್ನೋದು ಕಷ್ಟದ ಸಂದರ್ಭದಲ್ಲಿ ಹೊರಬರುತ್ತದೆ. ಮದುವೆಯಾದ ಹೊಸದರಲ್ಲಿ ಇಬ್ಬರ ಮಧ್ಯೆ ರೋಮ್ಯಾನ್ಸ್ ಇರುತ್ತದೆ. ಮಕ್ಕಳಾಗ್ತಿದ್ದಂತೆ ಜವಾಬ್ದಾರಿ ಹೆಗಲೇರುತ್ತದೆ. ಆದ್ರೆ ವಯಸ್ಸಾಗ್ತಿದ್ದಂತೆ ಮಕ್ಕಳು ತಮ್ಮ ಕೆಲಸದಲ್ಲಿ ಬ್ಯುಸಿಯಾಗುವ ಕಾರಣ ದಂಪತಿ ಪರಸ್ಪರ ಆಸರೆಯಾಗ್ತಾರೆ. ದೀರ್ಘ ಕಾಲದಿಂದ ಜೊತೆಗಿರುವ ಕಾರಣ ಅವರಿಬ್ಬರು ಬೆಸ್ಟ್ ಫ್ರೆಂಡ್ ಆಗ್ತಾರೆ. ವೃದ್ಧಾಪ್ಯದಲ್ಲಿ ಅನಾರೋಗ್ಯ ಸಮಸ್ಯೆ ಕಾಡೋದು ಸಾಮಾನ್ಯ. ಪತಿ ಹಾಸಿಗೆ ಹಿಡಿದಾಗ ಪತ್ನಿ ಸೇವೆ ಮಾಡೋದನ್ನು ನಾವು ನೋಡಿರ್ತೇವೆ. ಆದ್ರೆ ಪತ್ನಿ ಹಾಸಿಗೆ ಹಿಡಿದಾಗ ಪತಿ ಆಕೆ ಸೇವೆ ಮಾಡೋದನ್ನು ನೋಡೋದು ಬಹಳ ಅಪರೂಪ. ಪತ್ನಿ ಸೇವೆ ಮಾಡದ ಪತಿ ಇಲ್ಲವೆಂದಲ್ಲ. ಕೆಲ ಪುರುಷರು, ಅನಾರೋಗ್ಯಕ್ಕೆ ಒಳಗಾದ ಪತ್ನಿಯನ್ನು ಮಕ್ಕಳಂತೆ ಆರೈಕೆ ಮಾಡುತ್ತಾರೆ. ಸದಾ ಅವರ ಜೊತೆಗಿದ್ದು, ಅವರ ಕೊನೆ ಸಮಯದಲ್ಲಿ ಸಾಂತ್ವಾನ ಹೇಳ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋ (Video) ಗಳು ಪೋಸ್ಟ್ ಆಗ್ತಿರುತ್ತವೆ. ಅದ್ರಲ್ಲಿ ಕೆಲ ವಿಡಿಯೋ ಮಧುರವಾಗಿರುವ ಜೊತೆಗೆ ಕಣ್ಣಲ್ಲಿ ನೀರು ತರಿಸುತ್ತದೆ. ನಾವು ಸಾಮಾಜಿಕ ಜಾಲತಾಣ (Social Network) ದಲ್ಲಿ ಯಂಗ್ ಕಪಲ್ ಡಾನ್ಸ್ ಮಾಡುವ, ಜೋಕ್ ಮಾಡುವ ವಿಡಿಯೋಗಳನ್ನು ಸಾಕಷ್ಟು ನೋಡ್ತೇವೆ. ಆದ್ರೆ ವೃದ್ಧ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳೋದು ಬಹಳ ಅಪರೂಪ. ಕೆಲ ದಿನಗಳ ಹಿಂದೆ ದಾರಿಯಲ್ಲಿ ಹೋಗ್ತಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೈಹಿಡಿದು, ಆಕೆಯ ಸುರಕ್ಷತೆ ಬಗ್ಗೆ ಗಮನ ಹರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೃದ್ಧ ದಂಪತಿ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರ ಮನಸ್ಸನ್ನು ಭಾರಗೊಳಿಸಿದೆ. ದೀರ್ಘವಾಗಿ ಉಸಿರೆಳೆದುಕೊಳ್ಳುವಂತೆ ಮಾಡಿದ.

ಇವ್ರಿಗೇನ್ ತಲೆಕೆಟ್ಟಿದ್ಯಾ..ಬೀದಿ ನಾಯಿ ಜೊತೆ ಮಕ್ಳ ಮದ್ವೆ ಮಾಡ್ತಿದ್ದಾರಪ್ಪೋ!

ರೈಲಿನಲ್ಲಿ ವಯಸ್ಸಾದ ಗಂಡ-ಹೆಂಡತಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಯಸ್ಸಾದ ಪತಿ ತನ್ನ ಅನಾರೋಗ್ಯ (Illness) ದ ಹೆಂಡತಿಗೆ ತನ್ನ ಕೈಯಿಂದಲೇ ಆಹಾರ ತಿನ್ನಿಸುತ್ತಿದ್ದಾರೆ. ಹೆಂಡತಿಯ ಮೇಲೆ ಅವರಿಗಿರುವ ಪ್ರೀತಿ ಮತ್ತು ಸೇವೆಯನ್ನು ನೋಡಿ ಬಳಕೆದಾರರು ಭಾವುಕರಾಗಿದ್ದಾರೆ. ವೃದ್ಧಾಪ್ಯದಲ್ಲೂ ಗಂಡನ ಪ್ರೀತಿ, ಒಡನಾಟ, ಆರೈಕೆ, ಸಾಂತ್ವಾನ ಸಿಕ್ಕಿದ್ರೆ ಮತ್ತೇನು ಬೇಕು ಜೀವನದಲ್ಲಿ ಅಲ್ವಾ? ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ಸುಂದರ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆರ್.ಮೈನಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಯಾವುದೇ ವ್ಯಕ್ತಿಯನ್ನು ನಿಮ್ಮವರನ್ನಾಗಿ ಮಾಡಿಕೊಳ್ಳುವುದು ಒಂದು ಕೌಶಲ್ಯ. ಆದ್ರೆ ಯಾರೊಬ್ಬರಾಗಿ ನೀವಿರೋದು ಅದ್ಭುತವೆಂದು ಶೀರ್ಷಿಕೆ ಹಾಕಲಾಗಿದೆ. 

ಲೈಂಗಿಕ ಆಸಕ್ತಿ ಹೆಚ್ಚಿಸುತ್ತಾ ಥಾಯ್ ಮಸಾಜ್?

ಕಳೆದ ರಾತ್ರಿ ನಾನು ಈ ವ್ಯಕ್ತಿ ತನ್ನ ಅನಾರೋಗ್ಯದ ಹೆಂಡತಿಯ ಕೈಯನ್ನು ಹಿಡಿದು ರೈಲು ಹತ್ತುವುದನ್ನು ನೋಡಿದೆ. ಕೆಲವೊಮ್ಮೆ ಅವರಿಗೆ ಆಹಾರ ನೀಡುವುದು ಮತ್ತು ಕೆಲವೊಮ್ಮೆ ಅವರನ್ನು ಶೌಚಾಲಯಕ್ಕೆ ಕರೆದೊಯ್ಯುವುದು ಮಾಡುತ್ತಿದ್ದರು. ರಾತ್ರಿ ಅವರಿಗೆ ಹಾಸಿಗೆ ಸಿದ್ಧ ಮಾಡಿ, ಅವರಿಗೆ ತೊಂದರೆ ಆಗದಂತೆ ಪ್ರೀತಿಯಿಂದ ಮಲಗಿಸಿದರು. ಇದನ್ನು ನಿಜವಾದ ಒಡನಾಟ ಮತ್ತು ಪ್ರೀತಿ ಎಂದು ಕರೆಯಲಾಗುತ್ತದೆ. ನಾನು ಅವರನ್ನು ನೋಡುತ್ತಲೇ ಇದ್ದೆ ಎಂದು ಅವರು ಬರೆದಿದ್ದಾರೆ. 

ಈ ವಿಡಿಯೋವನ್ನು ಈವರೆಗೆ 7.2 ಮಿಲಿಯನ್ ಅಂದರೆ 72 ಲಕ್ಷ ಬಾರಿ ವೀಕ್ಷಿಸಲಾಗಿದೆ.  7 ಲಕ್ಷ 33 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವೃದ್ಧ ದಂಪತಿ ಪ್ರೀತಿ ಮತ್ತು ಸಮರ್ಪಣಾ ಭಾವವನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರ ಜೀವನವೂ ಹೀಗೆ ಆಗಿದ್ರೆ ಯಾರ ಜೀವನದಲ್ಲೂ ದುಃಖವೇ ಇರ್ತಾ ಇರಲಿಲ್ಲ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ನನ್ನ ತಂದೆ – ತಾಯಿ ಕೂಡ ಹೀಗೆ ಇದ್ರು. ಅವರಿಬ್ಬರೂ ಪರಸ್ಪರ ಇದೇ ರೀತಿ ನೋಡಿಕೊಳ್ತಿದ್ದರು ಎಂದು ಬರೆದಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌